ಎರಡೇ ದಿನದಲ್ಲಿ ಬೆಳೆ ಹಾನಿ ಪರಿಹಾರ ಸಿಎಂ ಸೂಚನೆ! ಆದರೆ ಎಲ್ಲಿ ಮತ್ತು ಯಾರಿಗೆ ತಿಳಿದುಕೊಳ್ಳಿ!

<Parihar> <Bele hani Parihar> <Parihar Hana Jama> <Parihar hana status> <ಪರಿಹಾರ> <ಬೆಳೆ ಹಾನಿ ಪರಿಹಾರ ಸ್ಟೇಟಸ್> <ಬೆಳೆ ಪರಿಹಾರ ಜಮಾ ಸ್ಟೇಟಸ್>

Nov 1, 2024 - 21:20
 0
ಎರಡೇ ದಿನದಲ್ಲಿ ಬೆಳೆ ಹಾನಿ ಪರಿಹಾರ ಸಿಎಂ ಸೂಚನೆ! ಆದರೆ ಎಲ್ಲಿ ಮತ್ತು ಯಾರಿಗೆ ತಿಳಿದುಕೊಳ್ಳಿ!

ರಾಜ್ಯದಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿರುವ ಅನಾಹುತಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಶೀಘ್ರ ಕ್ರಮ ವಹಿಸಬೇಕು. ಇದರೊಂದಿಗೆ ಮನೆ ಹಾನಿ ಹಾಗೂ ಪ್ರಾಣಿ ಹಾನಿಯಾದರೆ 48 ಗಂಟೆಯೊಳಗೆ ಪರಿ ಹಾರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ಸೂಚನೆ ನೀಡಿದ್ದಾರೆ.

ಹಿಂಗಾರು ಮಳೆಗೆ ಸಂಬಂಧಿಸಿದಂತೆ ಹಾಗೂ ಅತಿವೃಷ್ಟಿಯಿಂದ ಉಂಟಾಗಿರುವ ಅನಾಹುತಗಳಿಗೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ವಿಡಿಯೊ ಸಂವಾದ ನಡೆಸಿದರು. ಈ ವೇಳೆ ರಾಜ್ಯಾದ್ಯಂತವಾಗಿರುವ ಅನಾಹುತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಪರಿಹಾರಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮವಹಿಸುವಂತೆ ಸೂಚನೆ ನೀಡಿದರು.

ಅಧಿಕಾರಿಗಳು ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಬೆಳೆ ಹಾನಿಗೆ ಸಂಬಂಧಿಸಿದಂತೆ ಆದಷ್ಟು ಶೀಘ್ರ ವರದಿ ಸಲ್ಲಿಕೆ ಮಾಡಬೇಕು ಎಂದು ಸೂಚನೆ ನೀಡಿದ್ದು, ಮಳೆಹಾನಿ ತಡೆಯುವ ಸಂಬಂಧ ಇನ್ನಷ್ಟು ಕ್ರಮವಹಿಸುವಂತೆ ಸೂಚನೆ ನೀಡಿದರು.

58ರಷ್ಟು ಹೆಚ್ಚುವರಿ ಮಳೆ:

ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಅ.1ರಿಂದ 25ರ ವರೆಗೆ ರಾಜ್ಯದಲ್ಲಿ ಸರಾಸರಿ 181 ಮಿಮೀ ಮಳೆಯಾಗಿದೆ. ಈ ಅವಧಿಯ ವಾಸ್ತವಿಕ ಸರಾಸರಿ ಮಳೆ ಪ್ರಮಾಣ 114 ಮಿಮೀ ಆಗಿದ್ದು, ಶೇ.58ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ.ಮುಂಗಾರು ಅವಧಿಯಲ್ಲಿ ಅಂದರೆ ಜೂನ್ 1ರಿಂದ ಸೆ.30ರ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಮಳೆ 852 ಮಿಮೀ ಆಗಿದ್ದು, ಈ ಬಾರಿ 978 ಮಿಮೀ ಮಳೆ ದಾಖಲಾಗಿದೆ. ಮುಂಗಾರು ಅವಧಿಯಲ್ಲೂ ಶೇ.15ರಷ್ಟು ಹೆಚ್ಚು ವರಿ ಮಳೆಯಾಗಿತ್ತು.

ಹಿಂಗಾರು ಅವಧಿ ಯಲ್ಲಿ ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಈಗಾಗಲೇ ಮುನ್ಸೂಚನೆ ನೀಡಲಾಗಿದೆ ಎಂದರು. ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶವಿದ್ದು, ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಪಟಾಕಿ ದಾಸ್ತಾನು, ಮಾರಾಟ ಪ್ರಕ್ರಿಯೆಯಲ್ಲಿ ಸುರಕ್ಷತೆ ವಿಷಯದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ಇದನ್ನು ಓದಿ:ವಕ್ಫ್ ಅಸ್ತಿ ಪಟ್ಟಿ ಬಿಡುಗಡೆ ನಿಮ್ಮ ಸರ್ವೇ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

https://krushisanta.com/Waqf-property-list-released-Chcek-status-using-survey-number

ಇದನ್ನು ಓದಿ:ರೈತರೇ ನಿಮ್ಮ ಜಮೀನಿನ ಹೆಸರು ಬದಲಾಗಿದೆಯೇ? ವಕ್ಫ್ ಭೂಮಿ ಹೆಸರು ಬಂತು? 1200 ಎಕರೆ ನಿಮ್ಮದಲ್ಲ!

https://krushisanta.com/Waqf-name-changed-in-many-RTC-of-the-farmers

ಇದನ್ನು ಓದಿ:ನಿಮ್ಮ ಹೊಲದ ಮೇಲೆ ಸಾಲ ಎಷ್ಟು ಇದೆ ಆನ್ಲೈನ್ ನಲ್ಲಿ ಒಂದೇ ನಿಮಿಷದಲ್ಲಿ ಚೆಕ್ ಮಾಡಿ!

https://krushisanta.com/How-much-loan-is-on-your-own-land-search-it-by-Survey-number

ಇದನ್ನು ಓದಿ:ಈ ರೈತರ ಖಾತೆಗೆ 40,000 ಪರಿಹಾರ ಹಣ ಜಮ! ಒಂದು ಬಾರಿಯೂ ಜಮಾ ಆಗದಿದ್ದರೆ ಇಂದು ಮತ್ತೆ ನೀವು ಚೆಕ್ ಮಾಡಿ

https://krushisanta.com/Some-farmers-parihara-is-credited-about-40000-check-online

admin B.Sc(hons) agriculture College of agriculture vijayapura And provide consultant service