ನಿನ್ನೆ ಇಂದು ಕೆಲವರಿಗೆ ಪರಿಹಾರ ಜಮಾ ಆಗಿದೆ ಚೆಕ್ ಮಾಡಿ!

<ಹೆಚ್ಚಿನ ಪರಿಹಾರ> <Krushisanta> < ಹೆಚ್ಚಿನ ಬರಗಾಲ ಪರಿಹಾರ> < ಹೆಚ್ಚಿನ ಬರಗಾಲ ಪರಿಹಾರ ಪೇಮೆಂಟ್> < ಹೆಚ್ಚಿನ ಬರಗಾಲ ಪರಿಹಾರ ಪೇಮೆಂಟ್ ಜಮಾ>

May 7, 2024 - 06:41
 0
ನಿನ್ನೆ ಇಂದು ಕೆಲವರಿಗೆ ಪರಿಹಾರ ಜಮಾ ಆಗಿದೆ ಚೆಕ್ ಮಾಡಿ!

ಆತ್ಮೀಯ ರೈತ ಬಾಂಧವರೇ ಕೆಲವರಿಗೆ ಪರಿಹಾರ ಹಣ ಜಮಾ ಆಗಿದೆ ಅದರ ಸ್ಟೇಟಸ್ ಅನ್ನು ನೀವು ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳಿ ಹಲವಾರು ವಿಧಾನಗಳಿಂದ ನೀವು ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ಮತ್ತು ಹಣ ಎಷ್ಟು ಜಮಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಬಹುದು ಅದಕ್ಕಾಗಿ ನಾವು ನಿಮಗೆ ಕೆಲವೊಂದು ವಿಧಾನಗಳನ್ನು ಸುಲಭವಾಗಿ ಯಾವ ರೀತಿಯಾಗಿ ಚೆಕ್ ಮಾಡಿ ನೋಡುವುದು ಎಂಬ ಮಾಹಿತಿಯನ್ನು ಇದರಲ್ಲಿ ನಾವು ತಿಳಿಸುತ್ತೇವೆ.

ನಿನ್ನೆ ಮತ್ತು ಇಂದು ಹಲವು ರೈತರಿಗೆ ಬೆಳೆ ಪರಿಹಾರ ಜಮಾ ಆಗಿದೆ?

ಹೌದು ರೈತರೇ ಕೇವಲ 2000ಗಳನ್ನು ಪಡೆದು ಮೊದಲ ಹಂತದ ಬರ ಪರಿಹಾರ ಬಿಡುಗಡೆಯಾಗಿರುವುದು ರೈತರಿಗೆ ಸಂಕಷ್ಟಕ್ಕೆ ಒಳಗಾಗಿತ್ತು ಏಕೆಂದರೆ ಇದು ತುಂಬಾ ಕಡಿಮೆ ಮೊತ್ತದಾಗಿತ್ತು ಇದಾದ ನಂತರ ನಿಖರವಾದ ಮೊತ್ತವು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಈಗ ಜಮಾ ಮಾಡಲಾಗುತ್ತಿದೆ, ನಿಮಗೂ ಬಂತಾ ಚೆಕ್ ಮಾಡಿ ನೋಡುವ ವಿಧಾನವನ್ನು ನಾವು ನಿಮಗೆ ಇಲ್ಲಿ ತಿಳಿಸಿದ್ದೇವೆ.

ಹಂತ 1: ಇಲ್ಲಿ ನೀಡಿರುವ ಲಿಂಕ್ ಅನ್ನು ಬಳಸಿಕೊಂಡು ನಿಮಗೆ ಪರಿಹಾರ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. https://parihara.karnataka.gov.in/service89/PaymentDetailsReport.aspx

ಹಂತ 2:ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Parihara Payment Report As On Dated 06-05-2024

Select year/ವರ್ಷ ಆಯ್ಕೆಮಾಡಿ 

Select season/ಋತು ಆಯ್ಕೆಮಾಡಿ 

Calamity Type/ವಿಪತ್ತಿನ ವಿಧ 

District/ಜಿಲ್ಲೆ 

Taluk/ತಾಲ್ಲೂಕು 

Hobli/ಹೋಬಳಿ 

Village/ಗ್ರಾಮ 

ಹಂತ 3:Get Report ಇದರ ಮೇಲೆ ಕ್ಲಿಕ್ ಮಾಡಿ ಈಗ ನೀವು ಮೇಲೆ ತಿಳಿಸಿರುವಂತೆ ಮೊದಲಿಗೆ ನಿಮಗೆ ಸಂಬಂಧಪಟ್ಟ ಜಿಲ್ಲೆ ತಾಲೂಕು ಗ್ರಾಮ ಹಾಗೂ ವಿಪತ್ತಿನ ವಿಧವನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ಗೆಟ್ ರಿಪೋರ್ಟ್ ಎಂಬ ಹಸಿರು ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 4: ಇದರಲ್ಲಿ ನಿಮ್ಮ ಪರಿಹಾರ ಐಡಿ ಹಾಗೂ ನಿಮಗೆ ಇಲ್ಲಿಯವರೆಗೆ ಎಷ್ಟು ಬೆಳೆ ಬರಗಾಲ ಪರಿಹಾರ ಜಮಾ ಆಗಿದೆ ತೋರಿಸುತ್ತದೆ. 2000 ಮೊತ್ತಗಳು ಈಗಾಗಲೇ ನಿಮಗೆ ಜಮಾ ಆಗಿರಬಹುದು ಅದನ್ನು ಬಿಟ್ಟು ಬೇರೆ ಯಾವುದೇ ರೀತಿ ಹಣ ಅಪ್ಡೇಟ್ ಆಗಿದ್ದರೆ ನಿಮ್ಮ ಖಾತೆಗೂ ಹಣ ಬಂದಿದೆ ಎಂದರ್ಥ.

