ಕಿಡ್ನಿ ಸ್ಟೋನ್ ಸಮಸ್ಸೆ ಇದೆಯಾ? ವೈದ್ಯರ ಸಲಹೆ?

ಮೂತ್ರಪಿಂಡ ಅಥವಾ ಕಿಡ್ನಿ ಇದು ದೇಹದ ಬಹುಮುಖ್ಯ ಅಂಗಗಳಲ್ಲಿ ಒಂದಾಗಿದೆ

ಇದರ ಕಾರ್ಯವು ಬಹಳ ಮಹತ್ವ ಪಡೆದಿದೆ. ಹೃದಯ ಹಾಗೂ ಕಿಡ್ನಿ ಎರಡರ ಕೆಲಸ ದೇಹದಲ್ಲಿ ಅತ್ಯಂತ ವಿಶೇಷವಾಗಿರುತ್ತದೆ. ಹೃದಯವು ರಕ್ತವನ್ನು ಪಂಪ್ ಮಾಡಿದರೆ, ಆ ರಕ್ತವನ್ನು ಶುದ್ಧವಾಗಿ ಮಾಡಿ ಮತ್ತೆ ದೇಹಕ್ಕೆ ಸೇರಿಸುವ ಕೆಲಸವನ್ನು ಕಿಡ್ನಿ ಮಾಡುತ್ತದೆ. ಒಂದು ವೇಳೆ ಕಿಡ್ನಿ ಇಲ್ಲದೇ ಹೋದರೆ ದೇಹದ ಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ. ದೇಹವು ಕೆಟ್ಟ, ಮಲಿನ ರಕ್ತದಿಂದ ಕೂಡಿರಬೇಕಾಗುತ್ತಿತ್ತು.

ಇಂತಹ ಮಹತ್ವದ ಅಂಗ ಕಿಡ್ನಿಯ ಕಾಳಜಿ ವಹಿಸಬೇಕು ಎಂಬ ಕಾರಣಕ್ಕೆ ಒಂದು ದಿನ ಮೀಸಲಿಡಲಾಗಿದೆ. ಪ್ರತಿ ವರ್ಷ ಮಾರ್ಚ್ ತಿಂಗಳ 2ನೇ ಗುರುವಾರದಂದು ಕಿಡ್ನಿ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕಿಡ್ನಿ ದಿನವಾಗಿ ಆಚರಿಸಲಾಗುತ್ತದೆ.

ಈ ವರ್ಷದ ಧೈಯವಾಕ್ಯ: ನಿಮ್ಮ ಕಿಡ್ನಿಗಳು ಸರಿಯಾಗಿವೆಯೇ? ಮೊದಲೇ ಪತ್ತೆ ಮಾಡಿ?

ಹಾಗೂ ಮೂತ್ರ ಪಿಂಡದ ಆರೋಗ್ಯವನ್ನು ರಕ್ಷಿಸಿ ಎಂಬುದಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ನಂ. 1 ಪತ್ರಿಕೆ ವಿಜಯವಾಣಿಯು ಇಲ್ಲಿಯ ಕಮತೆ ಕಿಡ್ನಿ ಕೇರ್ ಆಶ್ರಯದಲ್ಲಿ ಏರ್ಪಡಿಸಿದ್ದ ನೇರ ಫೋನ್‌ ಇನ್ ಕಾರ್ಯಕ್ರಮಕ್ಕೆ ಭಾರಿ ಸ್ಪಂದನೆ ವ್ಯಕ್ತವಾಯಿತು.

ಮೂತ್ರಪಿಂಡ ಮತ್ತು ಕಿಡ್ನಿ ಕಸಿ ತಜ್ಞರಾದ ಡಾ. ಶಿದ್ರಾಮ ಕಮತೆ ಅವರು ಕೇಳುಗರ ಪ್ರಶ್ನೆಗಳಿಗೆ ಪರಿಹಾರ ರೂಪದ ಉತ್ತರ ನೀಡುವ ಮೂಲಕ ಕಿಡ್ನಿಯ ಆರೋಗ್ಯದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು.

ಆಧುನಿಕ ಜೀವನ ಶೈಲಿಯಿಂದಾಗಿ ಅನೇಕ ಜನರು ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಿಡ್ನಿ ಕೆಲಸ ಕಾರ್ಯಗಳ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಹಾಗಾಗಿಯೇ ಅದು ಯಾವ ಸ್ಥಿತಿಯಲ್ಲಿದೆ. ಕಿಡ್ನಿಯಲ್ಲಿ ಹರಳುಗಳಾದರೆ ಏನು ಮಾಡಬೇಕು, ಕಿಡ್ನಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು, ಸಮಸ್ಯೆಯಾದಾಗ ಎಲ್ಲಿ ಹೋಗಬೇಕು, ಎಂಬುದು ಸೇರಿದಂತೆ ಕೇಳುಗರ ಆತಂಕ, ಅನುಮಾನಗಳಿಗೆ ವೈದ್ಯರು ಪರಿಹಾರ ನೀಡಿದರು.

