ಮುಂದಿನ ಐದು ದಿನಗಳ ಕಾಲ ಬೆಂಕಿ ಬಿಸಿಲಿನ ಅಲರ್ಟ್ ಘೋಷಣೆ!
<ಬಿಸಿಲಿನ ಅಲರ್ಟ್> <ಬೆಂಕಿ ಬಿಸಿಲಿನ ಅಲರ್ಟ್> <ಬೆಂಕಿ ಬಿಸಿಲಿನ ಅಲರ್ಟ್ ಘೋಷಣೆ> <ಕರ್ನಾಟಕದಲ್ಲಿ ತಾಪಮಾನದ ವರದಿ>
ಆತ್ಮೀಯ ರೈತರೇ ಕರ್ನಾಟಕದ ಅತ್ಯಂತ ಬಿಸಿಲು ಅತಿ ಹೆಚ್ಚಾಗಿದ್ದು ರೈತರಿಗೆ ಹಾಗೂ ಗ್ರಾಹಕರಿಗೆ ಕೆಲಸ ಮಾಡುವುದಾಗಲಿ ಅಥವಾ ಹೊರಗಡೆ ತಿರುಗಾಡುವುದು ಕಷ್ಟಕರವಾಗುತ್ತಿದೆ ಈಗ ಬಿಸಿ ಗಾಳಿ ಆತಂಕ ಬಂದಿದೆ ಇದು ಇನ್ನೂ ಐದು ದಿನಗಳ ಕಾಲ ಇರಲಿದೆ ಮೇ ಐದರವರೆಗೆ ಇನ್ನೂ ರಾಜ್ಯಾದ್ಯಂತ ತುಂಬಾ ಬಿಸಿಲು ಇರಲಿದೆ ಅದಕ್ಕಾಗಿ ನೀವು ಜಾಸ್ತಿ ಹೊರಗಡೆ ತಿರುಗಬಾರದು, ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4:00 ವರೆಗೆ ಉಷ್ಣ ಶಾಖ ತರಂಗಗಳು ಸೂರ್ಯನಿಂದ ನೇರವಾಗಿ ಭೂಮಿಗೆ ಅಪ್ಪಳಿಸುತ್ತೇವೆ ಇವು ನಿಮ್ಮ ಚರ್ಮದ ಮೇಲೆ ಕಾಯಿಲೆಗಳನ್ನು ಉಂಟು ಮಾಡಬಹುದು ಅದಕ್ಕಾಗಿ ನೀವು ಈಗ ಐದು ದಿನಗಳವರೆಗೆ ನಿಮ್ಮ ನಿಮ್ಮ ಕೆಲಸ ಕಾರ್ಯಗಳು ಏನೇ ಇದ್ದರೂ ಬೆಳಗ್ಗೆ ಮತ್ತು ಸಾಯಂಕಾಲದ ಅವಧಿಯಲ್ಲಿ ಮುಗಿಸಿಕೊಳ್ಳಬೇಕು ಹಾಗೂ ದಿನವಿಡೀ ನೀವು ನೆರಳಿನ ಪ್ರದೇಶದಲ್ಲಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಲು ತೊಡಗಬೇಕು.
ಯಾವ ಯಾವ ಜಿಲ್ಲೆಗಳಲ್ಲಿ ಶಾಖ ತರಂಗಗಳ ಅಲರ್ಟ್ ನೀಡಲಾಗಿದೆ?
ಉತ್ತರ ಕರ್ನಾಟಕದ ಭಾಗದ ಬಹುತೇಕ ಎಲ್ಲ ಜಿಲ್ಲೆಗಳು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಬಿಸಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ರಣ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ. ಉತ್ತರ ಕರ್ನಾಟಕದ 11 ಜಿಲ್ಲೆಗಳ ಪೈಕಿ ಧಾರವಾಡ ಜಿಲ್ಲೆ ಹೊರತು ಪಡಿಸಿ 10 ಜಿಲ್ಲೆಗಳಲ್ಲಿ ಮುಂದಿನ ಮೇ 5 ವರೆಗೆ ಐದು ದಿನ ಹೆಚ್ಚಿನ ಪ್ರಮಾಣ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ.
