ಸಮೀಕ್ಷೆ ಬಳಿಕ 2.4 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದು ಮಾಡಲಾಗಿದೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
<2.4 lakh BPL card has been rejected> < 2.4 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದು> < ಫೈನಲ್ ಆಗಿ 2.4 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿವೆ>
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರಾಜ್ಯದಲ್ಲಿ 2 ಲಕ್ಷದ 40 ಸಾವಿರಕ್ಕೂ ಅಧಿಕ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಅನರ್ಹರ ಪಡಿತರ ಚೀಟಿಗಳನ್ನು ರದ್ದು ಮಾಡುವ ವೇಳೆ ಅರ್ಹರ ಪಡಿತರ ಚೀಟಿಗಳು ರದ್ದಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ವಿರೋಧ ಪಕ್ಷದ ನಾಯಕರು ಸರ್ಕಾರದ ಮೇಲೆ ಮುಗಿ ಬಿದಿದ್ದಾರೆ.
ಅರ್ಹರ ಪಡಿತರ ಚೀಟಿಗಳು ರದ್ದಾಗಿದ್ದರೆ ಅದನ್ನು ಪತ್ತೆ ಮಾಡಿ ಮತ್ತೆ ಅವರಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಡಿಸಿಎಂ ಡಿ.ಎಕ.ಶಿವಕುಮಾರ್ ಹೇಳಿದ್ದಾರೆ. ಅನರ್ಹರ ಹೆಸರಿನಲ್ಲಿ ಅರ್ಹರ ಪಡಿತರ ಚೀಟಿಗಳು ರದ್ದಾಗಿವೆ. ಪಡಿತರ ಪೂರೈಕೆ ಮಾಡಲು ಸರ್ಕಾರದ ಬಳಿ ಹಣ ಇಲ್ಲದ ಹಿನ್ನೆಲೆಯಲ್ಲಿ ಪಡಿತರ ಚೀಟಿಗಳನ್ನು ರದ್ದು ಮಾಡಿದೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಉಳ್ಳವರು ಹಾಗೂ ತೆರಿಗೆ ಪಾವತಿ ಮಾಡು ವವರ ಬಳಿಯೂ ಬಿಪಿಎಲ್ ಪಡಿತರ ಚೀಟಿಗಳು ಇದ್ದವು. ಅಂತವರನ್ನು ಮಾತ್ರ ಹುಡುಕಿ ರದ್ದುಪಡಿಸಲಾಗಿದೆ ಬಡವರು ಹಾಗೂ ಪಡಿತರಕ್ಕೆ ಅರ್ಹರಾಗಿರುವವರ ಚೀಟಿಗಳನ್ನು ರದ್ದುಪಡಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರೂ ವಿವಾದ ತಣ್ಣಗಾಗುತ್ತಿಲ್ಲ.
ರಾಜ್ಯದಲ್ಲಿ ಶೇ.80ರಷ್ಟು ಬಿಪಿಎಲ್ ಕಾರ್ಡ್‌ಗಳು: ರಾಷ್ಟ್ರದಲ್ಲಿ ಕರ್ನಾಟಕ ತೆರಿಗೆ ಪಾವತಿ ಮಾಡುವುದರಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿಗಳು ಶೇ.80ರಷ್ಟು ಇವೆ. ಒಂದಕ್ಕೊಂದು ಹೋಲಿಕೆಯಾಗದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿ ತೆರಿಗೆ ಪಾವತಿ ಮಾಡುವವರು ಹಾಗೂ ಸಂಪತ್ತು ಹೊಂದಿರುವವರ ಕಾರ್ಡ್‌ಗಳನ್ನು ರದ್ದುಗೊಳಿಸಿ ಎಪಿಎಲ್‌ಗೆ ವರ್ಗಾವಣೆ ಮಾಡಿದೆ. ತೆರಿಗೆ ಪಾವತಿಸುವ ರಾಜ್ಯದಲ್ಲಿ ಶೇ.80ರಷ್ಟು ಮಂದಿ ಬಳಿ ಬಿಪಿಎಲ್ ಕಾರ್ಡ್‌ಗಳು ಇರುವುದು ಸರ್ಕಾರಕ್ಕೆ ಅನು ಮೂಡಿಸಿತ್ತು. ಹೀಗಾಗಿ ಅನರ್ಹರನ್ನು ಪತ್ತೆ ಮಾಡಿ ಅವರನ್ನು ಎಪಿಎಲ್ ಕಾರ್ಡ್‌ಗಳಿಗೆ ವರ್ಗಾಯಿಸಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಪಿಎಲ್‌ಗೆ ಬದಲಾವಣೆ: ಸಂಪತ್ತು ಉಳ್ಳವರು ಹಾಗೂ ತೆರಿಗೆದಾರರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಿ ಅವರನ್ನು ಎಪಿಎಲ್ ಪಡಿತರ ಚೀಟಿಗೆ ವರ್ಗಾವಣೆ ಮಾಡಲಾಗಿದೆ. ಅನರ್ಹರು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಲ್ಲ. ಅವರು ಎಪಿಎಲ್ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ ಅವರನ್ನು ಎಪಿಎಲ್ ಕಾರ್ಡ್‌ಾರರನ್ನಾಗಿ ಬದಲಾಯಿಸಲಾಗಿದೆ. ಯಾವುದೇ ಕಾರಣಕ್ಕೂ ಕಾರ್ಡುಗಳನ್ನು ರದ್ದುಪಡಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಪಿಎಲ್ ಕಾರ್ಡ್ ಹೊಂದಿದ್ದ ಸರ್ಕಾರಿ ನೌಕರರು
ರಾಜ್ಯದಲ್ಲಿ ತೆರಿಗೆ ಪಾವತಿ ಮಾಡುವವರು ಹಾಗೂ ಉತ್ತಮ ಆಸ್ತಿ ಹೊಂದಿರುವವರು ಹಾಗೂ ಸರ್ಕಾರಿ ಅಧಿಕಾರಿಗಳು ಬಿಪಿಎಲ್ ಪಡಿತರ ಚೀಟಿ ಪಡೆದಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಇಲಾಖೆ ಎಪಿಎಲ್ ಪಡಿತರ ಚೀಟಿ ಪಡೆದಿರುವ ಸರ್ಕಾರಿ ಅಧಿಕಾರಿಗಳನ್ನು ಪತ್ತೆ ಮಾಡಿ ಅವರ ಕಾರ್ಡುಗಳನ್ನು ರದ್ದುಪಡಿಸಿದೆ. ಅಲ್ಲದೆ ಅವರು ಇಲ್ಲಿವರೆಗೆ ಪಡೆದ ಆಹಾರ ಧಾನ್ಯದ ಮೌಲ್ಯವನ್ನು ಲೆಕ್ಕ ಹಾಕಿ ದಂಡ ವಿಧಿಸಿದೆ. ಈಗ ತೆರಿಗೆ ಪಾವತಿ ಮಾಡುವವರು ಹಾಗೂ ಶ್ರೀಮಂತರ ಕಾಡುಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿ 2, 40 ಲಕ್ಷದಷ್ಟು ಕಾರ್ಡುಗಳನ್ನು ರದ್ದು ಮಾಡಿದೆ.
ಸಿಎಂ ಕಟ್ಟುನಿಟ್ಟಿನ ಸೂಚನೆ !ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದಂತೆ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಬಡ ಕುಟುಂಗಳವರ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ:ಕೃಷಿ ಮೇಳ ಬೆಂಗಳೂರು ಮನೆಯಲ್ಲಿ ಕುಳಿತುಕೊಂಡು ನೋಡಿ
https://krushisanta.com/Krishi-Mela-gkvk-Bengaluru-live-2024
ಇದನ್ನು ಓದಿ:ರಾಜ್ಯದಲ್ಲಿ ಹಿಂಗರು ಮಳೆ ಅಲರ್ಟ್! ನಿಮ್ಮ ಜಿಲ್ಲೆಗೆ ಯಂದಿನಿಂದ ಪ್ರಾರಂಭವಾಗುತ್ತದೆ? ಗೊತ್ತೇ!
https://krushisanta.com/Rabi-rainfall-alert-for-these-district-of-Karnataka
ಇದನ್ನು ಓದಿ:ರಾಜ್ಯದಲ್ಲಿ 14 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದು? ಕಂಡಿಷನ್ ಏನು? ರದ್ದಾಗಿರುವ ಲಿಸ್ಟ್ ನಲ್ಲಿ ನೀವು ಇದ್ದೀರಾ?
https://krushisanta.com/Why-ration-cards-are-cancelled-In-Karnataka#google_vignette
ಇದನ್ನು ಓದಿ:ಡ್ರೈವರ್ ಇಲ್ಲದೆ ಓಡುವ ಟ್ರ್ಯಾಕ್ಟರ್! ಕೃಷಿ ಮೇಳದಲ್ಲಿ ನೋಡಲು ನುಗ್ಗಿಬಿದ್ದ ಜನ!ಹೇಗೆ ಕೆಲಸ ಮಾಡುತ್ತದೆ ನೋಡಿ?
https://krushisanta.com/Driverless-tractor-has-been-introduced-in-gkvk-krushimela
ಇದನ್ನು ಓದಿ: ಕೃಷಿ ಮೇಳ ಬೆಂಗಳೂರು ಮನೆಯಲ್ಲಿ ಕುಳಿತುಕೊಂಡು ನೋಡಿ!
https://krushisanta.com/Krishi-Mela-gkvk-Bengaluru-live-2024