ಹೆಚ್ಚುವರಿ ಬರ ಪರಿಹಾರ ಪಡೆದುಕೊಳ್ಳುವ ರೈತರು ಯಾರು? ಹೊಸ ಲಿಸ್ಟ್!
<ಹೆಚ್ಚುವರಿ ಪರಿಹಾರ> <ಹೆಚ್ಚುವರಿ ಬರಗಾಲ ಪರಿಹಾರ> < ಹೆಚ್ಚುವರಿ ಪರಿಹಾರ ಹಣ ಜಮಾ> < ಹೆಚ್ಚುವರಿ ಬರಗಾಲ ಪರಿಹಾರ>
ಆತ್ಮೀಯ ರೈತ ಬಾಂಧವರೇ ಇವತ್ತಿನ ಪ್ರಕಾರ ಸರ್ಕಾರವು ನೀಡಿರುವ ವರದಿಯಂತೆ ಸಣ್ಣ ರೈತರಿಗೆ 3000 ಗಳು ಹೆಚ್ಚಿಗೆ ಪರಿಹಾರ ನೀಡಲಾಗಿದೆ ಎಂದು ವರದಿ ತಿಳಿದು ಬಂದಿದೆ ಒಣ ಬೇಸಾಯ ಮಾಡುವ ಸುಮಾರು 14 ಲಕ್ಷ ಕುಟುಂಬಗಳಿಗೆ ಬರಗಾಲ ಪರಿಹಾರದ ಜಮಾ ಆಗಿದೆ ಹಾಗೂ ಅವರ ಜೀವನೋಪಾಯ ನಷ್ಟವನ್ನು ಬರಿಸಲು ಪರಿಹಾರವಾಗಿ 3000ಗಳನ್ನು ಸರ್ಕಾರ ಅವರಿಗೆ ನೀಡಲು ನಿರ್ಧಾರವನ್ನು ಕೈಗೊಂಡಿದೆ ಎಂದು ಸಚಿವರು ಕೃಷ್ಣ ಭೈರೇಗೌಡರವರು ತಿಳಿಸಿದ್ದಾರೆ.
ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದವರು ಕೇಂದ್ರದಿಂದ ಬಂದಿರುವ ಬರಗಾಲ ಪರಿಹಾರ ರೈತರಿಗೆ ತಮ್ಮ ಅರ್ಹತೆ ಅನುಗುಣವಾಗಿ ಹಣವನ್ನು ಪಾವತಿ ಮಾಡಲಾಗಿದೆ ಈಗ ಒಟ್ಟಾರೆ ಸೇರಿ 32 ಲಕ್ಷ ರೈತರಿಗೆ ಸಂಪೂರ್ಣ ಬೆಳೆ ಪರಿಹಾರ ಮೊತ್ತವನ್ನು ಜಮಾ ಮಾಡಲಾಗಿದೆ ಎಂದು ಅವರು ಮಾತನಾಡುವ ಸಮಯದಲ್ಲಿ ಹೇಳಿದರೂ ಇದಾದ ನಂತರ ಸುಮಾರು 2 ಲಕ್ಷ ರೈತರಿಗೆ ಪ್ರವಾಹ ನೀಡುವ ಪ್ರಕ್ರಿಯೆಯಲ್ಲಿ ದಾಖಲೆ ಪರಿಶೀಲರ ಹಂತದಲ್ಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಬಹಳಷ್ಟು ತಾಲೂಕುಗಳಲ್ಲಿ ಬರಗಾಲ ಪರಿಹಾರ ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ಮತ್ತು ಎರಡು ಲಕ್ಷ ಎಕ್ರೆ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು ಒಂದು ಪಾಯಿಂಟ್ ಆರು ಮೂರು ಲಕ್ಷ ಅರ್ಹ ರೈತ ಬಾಂಧವರಿಗೂ ಪರಿಹಾರ ಹಣವನ್ನು ವಿತರಿಸಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ ನೀರು ಮತ್ತು ಬೇವಿನ ನಿರ್ವಹಣೆ ಮಾಡಲು ಇಲ್ಲಿಯವರೆಗೆ 20 ನಿರ್ವಹಣಾ ಪ್ರಾಧಿಕಾರ ಬಹಳಷ್ಟು ಸಭೆಗಳನ್ನು ಕೈಗೊಂಡಿದೆ ಆದರೆ ನೀರಿನ ಸಮಸ್ಯೆ 270 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 594 ಗ್ರಾಮಗಳಿಗೆ ಖಾಸಗಿ ಬೋರ್ವೆಲ್ ಬಾಡಿಗೆ ಪಡೆದು ನೀರನ್ನು ಸರಬರಾಜು ಮಾಡಲಾಗುತ್ತಿದೆ ನಗರ ಪ್ರದೇಶಗಳಿಗೆ 153 ವಾರ್ಡುಗಳಿಗೆ ಟ್ಯಾಂಕರ್ ಮೂಲಕ ಹಾಗೂ 35 ವಾರ್ಡುಗಳಿಗೆ ಖಾಸಗಿ ಬೋರ್ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ನಿಖರವಾಗಿ ಹೇಳಿದರು.
