ಪರಿಹಾರ ಹಣ DBT Karnataka ನಲ್ಲಿ ಚೆಕ್ ಮಾಡಿ! ಬಂತಾ ಹಣ?
<ಪರಿಹಾರ ಲಿಸ್ಟ್> <ಪರಿಹಾರ ಪೇಮೆಂಟ್><ಪರಿಹಾರ ಹಣ ಸಂದಾಯ ವರದಿ><ಪರಿಹಾರ ಹಣ ಸಂದಾಯ>
ರೈತ ಬಾಂಧವರೇ ಪರಿಹಾರ ಹಣ ಯಾರಿಗೆ ಜಮಾ ಆಗಿದೆ ಮತ್ತು ಯಾರಿಗೆ ಜಮಾ ಆಗಿಲ್ಲ ಯಾವ ರೀತಿಯಾಗಿ ಆನ್ಲೈನ್ ನಲ್ಲಿ ಚೆಕ್ ಮಾಡುವುದು ನೋಡಿ, ಕಳೆದ ನಾಲ್ಕು ದಿನಗಳಿಂದ ಕರ್ನಾಟಕದ ಅತ್ಯಂತ ಎಲ್ಲರಿಗೂ ಪರಿಹಾರ ಹಣ ಜಮಾ ಆಗುತ್ತಿದ್ದು ನಿಮಗೂ ಕೂಡ ಹಣ ಬಂದಿರಬಹುದು ಅದನ್ನು ಆನ್ಲೈನಲ್ಲಿ ಚೆಕ್ ಮಾಡಿಕೊಳ್ಳಬೇಕು ಅಥವಾ ನಿಮ್ಮ ಬ್ಯಾಂಕಿಗೆ ಹೋಗಿ ಪಾಸ್ ಪುಸ್ತಕವನ್ನು ಎಂಟ್ರಿ ಮಾಡುವ ಮೂಲಕ ನೀವು ಚೆಕ್ ಮಾಡಿಕೊಂಡು ತಿಳಿದುಕೊಳ್ಳಬಹುದು.
ಆನ್ಲೈನ್ ನಲ್ಲಿ ಪರಿಹಾರ ಪೇಮೆಂಟ್ ಚೆಕ್ ಮಾಡುವುದು ಹೇಗೆ?
ಕರ್ನಾಟಕ ಅದಕ್ಕಾಗಿ ಪ್ರತ್ಯೇಕ ಜಾಲತಾಣ ಬಿಡುಗಡೆ ಮಾಡಲಾಗಿದೆ ಹಾಗೂ ಅದಕ್ಕಾಗಿ ಅಪ್ಲಿಕೇಶನ್ ಕೂಡ ಬಿಡುಗಡೆ ಮಾಡಲಾಗಿದೆ, ಪ್ರಸ್ತುತವಾಗಿ ನಿನ್ನೆ ಮೊನ್ನೆ ಜಮಾ ಆಗಿರುವ ಹಣವು ಇನ್ನೂ ಪೋಸ್ಟಲ್ ನಲ್ಲಿ ಅಪ್ಲೋಡ್ ಮಾಡಿಲ್ಲ ಅದನ್ನು ನೀವು ಬ್ಯಾಂಕ್ ಪಾಸ್ ಪುಸ್ತಕ ಎಂಟ್ರಿ ಮಾಡುವ ಮೂಲಕ ಅಥವಾ ಕರ್ನಾಟಕ ಡಿಬಿಟಿ ಆಪ್ಲಿಕೇಶನ್ ನಲ್ಲಿ ಚೆಕ್ ಮಾಡಿಕೊಂಡು ನೋಡುವ ಅವಕಾಶ ಕಲ್ಪಿಸಲಾಗಿದೆ.
