Pm Kisan 18 ನೇ ಕಂತಿನ ರೈತರ ಪಟ್ಟಿ! ಹಾಗೂ ₹2000 ಜಮಾ ಆಗುವುದು ದಿನಾಂಕ 5 ಅಕ್ಟೋಬರ್ 2024

<18 pm Kisan installment eligible list > < pm Kisan 18 installment will released on 5th October> < 5th October pm Kisan 18th installment will released >

Sep 28, 2024 - 23:27
 0
Pm Kisan 18 ನೇ ಕಂತಿನ ರೈತರ ಪಟ್ಟಿ! ಹಾಗೂ ₹2000 ಜಮಾ ಆಗುವುದು  ದಿನಾಂಕ  5 ಅಕ್ಟೋಬರ್ 2024

ಆತ್ಮೀಯ ರೈತ ಬಾಂದವರೆ ಪ್ರತಿಯೊಬ್ಬರೂ ಮೋದಿ ಹಕ್ಕಿಗಾಗಿ ಕಾಯುತ್ತಾ ಕುಳಿತಿರುತ್ತಾರೆ ಅಂದರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ಗಳು ಮೂರು ಕಂತುಗಳಲ್ಲಿ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳು ಜಮಾ ಆಗೋದು ರೂಢಿಯಲ್ಲಿದೆ ಇದು ಸುಮಾರು 2019 ರಿಂದ ಇಲ್ಲಿಯವರೆಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ, ಅಥವಾ ಹಣ ಜಮಾ ಆಗುತ್ತದೆ.

ಈ ಬಾರಿಯ 18ನೇ ಕಂತಿನ ಮೋದಿ ರೊಕ್ಕ ಜಮಾ ಆಗುವುದು ಯಾವಾಗ?

18ನೇ ಕಂತು ಜಮಾ ಆಗುವುದನ್ನು ಈಗಾಗಲೇ ಅಧಿಕೃತವಾಗಿ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಧಿಕೃತ ಪಿಎಂಕೆ ಸನ್ ಪೋರ್ಟಲ್ ನಲ್ಲಿ ಅಪ್ಡೇಟ್ ಮಾಡಿದ್ದಾರೆ ಅಕ್ಟೋಬರ್ 5 ನೇ ತಾರೀಖಿನಂದು ಎಲ್ಲಾ ರೈತರ ಬಾಂಧವರ ಖಾತೆಗೆ ರೂ.2000ಗಳು ನೇರ ನಗದು ವರ್ಗಾವಣೆ ಮೂಲಕ ಜಮಾಗಲಿದೆ.

 ಬಹಳಷ್ಟು ರೈತರು ತಲೆಯಲ್ಲಿ ಓಡುವ ಪ್ರಶ್ನೆ ಏನೆಂದರೆ ಈ ಬಾರಿಯೂ ನಮ್ಮ ಖಾತೆಗೆ ಹಣ ಬರುತ್ತದೆ ಏನಾದರೂ ನಾಲ್ಕು ತಿಂಗಳಿಂದ ಕಳೆದ ನಾಲ್ಕು ತಿಂಗಳ ಹಿಂದೆ ಹಣ ಬಂದಿರುವುದು ಅದೇ ಆದ ನಂತರ ಮತ್ತೆ ಈಗ ಹಣ ಜಮಾ ಆಗುತ್ತಿರುವುದು ಏನಾದರೂ ತೊಂದರೆ ಆಗುತ್ತದೆ ಹಲವಾರು ಪ್ರಶ್ನೆಗಳು ಕೇಳುತ್ತೀರಿ ಆದರೆ ಅದರ ಕುರಿತಾಗಿ ನಾವು ನಿಖರವಾದ ಮಾಹಿತಿ ಇಲ್ಲಿ ಕೆಳಗಡೆ ಹೇಳಿದ್ದೇವೆ.

ನಿಮ್ಮ ಖಾತೆಗಳಿಗೆ ಏನಾದರೂ ತೊಂದರೆ ಆಗಬಹುದು ಆದರೆ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕಕ್ಕೆ ಲಿಂಕ್ ಆಗಿರುವುದಿಲ್ಲ ಮತ್ತು ನಿಮ್ಮ ಬ್ಯಾಂಕ್ ಪಾಸ್ ಪುಸ್ತಕಕ್ಕೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಮತ್ತೆ ಹಣ ಹೋಲ್ಡ್ ಆಗಿ ನಿಲ್ಲುತ್ತದೆ. ಅಂದರೆ ಆಧಾರ್ ಸೀಡಿಂಗ್ ಕಡ್ಡಾಯವಾಗಬೇಕು ಆಧಾರ್ ಸೀಡಿಂಗ್ ಸ್ಟೇಟಸ್ ಅನ್ನು ನೀವು ಆಧಾರ್ ಪೋರ್ಟಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

