8433 ಕೋಟಿ ಅನ್ನ ಭಾಗ್ಯ ಹಣ ಜಮಾ! ಎಲ್ಲಾ ಪೆಂಡಿಂಗ್ ಹಣ ಬಂತು ನೋಡಿ! ನೀವು ಚೆಕ್ ಮಾಡಿ

<Anna Bhagy> <ಅನ್ನ ಭಾಗ್ಯ ಹಣ> <ಅನ್ನ ಭಾಗ್ಯ ಹಣ ಸ್ಟೇಟಸ್>

Nov 5, 2024 - 08:07
 0
8433 ಕೋಟಿ ಅನ್ನ ಭಾಗ್ಯ ಹಣ ಜಮಾ! ಎಲ್ಲಾ ಪೆಂಡಿಂಗ್ ಹಣ ಬಂತು ನೋಡಿ! ನೀವು ಚೆಕ್ ಮಾಡಿ

ಅನ್ನಭಾಗ್ಯ ಯೋಜನೆಯಡಿ ರಾಜ್ಯದಲ್ಲಿ 2023 ಇಲ್ಲಿಯವರೆಗೆ 51.39 ಫಲಾನುಭವಿಗಳಿಗೆ ಜುಲೈನಿಂದ ಮೂಲಕ 8,433 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ವತಿಯಿಂದ ದೇವನಹಳ್ಳಿ ಪಟ್ಟಣದ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2,09,491 ಅರ್ಹ ಫಲಾನುಭವಿಗಳಿಗೆ 12.19,610 ರೂ.ಗಳನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. ಆಯವ್ಯಯದಲ್ಲಿ ಸಾಲಿನ ಘೋಷಿಸಿರುವಂತೆ ಅನ್ನ ಸುವಿಧ ಯೋಜನೆಯನ್ನು ಜಾ- ರಿಗೆ ತರಲಾಗಿದ್ದು, 90 ವರ್ಷ ವಯಸ್ಸಿನ ಹಿರಿಯ ನಾಗರಿಕರ ಮನೆಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸಲಾಗುತ್ತಿದೆ.

ರಾಜ್ಯದಲ್ಲಿ 7,743 ಫಲಾನುಭವಿಗಳಿಗೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 107 ಪಡಿತರ ಚೀಟಿದಾರರಿಗೆ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು. ನನ್ನ ಶಾಲೆ ನನ್ನ ಕೊಡುಗೆ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಶಾಲೆಗಳನ್ನು సిఎనో ఆరో ನಿಧಿಯಡಿ ಉನ್ನತೀಕರಿಸಿ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ ಮಾಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡಲು ನನ್ನ ಶಾಲೆ. ನನ್ನ ಕೊಡುಗೆ ಕಾರ್ಯಕ್ರಮವನ್ನು ಆರಂಭಿಸಿದ್ದು, ಉತ್ತಮ ಸ್ಪಂದನೆ ದೊರೆತಿದೆ ಎಂದು ಹೇಳಿದರು. ಎತ್ತಿನಹೊಳೆ ಯೋಜನೆಯಡಿ ಬೆಂಗಳೂರುಗ್ರಾಮಾಂತರ ಜಿಲ್ಲೆಯ 66 ಸಣ್ಣ ಕೆರೆಗಳಿಗೆ ನೀರು ತುಂಬಿಸಲು ಉದ್ದೇಶಿಸಲಾಗಿದೆ ಎಂದರು.

ಪುಷ್ಪಾವತಿ ಯೋಜನೆ ಮತ್ತು ಹೆಚ್‌ಎನ್ ವ್ಯಾಲಿ ಯೋಜನೆಯಡಿ 243 ಎಂಎಲ್‌ಡಿ ಸಂಸ್ಕರಿಸಿದ ನೀರನ್ನು 1,081 ಕೋಟಿ ರೂ. ಅನುದಾನದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ನಮ್ಮನಾಡು ಇಂದು, ಮುಂದು, ಎಂದೆಂದೂ ಎಲ್ಲಾ ಜಾತಿ, ಧರ್ಮದ ಜನರು ಸಾಮರಸ್ಯದಿಂದಬದುಕು ಒಂದು ಸುಂದರ ತೋಟವಾಗಿ ಉಳಿಯಬೇಕು ಎಂದು ಆಶಿಸಿದರು.

