Mobile Number ಹಾಕಿ ಪರಿಹಾರ ಜಮಾ ಆಗಿದೆ ಚೆಕ್ ಮಾಡಿ!
<Parihar> <Parihar hana> <ಪರಿಹಾರ ಹಣ ಜಮಾ> <ಪರಿಹಾರ ಪೇಮೆಂಟ್> <ಪರಿಹಾರ ಪೇಮೆಂಟ್ ರಿಪೋರ್ಟ್>
ಆತ್ಮೀಯ ರೈತ ಬಾಂಧವರೇ ರಾಜ್ಯಾದ್ಯಂತ ಪರಿಹಾರ ಹಣ ಜಮಾ ಆಗಿದೆ ಎಲ್ಲ ರೈತರಿಗೂ ಪರಿಹಾರ ಹಣ ಬಂದಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ ಏಕೆಂದರೆ ರಾಜ್ಯ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬರಬೇಡಿ ಬರಗಾಲ ಪರಿಹಾರ ಘೋಷಣೆ ಮಾಡಿದ್ದು ಹಾಗೂ ಅವುಗಳ ಜಿಲ್ಲೆಗಳಿಗೆ ಅನುಗುಣವಾಗಿ ಪರಿಹಾರ ಹಣ ಕೂಡ ಜಮಾ ಮಾಡಲಾಗಿದೆ ಮೊದಲನೇ ಕಂತು ಜನವರಿ ತಿಂಗಳಲ್ಲಿಯೇ ಖಾತೆಗೆ ವರ್ಗಾವಣೆ ಮಾಡಲಾಗಿತ್ತು ಅದಾದ ನಂತರ ಈಗ ಕೇಂದ್ರ ಸರ್ಕಾರ ನೀಡಿರುವ ಉಳಿದ ಬರಗಾಲ ಪರಿಹಾರ ಹಣವು ಜಮಾ ಮಾಡಲಾಗಿದೆ.
ಮೊಬೈಲ್ ನಂಬರ್ ಹಾಕಿ ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಆತ್ಮೀಯ ರೈತ ಬಾಂಧವರೇ ಪರಿಹಾರ ಪೋರ್ಟಲ್ ನಲ್ಲಿ ಇನ್ನೂ ಹಣ ಜಮಾ ಆಗಿರುವುದು ಅಪ್ಡೇಟ್ ಆಗಿಲ್ಲ ಆದರೆ ಯಾರಿಗೆ ಎರಡು ಸಾವಿರ ರೂಪಾಯಿಗಳು ಜಮಾ ಆಗಿವೆ ಪ್ರತಿಯೊಬ್ಬರಿಗೂ ಎರಡನೇ ಕಂತು ಕೂಡ ಜಮಾ ಆಗಿದೆ ಜಮಾ ಆಗುವ ಕಂತು ಸ್ವಲ್ಪ ಹೆಚ್ಚು ಕಡಿಮೆಯಾಗಿದೆ ನೀರಾವರಿಗೆ ಮಳೆ ಆಶ್ರಿತಕ್ಕೆ ಬೇರೆ ಬೇರೆ ಹಾಗೂ ತೋಟಗಾರಿಕಾ ಬೆಳೆಗಳಿಗೆ ಬೇರೆ ಬೇರೆ ಹಣ ನಿಗದಿಪಡಿಸಲಾಗಿದೆ.
ಸಾಮಾನ್ಯವಾಗಿ ಪ್ರತಿ ಎಕರೆಗೆ 6000 ರೂಪಾಯಿಗಳು ಜಮಾ ಆಗಿವೆ, ನೀರಾವರಿ ಹೊಂದಿದವರಿಗೆ ಪ್ರತೀಕರಿಗೆ 11000 ಗಳು ಜಮಾ ಆಗಿದೆ. ನಿಮಗೂ ಕೂಡ ಹಣ ಜಮಾ ಆಗಿರಬಹುದು ಇಲ್ಲಿ ಪರಿಹಾರ ಪೋರ್ಟಲ್ ನಲ್ಲಿ ಅಪ್ ಡೇಟ್ ಆಗದೇ ಇದ್ದರೂನು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆ ಅದನ್ನು ನೀವು ಬ್ಯಾಂಕಿಗೆ ಹೋಗಿನೇ ಚೆಕ್ ಮಾಡಿಕೊಳ್ಳಬೇಕು ಅಥವಾ ನೀವು ಫೋನ್ ಪೇ ಗೂಗಲ್ ಪೇ ಯಾವುದಾದರೂ ಬಳಕೆ ಮಾಡುತ್ತಿದ್ದಲ್ಲಿ ನೀವು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ಮೊದಲು ಇರುವ ಬ್ಯಾಲೆನ್ಸ್ ನಿಮಗೆ ಈಗಾಗಲೇ ಗೊತ್ತಿರುತ್ತದೆ ಹಾಗೂ ಈಗ ಅದಕ್ಕೆ ಎಷ್ಟು ಬಂದು ಹಣ ಜಮಾ ಆಗಿದೆ ಅದನ್ನು ನೋಡಿಕೊಂಡು ಖಚಿತಪಡಿಸಿಕೊಳ್ಳಬಹುದು.
