35% ಸಬ್ಸಿಡಿ ಯಲ್ಲಿ ಇಲಾಖೆಯಿಂದ ರೈತರಿಗೆ ಟ್ರ್ಯಾಕ್ಟರ್ ನೀಡಲು ಅರ್ಜಿ ಆಹ್ವಾನ!
<ಟ್ರಾಕ್ಟರ್ ಸಹಾಯಧನ> <ರೈತರಿಗೆ ಟ್ರ್ಯಾಕ್ಟರ್ ಯೋಜನೆ > <ರೈತರಿಗೆ ಟ್ರ್ಯಾಕ್ಟರ್ ಯೋಜನೆ ಸಹಾಯಧನ> <ಟ್ರ್ಯಾಕ್ಟರ್ ಯೋಜನೆ ಕರ್ನಾಟಕ> <ಟ್ರ್ಯಾಕ್ಟರ್ ಯೋಜನೆ ಸಬ್ಸಿಡಿ ಸಹಾಯಧನ ಕರ್ನಾಟಕ>
ಆತ್ಮೀಯ ರೈತ ಬಾಂಧವರೇ ತೋಟಗಾರಿಕೆ ಇಲಾಖೆಯಿಂದ ಮಿನಿ ಟ್ರಾಕ್ಟರ್ ನೀಡಲು ರೈತರಿಂದ ಅರ್ಜಿ ಆಹ್ವಾನಿಸಿದೆ ರೈತರು ಇನ್ನೂ ಅರ್ಜಿ ಸಲ್ಲಿಸಲು ಮಾತ್ರ ಬಾಕಿ ಉಳಿದಿವೆ ಬಹಳಷ್ಟು ಕರ್ನಾಟಕದ ತೋಟಗಾರಿಕಾ ಇಲಾಖೆಗಳಲ್ಲಿ ಜುಲೈ 25 ಕೊನೆಯ ದಿನಾಂಕ ಎಂದು ಹೇಳಿದ್ದಾರೆ ಮತ್ತು ಇನ್ನೊಂದು ಕೆಲವೊಂದು ಕೊನೆಯ ದಿನಾಂಕವಾಗಿದೆ ಯಾರಿಗೆಲ್ಲ ನಿಮಗೆ ಮಿನಿ ಟ್ರ್ಯಾಕ್ಟರ್ ಬೇಕಾಗಿದೆ ಮತ್ತು ಅವಶ್ಯಕತೆ ಇದೆ ಅವರೆಲ್ಲರೂ ಸಹ ನೀವು ನಿಮ್ಮ ಹತ್ತಿರ ತೋಟಗಾರಿಕಾ ಇಲಾಖೆಯಲ್ಲಿ ಹೋಗಿ ಅರ್ಜಿಯನ್ನ ಬೇಗನೆ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಆಯ್ಕೆ ಹೇಗೆ?
