ಯಾರದೆಲ್ಲ ರೇಷನ್ ಕಾರ್ಡ್ ರದ್ದಾಗಿದೆ? ಅನರ್ಹ ಪಟ್ಟಿ ಬಿಡುಗಡೆ!
<13 lakh ration cards are cancelled> < vwhy cards are cancelled>
ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆಗೆ ಯಾ ವುದೇ ತೊಂದರೆ ಇಲ್ಲ. ಒಂದು ವೇಳೆ ಅರ್ಹರಾ ಗಿದ್ದು, ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ 24 ಗಂಟೆಯೊಳಗೆ ಬಿಪಿಎಲ್ ಕಾರ್ಡ್ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. 14 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ಉದ್ದೇಶಿಸಲಾಗಿದ್ದು, 3.63 ಕಾರ್ಡ್‌ಗಳು ರದ್ದಾ ಗಿವೆ ಎಂದಿದ್ದಾರೆ.
ಸೋಮವಾರ 'ಕನ್ನಡ ಪ್ರಭ' ದೊಂದಿಗೆ ಬಿಪಿಎಲ್ ಕಾರ್ಡ್ ರದ್ದತಿ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಬಿಪಿ ಎಲ್ ಕಾರ್ಡ್ ಹೊಂದಿರುವವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅವರು ಬಿಪಿಎಲ್ ಕಾ ರ್ಡ್‌ನಲ್ಲೇ ಮುಂದುವರೆಯಲಿದ್ದಾರೆ. ಆದರೆ, ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್ ರದ್ದಾಗಲಿದ್ದು, ಅದು ಎಪಿಎಲ್ ಕಾರ್ಡ್ ಆಗಿ ಪರಿವರ್ತನೆಯಾಗಲಿದೆ ಎಂದು ತಿಳಿಸಿದರು.
ಕೇಂದ್ರದ ನಿಯಮಗಳನ್ನು ಉಲ್ಲಂಘಿಸಿ ಪಡೆದಿದ್ದರೆ ಅಂತಹ ಪಡಿತರ ಚೀಟಿಗಳನ್ನು ರದ್ದು ಮಾಡುವುದನ್ನು ಮುಂದುವರೆಸಲಾಗು ವುದು. ಬಡತನ ರೇಖೆಗಿಂತ ಕೆಳಗಿನವರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ, ಅಂತಹವರಿಗೆ ಕೂಡಲೇ ವಾಪಸ್ ಬಿಪಿಎಲ್ ಕಾರ್ಡ್ ಕೊಡಲಾಗುವುದು. ಅದಕ್ಕೆ ತಕ್ಕಂತೆ ಅವರು ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.
ಆರು ತಿಂಗಳಿನಿಂದ ಪಡಿತರ ಪಡೆಯದ 2.75 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳು, ಆದಾಯ ತೆರಿಗೆ ಪಾವತಿ ಮಾಡುತ್ತಿರುವ 98,458 ಕುಟುಂಬಗಳು ಇವೆ.
ಯಾರಾರಿಗೆ ಬಿಸಿ?
*ಆದಾಯ ತೆರಿಗೆ ಪಾವತಿಸುತ್ತಿರುವ ಸದಸ್ಯರ ಹೊಂದಿರುವ ಕುಟುಂಬ.
*ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ಇರುವ ಕುಟುಂಬ
*ನಿಗಮ-ಮಂಡಳಿಗಳಲ್ಲಿ ಕಾಯಂ ನೌಕರರಿರುವ ಕುಟುಂಬ ಮನೆಗಳನ್ನು ಬಾಡಿಗೆ ಕೊಟ್ಟು ಜೀವನ ನಡೆಸುತ್ತಿರುವವರು.
*7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರು
*ಸ್ವಂತಕ್ಕೆಂದು 4 ಚಕ್ರಗಳ ವಾಹನ ವನ್ನು ಹೊಂದಿರುವವರು.
*ನಿಗದಿತ ವಾರ್ಷಿಕ ವರಮಾನ ಕ್ಕಿಂತ ಹೆಚ್ಚು ಗಳಿಸುತ್ತಿರುವವರು.
*ನಿಯಮಕ್ಕಿಂತ ವಾರ್ಷಿಕವಾಗಿ ಹೆಚ್ಚು ವಹಿವಾಟು ಮಾಡುವವರು.
ರಾಜ್ಯದಲ್ಲಿ 80% ಬಿಪಿಎಲ್ ಕಾರ್ಡ್?
ರಾಜ್ಯದಲ್ಲಿ ಶೇ.80ರಷ್ಟು ಬಿಪಿಎಲ್ ಕಾರ್ಡ್ ಗಳಿವೆ. ತಮಿಳು ನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲಿ ಶೇ.50ರಷ್ಟೂ ಇಲ್ಲ, ಆದರೆ ನಮ್ಮ ರಾಜ್ಯದಲ್ಲಿ ಕೆಲವರು ಅರ್ಹರಲ್ಲದವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಅಂತಹವರ ಬಿಪಿಎಲ್ ಕಾರ್ಡ್ ತೆಗೆದು ಹಾಕ್ತವೆ. ಅರ್ಹರಲ್ಲದವರನ್ನು ಎಪಿಎಲ್‌ಗೆ ವರ್ಗಾವಣೆ ಮಾಡ್ತವೆ. ಎಪಿಎಲ್ ಕಾರ್ಡುದಾರರಿಗೂ ಬೇರೆ ಸೌಲಭ್ಯಗಳಿವೆ.
ಅರ್ಹ ಬಡವರಿಗೆ ಕಾರ್ಡ್ ಕೈತಪ್ಪಲ್ಲ!
ಬಿಪಿಎಲ್ ಕಾರ್ಡು ಪಡೆಯಲು ಯಾರು ಅರ್ಹರು, ಯಾರು ಅನರ್ಹರು ಎಂಬ ಮಾನದಂಡಗಳಿವೆ. ಅವುಗಳನ್ನು ಆಧರಿಸಿ ಯಾರಾದರೂ ಅರ್ಹತೆ ಇಲ್ಲದಿದ್ದರೂ ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದರೆ ಅಂತಹವರ ಕಾರ್ಡುಗಳನ್ನು ರದ್ದುಪಡಿಸಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಯಾವುದೇ ಅರ್ಹ ಕುಟುಂಬಗಳಿಗೂ ಬಿಪಿಎಲ್ ಕಾರ್ಡು ಕೈತಪ್ಪುವುದಿಲ್ಲ.
ಇದನ್ನು ಓದಿ:ಭಾಗ್ಯಲಕ್ಷ್ಮಿ ಬಾಂಡ್ ಹಣ ಸ್ಟೇಟಸ್? ನೀವು ಹಣ ಕಟ್ಟಿದ್ದೀರಾ? ಹಾಗಿದ್ದರೆ ಚೆಕ್ ಮಾಡಿ
https://krushisanta.com/Bhagyalaxmi-bond-status-Karnataka
ಇದನ್ನು ಓದಿ:ರಾಜ್ಯದಲ್ಲಿ ವಖ್ಫ್ ಆಸ್ತಿ ಪಟ್ಟಿ ಬಿಡುಗಡೆ! ಪಹಣಿ ಸಂಖ್ಯೆ ಹಾಕಿ ಚೆಕ್ ಮಾಡಿ
https://krushisanta.com/Waqf-property-in-Karnataka