 ನಂತರ ಕೆ ವೈ ಸಿ ಈ ಕೆವೈಸಿ ಸಾಕಷ್ಟು ಜನ ಈಗಾಗಲೇ ಮಾಡಿದ್ದೀರಿ, ಇದರ ಕುರಿತಾಗಿ ಬಹಳಷ್ಟು ಜನರಿಗೆ ಮಾಹಿತಿ ಗೊತ್ತಿದೆ ಸಾಕಷ್ಟು ಜನರು ತಾವೆಲ್ಲರೂ ಕೂಡ ನೀವು ನಿಮ್ಮ ನಿಮ್ಮ ಸಾಮಾನ್ಯ ಸೇವ ಕೇಂದ್ರಗಳಿಗೆ ಹೋಗಿ ಬೆರಳಚ್ಚು ಅಥವಾ ನಿಮ್ಮ ಆಧಾರ್ ಓಟಿಪಿ ಮೂಲಕ ನೀವು ಮಾಡಿದ್ದೀರಿ ಅದಕ್ಕಾಗಿ ಈ ಬಾರಿ ಅದರ ತೊಂದರೆ ಇರುವುದಿಲ್ಲ ಹೊರತಾಗಿ ಆಧಾರ್ ಸೀಡಿಂಗ್ ತೊಂದರೆಯಿಂದ ಹಣ ಬರುವುದು ನಿಲ್ಲಬಹುದಾದ ಸಾಧ್ಯತೆಗಳಿವೆ.

18ನೇ ಕಂತಿನ ಆರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ?

ಹಂತ 1: ಇಲ್ಲಿ ನೀಡಿರುವ ವಿಧಾನವನ್ನು ಅನುಸರಿಸಿ ನೀವು ಸುಲಭವಾಗಿ ಅರ್ಹ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಬಹುದು ಅದಕ್ಕಾಗಿ ಮೊಟ್ಟ ಮೊದಲಿಗೆ ಹೇಳಿರುವ ಲಿಂಕಿನ ಮೇಲೆ ನೀವು ಕ್ಲಿಕ್ ಮಾಡಬೇಕು. https://pmkisan.gov.in/Rpt_BeneficiaryStatus_pub.aspx

ಹಂತ 2: ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ಮೇಲೆ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆದ ನಂತರ ನೀವು ಕೆಲವೊಂದು ಮಾಹಿತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಉದಾಹರಣೆಗೆ ನಿಮ್ಮ ರಾಜ್ಯ ಜಿಲ್ಲೆಯ ತಾಲೂಕು ಹಾಗೂ ನಿಮ್ಮ ಊರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ನಂತರ ಮುಂದೆ ಸರ್ಚ್ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ.

ಹಂತ 3: ಈಗ ಇದರಲ್ಲಿ ನಿಮ್ಮ ಊರಿನ ಯಾರೆಲ್ಲರಿಗೆ ಹಣ ಬರುತ್ತದೆಯೋ ಅವರ ಹೆಸರನ್ನು ಮುದ್ರಿಸಲಾಗಿರುತ್ತದೆ ಹೀಗಾಗಿ ಇದರಲ್ಲಿ ನಿಮ್ಮ ಹೆಸರನ್ನು ನೀವು ಗಮನಿಸುತ್ತಾ ಮತ್ತು ಬಹಳಷ್ಟು ಪೇಜ್ ಗಳಿರುತ್ತವೆ ಒಂದೊಂದು ನೋಡಿಕೊಂಡು ಹೋಗುತ್ತಾ ನಿಮ್ಮ ಹೆಸರನ್ನು ನೀವು ಹುಡುಕಿಕೊಳ್ಳಬಹುದು.

ಇದನ್ನು ಒದಿ:ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಕೆ ಸಾಧ್ಯತೆ!ಬ್ರೇಕಿಂಗ್ ನ್ಯೂಸ್

https://krushisanta.com/Petrol-and-diesel-rate-is-decreased-in-Karnataka-and-daily-use-Oil-will-increases

ಇದನ್ನು ಓದಿ:ಇದನ್ನು ಓದಿ:ಇಲ್ಲಿಯವರೆಗೆ ಪಹಣಿ ಪತ್ರ+ ಆಧಾರ್ ಕಾರ್ಡ್ ಲಿಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳ

https://krushisanta.com/Aadhar-Card-and-RTC-Linkin-status-till-date--List-Check-now

ಇದನ್ನು ಓದಿ:ಈ ರೈತರಿಗೆ 18ನೇ ಕಂತು ಶೀಘ್ರದಲ್ಲಿ ಜಮಾ ಆಗಲಿದೆ! ಹೆಸರು ಚೆಕ್ ಮಾಡಿ

https://krushisanta.com/P-M-kisan-Hana-18-ne-kantu-Jama-agalide

ಇದನ್ನು ಓದಿ:ಸೆಪ್ಟಂಬರ್ ತಿಂಗಳ ಗೃಹಲಕ್ಷ್ಮಿ ಹಣ ಪಡೆಯುವವರ ಮಹಿಳೆಯರ ಪಟ್ಟಿ ಬಿಡುಗಡೆ

https://krushisanta.com/September-month-eligible-list-for-gruhalakshmi

admin B.Sc(hons) agriculture College of agriculture vijayapura And provide consultant service