ಉಚಿತ ಕರೆಂಟ್ ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಆಹ್ವಾನ!
<ಉಚಿತ ಕರೆಂಟ್ > <ಉಚಿತ ಕರೆಂಟ್ ಕನೆಕ್ಷನ್>
ಗೃಹ ಜ್ಯೋತಿ ಯೋಜನೆಯಡಿ ನೋಂದಣಿಯಾಗದೆ ಬಾಕಿ ಉಳಿದಿರುವ ಅರ್ಹ ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳುವಂತೆ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಉಚಿತ ಕರೆಂಟ್ ಸ್ಕೀಮ್ ಗೆ ಅರ್ಜಿ ಸಲ್ಲಿಸುವುದು ಪ್ರಾರಂಭವಾಗುವುದು?
ಕರ್ನಾಟಕ ಸರ್ಕಾರವು ಗೃಹ ಜ್ಯೋತಿ ಯೋಜನೆಯನ್ನು 2023ರ ಜುಲೈ 01 ರಿಂದ ಜಾರಿಮಾಡಲಾಗಿದ್ದು, ಈವರೆಗೆ ಸುಮಾರು ಶೇಕಡಾ 96% ಗ್ರಾಹಕರು ಯೋಜನೆಯ ಫಲವನ್ನು ಸದ್ಬಳಕೆ ಮಾಡಿಕೊಂಡಿರುತ್ತಾರೆ. ಇನ್ನೂ ಕೆಲ ಗ್ರಾಹಕರು ಯೋಜನೆಗೆ ನೋಂದಾಯಿಸದೆ ಬಾಕಿ ಉಳಿದಿದ್ದು, ಗ್ರಾಹಕರಿಗೆ ಕೆಲವು ಮಾನದಂಡನೆಗಳೊಂದಿಗೆ ಉಚಿತ ವಿದ್ಯುತ್ ಯೋಜನೆಯ ಫಲವನ್ನು ಪಡೆಯಲು ಸೇವಾಸಿಂಧುವಿನ ಮೂಲಕ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಎಷ್ಟು ಯೂನಿಟ್ ಉಚಿತ ವಿದ್ಯುತ್ ಅರ್ಜಿಯಲ್ಲಿ ಸಿಗಲಿದೆ?
ರಾಜ್ಯದಲ್ಲಿನ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯುನಿಟ್‌ಗಳವರೆಗೆ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23 ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ + ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿ ಗೃಹಬಳಕೆಯ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲು ಅನುಮೋದಿಸಿದೆ. ಭಾಗ್ಯ ಜ್ಯೋತಿ/ ಕುಟಿರ ಜ್ಯೋತಿ ಗ್ರಾಹಕ- ರಿಗೆ ರಾಜ್ಯದ ಸರಾಸರಿ 53 ಯುನಿಟ್ ಬಳಕೆಯ ಮೇಲೆ + ಶೇ10 ರಷ್ಟು ಹೆಚ್ಚಿನ ಮಿತಿಯನ್ನು ಅನುಮತಿಸಿ ಉಚಿತ ವಿದ್ಯುತ್ ನೀಡಲು ಅನುಮೋದಿಸಿದೆ. ಅಮೃತಜ್ಯೋತಿ ಯೋಜನಡಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡ ಗ್ರಾಹಕ- ರಿಗೆ 75 ಯುನಿಟ್ ಬಳಕೆಯ ಮೇಲೆ + ಶೇ10% ರಷ್ಟು ಹೆಚ್ಚಿನ ಮಿತಿಯನ್ನು ಅನುಮತಿಸಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ನೀಡಲು ಅನುಮೋದಿಸಿದೆ.
ಹೊಸ ಸಂಪರ್ಕ ಗ್ರಾಹಕರಿಗೆ ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹಬಳಕೆದಾರರ ಸರಾಸರಿ ಬಳಕೆಯ ಮಾಸಿಕ 53 ಯುನಿಟ್‌ಗಳು ಉಚಿತ ವಿದ್ಯುತ್ ನೀಡಲು ಅನುಮೋದಿಸಿದೆ. ಬಳಕೆ ಇತಿಹಾಸ ಇಲ್ಲದಿರುವ ಬಳಕೆದಾರ- ರಿಗೆ ಸರಾಸರಿ ಬಳಕೆಯ ಮಾಸಿಕ 53 ಯುನಿಟ್‌ಗಳ ಉಚಿತ ವಿದ್ಯುತ್ ನೀಡಲು ಅನುಮೋದಿಸಿದೆ. ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಯ ಲಾಭ ಪಡೆಯಲು ಅರ್ಹ https://sevasindhugs.karnataka.gov.in/ ನಲ್ಲಿ ನೋಂದಾಯಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನೀವು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು, ಅರ್ಜಿಯನ್ನು ಸಲ್ಲಿಸಲು ನಿಮ್ಮ ಮನೆಗೆ ಮೀಟರ್ ಇರಲೇಬೇಕು ಕರೆಂಟ್ ಮೀಟರ್ ಇಲ್ಲದೆ ಇದ್ದರೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಒಂದು ವೇಳೆ ಸಲ್ಲಿಸಿದರು ಸಹ ನಿಮಗೆ ಯಾವುದೇ ರೀತಿಯ ಲಾಭ ಸಿಗುವುದಿಲ್ಲ ಅದಕ್ಕಾಗಿ ನೀವು ಈಗಾಗಲೇ ಕರ್ನಾಟಕದ ಘೋಷಣೆ ಮಾಡಿರುವ ಗ್ಯಾರಂಟಿಗಳಲ್ಲಿ ಇದು ಕೂಡ ಒಂದು ಹೀಗಾಗಿ ಸೌಲಭ್ಯವನ್ನು ಪಡೆದುಕೊಳ್ಳಲು ನೀವು ಮಿಸ್ ಮಾಡದೆ ಅರ್ಜಿಯನ್ನು ಸಲ್ಲಿಸಬೇಕು.
ಇದನ್ನು ಓದಿ: ಸರ್ವರ್ ಓಪನ್ ಆಗಿದೆ ಮೊಬೈಲ್ನಲ್ಲಿ ನಿಮ್ಮ ಜಮೀನಿಗೆ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ನೀವೇ ಮಾಡಿ https://krushisanta.com/Server-is-open--for-to-link-RTC-to-farmer-Aadhar-card
ಇದನ್ನು ಓದಿ: 17ನೇ ತಾರೀಖಿನವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ https://krushisanta.com/Up-to-17-nth-of-July-there-is-a-chances-of-rainfall-in-Karnataka
ಇದನ್ನು ಓದಿ:25 ಮೆಟ್ರಿಕ್ ಟನ್ ಈರುಳ್ಳಿ ಶೇಖರಣ ಸಂಗ್ರಹಣ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ
https://krushisanta.com/Application-invited-for-onion-storage-house
ಇದನ್ನು ಓದಿ:ಅಂಗನವಾಡಿ ಸಹಾಯಕ ಕಾರ್ಯಕರ್ತೆಯರ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನ
https://krushisanta.com/Application-invited-from-Anganwadi-workers