ಗಗನಕ್ಕೆ ಏರಿರುವ ಗ್ಯಾಸ್ ದರ! ಪ್ರತಿ ಸಿಲಿಂಡರಿಗೆ 62 ರೂ ಏರಿಕೆ!

<ಗ್ಯಾಸ್ ದರ> <ಪ್ರತಿ ಸಿಲಿಂಡರ್ ಗೆ ಗ್ಯಾಸ್ ದರ> < ಪ್ರತಿ ಸಿಲಿಂಡರ್ ಗೆ ಗ್ಯಾಸ್ ದರ ಮಾಹಿತಿ>

Nov 6, 2024 - 16:02
 0
ಗಗನಕ್ಕೆ ಏರಿರುವ ಗ್ಯಾಸ್ ದರ! ಪ್ರತಿ ಸಿಲಿಂಡರಿಗೆ  62 ರೂ ಏರಿಕೆ!

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ! ಹಿಂದಿನ ಕಾಲದಲ್ಲಿ ಯಾರ ಮನೆಯಲ್ಲಿ ಗ್ಯಾಸ್ ಇರುತ್ತಿರಲಿಲ್ಲ ಎಲ್ಲರೂ ಕಟ್ಟಿಗೆಯನ್ನು ಬಳಸಿ ಅಡುಗೆಯನ್ನು ಮಾಡುತ್ತಿದ್ದರು ಆದರೆ ಇವತ್ತಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ನಾವು ಗ್ಯಾಸ್ ಅನ್ನು ನೋಡಬಹುದು ಇದರಿಂದ ಗ್ಯಾಸ್ ಬೆಲೆ ಏರಿಕೆಯಾಗಿದೆ. ಪ್ರತಿಯೊಬ್ಬರೂ ಇವತ್ತು ಗ್ಯಾಸ್ ಮೇಲೆ ಅವಲಂಬಿತವಾಗಿದ್ದಾರೆ ಕಟ್ಟಿಗೆಯನ್ನು ಬಳಸುವುದು ಬಹಳ ಕಡಿಮೆ ಮಾಡಿದ್ದಾರೆ ಇದರಿಂದ ಪ್ರತಿದಿನ ಗ್ಯಾಸ್ ಬೆಲೆ ಏರಿಕೆ ಆಗುತ್ತಿದೆ, ಇದಲ್ಲದೆ ಇವತ್ತಿನ ದಿನದಲ್ಲಿ ಪ್ರತಿಯೊಬ್ಬರೂ ಹೋಟೆಲ್ ನಲ್ಲಿ ತಿನ್ನುವುದು ಮತ್ತು ಬೇಕರಿ ತಿನಿಸುಗಳನ್ನು ತಿನ್ನುವುದು ಹೆಚ್ಚಾಗಿದೆ ಇದರಿಂದ ವಾಣಿಜ್ಯ ಎಲ್ಪಿಜಿ ಗ್ಯಾಸ್ ದರವು ಹೆಚ್ಚಾಗಿದೆ ದಿನದಿಂದ ದಿನಕ್ಕೆ ತಿಂಗಳಿನಿಂದ ತಿಂಗಳಿಗೆ ಹೀಗೆ ಬೆಲೆ ಹೆಚ್ಚಾಗುತ್ತಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ ನ ಬೆಲೆ 62 ಏರಿಕೆಯಾಗಿದೆ.

ಹೊಸ ತಿಂಗಳ ಆರಂಭದೊಂದಿಗೆವಣಿಜ್ಯ ಎಲ್‌ಪಿಜಿ ಸಿಲಿಂಡ‌ರ್ ಬೆಲೆ ಏರಿಕೆಯಾಗಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ 62 ರೂಪಾಯಿ ಏರಿ- ಕೆಯಾಗಿದೆ. ತೈಲ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡ‌ರ್ ಬೆಲೆಯನ್ನು ಹೆಚ್ಚಿಸಿವೆ. ಕಂಪನಿಗಳು 14.2 ಕೆಜಿ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೊಸ ದರಗಳು ಇಂದಿನಿಂದ ಜಾರಿಗೆ ಬಂದಿವೆ.

ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಪರಿಷ್ಕರಿಸಲಾಗುತ್ತದೆ. ತೈಲ ಕಂಪನಿಗಳು ತಮ್ಮ ವೆಚ್ಚಗಳು ಮತ್ತು ಹಣದುಬ್ಬರಕ್ಕೆ ಅನುಗುಣವಾಗಿ ಎಲ್ ಪಿಜಿ ಅನಿಲದ ಬೆಲೆಯನ್ನು ಹೆಚ್ಚಿಸುತ್ತವೆ. ಈ ಬಾರಿ 19 ಕೆ.ಜಿ ಎಲ್ ಪಿಜಿ ಸಿಲಿಂಡ‌ರ್ ಬೆಲೆ ಏರಿಕೆ ಮಾಡಲಾಗಿದೆ. ದೆಹಲಿಯಲ್ಲಿ ಸಿಲಿಂಡ‌ರ್ ಬೆಲೆ 1740 ರೂ.ನಿಂದ 1802 ರೂ.ಗೆ ಏರಿಕೆಯಾಗಿದೆ.

ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ 1850.50 ರೂ.ನಿಂದ 1911.50 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ 19 ಕೆಜಿಯ ಎಲ್‌ಪಿಜಿ ಸಿಲಿಂಡರ್ 1692.50 . 5 1754 . ಲಭ್ಯವಾಗಲಿದೆ. ಚೆನ್ನೈನಲ್ಲಿ ಈ ಸಿಲಿಂಡ‌ರ್ ಬೆಲೆ 1903 ರೂ.ನಿಂದ 1964 ರೂ.ಗೆ ಏರಿಕೆಯಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡ‌ರ್ ದರ ಏರಿಕೆಯಿಂದಾಗಿ ಹೋಟೆಲ್ ತಿಂಡಿ-ತಿನಿಸು ದರ ದುಬಾರಿಯಾಗುವ ಸಾಧ್ಯತೆಯಿದೆ. ಆದ್ದರಿಂದ ನೀವು ಹೋಟೆಲಿನಲ್ಲಿ ತಿನ್ನುವುದು ಮತ್ತು ಬೇಕರಿ ತಿನಿಸುಗಳನ್ನು ತಿನ್ನುವುದು ಕಡಿಮೆ ಮಾಡಿ. ಹೀಗೆ ನಾವು ಗ್ಯಾಸ್ ಅನ್ನು ಹೆಚ್ಚಾಗಿ ಬಳಸುವುದರಿಂದ ಬೆಲೆ ಏರಿಕೆ ಆಗುತ್ತದೆ ಮತ್ತು ನಾವು ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದನ್ನು ಕಡಿಮೆ ಮಾಡಿದರೆ ನಮಗೆ ದುಡ್ಡು ಉಳಿಯುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದಾಗುತ್ತದೆ.

ಇದನ್ನು ಓದಿ:ರೈತರ ಈ ಖಾತೆಗಳಿಗೆ ಹೆಚ್ಚುವರಿ ಬರ ಪರಿಹಾರ ಹಣ ಬಿಡುಗಡೆ? ಮೊಬೈಲ್ ನಂಬರ್ ಇದ್ದರೆ ಸಾಕು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಬಹುದು

https://krushisanta.com/Extra-parihara-payment-amount-credit-Please-check-using-this-link

ಇದನ್ನು ಓದಿ:*ಎರಡು ದಿನದಲ್ಲಿ ಬೆಳೆ ಪರಿಹಾರ ಜಮಾ ಸೂಚನೆ ನೀಡಿದ ಸಿಎಂ!*

https://krushisanta.com/Parihar-will-credit-shortly-for-thease-Farmers-soon

ಇದನ್ನು ಓದಿ:ರೈತರೇ ನಿಮ್ಮ ಜಮೀನಿನ ಹೆಸರು ಬದಲಾಗಿದೆಯೇ? ವಕ್ಫ್ ಭೂಮಿ ಹೆಸರು ಬಂತು? 1200 ಎಕರೆ ನಿಮ್ಮದಲ್ಲ!

https://krushisanta.com/Waqf-name-changed-in-many-RTC-of-the-farmers

admin B.Sc(hons) agriculture College of agriculture vijayapura And provide consultant service