ನನ್ನ ಖಾತೆಗೆ ಇಂದೂ 18400/- ಪರಿಹಾರ ಹಣ ಜಮಾ ಆಯಿತು ನಿಮಗೂ ಬಂತಾ!
<ನನ್ನ ಖಾತೆಗೆ ಬರಗಾಲ ಪರಿಹಾರ ಹಣ ಜಮಾ ಆಗಿದೆ> < ನನ್ನ ಖಾತೆಗೆ ಬರಗಾಲ ಪರಿಹಾರದ ಮಾಹಿತಿ> <KRUSHISANTA>
ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ಸಿಹಿ ಸುದ್ದಿ ಸಿಕ್ಕಿದೆ ಎಂದರೆ ಇದೀಗ ಮತದಾನ ದಿನವೇ ಪರಿಹಾರ ಹಣ ರಾಜ್ಯ ಸರ್ಕಾರವು ರೈತರ ಖಾತೆಗೆ ವರ್ಗಾವಣೆ ಮಾಡಿದೆ, ಹಣ ಒಂದು ಗಂಟೆಗಳ ಹಿಂದೆಯೇ ನನ್ನ ಖಾತೆಗೆ ಜಮಾ ಆಗಿದೆ ನಿಮ್ಮ ಖಾತೆಗೂ ಅನಾಜಮ್ಯ ಇರಬಹುದು ಆದರೆ ಪರಿಹಾರ ಪೋರ್ಟಲ್ ನಲ್ಲಿ ಹೊಸ ಹಣ ಜಮಾ ಆಗಿರುವುದು ಇನ್ನೂ ತೋರಿಸಿಲ್ಲ ಆದರೆ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ನಿಮ್ಮ ಖಾತೆಗೂ ಹಣ ಜಮಾ ಆಗಿರಬಹುದು ಈ ರೀತಿಯಾಗಿ ಕೆಳಗಡೆ ನೀಡಿರುವಂತೆ ನೀವು ಕೂಡ ಚೆಕ್ ಮಾಡಿ ತಿಳಿದುಕೊಳ್ಳಿ.
ಪರಿಹಾರ ಹಣ ಜಮಾ ಆಗಿರೋದು ಗೊತ್ತಾಗಿರುವುದು ಹೇಗೆ?
ನನ್ನ ಖಾತೆಗೆ ಇವತ್ತು ಮಧ್ಯಾಹ್ನ 12 ಗಂಟೆ ನಂತರ ಒಂದು ಮೆಸೇಜ್ ಬಂತು ಗೋರ್ಮೆಂಟ್ ಡಿಬಿಟಿ ನೇರ ಹಣ ವರ್ಗಾವಣೆ ಮೆಸೇಜ್ ಮೂಲಕ ನನ್ನ ಬ್ಯಾಂಕ್ ಖಾತೆಗೆ 18400 ರೂಪಾಯಿಗಳು ಜಮಾ ಆಗಿರುವುದು ಬಂದಿದೆ ನನ್ನ ಜಮೀನು ಮೂರು ಎಕರೆ ಹೊಂದಿದ್ದು ನನಗೆ ಎಷ್ಟು ಪರಿಹಾರ ಹಣ ಜಮಾ ಆಗಿದೆ, ನನ್ನ ಜಮೀನಿನಲ್ಲಿ ಇರುವ ಬೆಳೆಗಳು ತೊಗರಿ ಹಾಗೂ ಲಿಂಬೆ ಗಿಡಗಳು ಇವೆ. ಈ ವರ್ಷ ತೊಗರಿ ಬೆಳೆ ಹಾಗೂ ನಿಂಬೆ ಗಿಡಗಳು ಸಂಪೂರ್ಣ ಬರಗಾಲದಿಂದ ಹಾನಿಯಾಗಿದೆ ಅದಕ್ಕಾಗಿ ಸರಕಾರದಿಂದ ನನ್ನ ಖಾತೆಗೆ ಹಣ ಬಂದಿರುವುದು ಇಷ್ಟಾಗಿದೆ.
ಜಮಾ ಆಗಿರುವುದು ಚೆಕ್ ಮಾಡುವುದು ಹೇಗೆ?