ಸುಮಾರು ಎಲ್ಲ ಜಿಲ್ಲೆಗಳಲ್ಲಿ ಪರಿಸರ ಹಣ ಜಮಾ ಆಗಿದೆ ಒಬ್ಬರಿಗೆ ಜಮಾದಂತೆ ಇನ್ನೊಬ್ಬರಿಗೆ ಆಗಿಲ್ಲ ಲೆಕ್ಕಾಚಾರ ಹೇಗೆ ಎಂದು ನಾವು ಕಳೆದ ಒಂದು ಲೇಖನದಲ್ಲಿ ನಿಮಗೆ ತಿಳಿಸಿದ್ದೇವೆ ಆದರೂ ಸಹ ಎಲ್ಲವನ್ನು ಗಮನಿಸಿದಾಗ ಇನ್ನೂ ಸರಿಯಾದ ಲೆಕ್ಕಾಚಾರ ಸಿಕ್ಕಿಲ್ಲ ಅದಕ್ಕಾಗಿ ನಾವು ತಿಳಿದು ಕೂಡಲೇ ಮತ್ತೆ ನಿಮಗೆ ಮುಂದಿನ ಲೆಕ್ಕದಲ್ಲಿ ತಿಳಿಸುತ್ತಿದ್ದೇನೆ ಆದರೆ ಪರಿಹಾರ ಹಣ ಜಮಾ ಆಗುವ ಮುಂಚೆ ಸರ್ಕಾರ ಘೋಷಿಸಿರುವ ಪರಿಹಾರ ಹಣ ಎಷ್ಟು??
ಬೇರೆ ಬೇರೆ ಪ್ರದೇಶಗಳಿಗೆ ಬೇರೆ ಬೇರೆ ಹಣವನ್ನು ನಿಗದಿ ಮಾಡಲಾಗಿತ್ತು ಅದರಲ್ಲಿ ಮಳೆಯಾಶ್ರಿತ/ ಖುಸ್ಕ 8,500 ನಿದ್ದೆ ಮಾಡಲಾಗಿತ್ತು ಅದಾದ ನಂತರ ಕರ್ನಾಟಕದ ಅತ್ಯಂತ ನೀರಾವರಿ ಜಮೀನಿಗೆ ನೀರಾವರಿ 17,000. ಬಹುವಾರ್ಷಿಕ/ತೋಟಗಾರಿಕೆ ಬೆಳಗಳಿಗೆ ನಿಗದಿ ಮಾಡಿರುವ ಹಣ 22,500 ಆದರೆ ಇದೀಗ ಜಮಾ ಆಗಿರುವ ಹಣವನ್ನು ನಾವು ನೋಡಿದಾಗ ಯಾವುದೇ ಮೇಲೆ ನೀಡಿರುವ ಮೊತ್ತಕ್ಕೆ ಹೊಂದಾಣಿಕೆ ಆಗುತ್ತಿಲ್ಲ. ಕನಿಷ್ಠ ಪಕ್ಷ ಹಣ ಜಮಾ ಆಗಿರುವುದೇ ಒಂದು ದೊಡ್ಡ ವಿಷಯವಾಗಿದೆ ಇಷ್ಟು ಜಮಾ ಆಗದಿದ್ದರೆ ರೈತರು ಬಹಳಷ್ಟು ಕಂಗಾಲಾಗಬೇಕಾಗಿತ್ತು.
ಜಮಾ ಆಗಿರುವುದು ಚೆಕ್ ಮಾಡುವುದು ಹೇಗೆ?
ಕರ್ನಾಟಕ ಡಿ ಬಿ ಟಿ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ ಈಗಾಗಲೇ ನಾವು ಬೆಳಗ್ಗೆ ಲೇಖನದಲ್ಲಿ ನಿಮಗೆ ಯಾವ ರೀತಿಯಾಗಿ ಇನ್ಸ್ಟಾಲ್ ಮಾಡಿಕೊಳ್ಳಬೇಕು ಎಂಬುದನ್ನು ಹೇಳಿದ್ದೇವೆ, ಇದರಲ್ಲಿ ಮೊಟ್ಟಮೊದಲಿಗೆ ನಿಮ್ಮ ಆಧಾರ ಸಂಖ್ಯೆಯನ್ನು ಹಾಕಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ ಮಾಡಿಕೊಂಡ ನಂತರ ಪೇಮೆಂಟ್ ಹಿಸ್ಟರಿಯಲ್ಲಿ ಪರಿಹಾರ ಎನಪುಟ್ ಸಬ್ಸಿಡಿ ಮೇಲೆ ಕ್ಲಿಕ್ ಮಾಡಿ ನಿಮಗೂ ಕೂಡ ಪರಿಹಾರ ಹಣ ಜಮಾ ಆಗಿದೆ ಅಥವಾ ಇಲ್ಲ ಎಂದು ಚೆಕ್ ಮಾಡಿಕೊಳ್ಳಬಹುದು.