ಇಷ್ಟೆಲ್ಲಾ ಆದರೂ ಸಹ ನಿಮಗೆ ಇನ್ನೂ ನೋಡುವ ಆಸಕ್ತಿ ಹೆಚ್ಚಾಗಿದ್ದಲ್ಲಿ ನಾವು ಇಲ್ಲಿ ತಿಳಿಸಿರುವ ವಿಧಾನದಂತೆ ನೀವು ನಿಮ್ಮ ಇತ್ತೀಚಿನ ಪರಿಹಾರ ಹಣ ಜಮಾ ಆಗಿರುವ ಸ್ಟೇಟಸ್ ಅನ್ನು ಗಮನಿಸಬಹುದು, ನಾವು ಹಂತ ಹಂತವಾಗಿ ಕೆಳಗಡೆ ವಿಧಾನವನ್ನು ತಿಳಿಸಿದ್ದೇವೆ ಅದೇ ರೀತಿಯಾಗಿ ನೀವು ಮಾಡಿದರೆ ಸಾಕು ನಿಮಗೆ ಸುಲಭ ಮತ್ತು ನಿಖರವಾದ ಹಣ ಜಮೆ ಆಗಿದ್ದರೆ ಎಷ್ಟಾಗಿದೆ ಜಮಾ ಆಗದೇ ಇದ್ದರೆ ಕಾರಣ ಏನು ಎಲ್ಲವನ್ನು ತಿಳಿದುಕೊಳ್ಳಬಹುದು.
ಹಂತ 1: ಮೊದಲಿಗೆ ಸರ್ಕಾರದ ಅಧಿಕೃತ ಜಾಲತಾಣವನ್ನು ಕ್ಲಿಕ್ ಮಾಡಬೇಕು ಲಿಂಕನ್ನು ಇಲ್ಲಿ ನಾವು ನೀಡಿದ್ದೇವೆ ಇದನ್ನು ಕ್ಲಿಕ್ ಮಾಡುವ ಮೂಲಕ ನೀವು ಸರ್ಕಾರದ ಅಧಿಕೃತ ಪರಿಹಾರ ಪೋರ್ಟಲ್ ನ್ನು ಭೇಟಿ ನೀಡಬಹುದು. https://parihara.karnataka.gov.in/service92/
ಹಂತ 2: ಇದರಲ್ಲಿ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ಋತುಮಾನವನ್ನು ಆಯ್ಕೆ ಮಾಡಿಕೊಳ್ಳಿ ಋತುಮಾನದಲ್ಲಿ ಮುಂಗಾರು ಆಯ್ಕೆ ಮಾಡಿಕೊಳ್ಳಿ ಹಾಗೂ ನಿಮಗೆ ಹಾನಿಯಾದ ವಿಧ ಅಥವಾ ವಿಪತ್ತಿನ ವಿಧವನ್ನು ಬರ ಎಂದು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ಗೆಟ್ ಡೇಟಾ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮಗೆ ಕೆಳಗಡೆ ಸರ್ವೆ ನಂಬರ್ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್, ಎಫ್ ಐಡಿ ನಾಲ್ಕು ಆಪ್ಷನ್ ಗಳು ಕಾಣುತ್ತವೆ ಇದರಲ್ಲಿ ನೀವು ನಿಮ್ಮ ಮೊಬೈಲ್ ನಂಬರನ್ನು ಆಯ್ಕೆಮಾಡಿಕೊಳ್ಳಿ ಇತ್ತೀಚಿನ ದಿನಗಳಲ್ಲಿ ಆಧಾರ್ ಸಂಖ್ಯೆಯನ್ನು ನಿಮ್ಮ ಆರ್ ಟಿ ಸಿ ಯೊಂದಿಗೆ ಲಿಂಕ್ ಮಾಡಿದ್ದೀರಿ. ಲಿಂಕ್ ಮಾಡಿರುವ ನಂಬರನ್ನೇ ಅಲ್ಲಿ ನೀವು ಟೈಪ್ ಮಾಡಿಕೊಳ್ಳಬೇಕು ಅಂದರೆ ನಿಮ್ಮ ಮೊಬೈಲ್ ನಂಬರ್ ಟೈಪ್ ಮಾಡಿಕೊಳ್ಳಬೇಕು.