ಯೂಟ್ಯೂಬ್ ಸಲಹೆ ನಂಬಬೇಡಿ?

ಇತ್ತೀಚಿನ ದಿನಗಳಲ್ಲಿ ಜನರು ಏನಾದರೂ ಸಮಸ್ಯೆ, ಆರೋಗ್ಯ ಟಿಪ್ಸ್ ಗಳು ಬೇಕಾದಾಗ ಯೂಟ್ಯೂಬ್‌ನಲ್ಲಿ ನೋಡುವುದು ಸಾಮಾನ್ಯವಾಗುತ್ತಿದೆ. ಆದರೆ, ಆರೋಗ್ಯದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಅರ್ಹವಲ್ಲದ ಸಲಹೆ ಪಡೆಯಬಾರದು. ಅದರಲ್ಲೂ ಕಿಡ್ನಿ ವಿಷಯದಲ್ಲಿ ಯಾವುದೇ ಚಾನ್ಸ್ ತೆಗೆದುಕೊಳ್ಳದೇ ತಜ್ಞರ ಬಳಿ ಹೋಗಬೇಕು ಎಂದು ಡಾ. ಶಿದ್ರಾಮ ಕಮತೆ ಹೇಳುತ್ತಾರೆ.

ಬಿಯರ್ ಪರಿಹಾರವಲ್ಲ: ಕಿಡ್ನಿಯಲ್ಲಿ ಹರಳು ಉಂಟಾದರೆ ಬಿಯರ್ ಕುಡಿಯಿರಿ?

ತಾನಾಗಿಯೇ ಹೊರಟು ಹೋಗುತ್ತದೆ ಎಂದು ಕೆಲವರು ಸಲಹೆ ಕೊಡುತ್ತಾರೆ. ಆದರೆ, ಇದು ತಪ್ಪು. ಇದರ ಬಗ್ಗೆ ಸಂಶೋಧನೆ ಆಗಿಲ್ಲ. ಯಾವುದೇ ಆಧಾರವೂ ಇಲ್ಲ. ಬಿಯರ್ ಕುಡಿದಾಗ ಹೆಚ್ಚು ನೀರು ಒಳಗೆ ಹೋಗಿ ಫೋರ್ಸ್‌ನಿಂದ ಮೂತ್ರ ಬರುತ್ತದೆ. ಅದರ ಮೂಲಕ ಹರಳು ಹೊರಗೆ ಬರಬಹುದು. ಆದರೆ, ಬಿಯರ್‌ನಿಂದಲೇ ಅದು ಆಗುತ್ತದೆ ಎಂದೇನಿಲ್ಲ. ಯಥೇಚ್ಛ ನೀರು ಕುಡಿಯುವುದರಿಂದಲೂ ಆಗಬಹುದು. ಒಂದು ವೇಳೆ ಬಿಯರ್‌ನಿಂದ ಕಿಡ್ನಿ ಹರಳಿಗೆ ಪರಿಹಾರ ಸಿಗುತ್ತದೆ ಎಂದುಕೊಂಡು ಬಿಯರ್ ಅಭ್ಯಾಸ ಮಾಡಿಕೊಂಡರೆ ಮುಂದೊಂದು ದಿನ ಲಿವರ್ ಫೇಲ್ಯೂರ್ ಗೆ ಕಾರಣವಾಗುತ್ತದೆ. ಹಾಗಾಗಿ ಆಧಾರ ರಹಿತ ಸಲಹೆ ನಂಬಬೇಡಿ ಎನ್ನುತ್ತಾರೆ ವೈದ್ಯರು.

ಯೂಟ್ಯೂಬ್‌ನಲ್ಲಿ ನೋಡಿದ್ದೆ, ಮನೆ ಮದ್ದು ಮಾಡಿದೆ ಎಂದು ನೀವೇ ವೈದ್ಯರಾಗಬೇಡಿ. ಕಿಡ್ನಿ ವಿಚಾರದಲ್ಲಿ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.

ಬಿಯರ್ ಪರಿಹಾರವಲ್ಲ?

