ಇಲಾಖೆಯಿಂದ ಪ್ಲಾಸ್ಟಿಕ್ ಟ್ರೇ ನೀಡಲು ಅರ್ಹರಿಂದ ಅರ್ಜಿ ಆಹ್ವಾನ

<ಇಲಾಖೆಯಿಂದ ಪ್ಲಾಸ್ಟಿಕ್ ಟ್ರೇ ನೀಡಲು ಅರ್ಜಿ> < ಇಲಾಖೆಯಿಂದ ಪ್ಲಾಸ್ಟಿಕ್ ಕ್ರೇಟ್ಸ್ > < ಮೀನುಗಾರಿಕೆ ಸಲಕರಣೆ ನೀಡಲು ಅರ್ಜಿ> < ಮೀನುಗಾರಿಕೆ ಇಲಾಖೆಯಿಂದ ಸಹಾಯಧನದಲ್ಲಿ ಸಲಕರಣೆ ವಿತರಣೆಗೆ ಅರ್ಜಿ>

Jul 28, 2024 - 07:44
 0
ಇಲಾಖೆಯಿಂದ ಪ್ಲಾಸ್ಟಿಕ್ ಟ್ರೇ ನೀಡಲು  ಅರ್ಹರಿಂದ ಅರ್ಜಿ ಆಹ್ವಾನ

ಆತ್ಮೀಯ ರೈತರೇ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮೀನುಗಾರಿಕೆ ಇಲಾಖೆಯೂ ಮೀನು ಕೃಷಿ ಉತ್ತೇಜನ ಮಾಡಲು ಸಹಾಯಧನ ನೀಡುತ್ತದೆ ಅದರಲ್ಲಿ ಪ್ರಮುಖವಾಗಿ ರೈತರಿಗೆ ತಮ್ಮ ಜಮೀನಿನಲ್ಲಿ ಅಂದರೆ ಕೃಷಿ ಹೊಂಡಗಳಲ್ಲಿ ಮೀನು ಮರಿಗಳನ್ನು ಸಾಕಾಣಿಕೆ ಮಾಡಲು ಉತ್ತೇಜನ ನೀಡುವ ಕಾರ್ಯವು ಮೀನುಗಾರಿಕೆ ಇಲಾಖೆ ತೆಗೆದುಕೊಂಡಿದೆ. ಮೀನುಗಾರಿಕೆ ಇಲಾಖೆಯು ಮೀನುಗಾರಿಕೆಯಲ್ಲಿ ತೊಡಗಿರುವ ಜಿಲ್ಲೆಯ ಆಸಕ್ತ ವ್ಯಕ್ತಿ/ಸಂಘಗಳಿಗೆ ಸೌಲಭ್ಯ ವಿತರಣೆ/ ಸಹಾಯಧನ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಮೀನುಗಾರಿಕೆ ಇಲಾಖೆಯಿಂದ ಪ್ಲಾಸ್ಟಿಕ್ ಟ್ರೇ ಹಾಗೂ ಇತರೆ ಸಲಕರಣೆ ನೀಡಲು ಅರ್ಜಿ!

ಅರ್ಹರಿಗೆ ರಾಜ್ಯ ವಲಯದಡಿ ಮೀನುಗಾರಿಕೆ ಸಲಕರಣೆಗಳಾದ ನೈಲಾನ್ ಬಲೆ, ತಕ್ಕಡಿ, ಪ್ಲಾಸ್ಟಿಕ್ ಕ್ರೇಟ್ಸ್, ಲೈಫ್ ಜಾಕೆಟ್ಸ್, ಫೈಬರ್ ಗ್ಲಾಸ್ ಹರಿಗೋಲು, ಇನ್ಸುಲೇಟೆಡ್ ಬಾಕ್ಸ್‌ ಇತ್ಯಾದಿಗಳ ಖರೀದಿ/ ವಿತರಣೆ, ಕೆರೆ/ ಜಲಾಶಯಗಳ ಅಂಚಿನಲ್ಲಿ ನಿರ್ಮಿಸಿರುವ ಮೀನುಮರಿ ಪಾಲನಾ ಕೊಳಗಳಲ್ಲಿ ಮೀನುಮರಿ ಗಳನ್ನು ಪಾಲನೆ ಮಾಡಲು ಸಹಾಯಧನ, ಮೀನುಮರಿ ಖರೀದಿಗೆ ಸಹಾಯಧನನೀಡಲಾಗುವುದು.

