ಕುರಿ ಮತ್ತು ಮೇಕೆ ಸಾಕಾಣಿಕೆಗೆ 66000 ನೀಡಲು ಅರ್ಜಿ!

<Sheep Farming> <Goat Farming> < ಕುರಿ ಸಾಕಾಣಿಕೆ > < ಮೇಕೆ ಸಾಕಾಣಿಕೆ>

Dec 10, 2024 - 23:12
 0
ಕುರಿ ಮತ್ತು ಮೇಕೆ ಸಾಕಾಣಿಕೆಗೆ 66000 ನೀಡಲು ಅರ್ಜಿ!

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ, ನಿಯಮಿತದ ವತಿಯಿಂದ 2024-25 ನೇ ಸಾಲಿನ ಗಿರಿಜನ ಉಪ ಯೋಜನೆಯಡಿಯಲ್ಲಿ ಕುರಿ/ಮೇಕೆ ಘಟಕ ಪೂರೈಕೆ ಯೋಜನೆಗೆ ನಿಗಮದಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ ಸದಸ್ಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

16 ರಿಂದ 60 ವರ್ಷದೊಳಗಿನ ಮಹಿಳಾ/ಪುರುಷ ಸದಸ್ಯರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿ.20 ಕಡೆಯ ದಿನವಾಗಿದೆ. ಈ ಯೋಜನೆಯಡಿ 10 ಸುಧಾರಿತ ಹೆಣ್ಣು ಕುರಿ/ ಮೇಕೆ, 01 ಟಗರು/ಹೋತ ಒಟ್ಟು ಘಟಕ ದರ ರೂ.66,000/ ಗಳಿದ್ದು, ಶೇ.90 ರಷ್ಟು ಸಹಾಯಧನ ಹೊಂದಿರುತ್ತದೆ.

ಜಿಲ್ಲೆಗೆ ಒಟ್ಟು 03 ಗುರಿಗಳನ್ನು ನೀಡಲಾಗಿದೆ. ಹೆಚ್ಚಿನ ವಿವರಗಳಿಗೆ ಹತ್ತಿರದಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಅಥವಾ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿತು ಮತ್ತು ಅಭಿವೃದ್ದಿ ನಿಗಮ, ನಿಯಮಿತ ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಕುರಿತು ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಇದನ್ನು ಓದಿ:ಎಮ್ಮೆ ಅಥವಾ ಹಸು ಖರೀದಿ ಮಾಡಲು 65,000 ನೀಡಲು ಅರ್ಜಿ ಆಹ್ವಾನ

https://krushisanta.com/Application-invited-for-purchase-of-cow-or-buffalo--get-loan-up-to-65000--at-6

ಇದನ್ನು ಓದಿ:ಇಂದಿನಿಂದ ಡಿಸೆಂಬರ್ 8ನೇ ತಾರೀಖಿನವರೆಗೆ ಮಳೆ ಹವಮಾನ ಮುನ್ಸೂಚನೆ

https://krushisanta.com/Rainfall-alert-till-8th-December--in-Karnataka

admin B.Sc(hons) agriculture College of agriculture vijayapura And provide consultant service