ಅರ್ಜಿ ಸಲ್ಲಿಸುವುದು ಸಾಮಾನ್ಯವಾಗಿ ಪ್ರತಿಯೊಬ್ಬರು ನಿಮಗೆ ಬೇಕಾದವರು ಯಾರಿಗೆಲ್ಲ ಮಿನಿ ಟ್ರಾಕ್ಟರ್ ಅವಶ್ಯಕತೆ ಇದೆ ನಿಮಗೆ ನೀವು ಅರ್ಜಿಯನ್ನು ಉಚಿತವಾಗಿ ಯಾವುದೇ ರೀತಿ ಹಣವಿಲ್ಲದೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅರ್ಜಿ ಆಯ್ಕೆ ಹೇಗಿರುತ್ತದೆ ಎಂದರೆ, ಇದು ಸ್ವಲ್ಪ ವಿಚಾರಣೆ ಮಾಡುವಂತದ್ದು ತೋಟಗಾರಿಕಾ ಇಲಾಖೆಗಳಲ್ಲಿ ಬಹಳಷ್ಟು ಮಿನಿ ಟ್ರ್ಯಾಕ್ಟರ್ ಗಳು ಬಂದಿರುವುದಿಲ್ಲ ಕೆಲವೊಂದು ಮಾತ್ರ ಮಿನಿ ಟ್ರ್ಯಾಕ್ಟರ್ ಗಳು ಬಂದಿರುತ್ತವೆ. ಹೀಗಾಗಿ ನೀವು ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾದರೆ ಲಾಟರಿ ಮೂಲಕ ಅಥವಾ ಆದ್ಯತೆ ಮೇರೆಗೆ ಅಂದರೆ ಯಾರು ಮೊದಲು ಅರ್ಜಿ ಸಲ್ಲಿಸುತ್ತಾರೆ ಅವರಿಗೆ ಮೊದಲು ಸಬ್ಸಿಡಿ ಹಣವನ್ನು ಬಿಡುಗಡೆ ಮಾಡುವ ಕಾರ್ಯವನ್ನು ತೋಟಗಾರಿಕಾ ಇಲಾಖೆಯ ಸಂಬಂಧ ಪಟ್ಟಂತೆ ಆಯಾ ಅರ್ಜಿಗಳ ಆಧಾರದ ಮೇಲೆ ಅವಲಂಬನೆಯಾಗಿರುತ್ತದೆ.
ಅರ್ಜಿ ಸಲ್ಲಿಸಲು ಸರಿಯಾದ ದಾಖಲೆಗಳು ಯಾವುವು?
ತೋಟಗಾರಿಕಾ ಇಲಾಖೆಯಿಂದ ನೀವು ಯಾವುದೇ ರೀತಿ ಸಹಾಯಧನ ಪಡೆಯಬೇಕಾದರೆ ನಿಮ್ಮ ಜಮೀನಿನ ಪಹಣಿ ಪತ್ರದ ದಾಖಲೆಗಳು ಖಂಡಿತವಾಗಿಯೂ ಮತ್ತು ಕಡ್ಡಾಯವಾಗಿ ಸರಿಯಾದ ದಾಖಲೆಗಳು ಬೇಕಾಗುತ್ತವೆ ಪಹಣಿ ಪತ್ರ ಆಗಿರಬಹುದು ನಂತರ ಖಾತೆ ಉತಾರಿ ಆಗಿರಬಹುದು ಇದನ್ನು ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳು ಬರೆದುಕೊಡುತ್ತಾರೆ ಅದಾದ ನಂತರ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕ ಎರಡು ದಾಖಲೆಗಳನ್ನು ಸೇರಿಸಿ ಒಟ್ಟಾರೆಯಾಗಿ ಈಗ ನಿಮ್ಮ ಪಹಣಿ ಪತ್ರ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ಎರಡು ಭಾವಚಿತ್ರ ಮತ್ತು ಖಾತೆ ಉತ್ತಾರಿ ಈ ಎಲ್ಲ ದಾಖಲೆಗಳ ಒಂದು ಪ್ರತಿಯನ್ನು ನೀವು ಇಲಾಖೆಗೆ ಮುಟ್ಟಿಸಬೇಕು ಇದರೊಂದಿಗೆ ನೀವು ಅರ್ಜಿ ನಮೂನೆಯನ್ನು ಸಹ ತುಂಬಬೇಕು ಅಲ್ಲಿ ಕೊಟ್ಟು ಬರಬೇಕು.
ಮಿನಿ ಟ್ರ್ಯಾಕ್ಟರ್ ತೋಟಗಾರಿಕಾ ಇಂದ ನೀಡುವ ಸಹಾಯಧನ ಎಷ್ಟು?
