ಎಲ್ಲ ರೈತರಿಗೂ ಬರ ಪರಿಹಾರ ಹಣ ಜಮಾ! ನಿಮಗೂ ಬಂತಾ ಚೆಕ್ ಮಾಡಿ ನೋಡಿ!

<ಬರ ಪರಿಹಾರ ಜಮಾ> <ರೈತರ ಖಾತೆಗೆ ಉಳಿದ ಬರ ಪರಿಹಾರ ಜಮಾ> <ರೈತರ ಎಲ್ಲರಿಗೂ ಬರಗಾಲ ಪರಿಹಾರ ಹಣ ಜಮಾ> <ರೈತರ ಖಾತೆಗೆ ಬರ ಪರಿಹಾರ ಹಣ ಜಮಾ ಆಗಿದೆ> < ರೈತರೇ ಬರ ಪರಿಹಾರ ಸ್ಟೇಟಸ್> < ಸರ್ವೆ ನಂಬರ್ ಹಾಕಿ ಬರ ಪರಿಹಾರ ಸ್ಟೇಟಸ್ ಚೆಕ್ ಮಾಡಿ>

Jul 12, 2024 - 06:39
 0
ಎಲ್ಲ ರೈತರಿಗೂ ಬರ ಪರಿಹಾರ ಹಣ ಜಮಾ! ನಿಮಗೂ ಬಂತಾ ಚೆಕ್ ಮಾಡಿ ನೋಡಿ!

ಆತ್ಮೀಯ ರೈತ ಬಾಂಧವರೇ ಇಲ್ಲಿಯವರೆಗೆ ನಿಮಗೆ ಈಗಾಗಲೇ ಪರಿಹಾರ ಹಣ ಜಮಾ ಆಗಿದೆ ಆದರೆ ಬೇರೆಯವರಿಗೆ ಎಷ್ಟು ಬಂದಿದೆ ನಿಮಗೆಷ್ಟು ಬಂದಿದೆ ಆದರೆ ನೀವು ತಪ್ಪು ಮಾಡಿರುವುದು ಎಲ್ಲಿ? ಮತ್ತು ಅವರು ಸರ್ಕಾರದವರು ಯಾವ ಆಧಾರದ ಮೇಲೆ ಪರಿಹಾರ ಹಣವನ್ನು ನಿಮಗೆ ನೀಡಿದ್ದಾರೆ ಮುಂದಿನ ವರ್ಷ ಕೂಡ ಇದೇ ರೀತಿ ಆದರೆ ನಿಮಗೆ ಹೆಚ್ಚಿಗೆ ಪರಿಹಾರ ಬರಬೇಕಾದರೆ ಏನು ಮಾಡಬೇಕು? ಈ ಲೇಖನವನ್ನು ಓದಿ ತಿಳಿದುಕೊಳ್ಳಿ.

