ಎಮ್ಮೆ ಅಥವಾ ಹಸು ಖರೀದಿ ಮಾಡಲು 65,000 ಸಹಾಯಧನ ನೀಡಲು ಅರ್ಜಿ ಆಹ್ವಾನ!
<ಎಮ್ಮೆ ಹಾಗೂ ಹಸು ಖರೀದಿ> < ಹೈನುಗಾರಿಕೆ ಪ್ರೋತ್ಸಾಹಧನ> < ಹೈನುಗಾರಿಕೆಗೆ ಪ್ರೋತ್ಸಾಹ ಧನ ಯೋಜನೆ> < ಎಮ್ಮೆ ಹಾಗೂ ಹಸು ಖರೀದಿಗೆ ಸಹಾಯಧನ>
ಜು.18- ಜಿಲ್ಲೆಯಲ್ಲಿ 2024-25ನೇ ಸಾಲಿನ ಹೈನುಗಾರಿಕೆ ಪ್ರೋತ್ಸಾಹಿಸಲು ಹಸು, ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ರೈತ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಶೇ 6ರ ಬಡ್ಡಿಯಲ್ಲಿ ಸಹಾಯಧನ ನೀಡಲಾಗುವುದು.
ಏನಿದು ಸಹಾಯಧನ ಇದನ್ನು ಯಾವುದಕ್ಕೆ?
ಪ್ರಸಕ್ತ ಸಾಲಿನಲ್ಲಿ ಹೈನುಗಾರಿಕೆಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ಪ್ರತಿ ಫಲಾನುಭವಿಗಳಿಗೆ ಗರಿಷ್ಠ 65 ಸಾವಿರ ಸಾಲದ ಮೊತ್ತಕ್ಕೆ ಶೇ 6 ಬಡ್ಡಿ ಸಹಾಯಧನ (3,625) ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಈ ಕಾರ್ಯಕ್ರಮವನ್ನು ವಾಣಿಜ್ಯ ಬ್ಯಾಂಕ್‌ಗಳ ಸಮನ್ವಯದೊಂದಿಗೆ ಅನುಷ್ಟಾನಗೊಳಿಸಲು ಸೂಚಿಸಲಾಗಿದೆ. 2024 ನೇ ಸಾಲಿನಲ್ಲಿ ಹೈನುಗಾರಿಕೆಗೆ ರಾಷ್ಟ್ರೀಕೃತ, ಗ್ರಾಮೀಣ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ರೈತ ಮಹಿಳೆಯರು ಸದುಪಯೋಗ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವಿಳಾಸ?
ಮಾಹಿತಿಗೆ: ತಾಲ್ಲೂಕುಗಳ ಮುಖ್ಯ ಪಶುವೈದ್ಯಾಧಿಕಾ- ರಿಗಳು (ಆಡಳಿತ), ಪಶು ಆಸ್ಪತ್ರೆ, ಗದಗ, ಮುಂಡರಗಿ, ನರಗುಂದ, ರೋಣ, ಗಜೇಂದ್ರಗಡ, ಶಿರಹಟ್ಟಿ, ಲಕ್ಷ್ಮೀಶ್ವರ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಉಪ ನಿರ್ದೇಶಕರು ಪಶುಪಾಲನಾ ಮತ್ತು ಪಶು ವೈದ್ಯಕಿಯ ಸೇವಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಮ್ಮೆ ಅಥವಾ ಹಸು ಖರೀದಿ ಯೋಜನೆ?
6% ಬಡ್ಡಿ ಸಹಾಯಧನ ನೀಡುವ ಯೋಜನೆ: ರೈತ ಮಹಿಳೆಯರಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಸು/ಎಮ್ಮೆ ಖರೀದಿಗಾಗಿ ಪಡೆಯುವ ಸಾಲದ (ರೂ. 65000/-) ಮೇಲಿನ ಬಡ್ಡಿಯನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ 6% ಬಡ್ಡಿ ಸಹಾಯಧನ ನೀಡಲಾಗುವುದು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ Reception ಸಂಖ್ಯೆ: 080-23412797
ಯೋಜನೆಯ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಮೇಲುಗಡೆ ನೀಡಿದ್ದೇವೆ ಇದರ ಸೌಲಭ್ಯವನ್ನು ಪ್ರತಿಯೊಬ್ಬರು ತಾವು ಪಡೆದುಕೊಳ್ಳಬೇಕು ಮತ್ತು ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ನಿಖರವಾಗಿ ಗೊತ್ತಿರುವುದಿಲ್ಲ ಹೀಗಾಗಿ ಮೇಲೆ ನೀಡಿರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ನಿಗದಿತ ದಾಖಲೆಗಳನ್ನು ನೀವು ಕೇಳಿ ತಿಳಿದುಕೊಳ್ಳಬಹುದು ಅಥವಾ ನಿಮ್ಮ ಹತ್ತಿರದ ಪಶು ವೈದ್ಯಕೀಯ ಆಸ್ಪತ್ರೆಗೆ ತಕ್ಷಣವಾಗಿ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.
