ಇಲಾಖೆಯಿಂದ ಯಾಂತ್ರಿಕರಣ ಯೋಜನೆಗೆ ಅರ್ಜಿ ಆಹ್ವಾನ! ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಮತ್ತು ಟ್ರ್ಯಾಕ್ಟರ್!
<ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ > <ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಗೆ ಅರ್ಜಿ> <ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ> <ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಗೆ ಬೇಕಾಗುವ ದಾಖಲೆಗಳು ಏನು>
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ ವಿವಿಧ ಯೋಜನೆಗಳಡಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. 2024-25ನೇ ಸಾಲಿಗೆ ಇಲಾಖೆಯ ವಿವಿಧ ಯೋಜನೆಗಳಾದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ, ಸಂರಕ್ಷಿತ ಬೇಸಾಯ, ನೀರು ಸಂಗ್ರಹಣಾ ಘಟಕ, ಕೋಲ್ಲೋತ್ತರ ನಿರ್ವಹಣೆ, ಯಾಂತ್ರೀಕರಣ ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಘಟಕ ಅಳವಡಿಸಿಕೊಳ್ಳಲು ಇಚ್ಚಿಸುವ ರೈತರು ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಸೋಲಾರ ಪಂಪ್‌ಸೆಟ್, ಯಾಂತ್ರೀಕರಣ ಅಳವಡಿಸಿಕೊಳ್ಳುವ ರೈತರು ಇಲಾಖಾ ಮಾರ್ಗಸೂಚಿಯನ್ವಯ ಅರ್ಜಿ ಸಲ್ಲಿಸಬಹುದು.
ಫಲಾನುಭವಿಯ ಆಯ್ಕೆಯನ್ನು ಅನುದಾನದ ಲಭ್ಯತೆ ಮತ್ತು ಜೇಷ್ಠತೆ ಆಧಾರದ ಮೇಲೆ ನಡೆಸಲಾಗುವುದು. ಇಲಾಖೆಯ ಮಾರ್ಗಸೂಚಿಯನ್ವಯ ಶೇಕಡಾವಾರು ಸಹಾಯಧನ ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಜುಲೈ 23 ಕೊನೆಯ ದಿನವಾಗಿದೆ ಎಂದು ಯಲಬುರ್ಗಾದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೋಟಗಾರಿಕೆಯಲ್ಲಿಯಾಂತ್ರೀಕರಣ:
a)
ಟ್ರ್ಯಾಕ್ಟರ್
(20ಹೆಚ್.ಪಿ.ವರೆಗೆ)
ಸಾಮಾನ್ಯ ರೈತರಿಗೆ ಶೇ. 25 ರಂತೆ ಗರಿಷ್ಠ ರೂ.0.75 ಲಕ್ಷಗಳು ಮತ್ತು ಪರಿಶಿಷ್ಠ ಜಾತಿ/ಪಂಗಡ/ಸಣ್ಣ/ಅತಿ ಸಣ್ಣ/ಮಹಿಳೆಯರಿಗೆ ಶೇ.35 ರಂತೆ ಗರಿಷ್ಠ ರೂ.1.00 ಲಕ್ಷಗಳ ಸಹಾಯಧನವನ್ನು ಪ್ರತಿ ಘಟಕಕ್ಕೆ ನೀಡಲಾಗುತ್ತದೆ.
b)
ಪವರ್ ಟಿಲ್ಲರ್
(8ಹೆಚ್.ಪಿ.ಗಿಂತ ಕಡಿಮೆ)
ಸಾಮಾನ್ಯ ರೈತರಿಗೆ ಶೇ. 40 ರಂತೆಗರಿಷ್ಠ ರೂ.0.40 ಲಕ್ಷಗಳು ಮತ್ತು ಪರಿಶಿಷ್ಠ ಜಾತಿ/ಪಂಗಡ/ಸಣ್ಣ/ಅತಿ ಸಣ್ಣ/ಮಹಿಳೆಯರಿಗೆ ಶೇ. 50 ಗರಿಷ್ಠ ರೂ.0.50 ಲಕ್ಷಗಳ ಸಹಾಯಧನವನ್ನು ಪ್ರತಿ ಘಟಕಕ್ಕೆ ನೀಡಲಾಗುತ್ತದೆ (ಘಟಕ ವೆಚ್ಚ ರೂ.1.00 ಲಕ್ಷ).
