ರೈತ ಸಮೃದ್ಧಿ ಯೋಜನೆ! ರಾಜ್ಯದ ರೈತರಿಗೆ ಹೊಸ ಸ್ಕೀಮ್

<Raita Samruddhi Yojana> < ರೈತ ಸಮೃದ್ಧಿ ಯೋಜನೆ> < ರೈತ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ> < ರೈತ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ>

Nov 6, 2024 - 22:48
 0
ರೈತ ಸಮೃದ್ಧಿ ಯೋಜನೆ! ರಾಜ್ಯದ ರೈತರಿಗೆ ಹೊಸ ಸ್ಕೀಮ್

2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 29 ರಲ್ಲಿ ಮಾನ್ಯ ಮುಖ್ಯಮಂತ್ರಿಗಳು "ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿಸುವುದು ನಮ್ಮ ಸರ್ಕಾರದ ಆದ್ಯತೆಯ ವಿಷಯವಾಗಿದ್ದು, ಈ ಉದ್ದೇಶದಿಂದ ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ, ಸಮಗ್ರ ಕೃಷಿಯನ್ನು ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಈ ಯೋಜನೆಯಡಿ ರೈತರಿಗೆ ಈ ಕೆಳಕಂಡ ವಿಷಯಗಳಲ್ಲಿ ಮಾರ್ಗದರ್ಶನ ಹಾಗೂ ಬೆಂಬಲ ನೀಡಲು ಕ್ರಮ ಕೈಗೊಳ್ಳಲಾಗುವುದು" ಎಂದು ಘೋಷಿಸಿರುತ್ತಾರೆ.

ಕೃಷಿ, ಪಶು ಸಂಗೋಪನೆ, ತೋಟಗಾರಿಕೆ, ಹೈನುಗಾರಿಕೆಗಳನ್ನು ಒಳಗೊಂಡಂತೆ ಸಮಗ್ರ ಕೃಷಿ ಕೈಗೊಳ್ಳುವ ಮೂಲಕ ಆದಾಯದಲ್ಲಿ ಸುಸ್ಥಿರತೆಯನ್ನು ಕಂಡುಕೊಳ್ಳಲು ಬೆಂಬಲ ನೀಡುವುದು.

ಮಣ್ಣಿನ ಗುಣಮಟ್ಟ ಹಾಗೂ ಮಾರುಕಟ್ಟೆ ಬೇಡಿಕೆಯನ್ನು ಆಧರಿಸಿ ಯಾವ ಬೆಳೆ ಬೆಳೆಯಬೇಕೆಂಬ ಕುರಿತು ರೈತರಿಗೆ ಮಾರ್ಗದರ್ಶನ ನೀಡುವುದು.

ಹೊಸ ಕೃಷಿ ಪದ್ಧತಿ ಹಾಗೂ ತಂತ್ರಜ್ಞಾನಗಳ ಕುರಿತು ರೈತರಿಗೆ ಅರಿವು ಮೂಡಿಸಿ, ಬೆಂಬಲ ನೀಡುವುದು.

ರೈತರಿಗೆ ಸಂಗ್ರಹಣೆ ಮತ್ತು ಮೌಲ್ಯವರ್ಧನೆಯ ಕುರಿತು ಅರಿವು ಮೂಡಿಸುವುದು.

ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಲು ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು.

ಮಣ್ಣು ಪರೀಕ್ಷೆ ಮತ್ತು ಗುಣಮಟ್ಟ ಕುರಿತು ಮಾಹಿತಿ ನೀಡುವುದು.

ರೈತರ ಜೀವನೋಪಾಯ ಸುರಕ್ಷತೆಗಾಗಿ ಸಮಗ್ರ ಕೃಷಿ ಪದ್ಧತಿ, ಕೃಷಿ-ರೈತ-ಭೂಮಿ- ಜಾನುವಾರುಗಳ ಪರಿಕಲ್ಪನೆ, ಆರ್ಥಿಕ ಸುಸ್ಥಿರ ಕೃಷಿಗಾಗಿ ಮಿಶ್ರ ಕೃಷಿ, ತೋಟಗಾರಿಕೆ ಮಾದರಿ ಬೆಳೆಗಳು, ಪಶುಸಂಗೋಪನೆ ಘಟಕಗಳನ್ನು ಸಂಯೋಜಿಸುವ ಮೂಲಕ ಆಹಾರ ಉತ್ಪಾದನೆಯನ್ನು ಹೆಚ್ಚಿಸಬಹುದಾಗಿರುತ್ತದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಹಾಗೂ ಸಂಬಂಧಿತ ಇಲಾಖೆಗಳ ಚಾಲ್ತಿಯೋಜನೆಗಳನ್ನು ಒಗ್ಗೂಡಿಸಿಕೊಂಡು ಹಾಗೂ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಮೀಸಲಿಡಲಾದ ಅನುದಾನ ಬಳಸಿಕೊಂಡು ಅನುಷ್ಠಾನಗೊಳಿಸಲಾಗುವುದು.