ರಾಜ್ಯದಲ್ಲಿ ಅವಷ್ಯ ಇರುವ ವಿವಿಧ ಭಾಗಗಳಲ್ಲಿ 47 ಮೇವಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ ಹಾಗೂ 28 ಕಡೆಗಳೇ ಗೋಶಾಲೆಯನ್ನು ತೆರೆದು ಮೇವಿನ ನಿರ್ವಹಣೆಯನ್ನು ಮಾಡಲಾಗುತ್ತದೆ ಹಾಗೂ ವೆಚ್ಚವನ್ನು ಬರೆಸಲು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಖಾತೆಯಲ್ಲಿರುವ 836 ಕೋಟಿ ಅನುದಾನ ಲಭ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಲಿಸ್ಟ್ ನಲ್ಲಿರುವ ರೈತರಿಗೆ ಮತ್ತೆ 3000 ಗಳು ಜಮಾ ಆಗಲಿದೆ?
ಮೊದಲಿಗೆ ನಾವು ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರು ಅಂದರೆ ಯಾರು ಇದರಲ್ಲಿ ಬರುತ್ತಾರೆ ಅದನ್ನು ತಿಳಿದುಕೊಳ್ಳಬೇಕು ನಾವು 2.5 ಎಕರೆ ಭೂಮಿಯನ್ನು ಹೊಂದಿದ್ದರೆ ಅಂತವರಿಗೆ ನಾವು ಅತಿ ಸಣ್ಣ ರೈತರು ಎಂದು ಕರೆಯುತ್ತೇವೆ ಹಾಗೂ ಐದು ಎಕರೆ ಜಮೀನು ಹೊಂದಿದ್ದರೆ ಅಂತವರಿಗೆ ನಾವು ಸಣ್ಣ ರೈತರು ಎಂದು ಕರೆಯುತ್ತೇವೆ. ಈಗ ನೀವು ಯಾವ ಪಟ್ಟಿಯಲ್ಲಿ ಇದ್ದೀರಿ ಎಂದು ನಿಮಗೆ ಗೊತ್ತಾಗಿರಬಹುದು ಎಂದು ನಾವು ತಿಳಿದುಕೊಳ್ಳುತ್ತೇವೆ ಆದರೆ ನಿಮಗೆ ನಿಖರವಾಗಿಯೂ ದಾಖಲೆ ಮೂಲಕ ನಿಮ್ಮ ಜಮೀನು ನಿಮ್ಮ ಹೆಸರಿನಲ್ಲಿ ಎಷ್ಟಿದೆ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ.
ಮೊದಲಿಗೆ ನೀವು ಗೂಗಲ್ ಓಪನ್ ಮಾಡಿಕೊಳ್ಳಿ ಅದರಲ್ಲಿ ನೀವು ಭೂಮಿ ಆನ್ಲೈನ್ ಎಂದು ಟೈಪ್ ಮಾಡಿಕೊಳ್ಳಬೇಕು ನಿಮಗೆ ಈಗ ಒಂದು ಪೇಜ್ ಓಪನ್ ಆಗುತ್ತದೆ ಅಂದರೆ ವೆಬ್ಸೈಟ್ ಓಪನ್ ಆಗುತ್ತದೆ ಅದರ ಲಿಂಕ್ ಅನ್ನು ನಾವು ಇಲ್ಲಿ ನಿಮಗೆ ನೀಡಿದ್ದೇವೆ ಈಗ ನಿಮ್ಮ ಹೆಸರಿನಲ್ಲಿ ಪಾಣಿಪತ್ರದಲ್ಲಿ ಎಷ್ಟು ಜಮೀನು ಹೊಂದಿದೆ ಎಂದು ನೀವು ಚೆಕ್ ಮಾಡಿಕೊಳ್ಳಿ ಅಂದಾಗ ಮಾತ್ರ ನಿಮಗೆ ಸಣ್ಣ ರೈತರ ಅಥವಾ ಅತಿ ಸಣ್ಣ ರೈತರ ಅಥವಾ ದೊಡ್ಡ ರೈತರೆಂದು ನಿಮಗೆ ಆನ್ಲೈನ್ ನಲ್ಲಿ ಲಭ್ಯವಿರುವ ಪಹಣಿ ಪತ್ರವನ್ನು ಗಮನಿಸಿ ಪಹಣಿಪತ್ರದಲ್ಲಿ ಎಷ್ಟು ಎಕರೆ ಜಮೀನು ಹೊಂದಿದೆ ಎಂದು ನೀವು ತಿಳಿದುಕೊಳ್ಳಬೇಕು.
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಇದರಲ್ಲಿ ಕರೆಂಟ್ ಇಯರ್ ಪಹಣಿ ಅಥವಾ ಆರ್ ಟಿ ಸಿ ಮೇಲೆ ಕ್ಲಿಕ್ ಮಾಡಬೇಕು.
https://landrecords.karnataka.gov.in/Service2/
ಹಂತ 2: ಇದರಲ್ಲಿ ಮೊದಲಿಗೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ನಿಮ್ಮ ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗೂ ನಿಮ್ಮ ಊರನ್ನು ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಸರ್ವೆ ನಂಬರ್ ಗೋ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಹಾಗೂ ಹಿಸ್ಸಾ ನಂಬರನ್ನು ಟೈಪ್ ಮಾಡಿಕೊಳ್ಳಬೇಕು ಇದಾದ ನಂತರ .
