ಗಂಗಾ ಕಲ್ಯಾಣ ಯೋಜನೆಗೆ 4.75 ಲಕ್ಷ ಸಬ್ಸಿಡಿ ಸಹಾಯಧನ ನೀಡಲು ಅರ್ಹರಿಂದ ಅರ್ಜಿ!

Ganga Kalyana Yojana Ganga Kalyana scheme <Karnataka application for Ganga Kalyan scheme> <eligibility for Ganga Kalyana scheme> <document required for Ganga Kalyan scheme>

Aug 7, 2024 - 07:36
 0
ಗಂಗಾ ಕಲ್ಯಾಣ ಯೋಜನೆಗೆ  4.75 ಲಕ್ಷ ಸಬ್ಸಿಡಿ  ಸಹಾಯಧನ ನೀಡಲು ಅರ್ಹರಿಂದ ಅರ್ಜಿ!

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2024-25ನೇ ಸಾಲಿನಲ್ಲಿ ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ. ಸ್ವಾತಂತ್ರ ಅಮೃತ ಮಹೋತ್ಸವದ ಮುನ್ನಡೆ ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಹಿಂದುಳಿದ ವರ್ಗಕ್ಕೆ ಸೇರಿದ ನಿರುದ್ಯೋಗಿ ಫಲಾನುಭವಿಗಳು ಕೃಷಿ ಅವಲಂಬಿತ ಚಟುವಟಿಕೆ, ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾ ವಲಯದಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ 2 ಲಕ್ಷ ರೂ. ಆರ್ಥಿಕ ನೆರವು, 1 ಲಕ್ಷ ರೂ. ಗಳವರೆಗೆ ಸಾಲದಲ್ಲಿ ಶೇ.20 ರಷ್ಟು ಗರಿಷ್ಠ 20,000 ರೂ.ಗಳ ಸಹಾಯಧನ ಹಾಗೂ 1.01 ಲಕ್ಷದಿಂದ 2.00 ಲಕ್ಷದವರೆಗೆ ಶೇ.15% ರಷ್ಟು ಕನಿಷ್ಠ 20,000 ರೂ.ಗಳವರೆಗೆ ಗರಿಷ್ಠ 30,000 ರೂ.ಸಹಾಯಧನ ಉಳಿಕೆ ಮೊತ್ತ ಶೇ.4ರ ಬಡ್ಡಿದರದಲ್ಲಿ ನಿಗಮದಿಂದ ನೇರವಾಗಿ ಸಾಲ ಸೌಲಭ್ಯ ಪಡೆಯಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.

ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98000 ರೂ., ಪಟ್ಟನ ಪ್ರದೇಶದವರಿಗೆ 1,20,000 ರೂ. ಒಳಗಿರಬೆಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿಗಳನ್ನು ಸೇವಾಸಿಂದು ಪೋರ್ಟಲ್  http://sevasindhu.karnataka.gov.in ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಅನ್‌ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ: 31-08-2024 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಗಂಗಾ ಕಲ್ಯಾಣ ನೀರಾವರಿ ಯೋಜನೆ:

ಉದ್ದೇಶ: ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು.

ಅರ್ಹತೆ: ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. (ವಿಶ್ವಕರ್ಮ ಮತ್ತು ಇದರ ಉಪ ಸಮುದಾಯಗಳು, ಉಪ್ಪಾರ ಮತ್ತು ಇದರ ಉಪ ಸಮುದಾಯಗಳು, ಅಂಬಿಗ ಮತ್ತು ಇದರ ಉಪ ಸಮುದಾಯಗಳು, ಸವಿತಾ ಮತ್ತು ಅದರ ಉಪ ಸಮುದಾಯಗಳು, ಮಡಿವಾಳ ಮತ್ತು ಅದರ ಉಪ ಸಮುದಾಯಗಳು, ಅಲೆಮಾರಿ ಮತ್ತು ಅರೆ ಅಲಮಾರಿ ಜನಾಂಗಗಳು, ಒಕ್ಕಲಿಗ ಮತ್ತು ಅದರ ಉಪ ಸಮುದಾಯಗಳು, ಲಿಂಗಾಯತ ಮತ್ತು ಅದರ ಉಪ ಸಮುದಾಯಗಳು, ಮರಾಠ ಮತ್ತು ಅದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ).

ಸೌಲಭ್ಯ:

ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆ: ಈ ಯೋಜನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು.