ಕಿಡ್ನಿಯಲ್ಲಿ ಹರಳು ಉಂಟಾದರೆ ಬಿಯರ್ ಕುಡಿಯಿರಿ ತಾನಾಗಿಯೇ ಹೊರಟು ಹೋಗುತ್ತದೆ ಎಂದು ಕೆಲವರು ಸಲಹೆ ಕೊಡುತ್ತಾರೆ. ಆದರೆ, ಇದು ತಪ್ಪು. ಇದರ ಬಗ್ಗೆ ಸಂಶೋಧನೆ ಆಗಿಲ್ಲ. ಯಾವುದೇ ಆಧಾರವೂ ಇಲ್ಲ. ಬಿಯರ್ ಕುಡಿದಾಗ ಹೆಚ್ಚು ನೀರು ಒಳಗೆ ಹೋಗಿ ಫೋರ್ಸ್‌ನಿಂದ ಮೂತ್ರ ಬರುತ್ತದೆ. ಅದರ ಮೂಲಕ ಹರಳು ಹೊರಗೆ ಬರಬಹುದು. ಆದರೆ, ಬಿಯರ್‌ನಿಂದಲೇ ಅದು ಆಗುತ್ತದೆ ಎಂದೇನಿಲ್ಲ. ಯಥೇಚ್ಛ ನೀರು ಕುಡಿಯುವುದರಿಂದಲೂ ಆಗಬಹುದು. ಒಂದು ವೇಳೆ ಬಿಯರ್‌ನಿಂದ ಕಿಡ್ನಿ ಹರಳಿಗೆ ಪರಿಹಾರ ಸಿಗುತ್ತದೆ ಎಂದುಕೊಂಡು ಬಿಯರ್ ಅಭ್ಯಾಸ ಮಾಡಿಕೊಂಡರೆ ಮುಂದೊಂದು ದಿನ ಲಿವರ್ ಫೇಲ್ಯೂರ್ ಗೆ ಕಾರಣವಾಗುತ್ತದೆ. ಹಾಗಾಗಿ ಆಧಾರ ರಹಿತ ಸಲಹೆ ನಂಬಬೇಡಿ ಎನ್ನುತ್ತಾರೆ ವೈದ್ಯರು.

ಯೂಟ್ಯೂಬ್‌ನಲ್ಲಿ ನೋಡಿದ್ದೆ, ಮನೆ ಮದ್ದು ಮಾಡಿದೆ ಎಂದು ನೀವೇ ವೈದ್ಯರಾಗಬೇಡಿ. ಕಿಡ್ನಿ ವಿಚಾರದಲ್ಲಿ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.

ಕಿಡ್ನಿ ಆರೋಗ್ಯ ಕಾಪಾಡುವ ಬಗೆ?

ಸಾಮಾನ್ಯವಾಗಿ ಮನುಷ್ಯನಿಗೆ ಎರಡು ಕಿಡ್ನಿ ಇರುತ್ತವೆ. ಅವುಗಳ ಗಾತ್ರವು 10ರಿಂದ 12 ಸೆಂಟಿಮೀಟರ್ ಇರುತ್ತದೆ. ಕೆಲವರಿಗೆ ಒಂದೇ ಕಿಡ್ನಿ ಇದ್ದರೂ ಜೀವನ ಸಾಗಿಸಬಹುದು. ಕಿಡ್ನಿಯೊಳಗೆ ಪ್ರತಿ ನಿಮಿಷಕ್ಕೆ 1200 ಎಂಎಲ್ ರಕ್ತವು ಬಂದು ಶುದ್ದೀಕರಣಗೊಂಡು ಹೊರಗೆ ಹೋಗುತ್ತದೆ. ರಕ್ತ ಶುದ್ದೀಕರಣದ ಜತೆಗೆ ರಕ್ತ ಉತ್ಪತ್ತಿ, ಕ್ಯಾಲ್ಸಿಯಂ, ವಿಟಮಿನ್ ಡಿ ಮುಂತಾದವುಗಳ ಸಮತೋಲನ ಕಾಯ್ದುಕೊಳ್ಳುತ್ತದೆ. ಆಸಿಡ್, ಪಿಎಚ್, ನೀರಿನ ಮಟ್ಟವನ್ನು ಕಾಪಾಡುತ್ತದೆ. ಹೀಗೆ ಅನೇಕ ಕಾರ್ಯಗಳನ್ನು ಕಿಡ್ನಿ ನಿರ್ವಹಿಸುತ್ತದೆ. ಸಾಮಾನ್ಯವಾಗಿ ನೀರು ಕಡಿಮೆಯಾದಾಗ ಮೂತ್ರ ಹಳದಿ ಬರುತ್ತದೆ. ಅಲ್ಲದೇ ಆರೋಗ್ಯ ಸರಿ ಇಲ್ಲದಾಗ, ಯಾವುದಾದರೂ ಔಷಧ ತೆಗೆದುಕೊಂಡಾಗ ಮೂತ್ರ ಹಳದಿಯಾಗುತ್ತದೆ. ಇದನ್ನು ಹೊರತಪಡಿಸಿ ಬೇರೆ ಸಂದರ್ಭದಲ್ಲಿ ಮೂತ್ರದ ಬಣ್ಣ ಬದಲಾದರೆ ಅದು ಕಾಯಿಲೆಯ ಲಕ್ಷಣವಾಗುತ್ತದೆ. ಆಗ ತಜ್ಞ ವೈದ್ಯರನ್ನು ಕಾಣಬೇಕು.