ಕರ್ನಾಟಕ ಡಿಬಿಟಿ ಆಪ್ಲಿಕೇಶನ್ ಬಳಕೆ ಮಾಡಿ ಪರಿಹಾರ ಜಮಾ ಆಗಿರುವುದನ್ನು ಚೆಕ್ ಮಾಡಿ?

ಸರ್ಕಾರದಿಂದ ಜಮಾ ಆಗುವ ಯಾವುದೇ ರೀತಿ ನೇರ ವರ್ಗಾವಣೆ ಹಣವನ್ನು ನೀವು ಕರ್ನಾಟಕ ಡಿಬೀಟಿ ಆಪ್ಲಿಕೇಶನ್ ಮೂಲಕ ಸ್ಟೇಟಸ್ ಅನ್ನು ಚೆಕ್ ಮಾಡಿಕೊಂಡು ನೋಡಬಹುದು. ಇಲ್ಲಿ ನೀಡಿರುವ ಲಿಂಕನ್ನು ಬಳಸಿಕೊಂಡು ಡಿ ಬಿ ಟಿ ಅಪ್ಲಿಕೇಷನ್ ಪ್ಲೇಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳ ಬಹುದು.

https://play.google.com/store/apps/details?id=com.dbtkarnataka

ಮೊದಲಿಗೆ ಆಪನ್ ಇನ್ಸ್ಟಾಲ್ ಮಾಡಿಕೊಳ್ಳಿ ಇನ್ಸ್ಟಾಲ್ ಮಾಡಿಕೊಂಡ ನಂತರ ನಿಮಗೆ ಈಕೆ ವೈಸಿ ಕೇಳುತ್ತದೆ ಅದನ್ನು ಸಹ ನಿಮ್ಮ ಆಧಾರ್ ಕಾರ್ಡ್ ಸಹಾಯದಿಂದ ಮಾಡಿಕೊಳ್ಳಿ ಅದಾದ ನಂತರ ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿಕೊಂಡು ನಿಮಗೆ ಸರ್ಕಾರದಿಂದ ಗೃಹಲಕ್ಷ್ಮಿ ಆಗಲಿ ಅನ್ನಭಾಗ್ಯ ಆಗಲಿ ಹಾಗೂ ಬೆಳೆ ಇನ್ಪುಟ್ಸ್ ಸಬ್ಸಿಡಿ ಆಗಲಿ ಎಲ್ಲದರ ಸ್ಟೇಟಸ್ ಅನ್ನು ಉಚಿತವಾಗಿ ಫ್ರೀಯಾಗಿ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳುವ ಅವಕಾಶ ಕರ್ನಾಟಕ ಸರ್ಕಾರ ಕಲ್ಪಿಸಿದೆ.

ಇದನ್ನು ಓದಿ:ನಿನ್ನೆ ಪಿಎಂ ಕಿಸಾನ್ 17ನೇ ಕಂತಿನ ರಿಜೆಕ್ಟ್ ಆಗಿರುವ ಲಿಸ್ಟ್ ಬಿಡುಗಡೆ

https://krushisanta.com/Pm-Kisan-17th-installment-rejected-list

ಇದನ್ನು ಓದಿ: ರಾಜ್ಯದಲ್ಲಿ ಮತ್ತೆ ಗುಡುಗು ಸಹಿತ ಮಳೆ ಮುನ್ಸೂಚನೆ ನೀಡಿದ ಹವಮಾನ ಇಲಾಖೆ ಬೆಂಗಳೂರು ವರದಿ ನೋಡಿ.

https://krushisanta.com/Rain-chances-in-Karnataka

ಇದನ್ನು ಓದಿ:ನಿಮ್ಮ ಜಮೀನು ಎಷ್ಟಿದೆ? ನಿಮಗೆ 2ನೇ ಕಂತು ಎಷ್ಟು ಬರುತ್ತದೆ? ಗೊತ್ತ ಇಲ್ಲಿ ನೋಡಿ

https://krushisanta.com/How-much-drought-relief--will-credit-for-one-acre

ಇದನ್ನು ಓದಿ:40810 ರೈತರ ಖಾತೆಗೆ 2038 ಲಕ್ಷ ಎರಡನೇ ಕಂತಿನ ಪರಿಹಾರ ಹಣ ಜಮಾ

https://krushisanta.com/Baragala-Parihar-2nd-Installment-kantu-jama

admin B.Sc(hons) agriculture College of agriculture vijayapura And provide consultant service