ಗೃಹಲಕ್ಷ್ಮಿ| ಒಂದೇ ವಾರದಲ್ಲಿ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ, ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

ಗೃಹಲಕ್ಷ್ಮಿ ಹಣ ಒಂದು ವಾರದಲ್ಲಿ ಇಂತಹ ಮಹಿಳೆಯರಿಗೆ ಜಮಾ ಆಗಲಿದೆ! ಹಣ ಜಮಾ ಚೆಕ್ ಮಾಡುವುದು ಹೇಗೆ?

ಗೃಹಲಕ್ಷ್ಮಿ 2025: ಗ್ರಹಲಕ್ಷ್ಮಿ ಯೋಜನೆ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ಗಳು ಜಮೆ ಆಗುತ್ತದೆ ಈಗಾಗಲೇ ಬಹಳಷ್ಟು ಕಂತುಗಳು ತೆಗೆದುಕೊಂಡಿದ್ದಾರೆ ಮತ್ತು ಅವುಗಳ ಬಳಕೆಯನ್ನು ಮಾಡಿ ಹಲವಾರು ರೀತಿಯ ಕೆಲಸ ಕಾರ್ಯಗಳನ್ನು ಸಹ ಮಾಡಿದ್ದಾರೆ.

ಗೃಹಲಕ್ಷ್ಮಿ ಅರ್ಹ ಪಟ್ಟಿ ಮತ್ತು ಅನಹರ ಪಟ್ಟಿ ಚೆಕ್ ಮಾಡುವುದು ಹೇಗೆ?

https://ahara.karnataka.gov.in/Home/EServices ಈ ಲಿಂಕ್ ಸಹಾಯದಿಂದ ನೀವು ಗ್ರಹಲಕ್ಷ್ಮಿ ಅನಹರ ಪಟ್ಟಿ ಮತ್ತು ಅರ್ಹ ಪಟ್ಟಿಯನ್ನು ಚೆಕ್ ಮಾಡಬಹುದು!

ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡುವ ವಿಧಾನ ಹೇಗೆ?

ಹಂತ 1: ಮೊದಲಿಗೆ ಆಹಾರ ಪೋರ್ಟಲ್ ಅನ್ನು ಸಂಪರ್ಕಿಸಿ ಅಥವಾ ಮೇಲೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 2: ಇದರಲ್ಲಿ “ಈ ಪಡಿತರ ಚೀಟಿ” ಆಯ್ಕೆ ಮಾಡಿಕೊಳ್ಳಿ.

ಹಂತ 3: “ರದ್ದುಗೊಳಿಸಲಾದ ಪಟ್ಟಿಯ” ಮೇಲೆ ಕ್ಲಿಕ್ ಮಾಡಿ.

ಗೃಹಲಕ್ಷ್ಮಿ ಯೋಜನೆಗಾಗಿ ತಾಲೂಕು ಪಂಚಾಯಿತಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಣ ವರ್ಗಾಯಿಸುವುದು ವಿಳಂಬವಾಗಿದ್ದು, ಶೀಘ್ರವೇ ಎಲ್ಲ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಹೇಳಿದ್ದಾರೆ.

ನಗರದ ಗೃಹಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿಂದಿನ ಮಾದರಿಯಂತೆ ಜಿಲ್ಲಾ ಉಪ ನಿರ್ದೇಶಕರ ಮೂಲಕವೇ ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ತಾಲೂಕು ಪಂಚಾಯಿತಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಣ ರವಾನೆಯಾಗುತ್ತಿದ್ದು, ಉಪ ನಿರ್ದೇಶಕರ ಮೂಲಕ ಹಣ ಹಾಕಲಾಗುವುದು. ಆರ್ಥಿಕ ಇಲಾಖೆಯಿಂದ ಹಣ ಬಂದು 15 ದಿನ ಆಯಿತು. ಆದರೆ, ತಾಪಂ ಕಚೇರಿಗಳಿಂದ ಇಲಾಖೆಗೆ ದುಡ್ಡು ಬರುವುದು ವಿಳಂಬವಾಗುತ್ತಿದೆ ಎಂದರು.

Leave a Comment