ಪೇನ್ ಕಿಲ್ಲರ್ ಬೇಡ: ಆರೋಗ್ಯ ಸಮಸ್ಯೆಗಳಿಗೆ ಪದೇಪದೆ ಪೇನ್ ಕಿಲ್ಲರ್‌ಗಳನ್ನು

ತೆಗೆದುಕೊಳ್ಳಬಾರದು ಎಂದು ತಜ್ಞ ವೈದ್ಯ ಡಾ. ಶಿದ್ರಾಮ್ ಕಮತೆ ಹೇಳುತ್ತಾರೆ. ನಿರಂತರವಾಗಿ ಪೇನ್ ಕಿಲ್ಲರ್ ಬಳಕೆಯೂ ಕಿಡ್ನಿ ಕಾರ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವಿನಾಕಾರಣ ಸ್ಟಿರಾಯ್ಡ್ ಬಳಕೆ ಮಾಡಬಾರದು. ಇವುಗಳ ಬಳಕೆ ಹೆಚ್ಚಾದರೆ ಕಿಡ್ನಿ ಫೇಲ್ಯೂವರ್ ಕೂಡ ಆಗಬಹುದು ಎಂದು ಎಚ್ಚರಿಸಿದರು.

ಕಿಡ್ನಿ ಸ್ಟೋನ್ ಏಕೆ?

ಸಾಮಾನ್ಯವಾಗಿ ಕಿಡ್ನಿ ಸ್ಟೋನ್ ಬೇರೆಬೇರೆ ಕಾರಣಗಳಿಗೆ ಆಗುತ್ತವೆ. ಕಡಿಮೆ ನೀರು ಕುಡಿಯುವವರಲ್ಲಿ ಹೆಚ್ಚು. ಸ್ಟೋನ್ ಆಗಲು ಹಲವು ಕಾರಣಗಳಿರುತ್ತವೆ. ಯಾಕಾಗಿ ಆಗಿವೆ ಎಂಬುದನ್ನು ಪತ್ತೆ ಹಚ್ಚಲು ಕಿಡ್ನಿಯಿಂದ ಹೊರ ತೆಗೆದ ಹರಳನ್ನು ಪರೀಕ್ಷಿಸಬೇಕಾಗುತ್ತದೆ. ಆಗಲೇ ಮುಂದಿನ ದಿನಗಳಲ್ಲಿ ಸ್ಟೋನ್ ಆಗದಿರುವಂತೆ ತಡೆಯಲು ಚಿಕಿತ್ಸೆ ನೀಡಬಹುದು. 30-40 ವರ್ಷದ ನಂತರ ಪ್ರತಿ ವರ್ಷ ಒಂದು ಬಾರಿ ಕಿಡ್ನಿ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ. ಅದರಿಂದ ಆರಂಭದಲ್ಲೇ ಗಂಭೀರ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವಾಗುತ್ತದೆ. ರಕ್ತದಲ್ಲಿ ಕ್ರಿಯಾಟಿನೈನ್, ಮೂತ್ರ ಇವುಗಳ ಪ್ರಾಥಮಿಕ ಪರೀಕ್ಷೆ ಮಾಡಿ ಇದರಲ್ಲಿ ಏನಾದರೂ ಕಂಡು ಬಂದರೆ ಮುಂದಿನ ಪರೀಕ್ಷೆಗಳನ್ನು ಮಾಡಲಾಗುತ್ತದೆ.

ಇದನ್ನು ಓದಿ:ಈ ಪಟ್ಟಿಯಲ್ಲಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಕ್ಯಾನ್ಸಲ್?
https://krushiyogi.com/archives/704

Leave a Comment