ಚಿನ್ನ ಕೊಳ್ಳುವ ಪ್ಲಾನ್ ಇದೆಯಾ? ಇಂದಿನ ಚಿನ್ನ ದರ ತಿಳಿದುಕೊಳ್ಳಿ!

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ, ಗ್ರಾಹಕರಿಗೆ ಸಿಹಿ ಸುದ್ದಿ!

ಕಳೆದ ಕೆಲವು ದಿನಗಳಿಂದ ಗಗನಕ್ಕೇರಿದ್ದ ಚಿನ್ನದ ಬೆಲೆ ಇಂದು ಕೊಂಚ ಮಟ್ಟಿಗೆ ಇಳಿಕೆಯಾಗಿರುವುದು ಗ್ರಾಹಕರಿಗೆ ಸಮಾಧಾನ ತಂದಿದೆ. ಒಂದು ಹಂತದಲ್ಲಿ ಲಕ್ಷ ರೂಪಾಯಿಗಳ ಗಡಿ ದಾಟಿದ್ದ ಪರಿಶುದ್ಧ ಚಿನ್ನದ ಬೆಲೆ ಈಗ ಕೆಳಗಿಳಿದಿದೆ. ಉಳಿದ ಚಿನ್ನದ ವಿಧಗಳ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ದರಗಳ ವಿವರ ಇಲ್ಲಿದೆ:

ಚಿನ್ನದ ದರದಲ್ಲಿ ಇಳಿಕೆ

  • ನಿನ್ನೆ ದಾಖಲೆಯ ಮಟ್ಟದಲ್ಲಿದ್ದ 99.9% ಪರಿಶುದ್ಧತೆಯ ಚಿನ್ನದ ಬೆಲೆ ಇಂದು ₹ 99,800.00 ಕ್ಕೆ ತಲುಪಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹ 165 ರಷ್ಟು ಇಳಿಕೆಯಾಗಿ ₹ 8,880 ಆಗಿದೆ.
  • 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹ 180 ರಷ್ಟು ಇಳಿಕೆಯಾಗಿ ₹ 9,668 ಆಗಿದೆ.
  •  18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹ 135 ರಷ್ಟು ಇಳಿಕೆಯಾಗಿ ₹ 7,266 ಆಗಿದೆ.

ಬೆಳ್ಳಿ ದರದಲ್ಲಿ ಇಳಿಕೆ

ಬೆಳ್ಳಿ ದರದಲ್ಲಿಯೂ ಇಳಿಕೆಯ ಪ್ರವೃತ್ತಿ ಮುಂದುವರೆದಿದೆ. ಇಂದು, ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ ₹ 2,000 ರಷ್ಟು ಇಳಿಕೆಯಾಗಿ ₹ 1,09,000 ಕ್ಕೆ ತಲುಪಿದೆ.

Leave a Reply

Your email address will not be published. Required fields are marked *