ಹಂತ 3:fetch details ಅಥವಾ ಪಡೆಯಿರಿ ಎಂದು ನಿಮಗೆ ಇಲ್ಲಿ ಹಸಿರು ಬಣ್ಣ ಹೊಂದಿರುವ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಹೀಗೆ ನಿಮಗೆ ಒಂದು ರಿಪೋರ್ಟ್ ಓಪನ್ ಆಗುತ್ತದೆ ರಿಪೋರ್ಟ್ ಓಪನ್ ಆದ ನಂತರ ಅದರಲ್ಲಿ ನಿಮ್ಮ ಪರಿಹಾರ ಐಡಿ ಹಾಗೂ ಅದಾದ ನಂತರ ನಿಮ್ಮ ಹೆಸರು ಬ್ಯಾಂಕ್ ಡೀಟೇಲ್ಸ್ ಅಥವಾ ಬ್ಯಾಂಕ್ ಯಾವುದು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು ಹಾಗೂ ನಿಮ್ಮ ಹೆಸರು ನಿಮ್ಮ ಜಮೀನಿನ ಸರ್ವೆ ನಂಬರ್ ಇದಾದ ನಂತರ ಯಾವ ಬೆಳೆಗಳು ಸರ್ವೆ ಅಂದರೆ ಪಹಣಿ ಪತ್ರದಲ್ಲಿ ನಮೂದನೆಯಾಗಿದೆ ಅದಾದ ನಂತರ ಬೆಳೆ ನಷ್ಟವಾದ ಬೆಳೆ ಯಾವುದು ಇದಾದ ನಂತರ ಎಷ್ಟು ಪ್ರದೇಶ ಹಾನಿಯಾಗಿದೆ ಮತ್ತು ಯಾವ ದಿನಾಂಕದಂದು ಮೊದಲ ಕಂತು ಜಮಾ ಆಗಿದೆ ಹಾಗೂ ಪೇಮೆಂಟ್ ಸ್ಥಿತಿ ಜಮಾ ಆಗಿದೆ ಅಥವಾ ಹೋಲ್ಡ್ ನಲ್ಲಿ ಇದೆ ಅಥವಾ ಪೆಂಡಿಂಗ್ ಇದೆ ನಿಖರವಾಗಿ ತಿಳಿಸುತ್ತದೆ.
ಹಂತ 4: ಈಗ ಇದರಲ್ಲಿ ನಿಮಗೆ ಪೇಮೆಂಟ್ ಸಕ್ಸಸ್ ಫುಲ್ ಅಂತ ಕಾಲಮ್ ನಲ್ಲಿ ಬರೆದಿದ್ದರೆ ಅಷ್ಟು ಸಾಕು ನಿಮಗೂ ಕೂಡ ಉಳಿದ ಎರಡನೇ ಕಂತು ಈಗಾಗಲೇ ಬಂದಿರುತ್ತದೆ ಒಂದು ವೇಳೆ ಬ್ಯಾಂಕ್ ಕಡೆಯಿಂದ ಮೆಸೇಜ್ ಬಂದಿರದೆ ಇರಬಹುದು ಆದರೆ ಖಂಡಿತವಾಗಿಯೂ ಹಣ ಜಮೆಯಾಗಿರುತ್ತದೆ ತಕ್ಷಣವಾಗಿ ನಿಮ್ಮ ಬ್ಯಾಂಕಿಗೆ ಹೋಗಿ ಚೆಕ್ ಮಾಡಿಕೊಂಡು ಬನ್ನಿ.
ಇದನ್ನು ಓದಿ:ಪರಿಹಾರ ಹಣ ಜಮಾ ಆಗಿರುವುದನ್ನು, ಒಂದೇ ನಿಮಿಷದಲ್ಲಿ ಚೆಕ್ ಮಾಡಿ?
https://krushisanta.com/DBT-App-Karnataka-Govt-of-Karnataka
ಇದನ್ನು ಓದಿ:ರೈತರಿಗೆ ನಿನ್ನೆ ಪರಿಹಾರ ಜಮಾದಲ್ಲಿ ಗೊಂದಲ? ಮೂರು ಎಕರೆ ಜಮೀನಿದ್ದರೂ ಬೇರೆ ಬೇರೆ ಪರಿಹಾರ ಜಮಾ ಆಗಿದೆ? ಲೆಕ್ಕಾಚಾರ ಹೆಂಗೆ ಮಾಡಿದ್ದಾರೆ?
https://krushisanta.com/How-calculated-Drought-relief-in-Karnataka
ಇದನ್ನು ಓದಿ:ಇದೀಗ ನನ್ನ ಖಾತೆಗೆ ಬೆಳೆ ಪರಿಹಾರ 18400/- ಜಮಾ ಆಯ್ತು ನೋಡಿ
https://krushisanta.com/Baragala-Parihar-18400-for-Three-acres-land
ಇದನ್ನು ಓದಿ:ನಿನ್ನೆ ಇಂದು ಕೆಲವರಿಗೆ ಪರಿಹಾರ ಹಣ ಜಮಾಗಿದೆ ಸ್ಟೇಟಸ್ ಚೆಕ್ ಮಾಡಿ https://krushisanta.com/Parihar-payment-check-status-link