2023 24ನೇ ಸಾಲಿನ ರೈತ ಫಲಾನುಭವಿಗಳಿಗೆ ಬೆಳೆ ವಿಮೆ ಹಣ ಜಮಾ ಆಗಿದೆ ನಿಮ್ಮ ಜಮಾ ಚೆಕ್ ಮಾಡಿ!
<17 ಲಕ್ಷ ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ> < ಬೆಳೆ ವಿಮೆ ಹಣ ಜಮಾ >< ಬೆಳೆ ವಿಮೆ ಸ್ಟೇಟಸ್ > < ರೈತರ ಖಾತೆಗೆ ಬೆಳೆ ವಿಮೆ>
ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 17.61 ಲಕ್ಷ ರೈತ ಫಲಾನುಭವಿಗಳಿಗೆ 2021.17 ಕೋಟಿ ರೂ. ಬೆಳೆ ವಿಮೆ ಪರಿಹಾರ ನೀಡಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 22.97 ಲಕ್ಷ ರೈತ ಪ್ರಸ್ತಾವನೆಗಳು 17.60 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೋಂದಣಿಯಾಗಿದೆ. 2024-25 ಹಂಗಾಮಿನಲ್ಲಿ ಈವರೆಗೆ 25148 ರೈತ 31690.28 ಪ್ರದೇಶಕ್ಕೆ ನೋಂದಣಿಯಾಗಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದರು.
ನಿಮ್ಮ ಬೆಳೆ ವಿಮೆ ಜಮಾ ಆಗಿದೆಯೇ ಚೆಕ್ ಮಾಡಿ?
ಹಂತ 1: ಮೊಟ್ಟಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು ಇದು ಅಧಿಕೃತ ಬೆಳೆ ವಿಮೆ ಚೆಕ್ ಮಾಡುವ ಲಿಂಕ್ ಆಗಿದ್ದು ಇದರಲ್ಲಿ ನೀವು ನಿಮಗೆ ಜಮಾ ಆಗಿರುವ ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
https://www.samrakshane.karnataka.gov.in/
ಹಂತ 2: ಮೊದಲು ನೀವು ಕಟ್ಟಿರುವ ಬೆಳೆ ವಿಮೆ ವರ್ಷವನ್ನು ಆಯ್ಕೆ ಮಾಡಿಕೊಂಡು ಮತ್ತು ವೃತಮಾನವನ್ನು ಆಯ್ಕೆ ಮಾಡಿಕೊಂಡು ಕೆಳಗಡೆ ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಕ್ಲಿಕ್ ಮಾಡಿಕೊಂಡ ನಂತರ ಮೂರನೇ ಕಾಲಂನಲ್ಲಿ ಚೆಕ್ ಸ್ಟೇಟಸ್ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ನೀವು ಈಗ ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ಸಂಖ್ಯೆ ಅಥವಾ ವಿಮೆ ರೆಫರೆನ್ಸ್ ನಂಬರ್ ಯಾವುದಾದರೂ ಒಂದನ್ನು ಹಾಕಿ ಸರ್ಚ್ ಮಾಡಿ ಮತ್ತು ಕ್ಯಾಪ್ಚರ್ ಕೋಡ್ ಎಂಟ್ರಿ ಮಾಡಿ ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿ ಈಗ ಹಣ ಜಮಾ ಆಗಿರುವುದು ತೋರಿಸುತ್ತದೆ.
ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪನೆ!
ಬೀಜೋತ್ಪಾದನೆ, ರೈತ ಸಂಪರ್ಕ, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ನಿಯಂತ್ರಣ/ ಪರತಂತ್ರ ಜೀವಿ ಪ್ರಯೋಗಾಲಯಗಳನ್ನು ಒಂದೇ ಸೂರಿನಡಿ ತಂದು ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪಿಸಲು ಸಂಪುಟದ ಅನುಮೋದನೆ ಪಡೆಯಲಾಗಿದೆ. ಬೆಳೆಗಳಲ್ಲಿ ಕಂಡುಬರುವ ಕೀಟ/ರೋಗ ಬಾಧೆ ಹಾಗೂ ಪೋಷಕಾಂಶಗಳ ಕೊರತೆ ಗುರುತಿಸಿ, ಪೀಡೆ ಬಾಧೆಯ ತೀವ್ರತೆಗೆ ಅನುಗುಣವಾಗಿ ನಿರ್ವಹಣಾ ಕ್ರಮಗಳನ್ನು ರೈತರಿಗೆ ತಲುಪಿಸಲು ಇ-ಸ್ಯಾಪ್ ತಂತ್ರಜ್ಞಾನ ಜಾರಿಗೊಳಿಸಿ ಇಲ್ಲಿಯವರೆಗೆ 70,016 ರೈತರಿಗೆ 1,30,152 ವಿವಿಧತಾಂತ್ರಿಕ ಸಲಹೆಗಳನ್ನು ನೀಡಲಾಗಿದೆ ಎಂದು ಹೇಳಿದರು.
