ಆಧಾರ್ ಸಂಖ್ಯೆ ಹಾಕಿ ಬೆಳೆ ಹಾನಿ ಪರಿಹಾರ ಚೆಕ್ ಮಾಡಿ!ನನಗು ಜಮಾ ಆಗಿದೆ!

<ಆಧಾರ ಸಂಖ್ಯೆ ಹಾಕಿ ಬೆಳೆ ಹಾನಿ ಪರಿಹಾರ> < ಆಧಾರ್ ನಂಬರ್ ಹಾಕಿ ಬೆಳೆ ಹಾನಿ ಪರಿಹಾರ ನೋಡುವುದು ಹೇಗೆ> < ಆಧಾರ್ ಸಂಖ್ಯೆ ಬೆಳೆ ಪರಿಹಾರ > < ಬರಗಾಲ ಬೆಳೆ ಹಾನಿ ಪರಿಹಾರ> < ಬರಗಾಲ ಪರಿಹಾರ ಪೇಮೆಂಟ್>

May 11, 2024 - 06:10
 0
ಆಧಾರ್ ಸಂಖ್ಯೆ ಹಾಕಿ ಬೆಳೆ ಹಾನಿ ಪರಿಹಾರ ಚೆಕ್ ಮಾಡಿ!ನನಗು ಜಮಾ ಆಗಿದೆ!

ಆತ್ಮೀಯ ರೈತ ಬಾಂಧವರೇ ಆಧಾರ ಸಂಖ್ಯೆ ಹಾಕಿ ಪರಿಹಾರ ಪೇಮೆಂಟ್ ಚೆಕ್ ಮಾಡುವ ವಿಧಾನ ಕೂಡ ಈಗ ಹೊಸದಾಗಿ ಬಂದಿದೆ ಅದನ್ನು ಹಾಕಿ ನೀವು ಈಗ ನಿಮ್ಮ ಖಾತೆಗೆ ಹೊಸದಾಗಿ ಜಮಯಿ ಆಗಿರುವ ಬರಗಾಲ ಬೆಳೆ ಹಾನಿ ಪರಿಹಾರವಾದ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿ ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು ಚೆಕ್ ಮಾಡುವುದು ಹೇಗೆ ಮತ್ತು ಯಾರಿಗೆಲ್ಲ ಹಣ ಜಮಾ ಆಗಿದೆ ಮತ್ತು ಯಾರಿಗೆ ಹಣ ಜಮೆಯಾಗಿಲ್ಲ ಎಲ್ಲವನ್ನು ಆನ್ಲೈನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಯಾರಿಗೆ ಹಣ ಜಮಾ ಆಗಿದೆ ಯಾರಿಗೆ ಹಣ ಜಮಾ ಆಗಿಲ್ಲ?

ನಾವು ಕಾನೂನು ಹೋರಾಟ ಮಾಡಿ 3,454 ಕೋಟಿ ರೂ. ಬರಪರಿಹಾರ ಪಡೆದುಕೊಂಡಿದ್ದೇವೆ. ಅದನ್ನು ತಕ್ಷಣ ರೈತರ ಖಾತೆಗೆ ಜಮೆ ಮಾಡುವ ಕೆಲಸ ಮಾಡಿದ್ದೇವೆ. 32,12,000 ರೈತರಿಗೆ ಸಂಪೂರ್ಣ ಬರ ಪರಿಹಾರ ನೀಡಿದ್ದೇವೆ. ಇಲ್ಲಿಯವರೆಗೂ ಮೂರು ಸಾವಿರ ಕೋಟಿ ರೈತರ ಖಾತೆಗೆ ಹಾಕಿದ್ದೇವೆ. ಸುಮಾರು ಒಂದೂವರೆ ಲಕ್ಷ ರೈತರಿಗೆ ತಾಂತ್ರಿಕ ಕಾರಣಗಳಿಂದಾಗಿ ಹಣ ಜಮೆ ಆಗಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

ಮಳೆಯಾಶ್ರಿತ ಬೆಳೆ ಬೆಳೆಯುವ ಪ್ರದೇಶದ ರೈತರು ಬರ ಪರಿಹಾರಕ್ಕೆ ಸೇರಿರಲಿಲ್ಲ. ಒಟ್ಟಾರೆ 3 ಲಕ್ಷ ರೈತರು ಆಗಬಹುದು ಎಂಬ ಮಾಹಿತಿ ಇದೆ. ಅಂತಹ ರೈತರಿಗೂ ಬರ ಪರಿಹಾರ ಕೊಡುವ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು. ಒಂದೊಂದು ಕುಟುಂಬಕ್ಕೆ 3,000 ರೂ. ಕೊಡಬೇಕು ಅಂತ ಸೂಚನೆ ನೀಡಿದ್ದೇವೆ ಎಂದಿದ್ದಾರೆ.

