ತೆರೆದ ಕೊಳವೆ ಬಾವಿ ಕೊರೆಸಲು 2.50 ಲಕ್ಷ ಆರ್ಥಿಕ ನೆರವು ನೀಡಲು ಅರ್ಜಿ!

<ತೆರೆದ ಬಾವಿ> <ಕೊಳವೆ ಬಾವಿ> <ತೆರೆದ ಬಾವಿ ಸಹಾಯದನ> <ತೆರೆದ ಬಾವಿ ಕೊರೆಸಲು ಅರ್ಜಿ>

Jul 11, 2024 - 08:04
 0
ತೆರೆದ ಕೊಳವೆ ಬಾವಿ ಕೊರೆಸಲು  2.50 ಲಕ್ಷ ಆರ್ಥಿಕ ನೆರವು ನೀಡಲು  ಅರ್ಜಿ!

ಯೋಜನೆಯ ಘಟಕ ವೆಚ್ಚ ರೂ.2.50 ಲಕ್ಷಗಳಾಗಿರುತ್ತದೆ. ಈ ಮೊತ್ತದ ಪೈಕಿ ಗರಿಷ್ಠ ರೂ. 2.00 ಲಕ್ಷ ಮೊತ್ತವನ್ನು ಶೇ.4 ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡುವುದು, ಬಾಕಿ ಉಳಿದ ರೂ. 50,000/- ದಲ್ಲಿ ಪ್ರತಿ ತೆರೆದ ಬಾವಿಗೆ ವಿದ್ಯುತ್ ಸಂಪರ್ಕ ಒದಗಿಸಲು ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುದ್ದೀಕರಣ ವೆಚ್ಚವನ್ನು ನಿಗಮವು ನೇರವಾಗಿ ಪಾವತಿಸುವುದು.

ಸಾಲ ಮರುಪಾವತಿ ವಿಧಾನ!

ತೆರೆದ ಬಾವಿ: ಈ ಯೋಜನೆ ಅಡಿಯಲ್ಲಿ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಶೇ.4 ರಷ್ಟು ಬಡ್ಡಿ ಸೇರಿಸಿ ಮರುಪಾವತಿಸಬೇಕು. ವಿದ್ಯುದ್ದೀಕರಣ ನಂತರ 6 ತಿಂಗಳ ವಿರಾಮ ಅವಧಿ ಇರುತ್ತದೆ.

ಕೊಳವೆ ಬಾವಿ ಕೊರೆದ ಸಂದರ್ಭದಲ್ಲಿ ನೀರಿಲ್ಲದಿದ್ದರೆ ಅಂತಹ ಸಂದರ್ಭದಲ್ಲೂ ಸಹ ಅಭ್ಯರ್ಥಿಯು ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಮತ್ತು ಶೇ.2 ರಷ್ಟು ಬಡ್ಡಿ ಸೇರಿಸಿ ಮರುಪಾವತಿಸಬೇಕು. 6 ತಿಂಗಳ ವಿರಾಮ ಅವಧಿ ಇರುತ್ತದೆ. ಆದಾಗ್ಯೂ ಪ್ರತಿ ಹಣಕಾಸು ವರ್ಷದಲ್ಲಿ ಮಂಜೂರಾದ ಶೇ.1 ಕ್ಕಿಂತ ಹೆಚ್ಚು ಬೋರ್‌ವೆಲ್‌ಗಳು ವಿಫಲವಾದಲ್ಲಿ ಯೋಜನೆಯ ಅನುಷ್ಠಾನದ ಬಗ್ಗೆ, ಆಡಳಿತ ಮಂಡಳಿಯಲ್ಲಿ ಮರುಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವುದು.

ಸಾಲ ಮರುಪಾವತಿ ವಿಧಾನ:

ಈ ಯೋಜನೆಯಲ್ಲಿ ಸಾಲ ಪಡೆದಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಮರುಪಾವತಿಯನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.

ಆಯ್ಕೆ ಮಾಡುವ ವಿಧಾನ:

i. ಈ ಯೋಜನೆಯಡಿಯಲ್ಲಿ ಅರ್ಹ ಅರ್ಜಿದಾರರು ಹೊಂದಿರುವ ಭೂ ವಿಸ್ತೀರ್ಣ ಮತ್ತು ವಯೋಮಾನದ ಆಧಾರದ ಮೇಲೆ ಜಿಲ್ಲಾವಾರು ಆಯ್ಕೆ ಮಾಡಲಾಗುವುದು.

ii. ಜಿಲ್ಲಾವಾರು ಭೌತಿಕ ಮತ್ತು ಆರ್ಥಿಕ ಗುರಿಯನ್ನು ನಿಗಧಿಪಡಿಸಲಾಗುವುದು. ಹಾಗೂ ಅದರ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಲಾಗುವುದು.

iii. ಅರ್ಜಿದಾರರು ಹೊಂದಿರುವ ಭೂ ವಿಸ್ತೀರ್ಣ ಮತ್ತು ವಯೋಮಾನದ ಆಧಾರದ ಮೇಲೆ ಗಣಕೀಕೃತ ಪಟ್ಟಿಯಲ್ಲಿನ ಫಲಾನುಭವಿಗಳನ್ನು (Computerized Auto Generated List) ನಿಗಮದ ಉಳಿದ ಯೋಜನೆಗಳಂತೆ ಸಂಬಂಧಪಟ್ಟ ZP CEO ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಿ ಅದರ ಪರಿಶೀಲನೆ ಹಾಗೂ ನಿರ್ಣಯದಂತೆ ಆಯ್ಕೆ ಮಾಡಲಾಗುವುದು.

