ಬರಗಾಲ ಪರಿಹಾರ |ಒಂದು ಎಕರೆಗೆ ಎಷ್ಟು ಪರಿಹಾರ ಹಣ ಜಮಾ ಆಗುತ್ತದೆ ಚೆಕ್ ಮಾಡಿ
<Baragala Parihar> <Parihar payment> <Parihar Report> <Parihar Payment report>
ಎನ್‌ಡಿಆರ್‌ಎಫ್ ನಿಯಮಗಳಂತೆ ಅನುಮೋದನೆ ಪ್ರಕ್ರಿಯೆ, ಚುನಾವಣಾ ಆಯೋಗದ ಅನುಮತಿ, ಕಾನೂನು ಸಮರದ ಘಟ್ಟವನ್ನು ದಾಟಿದ ಬೆಳೆ ನಷ್ಟ ಪರಿಹಾರ, ಅರ್ಹ ರೈತರ ಬ್ಯಾಂಕ್ ಖಾತೆಗೆ ಸೋಮವಾರದಿಂದ ಜಮಾ ಶುರುವಾಗಲಿದೆ.
ಮಳೆ ಕೈಕೊಟ್ಟಿದ್ದರಿಂದ ಮುಂಗಾರು ಜತೆಗೆ ಹಿಂಗಾರು ಬೆಳೆಯ ನಷ್ಟವನ್ನೂ ಅನುಭವಿಸಿದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈಗ ಮುಂಗಾರು ಹಂಗಾಮಿನ ಬೆಳೆ ಹಾನಿ ನೆರವು ರೈತರ ಬ್ಯಾಂಕ್ ಖಾತೆಗೆ ನಗದು ನೇರ ವರ್ಗಾವಣೆ (ಡಿಬಿಟಿ)ಯಾಗಲಿದೆ. ಬರಪೀಡಿತವೆಂದು ಘೋಷಿಸಿದ ಎಂಟು ತಿಂಗಳ ಬಳಿಕ, ಮಧ್ಯಂತರ ಪರಿಹಾರ ತಲಾ ಎರಡು ಸಾವಿರ ರೂ. ಪಾವತಿಸಿದ ನಾಲ್ಕು ತಿಂಗಳ ಬಳಿಕ ಅಂತಿಮ ಮೊತ್ತ ತಲುಪಲಿದ್ದು, ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಕೇಂದ್ರ ಸರ್ಕಾರ 3,454.22 ಕೋಟಿ ರೂ. ಎನ್‌ಡಿಆರ್ ಎಫ್ ನೆರವು ಘೋಷಿಸಿದ ವಾರದೊಳಗೆ ಹಣ ಬಿಡುಗಡೆ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ. ಬೆಳೆ ಹಾನಿ ಇನ್ಸುಟ್ ಸಬ್ಸಿಡಿಗೆ ರೈತರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಮಂಜೂರಾತಿ ಪತ್ರದ ನಿರೀಕ್ಷೆಯಲ್ಲಿ ಕಾಲ ಕಳೆದರೆ ಇನ್ನಷ್ಟು ವಿಳಂಬವಾಗಲಿದೆ ಎಂದು ರಾಜ್ಯ ಸರ್ಕಾರ ಅರಿತು, ಪರಿಹಾರ ಪಾವತಿಗೆ ಚಾಲನೆ ನೀಡಿದೆ.
ದತ್ತಾಂಶ ಅಂತಿಮ: ಇಲಾಖೆ ಮೂಲಗಳ ಪ್ರಕಾರ ಬೆಳೆ ಹಾನಿ ಅನುಭವಿಸಿದ ಅರ್ಹ ರೈತರ 34 ಲಕ್ಷ ಎಂದು ಅಂದಾಜಿಸಲಾಗಿದೆ. ಬೆಳೆ ಯಾವುದು, ಜಮೀನಿನ ಪ್ರಮಾಣ, ಪರಿಹಾರ ಮೊತ್ತವೆಷ್ಟು ಎಂದು 'ಫೂಟ್ಸ್' ತಂತ್ರಾಂಶದಲ್ಲಿ ಲೆಕ್ಕ ಹಾಕಿ, 27 ಲಕ್ಷ ರೈತರ ದತ್ತಾಂಶವನ್ನು ಅಂತಿಮಗೊಳಿಸಲಾಗಿದೆ. ಬೆಳೆ ಪರಿಹಾರ ಪಾವತಿಸಲು ಚುನಾವಣೆ ಆಯೋಗದ ಸಹಮತಿ ಲಭಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಗೆ ಪಡೆದಿದ್ದು, ಸೋಮವಾರ (ಮೇ 6)ದಿಂದ ಆಯಾ ರೈತರ ಬ್ಯಾಂಕ್ ಖಾತೆಗೆ ನಗದು ನೇರ ವರ್ಗಾವಣೆ ಪ್ರಕ್ರಿಯೆ ಶುರುವಾಗಲಿದೆ. ಬುಧವಾರದೊಳಗೆ ನಗದು ನೇರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
2,700 ಕೋಟಿ ರೂ. ವೆಚ್ಚ ಸಾಧ್ಯತೆ: ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಅರ್ಹ ರೈತರಿಗೆ ಬೆಳೆ ಪರಿಹಾರ ಪಾವತಿಸಲು 2,700 ಕೋಟಿ ರೂ. ವೆಚ್ಚವಾಗುವ ಸಾಧ್ಯತೆಗಳಿವೆ. ಮಧ್ಯಂತರ ಪರಿಹಾರವಾಗಿ ನೀಡಿದ 2 ಸಾವಿರ ರೂ. ಮುರಿದುಕೊಂಡು ಉಳಿದ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಎನ್‌ಡಿಆರ್ ಎಫ್ ನಿಯಮಾವಳಿ ಪ್ರಕಾರ ಬೆಳೆ ನಷ್ಟಕ್ಕೆ 4,663.12 ಕೋಟಿ ರೂ. ಬಾಧಿತ ಕುಟುಂಬಗಳ ನೆರವಿಗೆ 12,577.90. ಕುಡಿಯುವ ನೀರು ಇತ್ಯಾದಿ ಸೇರಿ ಒಟ್ಟು 18,171.44 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ 3,454.22 ಕೋಟಿ ರೂ. ಬರ ಪರಿಹಾರವೆಂದು ಬಿಡುಗಡೆ ಮಾಡಿದೆ. ಈ ಮೊತ್ತದಲ್ಲಿ ಬೆಳೆ ಪರಿಹಾರ, ಬಾಧಿತರಿಗೆ ನೆರವು, ಕುಡಿಯುವ ನೀರು ಇತ್ಯಾದಿಗೆ ಕೊಟ್ಟಿದ್ದೆಷ್ಟು ? ಕೈ ಬಿಟ್ಟಿರುವುದೆಷ್ಟು ? ಎಂಬ ನಿರ್ದಿಷ್ಟ ಮಾಹಿತಿ ಮಂಜೂರಾತಿ ಪತ್ರ ತಲುಪಿದ ನಂತರ ತಿಳಿಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬೆಳೆ ಪರಿಹಾರದ ಲೆಕ್ಕ??
