ತೋಟಗಾರಿಕಾ ಇಲಾಖೆಯಿಂದ ಈರುಳ್ಳಿ ಶೆಡ್ ನಿರ್ಮಾಣ ಸಹಾಯಧನ ನೀಡಲು ಅರ್ಜಿ ಆಹ್ವಾನ!

<ಈರುಳ್ಳಿ ಘಟಕ> <ಈರುಳ್ಳಿ ಘಟಕ ಸ್ಥಾಪನೆಗೆ ಸಹಾಯಧನ> < ಉಳ್ಳಾಗಡ್ಡಿ ಶೆಡ್ > <ಉಳ್ಳಾಗಡ್ಡಿ ಶೆಡ್ ನಿರ್ಮಾಣ> <ಉಳ್ಳಾಗಡ್ಡಿ ಷಡ್ ನಿರ್ಮಾಣ>

Jul 14, 2024 - 08:26
 0
ತೋಟಗಾರಿಕಾ ಇಲಾಖೆಯಿಂದ  ಈರುಳ್ಳಿ ಶೆಡ್ ನಿರ್ಮಾಣ ಸಹಾಯಧನ ನೀಡಲು ಅರ್ಜಿ ಆಹ್ವಾನ!

ಆತ್ಮೀಯ ರೈತ ಬಾಂಧವರೇ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ ವಿವಿಧ ಯೋಜನೆಗಳಡಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. 2024-25ನೇ ಸಾಲಿಗೆ ಇಲಾಖೆಯ ವಿವಿಧ ಯೋಜನೆಗಳಾದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ, ಸಂರಕ್ಷಿತ ಬೇಸಾಯ, ನೀರು ಸಂಗ್ರಹಣಾ ಘಟಕ, ಕೋಲ್ಲೋತ್ತರ ನಿರ್ವಹಣೆ, ಯಾಂತ್ರೀಕರಣ ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಘಟಕ ಅಳವಡಿಸಿಕೊಳ್ಳಲು ಇಚ್ಚಿಸುವ ರೈತರು ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಸೋಲಾರ ಪಂಪ್‌ಸೆಟ್, ಯಾಂತ್ರೀಕರಣ ಅಳವಡಿಸಿಕೊಳ್ಳುವ ರೈತರು ಇಲಾಖಾ ಮಾರ್ಗಸೂಚಿಯನ್ವಯ ಅರ್ಜಿ ಸಲ್ಲಿಸಬಹುದು.

ಫಲಾನುಭವಿಯ ಆಯ್ಕೆಯನ್ನು ಅನುದಾನದ ಲಭ್ಯತೆ ಮತ್ತು ಜೇಷ್ಠತೆ ಆಧಾರದ ಮೇಲೆ ನಡೆಸಲಾಗುವುದು. ಇಲಾಖೆಯ ಮಾರ್ಗಸೂಚಿಯನ್ವಯ ಶೇಕಡಾವಾರು ಸಹಾಯಧನ ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಜುಲೈ 23 ಕೊನೆಯ ದಿನವಾಗಿದೆ ಎಂದು ಯಲಬುರ್ಗಾದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈರುಳ್ಳಿ ಶಾಡ್ ನಿರ್ಮಾಣ ಮಾಡುವುದು ಅತ್ಯಂತ ಪ್ರಮುಖವಾದ ರೈತರಿಗೆ ನಿಮ್ಮ ನಿಮ್ಮ ಭಾಗಗಳಲ್ಲಿ ಸಾಮಾನ್ಯವಾಗಿ ಕರ್ನಾಟಕದಲ್ಲಿ ಬಹಳಷ್ಟು ಈರುಳ್ಳಿ ಬೆಳೆಯಲಾಗುತ್ತದೆ ಹೀಗಾಗಿ ಈರುಳ್ಳಿ ಬೆಲೆ ಇಲ್ಲದೆ ಇರುವಾಗ ಅದನ್ನು ನಾವು ಒಂದು ಕಡೆ ಹಾಕಿ ಚೆನ್ನಾಗಿ ಸ್ಟೋರ್ ಮಾಡಿ ಇಡಬೇಕು ಅದಕ್ಕಾಗಿ ಈರುಳ್ಳಿ ಸಂಗ್ರಹಣ ಘಟಕ ಅಥವಾ ಈರುಳ್ಳಿ ಸಂಸ್ಕರಣ ಘಟಕ ಅವಶ್ಯಕತೆ ಇರುವುದರಿಂದಾಗಿ ನಾವು ಸರ್ಕಾರದ ಸಹಾಯಧನದಲ್ಲಿ ಇದನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಅರ್ಜಿಯನ್ನು ಕೂಡಲೇ ಕೆಳಗಡೆ ನಿಗದಿ ಮಾಡಿರುವ ದಿನಾಂಕದ ಒಳಗಡೆ ಕೊಡಬೇಕು.

ಈರುಳ್ಳಿ ಶೇಖರಣ ಘಟಕದ ಸಹಾಯಧನದ ವಿವರ?