ಘಟಕವೆಚ್ಚ: ರೂ.3.75ಲಕ್ಷಗಳು. ರೂ.3.25ಲಕ್ಷಗಳ ಸಹಾಯಧನ(ಸಬ್ಸಿಡಿ) ಹಾಗೂ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ರೂ.50,000/-ಗಳ ಸಾಲ. ರೂ.3.25ಲಕ್ಷಗಳ ಸಹಾಯಧನದಲ್ಲಿ ಕೊಳವೆ ಬಾವಿ ಕೊರೆಯುವ ವೆಚ್ಚ, ಪಂಪ್‌ಸೆಟ್ ಅಳವಡಿಕೆ ಹಾಗೂ ಪೂರಕ ಸಾಮಗ್ರಿಗಳ ಸರಬರಾಜಿಗೆ ರೂ.2.50ಲಕ್ಷಗಳ ವೆಚ್ಚ ಭರಿಸಲಾಗುವುದು.

 ಕೊರೆದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಆರ್.ಆರ್. ಸಂಖ್ಯೆ ನೀಡಿದ ನಂತರ ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುದ್ಧೀಕರಣ ವೆಚ್ಚವಾಗಿ, ಪ್ರತಿ ಕೊಳವೆ ಬಾವಿಗೆ ರೂ.75,000/-ಗಳಂತೆ ಪಾವತಿಸಲಾಗುವುದು. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ವೈಯಕ್ತಿಕ ಕೊಳವೆ ಬಾವಿಯ ಘಟಕ ವೆಚ್ಚ ರೂ.4.75ಲಕ್ಷಗಳು, ಇದರಲ್ಲಿ ರೂ.4.25ಲಕ್ಷಗಳ ಸಹಾಯಧನ ಹಾಗೂ ರೂ.50000/-ಗಳ ಸಾಲವಾಗಿರುತ್ತದೆ.

ಈ ಕಾರ್ಯಕ್ರಮಕ್ಕೆ ಆಯಾ ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿದ ಆರ್ಥಿಕ ಗುರಿಯನ್ವಯ ಮೀಸಲಾತಿ ಅನುಪಾತ ಪ್ರವರ್ಗ-1 ಮತ್ತು 2ಎಗೆ 85% ಹಾಗೂ ಪ್ರವರ್ಗ-3ಎ ಮತ್ತು 3ಬಿಗೆ 15%ರಂತೆ ನೀರಾವರಿ ಘಟಕಗಳನ್ನು ಆಯ್ಕೆ ಮಾಡಿ ಸೌಲಭ್ಯ ಒದಗಿಸಬೇಕು.

ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ ಸೈಟ್ www.dbcdc.karnataka.gov.in ಅಥವಾ ನಿಗಮದ ಸಹಾಯವಾಣಿ ಸಂಖ್ಯೆ: 080- 22374832 2 8050770004 8050770005 ವ್ವಸ್ಥಾಪಕರ ಕಛೇರಿ ನಂ. 9-8-175/5ಬಿ, ಬಿವಿಬಿ ಕಾಲೇಜ ರಸ್ತೆ, ಮೈಲೂರ ಕ್ರಾಸ್, ಬಸವನಗರ ಬಿದರಗೆ ಸಂಪರ್ಕಿಸಬಹುದಾಗಿದೆ ಎಂದು ಬೀದರ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನ

https://krushisanta.com/Invited-from-horticulture-department-apply-through-offline

ಇದನ್ನು ಓದಿ:ನಿಮ್ಮ ಊರಿನ ಸೊಸೈಟಿಗಳಲ್ಲಿ ನಿಮ್ಮ ಜಮೀನಿನ ಮೇಲೆ ಇರುವ ಬೆಳೆ ಸಾಲವೆಷ್ಟು ನಿಮ್ಮ ಸರ್ವೇ ನಂಬರ್ ಹಾಕಿ ಚೆಕ್ ಮಾಡುವುದು ಹೇಗೆ?

https://krushisanta.com/How-much-crop-loan-is-on-your-land--in-your-PKPS

ಇದನ್ನು ಓದಿ:ಮತ್ತೆ ಬೆಳೆ ಹಾನಿ 21000 ಜಮಾ! ನಿಮಗೂ ಬಂತಾ ಈಗಲೇ ಚೆಕ್ ಮಾಡಿ ನೋಡಿ

https://krushisanta.com/Bele-hani-Parihar-raitar-khatege-jama

ಇದನ್ನು ಓದಿ:ರಾಜ್ಯದ ಹೆಚ್ಚುವರಿ ಬರಗಾಲ ಪಡೆದುಕೊಳ್ಳುವ ರೈತರ ಪಟ್ಟಿಯನ್ನು ಆನ್ಲೈನ್ನಲ್ಲಿ ಪ್ರಕಟ

https://krushisanta.com/Final-parihara-payment-farmers-list-released

admin B.Sc(hons) agriculture College of agriculture vijayapura And provide consultant service