40810 ರೈತರ ಖಾತೆಗೆ 2038 ಲಕ್ಷ ಎರಡನೇ ಕಂತಿನ ಪರಿಹಾರ ಹಣ ಜಮಾ! ಚೆಕ್ ಮಾಡಿ

<Bele Parihar jama> < ಬೆಳೆ ಪರಿಹಾರ> < ಬರಗಾಲ ಪರಿಹಾರ ಎರಡನೇ ಕಂತು ಜಮಾ> < ಬರಗಾಲ ಪರಿಹಾರ ಹಣ ಜಮಾ>

May 4, 2024 - 07:06
 0
40810 ರೈತರ ಖಾತೆಗೆ 2038 ಲಕ್ಷ ಎರಡನೇ ಕಂತಿನ ಪರಿಹಾರ ಹಣ ಜಮಾ! ಚೆಕ್ ಮಾಡಿ

ಬರ ಪರಿಸ್ಥಿತಿಯಿಂದ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿಗೆ ಗರಿಷ್ಠ 02 ಹೆಕ್ಟೇರ್‌ಗಳಿಗೆ ಸೀಮಿತಗೊಳಿಸಿ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 8,500 ರು., ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 17,000 ರು.ಮತ್ತು ಬಹುವಾರ್ಷಿಕ ಬೆಳೆಗೆ ಪ್ರತಿಹೆಕ್ಟೇರ್‌ಗೆ22.500 ರು ನಿಗದಿಪಡಿಸಲಾಗಿದೆ.

2023ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರಿಗೆ ಬೆಳೆಹಾನಿ ಪರಿಹಾರದ ಮೊದಲನೇ ಕಂತಾಗಿ ಅಥವಾ ಎಸ್‌ಡಿಆರ್‌ಎಫ್/ಎನ್ ಡಿಆರ್‌ಎಫ್ ಮಾರ್ಗಸೂಚಿಯಂತೆ ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ ಪ್ರತಿ ರೈತರಿಗೆ 2000 ರು.ಗಳವರೆಗೆ ಪಾವತಿಸಲು ಸರ್ಕಾರದಿಂದ ಅನುಮತಿ ನೀಡಲಾಗಿದೆ. ಮತ್ತು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆಯಾದ ನಂತರ ಎಸ್‌ಡಿಆರ್‌ಎಫ್ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆಯಿರುವರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲಾಗುವುದು.

ಎಷ್ಟು ಹಣ ಜಮಾ?

ರಾಮನಗರ ಜಿಲ್ಲೆಯಲ್ಲಿ2023 ನೇ ಸಾಲಿನ ಮುಂಗಾರು ಹಂಗಾಮಿನ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರಿಗೆ ಡಿಜಿಟಲ್ ಬೆಳೆ ಸಮೀಕ್ಷೆ ಮಾಹಿತಿ ಮತ್ತು ಎಫ್.ಐ.ಡಿ ಹೊಂದಿರುವ ರೈತರ ಮಾಹಿತಿಯನ್ನಾಧರಿಸಿ ಮೊದಲನೇ ಹಂತದಲ್ಲಿ ಗರಿಷ್ಠ2000 ರು.ಗಳಂತೆ ಒಟ್ಟು 65170 ರೈತರಿಗೆ 1161.40 ಲಕ್ಷ ರು.ಗಳ ಇನ್ಸುಟ್ ಸಬ್ಸಿಡಿ ಮೊತ್ತವನ್ನು ಜಮೆ ಮಾಡಲಾಗಿರುತ್ತದೆ.

ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತವನ್ನು ಮೇ 2ರಂದು ಒಟ್ಟು 40810 ರೈತರಿಗೆ 2038.91 ಲಕ್ಷ ರು.ಗಳ ಇನ್ಸುಟ್ ಸಬ್ಸಿಡಿಯನ್ನು ಜಮೆ ಮಾಡಲು ಅನುಮೋದನೆ ನೀಡಲಾಗಿದ್ದು ಸರ್ಕಾರದಿಂದ ನೇರವಾಗಿ ಆಧಾರ್‌ಸಂಖ್ಯೆ ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆಪರಿಹಾರ ಧನ ಜಮೆ ಮಾಡಿರುತ್ತಾರೆ.