ಹಂತ 3:Fetch Details ಇದರ ಮೇಲೆ ಕ್ಲಿಕ್ ಮಾಡಬೇಕು ನೀವು ಕ್ಲಿಕ್ ಮಾಡಿದ ನಂತರ ಬಲಭಾಗದ ಕೆಳಗಡೆ ವ್ಯೂ ಎಂದು ಒಂದು ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಈಗ ನಿಮ್ಮ ಪಹಣಿ ಪತ್ರ ಅಂದರೆ ಹೀಗೆ ಪ್ರಸ್ತುತ ಪಹಣಿ ಪತ್ರ ಓಪನ್ ಆಗುತ್ತದೆ ಅದರಲ್ಲಿ ಎಷ್ಟು ಎಕರೆ ಜಮೀನು ಬರೆದಿದೆ ಎಂದು ತಿಳಿದುಕೊಳ್ಳಿ. ಇದರಲ್ಲಿ ಮೂರನೇ ಕಾಲಂ ಅನ್ನು ಗಮನಿಸಿ ಅಲ್ಲಿ ಎಕರೆಗುಂಟೆ ಎಷ್ಟಿದೆ ಅಂದರೆ ಪ್ರಸ್ತುತವಾಗಿ ನಿಖರವಾಗಿ ನಿಮ್ಮ ಹೆಸರಿನ ಮೇಲೆ ಅಂದರೆ ನಿಮ್ಮ ಸರ್ವೇ ನಂಬರ್ ಮೇಲೆ ಎಷ್ಟು ಜಮೀನು ಇದೆ ಎಂದು ಗೊತ್ತಾಗುತ್ತದೆ ಒಂದು ವೇಳೆ ಅದು 2.5 ಎಕರೆಗಿಂತ ಕಡಿಮೆ ಇದ್ದಲ್ಲಿ ನೀವು ಅತಿ ಸಣ್ಣ ರೈತರು ಎಂದು ಕರೆಯುತ್ತೇವೆ.
ಒಂದು ವೇಳೆ ಇದಕ್ಕಿಂತ ಹೆಚ್ಚಿಗೆ ಇದ್ದಲ್ಲಿ 5 ಎಕರೆಗಿಂತ ಕಡಿಮೆ ಇದ್ದಲ್ಲಿ ಅವರಿಗೆ ನಾವು ಸಣ್ಣ ರೈತರು ಎಂದು ಕರೆಯುತ್ತೇವೆ ಈಗ ನಿಮ್ಮ ಜಮೀನು ಎಷ್ಟಿದೆ ಅಂತ ನೀವು ನೋಡಿದ್ದಾಯಿತು ಈಗ ನೀವು ಮೇಲೆ ತಿಳಿಸಿರುವ ಸಣ್ಣ ರೈತರು ಅತಿ ಸಣ್ಣ ರೈತರಿಗಿರುವ ಕಂಡೀಶನ್ ನಲ್ಲಿ ಬರುತ್ತಿದ್ದರೆ ನಿಮಗೂ ಕೂಡ ಮತ್ತೆ 3000 ಗಳು ಜಮಾ ಆಗುತ್ತದೆ ಇದರಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ.
ಇದನ್ನು ಓದಿ: ಮೊಬೈಲ್ ನಂಬರ್ ಹಾಕಿ ಬರಗಾಲ ಪರಿಹಾರ ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://krushisanta.com/How-to-check-parihara-payment-status-using-mobile-number
ಇದನ್ನು ಓದಿ:ಪರಿಹಾರ ಹಣ ಜಮಾ ಆಗಿರುವುದನ್ನು, ಒಂದೇ ನಿಮಿಷದಲ್ಲಿ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿ?
https://krushisanta.com/DBT-App-Karnataka-Govt-of-Karnataka
ಇದನ್ನು ಓದಿ:ರೈತರಿಗೆ ನಿನ್ನೆ ಪರಿಹಾರ ಜಮಾದಲ್ಲಿ ಗೊಂದಲ? ಮೂರು ಎಕರೆ ಜಮೀನಿದ್ದರೂ ಬೇರೆ ಬೇರೆ ಪರಿಹಾರ ಜಮಾ ಆಗಿದೆ? ಲೆಕ್ಕಾಚಾರ ಹೆಂಗೆ ಮಾಡಿದ್ದಾರೆ?
https://krushisanta.com/How-calculated-Drought-relief-in-Karnataka
ಇದನ್ನು ಓದಿ:ಇದೀಗ ನನ್ನ ಖಾತೆಗೆ ಬೆಳೆ ಪರಿಹಾರ 18400/- ಜಮಾ ಆಯ್ತು ನೋಡಿ
https://krushisanta.com/Baragala-Parihar-18400-for-Three-acres-land