ಜಿಲ್ಲಾ ವಲಯದಡಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಯಡಿ ಮೀನುಗಾರಿಕೆ ಸಲಕರಣೆಗಳಾದ ನೈಲಾನ್ ಬಲೆಗಳು, ತಕ್ಕಡಿ, ಪ್ಲಾಸ್ಟಿಕ್ ಕ್ರೇಟ್ಸ್, ಲೈಫ್ ಜಾಕೆಟ್ಸ್, ಫೈಬರ್ ಗ್ಲಾಸ್ ಹರಿಗೋಲು, ಇನ್ಸುಲೇಟೆಡ್ ಬಾಕ್ಸ್ ಇತ್ಯಾದಿಗಳ ಖರೀದಿ/ ವಿತರಣೆ ಯೋಜನೆ, ಮೀನು ಮಾರುಕಟ್ಟೆ ಮತ್ತು ಮತ್ಯವಾಹಿನಿ ಯೋಜನೆಯಡಿ ಮೀನು ಮಾರಾಟಗಾರರಿಗೆ ಮೊಪೆಡ್ ಮತ್ತು ಐಸ್ ಬಾಕ್ಸ್ ಖರೀದಿಗೆ ಸಹಾಯಧನ ನೀಡಲಾಗುವುದು. ಆಸಕ್ತರು ತಾಲ್ಲೂಕು/ಜಿಲ್ಲಾ ಮೀನುಗಾರಿಕೆ ಕಚೇರಿಗಳಿಂದ ನಿಗಧಿತ ಅರ್ಜಿ ನಮೂನೆ ಪಡೆದು ಅಗತ್ಯ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?

 ಆಧಾರ್ ಕಾರ್ಡ್

 ಭಾವಚಿತ್ರ

 ಮೀನುಗಾರಿಕೆ ಮಾಡುವ ಅನುಮತಿ ಪತ್ರ

ಅಗತ್ಯ ದಾಖಲೆಗಳೊಂದಿಗೆ ನಿಗದಿ ಮಾಡಿದ ಸಮಯದ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಆಯ್ಕೆಯನ್ನು ಜೇಷ್ಠತೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು ಅಂದರೆ ಮೊದಲು ಯಾರು ಅರ್ಜಿ ಸಲ್ಲಿಸುತ್ತಾರೋ ಅವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಮತ್ತು ಅರ್ಜಿಯನ್ನು ಆಯ್ಕೆ ಮಾಡಲಾಗುತ್ತದೆ ಒಂದು ವೇಳೆ ನೀವು ತಡವಾಗಿ ಅರ್ಜಿಯನ್ನು ಸಲ್ಲಿಸಿದರೆ ನೀವು ಈ ಯೋಜನೆಯಿಂದ ವಂಚಿತರಾಗಬಹುದು ಅದಕ್ಕಾಗಿ ಹಿಂದೆ ಅರ್ಜಿ ಸಲ್ಲಿಸಿ ಇದರ ಸೌಲಭ್ಯ ಪಡೆಯಿರಿ. ದಾಖಲಾತಿಗಳೊಂದಿಗೆ ಆಗಸ್ಟ್ 12ರೊಳಗಾಗಿಆಯಾ ತಾಲ್ಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯವಾಣಿ ಸಂಖ್ಯೆ: 8277200300 ಅಥವಾ ತುಮಕೂರು/ತುರುವೇಕೆರೆ ಮೊ.ಸಂ. 9620512914, ಗುಬ್ಬಿ, ಶಿರಾ ಮೊ.ಸಂ. 7349050051, ಪಾವಗಡ, ಕೊರಟಗೆರೆ, ಮಧುಗಿರಿ ಮೊ.ಸಂ. 7406092921, ಚಿಕ್ಕನಾಯಕನಹಳ್ಳಿ ಮೊ.ಸಂ. 9686726779, ತಿಪಟೂರು ಮೊ.ಸಂ. 9740900866, ಕುಣಿಗಲ್ ಮೊ.ಸಂ. 8971397718 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ರಾಜ್ಯದ ಹೆಚ್ಚುವರಿ ಬರಗಾಲ ಪಡೆದುಕೊಳ್ಳುವ ರೈತರ ಪಟ್ಟಿಯನ್ನು ಆನ್ಲೈನ್ನಲ್ಲಿ ಪ್ರಕಟ

https://krushisanta.com/Final-parihara-payment-farmers-list-released

ಇದನ್ನು ಓದಿ:ಈ ಲಿಸ್ಟ್ ನಲ್ಲಿರುವ ಮಹಿಳೆಯರ ಖಾತೆಗೆ ಒಂದೇ ವಾರದಲ್ಲಿ ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಹಣ 4,000 ಜಮಾ ಆಗಲಿವೆ

https://krushisanta.com/Gruhalakhmi-will-credit-soon-for-june-and-july-month

ಇದನ್ನು ಓದಿ:ರಾಜ್ಯದಲ್ಲಿ ಎದ್ದು ಕಾಣಿಸುತ್ತಿರುವ ವರುಣನ ಆರ್ಭಟ! ಮತ್ತೆ ಮಳೆ ಮುನ್ಸೂಚನೆ

https://krushisanta.com/Rain-weather-forecast-in-Karnataka

ಇದನ್ನು ಓದಿ:ರಾಜ್ಯದ ರೈತ ಸಾಲ ಮನ್ನಾ ವಿಚಾರ ಕುರಿತು ನಿಕಟವಾದ ಮಾಹಿತಿ ಪ್ರಕಟಣೆ

https://krushisanta.com/Raitar-sala-manna-Vichar-mahiti-669

admin B.Sc(hons) agriculture College of agriculture vijayapura And provide consultant service