ರಾಜ್ಯದಲ್ಲಿ ಕೃಷಿ ಇಲಾಖೆಯಲ್ಲಿ ಪ್ರಸ್ತುತ ಅನುಷ್ಠಾನಗೊಳಿಸುತ್ತಿರುವ ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳನ್ನು ಕೇಂದ್ರ ಬಿಂದುವಾಗಿರಿಸಿಕೊಂಡು ಸಮಗ್ರ ಕೃಷಿ ಅಳವಡಿಸಲು ಪೂರಕವಾದ ಸೌಲಭ್ಯಗಳನ್ನು ನೀಡಿ ಸಮ್ಮದ್ಧ ರೈತರನ್ನಾಗಿ ರೂಪಿಸುವುದು. ಸದರಿ ರೈತರಿಗೆ ರೈತಪರ ಯೋಜನೆಗಳನ್ನು ಸಂಯೋಜಿಸುವ ಮೂಲಕ ಸಮಗ್ರ ಕೃಷಿ ಪದ್ಧತಿ, ರೈತ ಮತ್ತು ರೈತ ಗುಂಪುಗಳಿಗೆ ಗುಣಮಟ್ಟದ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ರಫ್ತು ಮಾಡುವುದರ ಬಗ್ಗೆ, ಸಾಮರ್ಥ್ಯ ಅಭಿವೃದ್ಧಿ ಹಾಗೂ ಅರಿವು ಮೂಡಿಸುವುದು. ರೈತರಿಗೆ ಮಣ್ಣು ಪರೀಕ್ಷೆಯ ಆಧಾರದ ಮೇಲೆ ಯಾವ ಬೆಳೆ ಬೆಳೆಯಬೇಕೆಂಬ ಕುರಿತು ಹಾಗೂ ಮಾರುಕಟ್ಟೆ, ಬೇಡಿಕೆಯನ್ನು ಆಧರಿಸಿ ಮಾರ್ಗದರ್ಶನ ನೀಡುವುದು, ಇತ್ಯಾದಿಗಳ ಮೂಲಕ ಆಹಾರ ಉತ್ಪಾದನೆ ಹಾಗೂ ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ಸಂಬಂಧಿತ ಇಲಾಖೆಗಳ ಚಾಲ್ತಿಯೋಜನೆಗಳನ್ನು ಒಗ್ಗೂಡಿಸಿಕೊಂಡು ಹಾಗೂ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಮೀಸಲಿಡಲಾದ ಅನುದಾನ ಬಳಸಿಕೊಂಡು ಕರ್ನಾಟಕ ರೈತ ಸಮೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿದೆ.

ಯೋಜನೆಯ ಉದ್ದೇಶಗಳು?

> ಕೃಷಿ ಭಾಗ್ಯ ಫಲಾನುಭವಿಗಳನ್ನು ಕೇಂದ್ರ ಬಿಂದುವಾಗಿರಿಸಿಕೊಂಡು ಚಾಲ್ತಿ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಉತ್ತೇಜಿಸುವುದರ ಜೊತೆಗೆ ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿಸುವುದು ಹಾಗೂ ಸದರಿ ರೈತರನ್ನು "ಮಾದರಿ ಸಮೃದ್ದ ರೈತರನ್ನಾಗಿ" ರೂಪಿಸುವುದು.

> ರೈತ ಮತ್ತು ರೈತ ಗುಂಪುಗಳಿಗೆ ಗುಣಮಟ್ಟದ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ರಫ್ತು, ಮಾಡುವುದರ ಬಗ್ಗೆ, ಸಾಮರ್ಥ್ಯ ಅಭಿವೃದ್ಧಿ ಹಾಗೂ ಅರಿವು ಮೂಡಿಸುವುದು.

> ರೈತ ಮತ್ತು ರೈತ ಗುಂಪುಗಳ ಉತ್ಪನ್ನಗಳಿಗೆ ಬ್ಯಾಂಡಿಂಗ್ ಮತ್ತು ಮಾರುಕಟ್ಟೆ ಕಲ್ಪಿಸಲು ಆರ್ಥಿಕ ನೆರವು ಒದಗಿಸುವುದು.

> ರೈತರಿಗೆ ಮಣ್ಣು ಪರೀಕ್ಷೆಯ ಆಧಾರದ ಮೇಲೆ ಯಾವ ಬೆಳೆ ಬೆಳೆಯಬೇಕೆಂಬ ಕುರಿತು ಹಾಗೂ ಮಾರುಕಟ್ಟೆ ಬೇಡಿಕೆಯನ್ನು ಆಧರಿಸಿ ಮಾರ್ಗದರ್ಶನ ನೀಡುವುದು.

ಯೋಜನೆಯ ಘಟಕಗಳು!