ರಾಜ್ಯೋತ್ಸವದ ಸಂದರ್ಭದಲ್ಲಿ ಸುಂದರ ಹೊಸ ನಾಳೆಯ ನಿರ್ಮಾಣದ ನಮ್ಮ ಹಿರಿಯರು ಕಂಡ ಕನಸು ಇನ್ನಷ್ಟು ಸಹಕಾರಗೊಳಿಸುವ ಪಣ ತೊಡಬೇಕಾಗಿದೆ. ಎಂದರು. ಮನೆಯೇ ಮೊದಲ ಪಾಠಶಾಲೆಯಾಗಿದ್ದು, ಮನೆಯಿಂದಲೇ ಮಕ್ಕಳಿಗೆ ಮಾತೃಭಾಷಾ ಕಲಿಕೆ ಮತ್ತು ಭಾಷಾ ಜ್ಞಾನ ಬೆಳೆಸುವುದು ಮುಖ್ಯವಾಗುತ್ತದೆ. ಮಕ್ಕಳಿಗೆ ನಮ್ಮ ನಾಡು-ನುಡಿಯ ಬಗ್ಗೆ ಹೆಮೆ ಪಡುವಂತಹ ಕಲಿಕೆಯನು, ಪ್ರೋತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು.

ಕನ್ನಡ ಕಲಿಕೆಯನ್ನು ಒತ್ತಾಯವಾಗಿ ಹೇರುವ ಬದಲಾಗಿ ಕನ್ನಡ ಭಾಷೆ ಮತ್ತು ತಾಯಿ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮೆಲ್ಲರದು ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ.ಕೆ.ಎನ್, ಜಿಲ್ಲಾ ಪೊಲೀಸ್ ಎಸ್ಪಿ ಸಿ.ಕೆ.ಬಾಬಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಇಲ್ಲಿಯವರೆಗೆ ನಿಮ್ಮ ಖಾತೆಗಳಿಗೆ ಜಮಾ ಆಗಿರುವ ಅನ್ನ ಭಾಗ್ಯ ಸ್ಟೇಟಸ್?

https://ahara.kar.nic.in/lpg/ ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ ನಿಮಗೆ ಸಂಬಂಧಪಟ್ಟರುವ ಜಿಲ್ಲೆಯ ಲಿಂಕನ್ನು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮಗೆ ತಿಂಗಳು ಮತ್ತು ನಿಮ್ಮ ರೇಷನ್ ಕಾರ್ಡ್ ನಂಬರ್ ಕೇಳುತ್ತದೆ ಅದನ್ನು ನಮೂದಿಸಿ ನಿಮಗೆ ಅನ್ನಭಾಗ್ಯ ಹಣ ಜಮಾ ಆಗಿದೆ ಅಥವಾ ಇಲ್ಲ ಎಂದು ಮೊಬೈಲ್ ನಲ್ಲಿಯೇ ಆನ್ಲೈನಲ್ಲಿ ಚೆಕ್ ಮಾಡಬಹುದು.

ಇದನ್ನು ಓದಿ:ಎರಡು ದಿನದಲ್ಲಿ ಬೆಳೆ ಪರಿಹಾರ ಜಮಾ ಸೂಚನೆ ನೀಡಿದ ಸಿಎಂ https://krushisanta.com/Parihar-will-credit-shortly-for-thease-Farmers-soon

ಇದನ್ನು ಓದಿ:ವಕ್ಫ್ ಅಸ್ತಿ ಪಟ್ಟಿ ಬಿಡುಗಡೆ ನಿಮ್ಮ ಸರ್ವೇ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

https://krushisanta.com/Waqf-property-list-released-Chcek-status-using-survey-number

admin B.Sc(hons) agriculture College of agriculture vijayapura And provide consultant service