ರಾಜ್ಯ ಸರ್ಕಾರವು ರೈತರಿಗೆ ಒಟ್ಟಾರೆಯಾಗಿ ಎರಡು ಬಾರಿ ಹಣವನ್ನ ವರ್ಗಾವಣೆ ಮಾಡಿದೆ ಮೊದಲನೇ ಬಾರಿಗೆ ಹಣವನ್ನು ವರ್ಗಾವಣೆ ಮಾಡುವ ಉದ್ದೇಶ ಏನುತ್ತೆಂದರೆ ರಾಜ್ಯ ಸರ್ಕಾರದಲ್ಲಿ ಈಗಾಗಲೇ ತಮ್ಮ ಬಜೆಟ್ ಅನ್ನೆಲ್ಲ ಗ್ಯಾರಂಟಿ ಗಳಿಗೆ ಕೊಟ್ಟು ಕಡಿಮೆ ಹಣವನ್ನು ಮಾತ್ರ ರೈತರಿಗೆ ಇಟ್ಟಿದ್ದಾರೆ ಹೀಗಾಗಿ ಕೇವಲ ಅವರು ರೈತರಿಗೆ ಹೋಗಿ ಹಣ ತಲುಪುತ್ತದೆಯೋ ಇಲ್ಲವೆಂದು ಚೆಕ್ ಮಾಡಲು ರೂ.2000ಗಳನ್ನು ಪ್ರತಿ ರೈತರ ಖಾತೆಗೆ ಮೊದಲನೇ ಕಂತ ನೀಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಸುಮಾರು 3400 ಕೋಟಿ ರೂಪಾಯಿಗಳನ್ನ ಬಿಡುಗಡೆ ಮಾಡಿದ ನಂತರ ಮತ್ತೊಮ್ಮೆ ರೈತರ ಖಾತೆಗಳಿಗೆ ತಮ್ಮ ನಿಗದಿಪಡಿಸಿರುವಂತೆ ಹಣವನ್ನ ರೈತರ ಖಾತೆಗೆ ಸುಮಾರು ಎಕರೆಗೆ ಎಂಟೂವರೆ ಸಾವಿರದಿಂದ 12 ವರಿ ಸಾವಿರದವರೆಗೆ ಪ್ರತಿ ರೈತರ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ ಹಣ ಜಮಾ ಆಗದೇ ಇರುವುದಕ್ಕೆ ವಯಕ್ತಿಕ ರೈತರ ತಾಂತ್ರಿಕ ದೋಷಗಳು ಬ್ಯಾಂಕ್ ಶಾಖೆಗಳಲ್ಲಿ ಆಗಿರ್ಬಹುದು.

ನಿಮಗೆಷ್ಟು ಹಣ ಬಂತು? ಯಾವುದನ್ನು ನೋಡಿ ಹಣವನ್ನು ನಿಮಗೆ ನೀಡಿದ್ದಾರೆ?

ಹೌದು ರೈತ ಬಾಂಧವರೇ ಇವರು ಜಮಾ ಮಾಡಿರುವ ಪ್ರತಿ ಒಂದು ಹಣವನ್ನು ನಾವು ಗಮನಿಸಿದರೆ ನಿಮ್ಮ ಪಹಣಿ ಪತ್ರದಲ್ಲಿ ಯಾವ ಬೆಳೆಗಳು ದಾಖಲೆಯಾಗಿವೆ, ಅವುಗಳಿಗೆ ಮಾತ್ರ ಪರಿಹಾರ ಹಣವನ್ನು ನೀಡಿದ್ದಾರೆ ನಿಮ್ಮ ಪಹಣಿ ಪತ್ರದಲ್ಲಿ ಬೆಳೆಗಳು ಯಾವ ಆಧಾರದ ಮೇಲೆ ಅಪ್ಡೇಟ್ ಆಗುತ್ತದೆ ಎಂದರೆ ನೀವು ಮಾಡಿರುವ ಬೆಳೆ ಸಮೀಕ್ಷೆಯಿಂದ ನಿಮ್ಮ ಪಹಣಿ ಪತ್ರದಲ್ಲಿ ಬೆಳೆಗಳು ಅಪ್ಡೇಟ್ ಆಗುತ್ತದೆ ಈ ಒಂದು ಕಾರಣದಿಂದಾಗಿ ನೀವು ಬೆಳೆ ಸಮೀಕ್ಷೆ ಮಾಡಿಸುವುದು ಕಡ್ಡಾಯವಾಗಬೇಕು ಮತ್ತು ನೀವು ಬೆಳೆ ಸಮೀಕ್ಷೆ ಮಾಡುವಾಗ ನಿಮ್ಮ ಹೊಲಗಳಲ್ಲಿರುವ ಬೆಳೆಗಳನ್ನು ಎಂಟ್ರಿ ಮಾಡಬೇಕು.