ಹಂತ 1: https://play.google.com/store/apps/details?id=com.dbtkarnataka ಇದು ಕರ್ನಾಟಕ ಡಿಬಿಟಿ ಆಪ್ಲಿಕೇಶನ್ ಲಿಂಕ್ ಆಗಿದ್ದು ಇದರಲ್ಲಿ ನಿಮಗೆ ಸರ್ಕಾರದಿಂದ ಜಮೆ ಆಗುವ ಯಾವುದೇ ರೀತಿ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
ಹಂತ 2: ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ ರಿಜಿಸ್ಟ್ರೇಷನ್ ಮಾಡಿಕೊಂಡ ನಂತರ ಅದರಲ್ಲಿ ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿ ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿದ ನಂತರ ಇದರಲ್ಲಿ ಗೃಹಲಕ್ಷ್ಮಿ ಅನ್ನ ಭಾಗ್ಯ ಹಾಗೂ ಪರಿಹಾರ ಇನ್ಪುಟ್ ಸಬ್ಸಿಡಿ ಮೂರು ಆಯ್ಕೆಗಳು ಕಾಣಿಸುತ್ತವೆ.
ಹಂತ 3: ಪರಿಹಾರ ಇನ್ಪುಟ್ ಸಬ್ಸಿಡಿ ಮೇಲೆ ನೀವು ಕ್ಲಿಕ್ ಮಾಡಿದಾಗ ರೀಸೆಂಟ್ ಆಗಿ ಅಥವಾ ಪ್ರಸ್ತುತ ಹತ್ತಿರದಲ್ಲಿ ನಿಮ್ಮ ಖಾತೆಗೆ ಎಷ್ಟು ಹಣ ಜಮ ಆಗಿದೆ, ಕಳೆದ ಕಂತು 2000 ಜಮ ಆಗಿತ್ತು ಹಾಗೂ ಇಂದು ನಮ್ಮ ಖಾತೆಗೆ ಹೆಚ್ಚಿಗೆ ಹಣ ಜಮಾ ಆಗಿದೆ, ಮತದಾನ ದಿನವೇ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಹಣವನ್ನು ರಾಜ್ಯ ಸರ್ಕಾರ ನಮ್ಮ ಖಾತೆಗೆ ವರ್ಗಾವಣೆ ಮಾಡಿದೆ ಹಾಗೂ ಇದು ಸಿಹಿ ಸುದ್ದಿ ತಂದು ಕೊಟ್ಟಿದೆ.
ಇದನ್ನು ಓದಿ:ರೈತರಿಗೆ ನಿನ್ನೆ ಪರಿಹಾರ ಜಮಾದಲ್ಲಿ ಗೊಂದಲ? ಮೂರು ಎಕರೆ ಜಮೀನಿದ್ದರೂ ಬೇರೆ ಬೇರೆ ಪರಿಹಾರ ಜಮಾ ಆಗಿದೆ? ಲೆಕ್ಕಾಚಾರ ಹೆಂಗೆ ಮಾಡಿದ್ದಾರೆ?
https://krushisanta.com/How-calculated-Drought-relief-in-Karnataka
ಇದನ್ನು ಓದಿ:ಇದೀಗ ನನ್ನ ಖಾತೆಗೆ ಬೆಳೆ ಪರಿಹಾರ 18400/- ಜಮಾ ಆಯ್ತು ನೋಡಿ
https://krushisanta.com/Baragala-Parihar-18400-for-Three-acres-land
ಇದನ್ನು ಓದಿ:ನಿನ್ನೆ ಇಂದು ಕೆಲವರಿಗೆ ಪರಿಹಾರ ಹಣ ಜಮಾಗಿದೆ ಸ್ಟೇಟಸ್ ಚೆಕ್ ಮಾಡಿ https://krushisanta.com/Parihar-payment-check-status-link