ಕರ್ನಾಟಕ ಡಿ ಬಿ ಟಿ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ ಈಗಾಗಲೇ ನಾವು ಬೆಳಗ್ಗೆ ಲೇಖನದಲ್ಲಿ ನಿಮಗೆ ಯಾವ ರೀತಿಯಾಗಿ ಇನ್ಸ್ಟಾಲ್ ಮಾಡಿಕೊಳ್ಳಬೇಕು ಎಂಬುದನ್ನು ಹೇಳಿದ್ದೇವೆ, ಇದರಲ್ಲಿ ಮೊಟ್ಟಮೊದಲಿಗೆ ನಿಮ್ಮ ಆಧಾರ ಸಂಖ್ಯೆಯನ್ನು ಹಾಕಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ ಮಾಡಿಕೊಂಡ ನಂತರ ಪೇಮೆಂಟ್ ಹಿಸ್ಟರಿಯಲ್ಲಿ ಪರಿಹಾರ ಎನಪುಟ್ ಸಬ್ಸಿಡಿ ಮೇಲೆ ಕ್ಲಿಕ್ ಮಾಡಿ ನಿಮಗೂ ಕೂಡ ಪರಿಹಾರ ಹಣ ಜಮಾ ಆಗಿದೆ ಅಥವಾ ಇಲ್ಲ ಎಂದು ಚೆಕ್ ಮಾಡಿಕೊಳ್ಳಬಹುದು.
ಹಂತ 1: https://play.google.com/store/apps/details?id=com.dbtkarnataka ಇದು ಕರ್ನಾಟಕ ಡಿಬಿಟಿ ಆಪ್ಲಿಕೇಶನ್ ಲಿಂಕ್ ಆಗಿದ್ದು ಇದರಲ್ಲಿ ನಿಮಗೆ ಸರ್ಕಾರದಿಂದ ಜಮೆ ಆಗುವ ಯಾವುದೇ ರೀತಿ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
ಹಂತ 2: ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ ರಿಜಿಸ್ಟ್ರೇಷನ್ ಮಾಡಿಕೊಂಡ ನಂತರ ಅದರಲ್ಲಿ ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿ ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿದ ನಂತರ ಇದರಲ್ಲಿ ಗೃಹಲಕ್ಷ್ಮಿ ಅನ್ನ ಭಾಗ್ಯ ಹಾಗೂ ಪರಿಹಾರ ಇನ್ಪುಟ್ ಸಬ್ಸಿಡಿ ಮೂರು ಆಯ್ಕೆಗಳು ಕಾಣಿಸುತ್ತವೆ.
ಹಂತ 3: ಪರಿಹಾರ ಇನ್ಪುಟ್ ಸಬ್ಸಿಡಿ ಮೇಲೆ ನೀವು ಕ್ಲಿಕ್ ಮಾಡಿದಾಗ ರೀಸೆಂಟ್ ಆಗಿ ಅಥವಾ ಪ್ರಸ್ತುತ ಹತ್ತಿರದಲ್ಲಿ ನಿಮ್ಮ ಖಾತೆಗೆ ಎಷ್ಟು ಹಣ ಜಮ ಆಗಿದೆ, ಕಳೆದ ಕಂತು 2000 ಜಮ ಆಗಿತ್ತು ಹಾಗೂ ಇಂದು ನಮ್ಮ ಖಾತೆಗೆ ಹೆಚ್ಚಿಗೆ ಹಣ ಜಮಾ ಆಗಿದೆ, ಮತದಾನ ದಿನವೇ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಹಣವನ್ನು ರಾಜ್ಯ ಸರ್ಕಾರ ನಮ್ಮ ಖಾತೆಗೆ ವರ್ಗಾವಣೆ ಮಾಡಿದೆ ಹಾಗೂ ಇದು ಸಿಹಿ ಸುದ್ದಿ ತಂದು ಕೊಟ್ಟಿದೆ.
ಇದನ್ನು ಓದಿ: ನಿನ್ನೆ ಇಂದು ಕೆಲವರಿಗೆ ಪರಿಹಾರ ಹಣ ಜಮಾಗಿದೆ ಸ್ಟೇಟಸ್ ಚೆಕ್ ಮಾಡಿ https://krushisanta.com/Parihar-payment-check-status-link
ಇದನ್ನು ಓದಿ:ನಿನ್ನೆ ಪಿಎಂ ಕಿಸಾನ್ 17ನೇ ಕಂತಿನ ರಿಜೆಕ್ಟ್ ಆಗಿರುವ ಲಿಸ್ಟ್ ಬಿಡುಗಡೆ
https://krushisanta.com/Pm-Kisan-17th-installment-rejected-list
ಇದನ್ನು ಓದಿ: ರಾಜ್ಯದಲ್ಲಿ ಮತ್ತೆ ಗುಡುಗು ಸಹಿತ ಮಳೆ ಮುನ್ಸೂಚನೆ ನೀಡಿದ ಹವಮಾನ ಇಲಾಖೆ ಬೆಂಗಳೂರು ವರದಿ ನೋಡಿ.
https://krushisanta.com/Rain-chances-in-Karnataka
ಇದನ್ನು ಓದಿ:ನಿಮ್ಮ ಜಮೀನು ಎಷ್ಟಿದೆ? ನಿಮಗೆ 2ನೇ ಕಂತು ಎಷ್ಟು ಬರುತ್ತದೆ? ಗೊತ್ತ ಇಲ್ಲಿ ನೋಡಿ
https://krushisanta.com/How-much-drought-relief--will-credit-for-one-acre