ಈ ರೀತಿಯಾಗಿ ಅವರು ನಿಮ್ಮ ಪಹಣಿ ಪತ್ರದಲ್ಲಿ ನಮದನೆಯಾಗಿರುವ ಬೆಳೆಗಳಿಗೆ ಮಾತ್ರ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ತಕ್ಷಣವಾಗಿ ಪ್ರತಿಯೊಬ್ಬರು ಬೆಳೆ ಸಮೀಕ್ಷೆ ತುಂಬಾ ಕಡ್ಡಾಯವಾಗಿದ್ದು ಮತ್ತು ಪ್ರಮುಖವಾಗಿದ್ದು ಪ್ರತಿಯೊಬ್ಬರೂ ಮಾಡಲೇಬೇಕು ಎಂದಲ್ಲ ನಾಳೆ ಒಂದು ವೇಳೆ ಮಳೆ ಹೆಚ್ಚಾದರೂ ಸರಕಾರ ಪರಿಹಾರ ನೀಡುತ್ತದೆ ಒಂದು ವೇಳೆ ಮಳೆ ಕಡಿಮೆಯಾದರೆ ಬರಗಾಲವಾದರೂ ಅದಕ್ಕೂ ಸಹ ಪರಿಹಾರ ನೀಡೇ ನೀಡುತ್ತದೆ ಆದರೆ ನೀವು ಎಂಟ್ರಿ ಮಾಡುವ ದಾಖಲೆಗಳು ಸರಿಯಾಗಿ ಮತ್ತು ನಿಖರವಾಗಿರಬೇಕು.

ನಿಮಗೆ ಬೇಕಾದ ಸರ್ವೆ ನಂಬರ ಹಾಕಿ ಯಾರಿಗೆ ಎಷ್ಟು ಹಣ ಜಮಾ ಆಗಿದೆ ಚೆಕ್ ಮಾಡಿ?

ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆದ ನಂತರ ಅಂತ ಎರಡರಲ್ಲಿ ತಿಳಿಸಿರುವಂತೆ ಮಾಡಬೇಕು.

https://parihara.karnataka.gov.in/service92/

ಹಂತ 2: ಇದರಲ್ಲಿ ನೀವು ಮೊದಲ ಮಾಡಬೇಕಾದ ಕೆಲಸ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು ಅಂದರೆ ಬರಗಾಲ ವರ್ಷ ಘೋಷಣೆ ಮಾಡಿದ್ದು 2023 ಮತ್ತು 24 ಅದನ್ನ ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ಯಾವ ಹಂಗಾಮಿನಲ್ಲಿ ಬರಗಾಲ ಬಂದಿದೆ ಮುಂಗಾರು ಎಂದು ಆಯ್ಕೆ ಮಾಡಿಕೊಳ್ಳಬೇಕು. ಮತ್ತು ಯಾವ ಕಾರಣದಿಂದಾಗಿ ಪರಿಹಾರ ನೀಡುತ್ತಿದ್ದಾರೆ ಬರ ಎಂದು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಗೆಟ್ ಡೇಟಾ ಎಂದು ಮುಂದೆ ಒಂದು ಬಟನ್ ಕಾಣಿಸುತ್ತದೆ ಅದರ ಮೇಲೆ ತಪ್ಪದೆ ಕ್ಲಿಕ್ ಮಾಡಬೇಕು.

ಹಂತ 3: ಇದರಲ್ಲಿ ಈಗ ನಾಲ್ಕು ಆಯ್ಕೆಗಳು ಕಾಣಿಸುತ್ತವೆ ಅದರಲ್ಲಿ ನೀವು ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಿ ಸರ್ವೇ ನಂಬರ್ ಆಯ್ಕೆ ಮಾಡಿಕೊಂಡ ನಂತರ ಮತ್ತೆ ಮುಂದೆ ನಿಮಗೆ ಹಲವಾರು ಆಯ್ಕೆಗಳು ಕಾಣಿಸುತ್ತವೆ ಅಂದರೆ ರಾಜ್ಯದಲ್ಲಿರುವ ಜಿಲ್ಲೆಯಿಂದ ಹಿಡಿದು ನಿಮ್ಮ ಸರ್ವೇ ನಂಬರ್ ಅವರಿಗೆ ನೀವು ಆಯ್ಕೆಗಳನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾ ಹೋಗಬೇಕಾಗುತ್ತದೆ ಉದಾಹರಣೆಗೆ ಯಾವ ರೀತಿ ಎಂದರೆ ಇಲ್ಲಿ ಕೆಳಗಡೆ ತೋರಿಸಿರುವಂತೆ ಮಾಡಿ.