• ಮೊದಲ ಕಂತಿನಲ್ಲಿ ತಲಾ ಎರಡು ಸಾವಿರ ರೂ. ಪಾವತಿ: ಅರ್ಹ ರೈತರು 33.60 ಲಕ್ಷ.
• ಎಸ್‌ಡಿಆರ್‌ಎಫ್‌ನಡಿ ಭರಿಸಿದ ಒಟ್ಟು ವೆಚ್ಚ: 636.44 3 ಕೋಟಿ.
• ಪರಿಹಾರ ಮೊತ್ತಕ್ಕೆ ಅರ್ಹ ರೈತರ ಅಂದಾಜು: 34 ಲಕ್ಷ
• ಮೊದಲ ಕಂತಿನ ಪರಿಹಾರಕ್ಕೆ ಚುಕ್ತಾ ಆದ ಅರ್ಧ, ಅದಕ್ಕಿಂತ ಕಡಿಮೆ ಜಮೀನಿರುವ ರೈತರ ಅಂದಾಜು ಸಂಖ್ಯೆ : 2 ಲಕ್ಷ
• ಬಾಕಿ ಪರಿಹಾರಕ್ಕೆ ದತ್ತಾಂಶ ಅಂತಿಮವಾದ ಅರ್ಹ ರೈತರ ಸಂಖ್ಯೆ: 27 ಲಕ್ಷ.
ಪರಿಹಾರಕ್ಕೆ ಅಂದಾಜಿಸಿದ ವೆಚ್ಚ : 2,700 ಕೋಟಿ ರೂ.
• ಇನ್ನುಳಿದ ಅರ್ಹ ರೈತರ ದತ್ತಾಂಶ 'ಪೂಟ್ಸ್' ತಂತ್ರಾಂಶದಲ್ಲಿ ಸೇರ್ಪಡೆ ಪ್ರಕ್ರಿಯೆ ಚಾಲ್ತಿದೆ.
ರಾಜ್ಯ ಸರ್ಕಾರ ನಿಗದಿಪಡಿಸಿದ ಪರಿಹಾರ ಪ್ರತಿ ಹೆಕ್ಟೇರ್ (ಗರಿಷ್ಠ ಎರಡು ಹೆಕ್ಟೇರ್)ಗೆ ಮೊತ್ತ (ರೂ.ಗಳಲ್ಲಿ)??
ಮಳೆಯಾಶ್ರಿತ/ ಖುಸ್ಕ
8,500
ನೀರಾವರಿ
17,000
ಬಹುವಾರ್ಷಿಕ/ತೋಟಗಾರಿಕೆ
22,500
ಜಮಾ ಆಗಲಿವೆ ಇದು ಮೇಲೆ ನೀಡಿರುವ ಪರಿಹಾರ ಹಣ 5 ಎಕರೆಗೆ ಎಂದರ್ಥ.
ಇದನ್ನು ಓದಿ:40810 ರೈತರ ಖಾತೆಗೆ 2038 ಲಕ್ಷ ಎರಡನೇ ಕಂತಿನ ಪರಿಹಾರ ಹಣ ಜಮಾ
https://krushisanta.com/Baragala-Parihar-2nd-Installment-kantu-jama
ಇದನ್ನು ಓದಿ:IMD Weather Forecast ಹವಮಾನ ವರದಿ ಇನ್ನು ಮೂರು ದಿನ ಅಲರ್ಟ್
https://krushisanta.com/IMD-weather-forecast-for-next-three-days
ಇದನ್ನು ಓದಿ:ಆಧಾರ್ ಮ್ಯಾಪಿಂಗ್ ಆಗದೆ ಇರುವರ ಪರಿಹಾರ ಲಿಸ್ಟ್ ಬಿಡುಗಡೆ
https://krushisanta.com/Aadhar-not-Maped-to-account-list
ಇದನ್ನು ಓದಿ:ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಬೆಂಕಿ ಬಿಸಿಲಿನ ಅಲರ್ಟ್ ಘೋಷಣೆ
https://krushisanta.com/Heat-wave-alerts-in-Karnataka-for-five-days