ತೆರೆದ ಬಾವಿ?

ಫಲಾನುಭವಿ 6 ಮೀ ವ್ಯಾಸ (20 ಅಡಿ) ಹಾಗೂ 12 ಮೀ ಆಳದ (40 ಅಡಿ ತೆರೆದ ಚಾವಿಯನ್ನು ಸ್ವಂತ ಜವಾಬ್ದಾರಿ ಮೇಲೆ ನಿರ್ಮಿಸಬೇಕು. ತೆರೆದ ಬಾವಿಗೆ ಹಾಗೂ ಸಬ್‌ಮರ್ಸಿಬಲ್ ಮಾನೋ ಬ್ಲಾಕ್ ಪಂಪ್ ಸೆಟ್ ಮತ್ತು ಪೂರಕ ಸಾಮಗ್ರಿಗಳ ಸರಬರಾಜಿಗೆ ತಗಲುವ ವಾಸ್ತವಿಕ ವೆಚ್ಚದಲ್ಲಿ ಮಂಜೂರು ಮಾಡಿದ ಮುಂಗಡ ಮೊತ್ತ ರೂ.50,000/-ಗಳನ್ನು ಕಡಿತಗೊಳಿಸಿ ಬಾಕಿ ಮೊತ್ತ ಗರಿಷ್ಠ ರೂ. 1.50 ಲಕ್ಷಗಳನ್ನು ತೆರೆದ ಬಾವಿ ಕಾಮಗಾರಿ ಹಾಗೂ ಪಂಪ್‌ಸೆಟ್ ಮತ್ತು ಸಾಮಗ್ರಿಗಳ ಸರಬರಾಜು ಅಳವಡಿಕೆ ಪ್ರಗತಿ ಆಧರಿಸಿ ಫಲಾನುಭವಿಗೆ ವ್ಯವಸ್ಥಾಪಕ ನಿರ್ದೇಶಕರಿಂದ ಮೂರು ಹಂತಗಳಲ್ಲಿ ಸಾಲ ಬಿಡುಗಡೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ನಿಮ್ಮ ನಿಮ್ಮ ಊರುಗಳಲ್ಲಿ ಇಲಾಖೆ ಇಲ್ಲದೇ ಇದ್ದರೆ ನಿಮ್ಮ ತಾಲೂಕು ಅಥವಾ ಜಿಲ್ಲೆಗಳ ಹಂತದಲ್ಲಿ ಖಂಡಿತವಾಗಿಯೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇದ್ದೇ ಇರುತ್ತದೆ ಅಲ್ಲಿ ಈ ಅರ್ಜಿಗಳನ್ನು ಸಲ್ಲಿಸಬಹುದು ಸದ್ಯಕ್ಕೆ ಆರ್ಯ ಸಮಾಜದವರಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಮುಂದೆ ಹತ್ತರಿಂದ ಇಪ್ಪತ್ತು ದಿನಗಳಲ್ಲಿ ಉಳಿದವರು ಎಲ್ಲರೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನು ಓದಿ:10 ಲಕ್ಷ ರೂಪಾಯಿಗಳ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ ಶೇಕಡ 50 ಪರ್ಸೆಂಟ್ ಸಬ್ಸಿಡಿ

https://krushisanta.com/Application-invited-for-Krushi-hond-scheme-in-Karnataka-upto-10-lakh

ಇದನ್ನು ಓದಿ:ಮೂರನೇ ಹಂತದ ಬೆಳೆ ಪರಿಹಾರ ಪಡೆದುಕೊಳ್ಳುವ ರೈತರ ಪಟ್ಟಿ! ನಿಮ್ಮ ಊರಿನ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

https://krushisanta.com/Third-barparihara-installment-will-credit-to-farmers-account-shortly

ಇದನ್ನು ಓದಿ:19 ಲಕ್ಷ ರೈತರ ಖಾತೆಗೆ ಹೆಚ್ಚುವರಿ ಬರ ಪರಿಹಾರ ಜಮಾ ಆಗುವ ರೈತರ ಪಟ್ಟಿ ಬಿಡುಗಡೆ.

https://krushisanta.com/Shortly-remaining-pending-parihara-payment-will-released

ಇದನ್ನು ಓದಿ: ಬಜಾಜ್ ಕಂಪನಿಯ ಫ್ರೀಡಂ ಬೈಕ್ ಹೊಸದಾಗಿ ಬಿಡುಗಡೆ ? 85₹ ಖರ್ಚು ಮಾಡಿದರೆ 100 ಕಿಲೋಮೀಟರ್ಗಿಂತ ಜಾಸ್ತಿ ಓಡಬಲ್ಲದು

https://krushisanta.com/Bajaj-CNG-freedom-bike-details-and-price-in-Karnataka

admin B.Sc(hons) agriculture College of agriculture vijayapura And provide consultant service