1.58 ಲಕ್ಷ ಮಣ್ಣು ಆರೋಗ್ಯ ಕಾರ್ಡ್: ಮಣ್ಣು ಪರೀಕ್ಷೆಗೆ ಭೂಸಾರ ಆಪ್ ತಂತ್ರಾಂಶ ಬಳಸಿ 4.76 ಲಕ್ಷ ಮಣ್ಣು ಮಾದರಿಗಳ ಗುರಿಗೆ ಇಲ್ಲಿಯವರೆಗೆ 4.54 ಲಕ್ಷ ಮಣ್ಣು ಮಾದರಿಗಳನ್ನು ಸಂಗ್ರಹಿಸಲಾಗಿದೆ. 2.30 ಲಕ್ಷ ಮಣ್ಣು ಮಾದರಿಗಳನ್ನು ವಿಶ್ಲೇಷಿಸಿ 1.58 ಲಕ್ಷ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ. ರಾಜ್ಯದಲ್ಲಿನ 29 ಮಣ್ಣು ಆರೋಗ್ಯ ಕೇಂದ್ರಗಳ ಪೈಕಿ 26 ಕೇಂದ್ರಗಳಿಗೆ ಎನ್‌ಎಬಿಎಲ್ ರಿಕಗ್ರೇಷನ್ ಪಡೆಯಲಾಗಿದೆ ಎಂದು ತಿಳಿಸಿದರು.
ಸಿರಿಧಾನ್ಯ ಹಬ್ ಸ್ಥಾಪನೆ!
ಹೆಬ್ಬಾಳದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಸಿರಿಧಾನ್ಯ ಹಬ್ ಸ್ಥಾಪಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು. 2023-24ನೇ ಸಾಲಿನಲ್ಲಿ 3.07 ಲಕ್ಷ ರೈತರಿಗೆ 3.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ/ ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 627.10 ಕೋಟಿ ರೂ.ಸಹಾಯಧನ ನೀಡಲಾಗಿದೆ. 2024-25ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು 45 ಕೋಟಿ ರೂ. ಅನುದಾನದಲ್ಲಿ ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಇದನ್ನು ಓದಿ:ರಾಜ್ಯದಲ್ಲಿ 14 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದು? ಕಂಡಿಷನ್ ಏನು? ರದ್ದಾಗಿರುವ ಲಿಸ್ಟ್ ನಲ್ಲಿ ನೀವು ಇದ್ದೀರಾ?
https://krushisanta.com/Why-ration-cards-are-cancelled-In-Karnataka#google_vignette
ಇದನ್ನು ಓದಿ:ಡ್ರೈವರ್ ಇಲ್ಲದೆ ಓಡುವ ಟ್ರ್ಯಾಕ್ಟರ್! ಕೃಷಿ ಮೇಳದಲ್ಲಿ ನೋಡಲು ನುಗ್ಗಿಬಿದ್ದ ಜನ!ಹೇಗೆ ಕೆಲಸ ಮಾಡುತ್ತದೆ ನೋಡಿ?
https://krushisanta.com/Driverless-tractor-has-been-introduced-in-gkvk-krushimela
ಇದನ್ನು ಓದಿ: ಕೃಷಿ ಮೇಳ ಬೆಂಗಳೂರು ಮನೆಯಲ್ಲಿ ಕುಳಿತುಕೊಂಡು ನೋಡಿ!
https://krushisanta.com/Krishi-Mela-gkvk-Bengaluru-live-2024