ದಕ್ಷಿಣ ಕರ್ನಾಟಕದ 17 ಜಿಲ್ಲೆಗಳ ಪೈಕಿ 7 ಜಿಲ್ಲೆಗಳು ಬಿಸಿ ಗಾಳಿ ಪ್ರಭಾವ ಎದುರಿಸಬೇಕಿದೆ. ದಕ್ಷಿಣ ಕರ್ನಾ ಟಕದ ಬಹುತೇಕ ಜಿಲ್ಲೆಗಳಲ್ಲಿ ಮೇ 6 ರಿಂದ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಅದೇ ರೀತಿ ಮುಂದಿನ 24 ಗಂಟೆಯಲ್ಲಿ ರಾಮನಗರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಕೊಡಗು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಲಕ್ಷಣ ಇವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ದಿನೇದಿನೇ ತಾಪಮಾನ ಹೆಚ್ಚುತ್ತಿದ್ದು, ರಾಯಚೂರಿನಲ್ಲಿ ಮಂಗಳವಾರ 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖ ಲಾಗಿದೆ. ಇದು ಕಳೆದ ಒಂದು ದಶಕದಲ್ಲೇ ರಾಯಚೂರಿನಲ್ಲಿ ಏಪ್ರಿಲ್‌ನಲ್ಲಿ ದಾಖಲಾದ ಅತೀ ಗರಿಷ್ಠ ತಾಪಮಾನವಾಗಿದೆ. ಉತ್ತರ ಹಾಗೂ ಕಲ್ಯಾಣ ಜಿಲ್ಲೆಗಳಲ್ಲಿ ಕಳೆದ 3 ದಿನದಿಂದ ಉಷ್ಣ ಅಲೆಗಳು ಬರುತ್ತಿದ್ದು ಜೀವನ ಕಂಗಾಲಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ಏ.30ರ ಮಂಗಳವಾರ ರಾಜ್ಯದಲ್ಲೇ ಅತೀ ಹೆಚ್ಚಿನ ಗರಿಷ್ಠ 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ರಾಯಚೂರು ಜಿಲ್ಲೆಯಲ್ಲಿ ದಾಖಲಾಗಿದೆ.ಮೇ 2ರವರೆಗೆ ಬಿಸಿಗಾಳಿ ಬೇಸಿಗೆಯ ತಾಪಮಾನ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುತ್ತಲೇ ಇದ್ದು, ಮೇ 2ರವರೆಗೆ ಕರಾವಳಿಯಲ್ಲಿ ಬಿಸಿ ಗಾಳಿ (ಉಪ್ಪ ಮಾರುತ) ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಸಿದೆ. ಮೇ 2ರವರೆಗೆ ದ.ಕ, ಉಡುಪಿ, ಉತ್ತರ ಕನ್ನಡ ಸೇರಿ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.
ನೆನ್ನೆ ದಾಖಲೆಯಾದ ವರದಿಗಳು?
ರಾಯಚೂರಿನಲ್ಲಿ ಸೋಮವಾರ 46.1 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಪ್ರಸಕ್ತ ವರ್ಷದ ಅತಿ ಹೆಚ್ಚು ತಾಪಮಾನ ಇದಾಗಿದೆ. ಯಾದಗಿರಿ 45.1, ಕಲಬುರಗಿ 45.1, ಬಳ್ಳಾರಿ 44.8. ವಿಜಯಪುರ 44.6, ಬಾಗಲಕೋಟೆ 44.6. ಗದಗ್ 43.6, ಬೆಳಗಾವಿ 44.4, ಕೊಪ್ಪಳ 44.1, ಬೀದರ್ 44.4, ಚಿತ್ರದುರ್ಗ 43.2, ಚಿಕ್ಕಮಗಳೂರು 42.9, ಹಾವೇರಿ 42.5, ಮಂಡ್ಯ 42.5. ತುಮಕೂರು 42.3, ದಾವಣಗೆರೆ 42.4, ರಾಮನಗರ 42.4. ಚಾಮರಾಜನಗರ 42, ಧಾರವಾಡ 42, ಶಿವಮೊಗ್ಗ 41.6, ಮೈಸೂರು 40.9, ಹಾಸನ 40.5, ಕೋಲಾರ 40.3 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಬಿಸಿ ಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮುಂದಿನ ಐದುವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಕಲಬುರಗಿ ಹಾಗೂ ರಾಯಚೂರಿನಲ್ಲಿ ಬಿಸಿ ವಾತಾವರಣ ಇರಲಿದೆ.
ಇದನ್ನು ಓದಿ:ಕೊಳವೆಬಾವಿ ತೆಗಿಸಲು ಅಥವಾ ಈಗಾಗಲೇ ಹೊಂದಿರುವ ಕೊಳವೆ ಬಾವಿಗೆ ಪರ್ಮಿಷನ್ ತೆಗಿಸುವುದು ಹೇಗೆ?
https://krushisanta.com/How-to-get-Borewell-permission-in-online
ಇದನ್ನು ಓದಿ: ಈ ಲಿಸ್ಟ್ ನಲ್ಲಿ ಇದ್ದವರಿಗೆ ಎಲ್ಲರಿಗೂ ಸಿಗಲಿದೆ ಎರಡನೇ ಕಂತಿನ ಬರಗಾಲ ಪರಿಹಾರ ಹಣ! https://krushisanta.com/2-installment-drought-relief-eligible-list
ಇದನ್ನು ಓದಿ:Gruhalakhmi 9ನೇ ಕಂತು ಮಹಿಳೆಯರ ಖಾತೆಗೆ ಜಮಾ https://krushisanta.com/Gruhalakhmi-9th-installment-credited--check-using-this-link
ಇದನ್ನು ಓದಿ:ದಿನಕ್ಕೆ 5000₹ ಸಂಪಾದಿಸಿ ಕಲೆಗೆ ಬೆಲೆ ಜಾಸ್ತಿ ಮಿಸ್ ಮಾಡ್ಕೋಬೇಡಿ
https://krushisanta.com/Free-mobile-repair-training-for-30-days