ತೋಟಗಾರಿಕೆಯಲ್ಲಿ ಯಾಂತ್ರೀಕರಣ ಇದಕ್ಕೆ ಬಂದಿರುವ ಅನುದಾನದಲ್ಲಿ ಗರಿಷ್ಠ ನೀವು ಟ್ರ್ಯಾಕ್ಟರ್ (20ಹೆಚ್.ಪಿ.ವರೆಗೆ) ಸಾಮಾನ್ಯ ರೈತರಿಗೆ ಶೇ. 25 ರಂತೆ ಗರಿಷ್ಠ ರೂ.0.75 ಲಕ್ಷಗಳು ಮತ್ತು ಪರಿಶಿಷ್ಠ ಜಾತಿ/ಪಂಗಡ/ಸಣ್ಣ/ಅತಿ ಸಣ್ಣ/ಮಹಿಳೆಯರಿಗೆ ಶೇ.35 ರಂತೆ ಗರಿಷ್ಠ ರೂ.1.00 ಲಕ್ಷಗಳ ಸಹಾಯಧನವನ್ನು ಪ್ರತಿ ಘಟಕಕ್ಕೆ ನೀಡಲಾಗುತ್ತದೆ.
ಇಷ್ಟು ಮಾತ್ರ ಇಲಾಖೆ ಸಹಾಯಧನವನ್ನು ನಿಮಗೆ ನೀಡುತ್ತದೆ ಉಳಿದ ಹಣವನ್ನು ರೈತರು ಪಾವತಿ ಮಾಡಬೇಕಾಗುತ್ತದೆ ಇದಕ್ಕೆ ಗರಿಷ್ಠ ಶೇಕಡ 35% ಗಿಂತ ಹೆಚ್ಚು ಸಹಾಯಧನ ನೀಡಿಲ್ಲ ಏಕೆಂದರೆ ಯಂತ್ರಗಳು ಬಹು ದುಬಾರಿಯಾಗಿರುವುದರಿಂದ ಸರ್ಕಾರವು ಕೂಡ ಇದನ್ನು ಕಡಿಮೆ ಸಬ್ಸಿಡಿಯಲ್ಲಿ ನೀಡುತ್ತಿದೆ ಮತ್ತು ಇದರಿಂದ ನೀವು ಮರಳಿ ಲಾಭವನ್ನು ಪಡೆಯುವ ಅವಕಾಶವಿರುತ್ತದೆ ಉದಾಹರಣೆಗೆ ನೀವು ನಿಮ್ಮ ಜಮೀನಿನ ಉಳಿಮೆ ವ್ಯವಸಾಯಗಳನ್ನು ಮಾಡಿದ ನಂತರ ಬೇರೆ ಬೇರೆ ಜಮೀನುಗಳಲ್ಲಿ ನೀವು ಬಾಡಿಗೆ ಹೋಗೋ ಮೂಲಕ ಸಹ ಇದರ ಹಣವನ್ನು ಮರಳಿ ಮತ್ತೆ ನೀವು ತೆಗೆಯಬಹುದು.
ಇದನ್ನು ಓದಿ:ಮನೆಗೆ ಉಚಿತ ಕರೆಂಟ್ ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಆಹ್ವಾನ
https://krushisanta.com/Invited-for-Free-supply-electricity-to-the-home
ಇದನ್ನು ಓದಿ:ರೈತರ ಈ ಖಾತೆಗಳಿಗೆ ಹೆಚ್ಚುವರಿ ಬರ ಪರಿಹಾರ ಹಣ ಬಿಡುಗಡೆ? ಮೊಬೈಲ್ ನಂಬರ್ ಇದ್ದರೆ ಸಾಕು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಬಹುದು
https://krushisanta.com/Extra-parihara-payment-amount-credit-Please-check-using-this-link
ಇದನ್ನು ಓದಿ:ಸರ್ವರ್ ಓಪನ್ ಆಗಿದೆ ಮೊಬೈಲ್ನಲ್ಲಿ ನಿಮ್ಮ ಜಮೀನಿಗೆ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ನೀವೇ ಮಾಡಿ https://krushisanta.com/Server-is-open--for-to-link-RTC-to-farmer-Aadhar-card
ಇದನ್ನು ಓದಿ: 17ನೇ ತಾರೀಖಿನವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ https://krushisanta.com/Up-to-17-nth-of-July-there-is-a-chances-of-rainfall-in-Karnataka