19ನೇ ಕಂತಿನ ಪಿಎಂ ಕಿಸಾನ ಹಣ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ
<ಪಿಎಂ ಕಿಸಾನ್ ಪಟ್ಟಿ ಬಿಡುಗಡೆ> <ಪಿಎಮ್ ಕಿಸಾನ್ 19ನೇ ಕಂತಿನ ಪಟ್ಟಿ ಬಿಡುಗಡೆ> <ಆನ್ಲೈನ್ ನಲ್ಲಿ ಪಿಎಂ ಕಿಸಾನ್ ಪಟ್ಟಿ ಬಿಡುಗಡೆ>
ಆತ್ಮೀಯ ರೈತ ಬಾಂಧವರೇ ಕರ್ನಾಟಕದಾಧ್ಯಂತ ಅಷ್ಟೇ ಅಲ್ಲದೆ ಇಡೀ ದೇಶಾದ್ಯಂತ ಕೂಡ ಪಿಎಂ ಕಿಸಾನ್ ಯೋಜನೆ ಗೊತ್ತಿರುವ ವಿಷಯವಾಗಿದೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ರೂ. 2000 ಗಳು ಜಮಾ ಆಗುತ್ತದೆ ಈಗಾಗಲೇ ಕಳೆದ 18ನೇ ಕಂತಿನ ಪಿಎಂ ಕಿಸಾನ್ ಹಣವು ಅಕ್ಟೋಬರ್ 5 ನೇ ತಾರೀಖಿನಂದು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು.
ಆದರೆ ಇದೀಗ ಅಂದರೆ ಮತ್ತೆ ನಾಲ್ಕು ತಿಂಗಳ ನಂತರ ಅಂದರೆ ಅಕ್ಟೋಬರ್ ನವೆಂಬರ್ ಡಿಸೆಂಬರ್ ಜನವರಿ ಫೆಬ್ರವರಿ ನಾಲ್ಕು ತಿಂಗಳಾದರೆ ಫೆಬ್ರುವರಿ ತಿಂಗಳಲ್ಲಿ 19ನೇ ಕಂತಿನ ಹಣ ಕೂಡ ಜಮಾ ಆಗಲಿದೆ ಎಂದು ತಿಳಿದುಕೊಳ್ಳಬಹುದು. ದೇಶಾದ್ಯಂತ ಬಹಳಷ್ಟು ಜನರು ರೈತರ ಇರುವುದರಿಂದ ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಚಾರ ಏನೆಂದರೆ ಬಹಳಷ್ಟು ರೈತರು ಪ್ರತಿ ಕಂತಿಗೊಮ್ಮೆ ಮತ್ತೊಂದು ಕಂತಿಗೆ ವ್ಯತ್ಯಾಸವಿರುತ್ತದೆ ಅಂದರೆ ಅದರಲ್ಲಿ ಬಹಳಷ್ಟು ಜನರ ಪಿಎಂ ಕಿಸಾನ್ ಹಣ ಜಮಾ ಆಗುವುದಿಲ್ಲ ಅದಕ್ಕೆ ಇನ್ನಿತರ ಕಾರಣಗಳು ಇರಬಹುದು.
ಹಣ ಜಮಾ ಆಗುವ ಮುಂಚೆ ಹಣದ ಸ್ಟೇಟಸ್ ಅಂದರೆ ನಿಮಗೆ ಹಣ ಬರುತ್ತದೆಯೋ ಅಥವಾ ಇಲ್ಲ ಎಂಬುದನ್ನ ಖಚಿತಪಡಿಸಿಕೊಳ್ಳಬೇಕು ಖಚಿತಪಡಿಸಿಕೊಳ್ಳಲು ನೀವು ಒಂದು ಕೆಳಗಡೆ ನೀಡಿರುವ ವಿಧಾನವನ್ನು ಬಳಸಿಕೊಂಡು ನೀವು ಅದನ್ನು ಚೆಕ್ ಮಾಡಿಕೊಳ್ಳಿ ನಿಮಗೆ ಸುಲಭವಾಗಿ ನಿಮ್ಮ ಹೆಸರನ್ನು ನೀವು 19ನೇ ಕಂತಿನ ಪಿಎಂ ಕಿಸಾನ್ ಲಿಸ್ಟ್ ನಲ್ಲಿ ನೋಡಬಹುದು.
19ನೇ ಕಂತಿನ ಪಿಎಂ ಕಿಸಾನ್ ಅರ್ಹ ಪಟ್ಟಿ ಲಿಸ್ಟ್ ಆನ್ಲೈನ್ ನಲ್ಲಿ ಚೆಕ್ ಮಾಡುವುದು ಹೇಗೆ?
ತುಂಬಾ ಸುಲಭ ವಿಧಾನವನ್ನು ನೀವು ಇಲ್ಲಿ ಕೆಳಗಡೆ ನೀಡಿರುವುದನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು. ಅದಕ್ಕಾಗಿ ನೀವು ಕೆಳಗಡೆ ನಾವು ತಿಳಿಸಿರುವಂತೆ ಮಾಡಬೇಕು.
ಹಂತ 1: https://pmkisan.gov.in/Rpt_BeneficiaryStatus_pub.aspx ಈ ಲಿಂಕ್ ಒರಿಜಿನಲ್ ಲಿಂಕ್ ಆಗಿರುತ್ತದೆ. ಇದನ್ನು ಕ್ಲಿಕ್ ಮಾಡಿದ ಮೇಲೆ ನೀವು ನೇರವಾಗಿ ಭಾರತ ಸರ್ಕಾರದ ಪಿಎಂ ಕಿಸಾನ್ ಪೋರ್ಟಲ್ ಡ್ಯಾಶ್ ಬೋರ್ಡ್ ಗೆ ಹೋಗುತ್ತೀರಿ.
ಹಂತ 2: ಇದರಲ್ಲಿ ನೀವು ಮಾಡಬೇಕಾದ ಕೆಲಸ ಏನೆಂದರೆ ದೇಶಾದ್ಯಂತ ರೈತರು ಫಲಾನುಭವಿಗಳು ಇರುವುದರಿಂದ ನೀವು ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಮತ್ತು ರಾಜ್ಯದಲ್ಲಿಯೂ ಹಲವಾರು ರೈತರು ಇರುವುದರಿಂದ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಿಲ್ಲೆಯಲ್ಲಿ ಬಹಳಷ್ಟು ಜನರು ಇದರ ಸದುಪಯೋಗವನ್ನು ಪಡೆಯುತ್ತಾರೆ ಹೀಗಾಗಿ ನೀವು ನಿಮ್ಮ ತಾಲೂಕು ಮತ್ತೆ ಊರನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮ್ಮ ಊರಿನ ಸಂಪೂರ್ಣ ಪಟ್ಟಿ ಆನ್ಲೈನ್ ನಲ್ಲಿ ಪ್ರಕಟವಾಗುತ್ತದೆ.
ಇದನ್ನು ಓದಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ 5.9 ಕೋಟಿ ರೇಷನ್ ಕಾರ್ಡುಗಳು ರದ್ದು! ನಿಮ್ಮ ಕಾರ್ಡ್ ಕಥೆ? ಯಾಕೆ ಕ್ಯಾನ್ಸಲ್
https://krushisanta.com/In-India-till-date-5.9-Crore-ration-cards-are-cancelled