BPL To APL converted Ration card list| ಬಿಪಿಎಲ್ ನಿಂದ ಎಪಿಎಲ್‌ಗೆ ಬದಲಾವಣೆಯಾಗಿರುವ ರೇಷನ್ ಕಾರ್ಡ್ ಪಟ್ಟಿ!
<BPL to APL converted card list> <Ration card list in Karnataka> <final cancelled Ration card list in Karnataka> <ration card status> <APL ration card status> <BPL Ration card status>
ಕರ್ನಾಟಕದಲ್ಲಿನ ಬಡತನ ರೇಖೆಗಿಂತ ಮೇಲಿರುವವರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಎಂಬ ಚರ್ಚೆ ನಡುವೆಯೇ ಯಾವುದೇ ಕಾರ್ಡ್ ಗಳನ್ನು ರದ್ದು ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ಅನರ್ಹರನ್ನು ವರ್ಗಾಯಿಸಲಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, 'ಪಡಿತರ ಚೀಟಿ ವಿಚಾರವನ್ನು ಸಮ್ಮನೇರಾಜಕೀಯಗೊಳಿಸಲಾಗುತ್ತಿದೆ. ಸರ್ಕಾರ ಯಾವುದೇ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲ. ಅನರ್ಹ ಬಿಪಿಎಲ್ ಕಾರ್ಡುದಾರರನ್ನು ರದ್ದು ಮಾಡಿಲ್ಲ. ಬದಲಾಗಿ ಎಪಿಎಲ್ ವರ್ಗಕ್ಕೆ ವರ್ಗಾಯಿಸಲಾಗಿದೆ ಎಂದು ಹೇಳಿದ್ದಾರೆ.
'ಸದ್ಯ ಜನಸಂಖ್ಯೆಯ ಸುಮಾರು 80 ಪ್ರತಿಶತ ಜನರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಆದಾಗ್ಯೂ, ಕೆಲವು ಅನರ್ಹ ವ್ಯಕ್ತಿಗಳು ಬಿಪಿಎಲ್ ಕಾರ್ಡ್‌ಗಳನ್ನುಹೊಂದಿದ್ದಾರೆ ಎಂಬ ಮಾಹಿತಿ ಬಂದಿದೆ. ನಾವು ಅಂತಹ ಕಾರ್ಡ್‌ಗಳನ್ನು ಮರುವರ್ಗಿಕರಿಸುವ ಕೆಲಸ ಮಾಡುತ್ತಿದ್ದೇವೆ. ಅವುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಿಲ್ಲ. ಆದರೆ ಅವುಗಳನ್ನು ಎಪಿಎಲ್ ವರ್ಗಕ್ಕೆ ವರ್ಗಾಯಿಸುತ್ತೇವೆ.
ಮುಖ್ಯವಾಗಿ ಸ್ಥಿರ ಆರ್ಥಿಕ ಹಿನ್ನೆಲೆಯುಳ್ಳ ವ್ಯಕ್ತಿಗಳು, ಆದಾಯ ತೆರಿಗೆ ಪಾವತಿಸುವ ವ್ಯಕ್ತಿಗಳು ಸೇರಿದಂತೆ ಬಿಪಿಎಲ್ ಕಾರ್ಡ್‌ಗೆಅನರ್ಹರಾಗಿರುವವರನ್ನು ಎಪಿಎಲ್ ವರ್ಗಕ್ಕೆ ವರ್ಗಾಯಿಸಲಾಗುವುದು. ಎಪಿಎಲ್ ಕಾರ್ಡುದಾರರು ಅವರಿಗೆ ನಿಗದಿತ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ ಎಂದು ಹೇಳಿದರು. ಅಲ್ಲದೆ, 'ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ, ಬಿಪಿಎಲ್ ಕಾರ್ಡುದಾರರ ಶೇಕಡಾವಾರು ಶೇಕಡಾ 50 ಕ್ಕಿಂತ ಕಡಿಮೆಯಿದೆ. ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ರಾಜ್ಯವು ಸರಿಸುಮಾರು 80 ಪ್ರತಿಶತ ಬಿಪಿಎಲ್ ಕಾರ್ಡುದಾರರನ್ನು ಹೊಂದಿದೆ.
ಕೆಳಗಡೆ ನೀಡಿರುವ ಅರ್ಹತಾ ಮಾನದಂಡಗಳ ಅನುಸಾರ? ನೀವು ಬಿಪಿಲ್ಅಥವಾ ಎಪಿಎಲ್?