ಕಡಿಮೆ ವೆಚ್ಚದ ಈರುಳ್ಳಿ ಶೇಖರಣಾ ಘಟಕ

(25 ಮೆ.ಟನ್)

ಕನಿಷ್ಟ 25 ಮೆಟ್ರಿಕ್ ಟನ್ ಶೇಖರಣಾ ಸಾಮರ್ಥ್ಯವಿರುವ ಘಟಕಕ್ಕೆ ರೂ 1.75 ಲಕ್ಷಗಳ ವರೆಗೆ ಯೋಜನಾ ಪ್ರಸ್ತಾವನೆ ವೆಚ್ಚವು ಇದ್ದು, ಇದರಲ್ಲಿ ಶೇ. 50 ರಂತೆ ಗರಿಷ್ಠ ರೂ. 0.875 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ.

 ಅರ್ಜಿಯನ್ನು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಸಲ್ಲಿಸಬೇಕು ತೋಟಗಾರಿಕಾ ಇಲಾಖೆಯಲ್ಲಿ ಸದ್ಯಕ್ಕೆ ಸುಮಾರು ಹಲವಾರು ಯೋಜನೆಗಳಿಗೆ ಅರ್ಜಿಯನ್ನ ಆಹ್ವಾನಿಸಲಾಗಿದೆ ಅದರಲ್ಲಿ ನಿಮಗೆ ಅವಶ್ಯಕತೆ ಇರುವ ಯಾವುದಾದರೂ ಮೇಲೆ ತಿಳಿಸಿರುವ ಸಹಾಯಧನಕ್ಕಾಗಿ ನೀವು ಅರ್ಜಿ ಸಲ್ಲಿಸಬಹುದು ನಾವು ನಿಮಗೆ ಈರುಳ್ಳಿ ಘಟಕ ಸ್ಥಾಪನೆಗೆ ಒಂದು ಅರ್ಜಿಯನ್ನು ಸಲ್ಲಿಸುವುದು ಯಾವ ರೀತಿಯಾಗಿದೆ ಎಂದು ಮೇಲುಗಡೆ ತೋರಿಸಿದ್ದೇವೆ.

 ಬೇರೆ ಬೇರೆ ತೋಟಗಾರಿಕಾ ಇಲಾಖೆಗಳಲ್ಲಿ ಅಂದರೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ನಿಮ್ಮ ತೋಟಗಾರಿಕೆ ಇಲಾಖೆಗಳಿಗೆ ನೀವು ಭೇಟಿ ನೀಡಬೇಕು ಭೇಟಿ ನೀಡಿದ ನಂತರ ಅಲ್ಲಿಯ ಕೊನೆಯ ದಿನಾಂಕದ ಒಳಗಡೆ ನೀವು ಅರ್ಜಿಯನ್ನ ಸಲ್ಲಿಸಬೇಕು ಬಹಳಷ್ಟು ತೋಟಗಾರಿಕಾ ಇಲಾಖೆಗಳು ಜುಲೈ 30 ಕೊನೆಯ ದಿನಾಂಕವಾಗಿದ್ದು ಮತ್ತು ಜುಲೈ 25 ಸಹ ಕೆಲವೊಂದು ತೋಟಗಾರಿಕಾ ಇಲಾಖೆಯಲ್ಲಿ ಕೊನೆಯ ದಿನಾಂಕ ತೋಟಗಾರಿಕಾ ಬೆಳೆಗಳಿಗೆ ಅಥವಾ ತೋಟಗಾರಿಕೆಗೆ ಈ ವರ್ಷ ಬಂದಿರುವ ಸಹಾಯವನ್ನು ನೀಡಲು ಕೊನೆಯ ದಿನಾಂಕ ಎಂದು ಪ್ರಕಟಣೆ ಮಾಡಿದೆ.

ಇದನ್ನು ಓದಿ:ಅಂಗನವಾಡಿ ಸಹಾಯಕ ಕಾರ್ಯಕರ್ತೆಯರ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನ

https://krushisanta.com/Application-invited-from-Anganwadi-workers

ಇದನ್ನು ಓದಿ:ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಲು ಸಹಾಯಧನ ನೀಡಲು ಅರ್ಜಿ ಆಹ್ವಾನ

https://krushisanta.com/Application-invited-for-sheep-and-Goat-shed

ಇದನ್ನು ಓದಿ:ಇಲಾಖೆಯಿಂದ ಯಾಂತ್ರಿಕರಣ ಯೋಜನೆಯೆಲ್ಲಿ ಅರ್ಜಿ! ಜುಲೈ 30ರ ಒಳಗೆ ಅರ್ಜಿ ಸಲ್ಲಿಸಿದವರಿಗೆ ಸಿಗಲಿದೆ ಟ್ರ್ಯಾಕ್ಟರ್ ಅಥವಾ ಪವರ್ ಟಿಲ್ಲರ್

https://krushisanta.com/Application-invited-from-National-Horticulture-mission

ಇದನ್ನು ಓದಿ:ಎಲ್ಲಾ ರೈತರಿಗೂ ಬರ ಪರಿಹಾರ ಹಣ ಜಮಾ? ನಿಮಗೂ ಬಂತಾ ಸರ್ವೆ ನಂಬರ್ ಹಾಕಿ ಚೆಕ್ ಮಾಡಿ

https://krushisanta.com/Completely-drought-Parihar-hana-is-released-please-check-now-this-using-link

admin B.Sc(hons) agriculture College of agriculture vijayapura And provide consultant service