ಜಮಾ ಆಗದೆಇದ್ದಲಿ ನೀವೆಲ್ಲರೂ ಏನು ಮಾಡಬೇಕು?

ಹೆಚ್ಚಿನ ಮಾಹಿತಿಗಾಗಿ ಹಾಗೂ ಬೆಳೆ ಪರಿಹಾರ ಹಣ ಖಾತೆಗೆ ಜಮಾ ಆಗದೆ ಇರುವ ಬಗ್ಗೆ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ದೂರುಗಳನ್ನು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಸಲ್ಲಿಸಿ ಮಾಹಿತಿ ಪಡೆಯಬಹುದಾಗಿದೆ. ಅಂತೆಯೇ ಸಂಬಂಧಪಟ್ಟ ತಾಲೂಕು ಕೃಷಿ ಅಧಿಕಾರಿ/ತಹಸೀಲ್ದಾರ್‌ ಕಚೇರಿಗೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಇಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದು ರಾಮನಗರ : 080-27275913, 8277932409, ಚನ್ನಪಟ್ಟಣ ತಾಲೂಕು ಮೊ: 8277932459, ಕನಕಪುರ ತಾಲೂಕುಮೊ:8277932461, ಹಾರೋಹಳ್ಳಿತಾಲೂಕು ಮೊ: 8277932454, ರಾಮನಗರ ತಾಲೂಕು ಮೊ: 8277932433, 52:9380553731 ಇಲ್ಲಿಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಉಳಿದ ಜಿಲ್ಲೆಗಳಿಗೆ ಹಣ ಜಮಾ ಆಗಿರುವುದು ಎನ್ನುವ ಮಾಹಿತಿ ಬಂದಿಲ್ಲ ಆದರೆ ಕೆಲವೊಂದು ದಿನಗಳಲ್ಲಿ ಎರಡನೇ ಕಂತು ಉಳಿದ ಜಿಲ್ಲೆಗಳಿಗೂ ಸಹ ಜಮಾ ಆಗಬಹುದು ಹೀಗಾಗಿ ಒಂದು ಬಾರಿ ನಿಮ್ಮ ಸ್ಟೇಟಸ್ ಅನ್ನು ಆನ್ಲೈನ್ನಲ್ಲಿ ನಾವು ಕೆಳಗಡೆ ನೀಡಿರುವ ಇದನ್ನು ಓದಿ ಲಿಂಕ್ ನ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನು ಓದಿ:IMD Weather Forecast ಹವಮಾನ ವರದಿ ಇನ್ನು ಮೂರು ದಿನ ಅಲರ್ಟ್

https://krushisanta.com/IMD-weather-forecast-for-next-three-days

ಇದನ್ನು ಓದಿ:ಆಧಾರ್ ಮ್ಯಾಪಿಂಗ್ ಆಗದೆ ಇರುವರ ಪರಿಹಾರ ಲಿಸ್ಟ್ ಬಿಡುಗಡೆ

https://krushisanta.com/Aadhar-not-Maped-to-account-list

ಇದನ್ನು ಓದಿ:ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಬೆಂಕಿ ಬಿಸಿಲಿನ ಅಲರ್ಟ್ ಘೋಷಣೆ

https://krushisanta.com/Heat-wave-alerts-in-Karnataka-for-five-days

ಇದನ್ನು ಓದಿ:ಮೊಬೈಲ್ ನಂಬರ್ ಹಾಕಿ ಬೆಳೆ ಹಾನಿ ನಿಮ್ಮ ಜಮೀನಿನ ಯಾವ ಬೆಳೆಗೆ ಜಮಾ ಆಗುತ್ತಿದೆ ಚೆಕ್ ಮಾಡಿ

https://krushisanta.com/For-Which-crop-drought-relief-is-credited-for-farmers-Check-using-Mobile-number

admin B.Sc(hons) agriculture College of agriculture vijayapura And provide consultant service