*ಆದಾಯ ತೆರಿಗೆ ಪಾವತಿಸುತ್ತಿರುವ ಸದಸ್ಯರ ಹೊಂದಿರುವ ಕುಟುಂಬ.
*ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ಇರುವ ಕುಟುಂಬ
*ನಿಗಮ-ಮಂಡಳಿಗಳಲ್ಲಿ ಕಾಯಂ ನೌಕರರಿರುವ ಕುಟುಂಬ ಮನೆಗಳನ್ನು ಬಾಡಿಗೆ ಕೊಟ್ಟು ಜೀವನ ನಡೆಸುತ್ತಿರುವವರು.
*7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರು
ಸ್ವಂತಕ್ಕೆಂದು 4 ಚಕ್ರಗಳ ವಾಹನ ವನ್ನು ಹೊಂದಿರುವವರು.
*ನಿಗದಿತ ವಾರ್ಷಿಕ ವರಮಾನ ಕ್ಕಿಂತ ಹೆಚ್ಚು ಗಳಿಸುತ್ತಿರುವವರು.
*ನಿಯಮಕ್ಕಿಂತ ವಾರ್ಷಿಕವಾಗಿ ಹೆಚ್ಚು ವಹಿವಾಟು ಮಾಡುವವರು.
ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಮಾತ್ರ ರದ್ದು ಮಾಡುತ್ತಿದ್ದೇವೆ. ಬಡವರಿಗೆ ಬಿಪಿಎಲ್ ಕಾರ್ಡ್ ಕೊಡಬೇಕು. ಕೊಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು. ದಾಸಶ್ರೇಷ್ಠ ಕನಕದಾಸರ ಜಯಂತಿ ನಿಮಿತ್ತ ಸೋಮವಾರ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು, ರಾಜ್ಯದ ಜನತೆಗೆ ಕನಕ ಜಯಂತಿ ಶುಭಾಶಯ ಕೋರಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಬಿಪಿಎಲ್. ಎಪಿಎಲ್ ಪಡಿತರ ಚೀಟಿಗಳ ವಿಚಾರದಲ್ಲಿ ನೀವೇ (ಮಾಧ್ಯಮದವರು) ಗೊಂದಲ ಸೃಷ್ಟಿಸುತ್ತಿದ್ದೀರಿ ಎಂದು ಗರಂ ಆದರಲ್ಲದೆ, ಬಡವರ ಬಿಪಿಎಲ್ ಕಾರ್ಡ್‌ಗಳು - ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅನ್ನಭಾಗ್ಯ ಸಿದ್ದರಾಮಯ್ಯ ಯೋಜನೆಯನ್ನು ಬಿಜೆಪಿ, ಜೆಡಿಎಸ್‌ನವರು ಪುನರುಚ್ಚಾರ ಕೊಟ್ಟಿದ್ದಾರಾ? ಮಧ್ಯಪ್ರದೇಶ, ಬಿಹಾರ, ಗುಜರಾತ್, ಹರಿಯಾಣ ರಾಜ್ಯಗಳಲ್ಲಿ ಜಾರಿ ಮಾಡಿದ್ದಾರೆಯೇ? ಎಂದು ಕೇಳಿದರು.
ಇದನ್ನು ಓದಿ:ರಾಜ್ಯದಲ್ಲಿ 14 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದು? ಕಂಡಿಷನ್ ಏನು? ರದ್ದಾಗಿರುವ ಲಿಸ್ಟ್ ನಲ್ಲಿ ನೀವು ಇದ್ದೀರಾ?
https://krushisanta.com/Why-ration-cards-are-cancelled-In-Karnataka#google_vignette
ಇದನ್ನು ಓದಿ:ಡ್ರೈವರ್ ಇಲ್ಲದೆ ಓಡುವ ಟ್ರ್ಯಾಕ್ಟರ್! ಕೃಷಿ ಮೇಳದಲ್ಲಿ ನೋಡಲು ನುಗ್ಗಿಬಿದ್ದ ಜನ!ಹೇಗೆ ಕೆಲಸ ಮಾಡುತ್ತದೆ ನೋಡಿ?
https://krushisanta.com/Driverless-tractor-has-been-introduced-in-gkvk-krushimela
ಇದನ್ನು ಓದಿ: ಕೃಷಿ ಮೇಳ ಬೆಂಗಳೂರು ಮನೆಯಲ್ಲಿ ಕುಳಿತುಕೊಂಡು ನೋಡಿ!
https://krushisanta.com/Krishi-Mela-gkvk-Bengaluru-live-2024