ಈಗಾಗಲೇ ಯೋಜನೆಯ ವರದಿ ತಿಳಿಸಿದ ಹಾಗೆ 65,000 ನೀವು ಎಮ್ಮೆ ಅಥವಾ ಹಸು ಖರೀದಿ ಯಾವುದಾದರೂ ಮಾಡಬಹುದು ಆದರೆ ಆ ಹಣದಲ್ಲಿ ಆರು ಪರ್ಸೆಂಟ್ ದಷ್ಟು ಬಡ್ಡಿ ಸಹಾಯಧನ ಯೋಜನೆ ಅಡಿ ಈ ಒಂದು ಸೌಲಭ್ಯವು ಕೇವಲ ಮಹಿಳೆಯರಿಗೆ ಮಾತ್ರ ನೀಡಲಾಗುವುದು ಪ್ರತಿಯೊಬ್ಬರು ಹೈನುಗಾರಿಕೆ ಮಾಡಲು ಆಸಕ್ತಿ ಹೊಂದಿರುತ್ತಾರೆ ಮತ್ತು ಮಹಿಳೆಯರಿಗೆ ತಮಗೆ ಅನುಕೂಲವಾಗಲು ಈ ಸೌಲಭ್ಯವನ್ನು ರಾಜ್ಯ ಸರ್ಕಾರದಿಂದ ಜಾರಿಗೆ ತರಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ ಮಾಡಿಲ್ಲ ಸಾಮಾನ್ಯವಾಗಿ ಅರ್ಜಿಗಳು ಕರೆದ ನಂತರ 15 ದಿನಗಳ ಒಳಗಾಗಿ ಅರ್ಜಿಯನ್ನು ಕೊನೆಯ ದಿನಾಂಕವೆಂದು ಪ್ರಕಟಣೆ ಮಾಡುತ್ತಾರೆ ನಮಗೆ ತಿಳಿದ ಹಾಗೆ ಆಗಸ್ಟ್ ಹತ್ತಿರ ಒಳಗಾಗಿ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಹೇಳಬಹುದು. ಈ ಸೌಲಭ್ಯವು ಪತ್ರಿಕೆಯಲ್ಲಿ ಪ್ರಕಟಣೆ ವಾಗಿದ್ದು ಕೂಡಲೇ ನೀವು ಸಂಬಂಧಪಟ್ಟ ಇಲಾಖೆಗೆ ಭೇಟಿ ನೀಡಿ ಇದರ ಸೌಲಭ್ಯ ಪಡೆದುಕೊಳ್ಳಬಹುದು ಮತ್ತು ಕರ್ನಾಟಕದಲ್ಲಿ ಸದ್ಯಕ್ಕೆ ಗದಗ್ ಜಿಲ್ಲೆಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಮತ್ತು ಉಳಿದ ಜಿಲ್ಲೆಗಳಲ್ಲಿ ಸ್ವಲ್ಪ ದಿನಗಳಲ್ಲಿ ಈ ಯೋಜನೆಗೆ ಅರ್ಜಿ ಕರೆಯಲಾಗುವುದು ಮತ್ತು ನೀವು ನಿಮ್ಮ ಇಲಾಖೆಯ ಸಂಪರ್ಕದಲ್ಲಿ ಇರುವುದು ಒಳ್ಳೆಯದು.
ಇದನ್ನು ಓದಿ:ಪಂಪ್ಸೆಟ್ಗಳಿಗೂ ಆಧಾರ್ ಲಿಂಕ್ ಕಡ್ಡಾಯ! ಹೊಸ ರೂಲ್ಸ್ ಇಲ್ಲದಿದ್ದರೆ ಬಿಲ್ ಬರುವುದು ಗ್ಯಾರಂಟಿ
https://krushisanta.com/It-is-mandatory-to-link-your-Aadhar-card-to-borewell-motor-IP-RR-Number
ಇದನ್ನು ಓದಿ:ಇಲಾಖೆಯಿಂದ ರೈತರಿಗೆ ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ನೀಡಲು ಅರ್ಜಿ ಅಹ್ವಾನ
https://krushisanta.com/Get-your-Tractor-in-subsidy-apply-before-last-date
ಇದನ್ನು ಓದಿ:ಮನೆಗೆ ಉಚಿತ ಕರೆಂಟ್ ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಆಹ್ವಾನ
https://krushisanta.com/Invited-for-Free-supply-electricity-to-the-home
ಇದನ್ನು ಓದಿ:ರೈತರ ಈ ಖಾತೆಗಳಿಗೆ ಹೆಚ್ಚುವರಿ ಬರ ಪರಿಹಾರ ಹಣ ಬಿಡುಗಡೆ? ಮೊಬೈಲ್ ನಂಬರ್ ಇದ್ದರೆ ಸಾಕು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಬಹುದು
https://krushisanta.com/Extra-parihara-payment-amount-credit-Please-check-using-this-link