Search By Survey Number/ಸರ್ವೆ ನಂಬರ್ ಮೂಲಕ ಹುಡುಕಿ

District/ಜಿಲ್ಲೆ

Bijapur\ಬಿಜಾಪುರ

Taluk/ತಾಲ್ಲೂಕು

Indi \ ಇಂಡಿ

Hobli/ಹೋಬಳಿ

BALLOLLI \ ಬಳ್ಳೊಳ್ಳಿ

Village/ಗ್ರಾಮ

AHIRASANGA \ ಅಹಿರಸಂಗ

Survey NO/ಸರ್ವೆ ನಂಬರ್

289

Surnoc/ಸರ್ ನಾಕ್

*

Hissa No/ಹಿಸ್ಸಾ ನಂಬರ

2

ಹಂತ 4: ನಂತರ ಪಡೆಯಿರಿ ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ, ಕ್ಲಿಕ್ ಮಾಡಿದ ನಂತರ ನಿಮಗೆ ಇಲ್ಲಿಯವರೆಗೆ ಜಮಾ ಆಗಿರುವುದು ತೋರಿಸುತ್ತದೆ ಮತ್ತು ನಿಮ್ಮ ಅಕ್ಕ ಪಕ್ಕದವರ ಸರ್ವೆ ನಂಬರ್ ಕೂಡ ಹಾಕಿ ನೀವು ಚೆಕ್ ಮಾಡಬಹುದು ಮತ್ತು ಅವರಿಗೆ ಯಾವ ಬೆಳೆಗೆ ಜಮಾ ಆಗಿದೆ ಮತ್ತು ನಿಮಗೆ ಯಾವ ಬೆಳೆಗೆ ಜಮಾ ಆಗಿದೆ ಹೀಗಾಗಿ ಏನು ಮಾಡಿದರೆ ಅವರಷ್ಟು ಮುಂದಿನ ಬಾರಿಗೆ ನೀವು ತಪ್ಪದೆ ಹಣವನ್ನು ಪಡೆಯಬಹುದು ಎಂಬುದನ್ನು ಈಗಲೇ ತಿಳಿದುಕೊಳ್ಳಬಹುದು.

ಇದನ್ನು ಓದು:ತೆರೆದ ಬಾವಿ or ಬಾವಿ ಕೊರೆಸಲು 2.5 ಲಕ್ಷ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನ

https://krushisanta.com/Application-invited-for-open-well--drilling-in-Karnataka

ಇದನ್ನು ಓದಿ:ಇಲ್ಲಿಯವರೆಗೆ ಇನ್ನೂ ಪೆಂಡಿಂಗ್ ಉಳಿದಿರುವ ಜಮೀನಿಗೆ ಪಹಣಿಪತ್ರ ಲಿಂಕ್ ಆಗಿರುವುದಿಲ್ಲ? ನಿಮ್ಮ ಹೆಸರು ಚೆಕ್ ಮಾಡಿ

https://krushisanta.com/These-Farmers-are-pending-with-linking-of-Aadhaar-to-RTC

ಇದನ್ನು ಓದಿ:10 ಲಕ್ಷ ರೂಪಾಯಿಗಳ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ ಶೇಕಡ 50 ಪರ್ಸೆಂಟ್ ಸಬ್ಸಿಡಿ

https://krushisanta.com/Application-invited-for-Krushi-hond-scheme-in-Karnataka-upto-10-lakh

ಇದನ್ನು ಓದಿ:ಮೂರನೇ ಹಂತದ ಬೆಳೆ ಪರಿಹಾರ ಪಡೆದುಕೊಳ್ಳುವ ರೈತರ ಪಟ್ಟಿ! ನಿಮ್ಮ ಊರಿನ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

https://krushisanta.com/Third-barparihara-installment-will-credit-to-farmers-account-shortly

admin B.Sc(hons) agriculture College of agriculture vijayapura And provide consultant service