ಯಾವುದೇ ಇಲಾಖೆಯಿಂದ ನೀವು ಸಬ್ಸಿಡಿ ಪಡೆಯಬೇಕಾದರೆ ನೀವು ಮೊದಲಿಗೆ ಅರ್ಜಿ ಸಲ್ಲಿಸಿ, ನಂತರ ಆಯ್ಕೆಯಾಗಿ ತದನಂತರ ನೀವು ನಿಮ್ಮ ಸಬ್ಸಿಡಿ ಸಹಾಯಧನದಲ್ಲಿ ಬಂದಿರುವ ಹಣವನ್ನು ಸರ್ಕಾರ ಕೊಡುತ್ತದೆ ಮತ್ತು ಅರ್ಧ ಹಣವನ್ನು ನೀವು ನೇರವಾಗಿ ಪಾವತಿ ಮಾಡಬೇಕು ನಂತರ ನಿಮಗೆ ಯಾಂತ್ರಿಕ ಕಾರಣ ಯೋಜನೆ ಅಡಿ ನಿಮಗೆ ಬೇಕಾಗುವ ಪವರ್ ಟಿಲ್ಲರ್ ಅಥವಾ ಟ್ರ್ಯಾಕ್ಟರ್ ನೀಡಲು ನೀವು ಅರ್ಹರಾಗಿರುತ್ತೀರಿ.
ಅರ್ಜಿ ಸಲ್ಲಿಸುವಾಗ ನಿಮ್ಮ ಬಳಿ ಇರಬೇಕಾದ ದಾಖಲೆಗಳು?
ಪಹಣಿ ಪತ್ರ
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಪುಸ್ತಕ
ಎರಡು ಭಾವಚಿತ್ರಗಳು
ಖಾತೆ ಉತಾರಿ
ಮೇಲಿನ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯದ ಒಳಗಡೆ ಕರ್ನಾಟಕದಾದ್ಯಂತ ಬಹಳಷ್ಟು ಇಲಾಖೆಯಲ್ಲಿ ಜುಲೈ 31 ನೇ ತಾರೀಖಿನಂದು ಎಲ್ಲಾ ಅರ್ಜಿಗಳು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿ ಕರೆದಿರುವ ಯೋಜನೆಗಳು ಅರ್ಜಿಗಳು ಕೊನೆಗೊಳ್ಳಲಿವೆ ಹೀಗಾಗಿ ಇದೇ ತಿಂಗಳ 31ನೇ ತಾರೀಖಿನ ಒಳಗಾಗಿ ನಿಮ್ಮ ಹತ್ತಿರದ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿ ಅಲ್ಲಿ ಬಂದಿರುವ ಯೋಜನೆಗಳ ವಿವರಗಳನ್ನು ಪಡೆದು ತಕ್ಷಣವಾಗಿ ಅರ್ಜಿ ಕೊಡುವ ಕೆಲಸ ನಿಮ್ಮದಾಗಬೇಕು.
ಇದನ್ನು ಓದು:ತೆರೆದ ಬಾವಿ or ಬಾವಿ ಕೊರೆಸಲು 2.5 ಲಕ್ಷ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನ
https://krushisanta.com/Application-invited-for-open-well--drilling-in-Karnataka
ಇದನ್ನು ಓದಿ:ಇಲ್ಲಿಯವರೆಗೆ ಇನ್ನೂ ಪೆಂಡಿಂಗ್ ಉಳಿದಿರುವ ಜಮೀನಿಗೆ ಪಹಣಿಪತ್ರ ಲಿಂಕ್ ಆಗಿರುವುದಿಲ್ಲ? ನಿಮ್ಮ ಹೆಸರು ಚೆಕ್ ಮಾಡಿ
https://krushisanta.com/These-Farmers-are-pending-with-linking-of-Aadhaar-to-RTC
ಇದನ್ನು ಓದಿ:10 ಲಕ್ಷ ರೂಪಾಯಿಗಳ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ ಶೇಕಡ 50 ಪರ್ಸೆಂಟ್ ಸಬ್ಸಿಡಿ
https://krushisanta.com/Application-invited-for-Krushi-hond-scheme-in-Karnataka-upto-10-lakh
ಇದನ್ನು ಓದಿ:ಮೂರನೇ ಹಂತದ ಬೆಳೆ ಪರಿಹಾರ ಪಡೆದುಕೊಳ್ಳುವ ರೈತರ ಪಟ್ಟಿ! ನಿಮ್ಮ ಊರಿನ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
https://krushisanta.com/Third-barparihara-installment-will-credit-to-farmers-account-shortly