1. ಸಮಗ್ರ ಕೃಷಿ ಪದ್ದತಿ: ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಕೃಷಿ ಅರಣ್ಯ ಇತ್ಯಾದಿ ಘಟಕಗಳನ್ನು ಒಳಗೊಂಡಂತೆ ಸಮಗ್ರ ಕೃಷಿ ಪದ್ಧತಿ ಅಳವಡಿಕೆ- ಒಗ್ಗೂಡಿಸುವಿಕೆಯ ಮೂಲಕ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಯೋಜನೆಗಳ ಅನುಷ್ಠಾನ ಮಾಡುವುದು. ಸದರಿ ಘಟಕದ ಅನುಷ್ಠಾನಕ್ಕೆ ರೂ.6.00 ಕೋಟಿ ಅನುದಾನ ಮೀಸಲಿಡಲಾಗಿದೆ.

2. ರೈತ ಉತ್ಪಾದಕ ಸಂಸ್ಥೆಗಳು (FPO), ಸ್ವಸಹಾಯ ಸಂಘಗಳು (SHG), ಮತ್ತು ರೈತ ಗುಂಪುಗಳಿಗೆ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ: ಗುಣಮಟ್ಟದ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ರಫ್ತು, ಮಾಡುವುದರ ಬಗ್ಗೆ, ತರಬೇತಿ.

3. ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಕಲ್ಪಿಸುವ ಕಾರ್ಯಕ್ರಮ: ರೈತ ಉತ್ಪಾದಕ ಸಂಸ್ಥೆಗಳು(FPO), ಸ್ವಸಹಾಯ ಸಂಘಗಳು (SHG), ರೈತ ಗುಂಪುಗಳು, ಸಹಕಾರಿ ಸಂಘಗಳು ಇವರು ಸಿದ್ದಪಡಿಸುವ ಉತ್ಪನ್ನಗಳನ್ನು ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಕಲ್ಪಿಸಿ ರಫ್ತು ಮಾಡಲು ಅನುವಾಗುವಂತೆ ಸಹಾಯಧನ ಒದಗಿಸುವುದು, ಸದರಿ ಘಟಕದ ಅನುಷ್ಠಾನಕ್ಕೆ ರೂ. 2.00 ಕೋಟಿ ಅನುದಾನ ಮೀಸಲಿಡಲಾಗಿದೆ.

4. ರೈತರಿಗೆ ಮಾರ್ಗದರ್ಶನ: ಮಣ್ಣಿನ ಗುಣಧರ್ಮಗಳ ಆಧಾರದ ಮೇಲೆ ಬೆಳೆಗಳ ಆಯ್ಕೆ ಕುರಿತು ತರಬೇತಿ /ಪಚಾರ, ಮಣ್ಣು ಮಾದರಿ ಸಂಗ್ರಹಣೆ/ ವಿಶ್ಲೇಷಣೆ ಹಾಗೂ ಮಣ್ಣು ಪರೀಕ್ಷೆ ಆಧಾರಿತ ಬೆಳೆ/ಪೋಷಕಾಂಶಗಳ ಶಿಫಾರಸ್ಸು ಮತ್ತು ಹೊಸ ತಾಂತ್ರಿಕತೆಗಳಾದ ಡಿಜಿಟಲ್/ಸ್ಮಾರ್ಟ್ ಕೃಷಿ ಅಳವಡಿಕೆಗೆ ಉತ್ತೇಜನ ನೀಡುವುದು. (ರಾಜ್ಯದ ಅತಿ ಕಡಿಮೆ ಉತ್ಪಾದಕತೆ ಇರುವ 398 ಗ್ರಾಮ ಪಂಚಾಯತಿಗಳು ಒಳಗೊಂಡಂತೆ). ಸದರಿ ಘಟಕದ ಅನುಷ್ಠಾನಕ್ಕೆ ರೂ. 1.00 ಕೋಟಿ ಅನುದಾನ ಮೀಸಲಿಡಲಾಗಿದೆ).

ಇದನ್ನು ಓದಿ:ಈಗ ಜಮೀನಿನ ಸರ್ವೆ ಮಾಡಲು ಸರ್ವೆ ಇರಬೇಕಾಗಿಲ್ಲ ಮೊಬೈಲ್ ಇದ್ದರೆ ಸಾಕು! -

https://krushisanta.com/How-to-make-survey-up-your-land-in-your-mobile-using--GPS-field-area-measure

ಇದನ್ನು ಓದಿ:ರೇಷನ್ ಕಾರ್ಡ್ ಇದ್ದವರಿಗೆ 8433 ಕೋಟಿ ಹಣ ಜಮಾ ಅನ್ನ ಭಾಗ್ಯ ಸ್ಟೇಟಸ್ ಚೆಕ್ ಮಾಡಿ

https://krushisanta.com/Anna-bhagy-Hana-Jama-status

admin B.Sc(hons) agriculture College of agriculture vijayapura And provide consultant service