ತೋಟಗಾರಿಕೆ ಇಲಾಖೆಯಿಂದ ಅರ್ಜಿ! 50% ಸಬ್ಸಿಡಿ ನೇರ ಜಮಾ! ಇವತ್ತೇ ಅರ್ಜಿ ಹಾಕಿ
<krushi ilake> <horticulture department> <totagarike ilake application> <totagarike ilake online application form> <Totagarike ilake contact number>
ತೋಟಗಾರಿಕೆ ಇಲಾಖೆಯಿಂದ 2024-25ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳ ಸ್ಥಾಪನೆಗೆ ಸಹಾಯಧನ ಸೌಲಭ್ಯ ಪಡೆಯಲು ಜಿಲ್ಲೆಯ ಆಸಕ್ತ ರೈತ ಸಮುದಾಯದಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ಘಟಕಗಳ ವಿವರ??
36 ಹೆಕ್ಟರ್ ಹಣ್ಣಿನ ತೋಟಗಳ ಸ್ಥಾಪನೆ (ಪ್ರತಿ ಹೆಕ್ಟರಗೆ ಶೇ. 40 ರಂತೆ ಘಟಕ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಗುವುದು). 15 ಹೆಕ್ಟರ್ ಹೈಬ್ರಿಡ್ ತರಕಾರಿ ಪ್ರದೇಶ ವಿಸ್ತರಣೆ (ಪ್ರತಿ ಹೆಕ್ಟರಗೆ ಶೇ. 40 ರಂತೆ ಘಟಕ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಗುವುದು). 25 ಹೆಕ್ಟರ್ ಹೂವಿನ ತೋಟಗಳ ಸ್ಥಾಪನೆ (ಪ್ರತಿ ಹೆಕ್ಟರಗೆ ಶೇ. 25 ರಿಂದ 40 ರಂತೆ ಘಟಕ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಗುವುದು). 08 ಹೆಕ್ಟರ್ ಸುಗಂಧ ದ್ರವ್ಯ ತೋಟಗಳ ಸ್ಥಾಪನೆ. (ಪ್ರತಿ ಹೆಕ್ಟರಗೆ ಶೇ. 50 ರಂತೆ ಘಟಕ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಗುವುದು). 15 ಹೆಕ್ಟರ್ ಹಣ್ಣಿನ ತೋಟಗಳ ಪುನಶ್ವೇತನ (ಪ್ರತಿ ಹೆಕ್ಟರಗೆ ಶೇ. 50 ರಂತೆ ಘಟಕ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಗುವುದು).
ನೀರು ಸಂಗ್ರಹಣ ಘಟಕ (ಪ್ರತಿ ಘಟಕಕ್ಕೆ ಶೇ. 50 ರಂತೆ ಘಟಕ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಗುವುದು). ಸಂರಕ್ಷಿತ ಬೇಸಾಯ ಕಾರ್ಯಕ್ರಮ ( ಪ್ರತಿ ಘಟಕಕ್ಕೆ ಶೇ. 50 ರಂತೆ ಘಟಕ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಗುವುದು). ಯಾತ್ರೀಕರಣ ( ಪ್ರತಿ ಘಟಕಕ್ಕೆ ಶೇ. 25 ಮತ್ತು 35 ರಂತೆ ಘಟಕ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಗುವುದು). ಕೊಲ್ಲೋತ್ತರ ನಿರ್ವಹಣೆ ಘಟಕಗಳು (ಪ್ರತಿ ಘಟಕಕ್ಕೆ ಶೇ. 40 ಮತ್ತು 50 ರಂತೆ ಘಟಕ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಗುವುದು). ಮಾರುಕಟ್ಟೆ: (ತಳ್ಳುವ ಗಾಡಿ) ಪ್ರತಿ ಘಟಕಕ್ಕೆ ಶೇ. 50
ರಂತೆ ಘಟಕ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಗುವುದು. ಅರ್ಜಿಯನ್ನು ಅಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ನೀಡಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-08-2024 ಸಾಯಂಕಾಲ 5.30 ಗಂಟೆ ವರೆಗೆ ನೀಡಬಹುದಾಗಿದೆ. 2024-25 ನೇ ಸಾಲಿನಲ್ಲಿ ಸರಕಾರವು ನೀಡುವ ಅನುದಾನದ ಲಭ್ಯತೆಯ ಮೇರೆಗೆ ತಾಲೂಕಿನಲ್ಲಿ ಬಂದ ಅರ್ಜಿಗಳಲ್ಲಿ ಮೊದಲು ನೀಡಿದವರಿಗೆ ಮೊದಲ ಆದ್ಯತೆಯ ಮೇರೆಗೆ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ), ಬೀದರ ದೂರವಾಣಿ ಸಂಖ್ಯೆ (8660841546), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ), ಹುಮನಾಬಾದ ದೂರವಾಣಿ ಸಂಖ್ಯೆ (9916874287), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ), ಬಸವಕಲ್ಯಾಣ ದೂರವಾಣಿ ಸಂಖ್ಯೆ (7019681952), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ), ಭಾಲ್ಕಿ ದೂರವಾಣಿ ಸಂಖ್ಯೆ (9845099625), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ), ಔರಾದ (ಬಿ) ದೂರವಾಣಿ ಸಂಖ್ಯೆ (7259270938)ಗೆ ಸಂಪರ್ಕಿಸಬಹುದಾಗಿದೆ ಎಂದು ಬೀದರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:ನಿಮ್ಮ ಊರಿನ ಸೊಸೈಟಿಗಳಲ್ಲಿ ನಿಮ್ಮ ಜಮೀನಿನ ಮೇಲೆ ಇರುವ ಬೆಳೆ ಸಾಲವೆಷ್ಟು ನಿಮ್ಮ ಸರ್ವೇ ನಂಬರ್ ಹಾಕಿ ಚೆಕ್ ಮಾಡುವುದು ಹೇಗೆ?
https://krushisanta.com/How-much-crop-loan-is-on-your-land--in-your-PKPS
ಇದನ್ನು ಓದಿ:ಮತ್ತೆ ಬೆಳೆ ಹಾನಿ 21000 ಜಮಾ! ನಿಮಗೂ ಬಂತಾ ಈಗಲೇ ಚೆಕ್ ಮಾಡಿ ನೋಡಿ
https://krushisanta.com/Bele-hani-Parihar-raitar-khatege-jama
ಇದನ್ನು ಓದಿ:ರಾಜ್ಯದ ಹೆಚ್ಚುವರಿ ಬರಗಾಲ ಪಡೆದುಕೊಳ್ಳುವ ರೈತರ ಪಟ್ಟಿಯನ್ನು ಆನ್ಲೈನ್ನಲ್ಲಿ ಪ್ರಕಟ
https://krushisanta.com/Final-parihara-payment-farmers-list-released
ಇದನ್ನು ಓದಿ:3000 ಮೂರನೇ ಕಂತು ಜಮಾ ಆಗದೇ ಇರುವವರ ರೈತರ ಪಟ್ಟಿ ಬಿಡುಗಡೆ
https://krushisanta.com/Parihar-Amount-not-credited-for-these-farmers