ಇನಾ ಮಳೆ ಆಶ್ರಿತ ಪ್ರದೇಶದ ಮೂರು ಲಕ್ಷ ರೈತರ ಖಾತೆಗೆ ಇನ್ನೂ ಹಣ ಬಂದಿಲ್ಲ ಶೀಘ್ರದಲ್ಲೇ ಹಣ ಜಮಾ ಆಗುತ್ತದೆ ಉಳಿದವರಿಗೆ ನೀರಾವರಿ ಭೂಮಿಯನ್ನು ಹೊಂದಿದ ರೈತರಿಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ ಸರ್ಕಾರ ಸ್ವಲ್ಪ ಯೋಚನೆ ಮಾಡಬೇಕಾಗಿತ್ತು ಏಕೆಂದರೆ ನೀರಾವರಿ ಹೊಂದಿರುವ ರೈತರಿಗಿಂತ ಮಳೆ ಆಶ್ರಿತ ಪ್ರದೇಶದ ಹೊಂದಿರುವ ರೈತರಿಗೆ ಬೇಗನೆ ಪರಿಹಾರ ಹಣ ಜಮಾ ಮಾಡಿದರೆ ತುಂಬಾ ಸಹಾಯಕಾರಿಯಾಗುತ್ತದೆ ಇದರ ಬಗ್ಗೆ ಚಿಂತನೆ ಮಾಡಿಲ್ಲ ಆದರೆ ಯಾವುದೇ ಅನುಮಾನವಿಲ್ಲ ಕಂಡಿತವಾಗಿಯೂ ನಿಮಗೂ ಕೂಡ ಬೆಳೆ ಹಾನಿ ಬೆಳೆ ಪರಿಹಾರ ಜಮಾ ಆಗಲೇಬೇಕು ಆಗುತ್ತದೆ.

ಆನ್ಲೈನ್ ನಲ್ಲಿ ಬೆಳೆ ಹಾನಿ ಪರಿಹಾರ ಸ್ಟೇಟಸ್ ನೋಡುವುದು ಹೇಗೆ?

ಆಧಾರ್ ಕಾರ್ಡ್ ನಂಬರ್ ಹಾಕಿ ಮೊಬೈಲ್ ನಲ್ಲಿ ಸ್ಟೇಟಸ್ ನೋಡಬಹುದು ನಿಮ್ಮ ಆಧಾರ್ ಸಂಖ್ಯೆ ನಿಮಗೆ ಗೊತ್ತಿಲ್ಲದಿದ್ದರೆ ನಿಮ್ಮ ಆಧಾರ್ ಕಾರ್ಡನ್ನು ಓಪನ್ ಮಾಡಿಕೊಳ್ಳಿ ಅದರಲ್ಲಿ 12 ಅಂಕಿಯ ಸಂಖ್ಯೆಯನ್ನು ನೀವು ಮೊಬೈಲ್ ನಂಬರ್ ನಂತೆ ನೆನಪಿಟ್ಟುಕೊಳ್ಳಬೇಕು ಈ ನಂಬರ್ ತುಂಬಾ ಸಹಾಯಕಾರಿಯಾಗುತ್ತದೆ ಮತ್ತು ಇದರಿಂದ ಬಹಳಷ್ಟು ದಾಖಲೆಗಳನ್ನು ನೀವು ಚೆಕ್ ಮಾಡಿಕೊಳ್ಳಬಹುದು.

ಹಂತ 1: ಇಲ್ಲಿ ನೀಡಿರುವ ಪರಿಹಾರ ಪೇಮೆಂಟ್ ಚೆಕ್ ಮಾಡುವ ಲಿಂಕ್ ಅನ್ನು ನೀವು ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ಮೇಲೆ ಈ ವರ್ಷ ಅಂದರೆ "2023 24" ಆಯ್ಕೆ ಮಾಡಿಕೊಳ್ಳಬೇಕು ಇದಾದ ನಂತರ ಋತುಮಾನ ಎಂದು ತೋರಿಸುತ್ತದೆ ಋತುಮಾನ ಎಂದು ತೋರಿಸಿದ್ದಲ್ಲಿ "ಮುಂಗಾರು" ಎಂದು ಆಯ್ಕೆ ಮಾಡಿಕೊಳ್ಳಿ ವಿಪತ್ತಿನ ವಿಧ ಕೇಳುತ್ತದೆ ಅದರಲ್ಲಿ "ಬರ" ಎಂದು ಆಯ್ಕೆ ಮಾಡಿಕೊಳ್ಳಿ.

https://parihara.karnataka.gov.in/service92/

ಹಂತ 2: ಈಗ ನಿಮಗೆ ಮತ್ತೆ ಕೆಳಗಡೆ ನಾಲ್ಕು ಆಪ್ಷನ್ ಕಾಣಿಸುತ್ತವೆ ಅದರಲ್ಲಿ ಮೊದಲನೆಯದು ಆಧಾರ ಸಂಖ್ಯೆ ಮೇಲೆ ಕ್ಲಿಕ್ ಮಾಡಬೇಕು, ಆಧಾರ್ ಸಂಖ್ಯೆಯಲ್ಲಿ ಕೊನೆಯ ನಾಲ್ಕು ಅಂಕಿಗಳ ಆಧಾರದ ಮೇಲೆ ಪರಿಹಾರ ಪಡೆದಿರುವ ಅಥವಾ ಪಡೆಯುತ್ತಿರುವ ಫಲಾನುಭವಿಗಳ ಲಿಸ್ಟ್ ಅನ್ನು ತೋರಿಸುತ್ತದೆ.

ಹಂತ 3: ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿದ ನಂತರ ಕೆಳಗಡೆ ಬಹಳಷ್ಟು ಹೆಸರುಗಳು ಓಪನ್ ಆಗುತ್ತವೆ, ಅದರಲ್ಲಿ ಆಧಾರ ಸಂಖ್ಯೆ ಕೊನೆಯ ನಾಲ್ಕು ಅಂಕಿಗಳು ಯಾರದು ಒಂದೇ ಆಗಿರುತ್ತದೆ ಎಲ್ಲರ ಹೆಸರು ನಿಮಗೆ ಇಲ್ಲಿ ಕಾಣಿಸುತ್ತದೆ.

ಹಂತ 4: ಈಗ ನೀವು ನಿಮ್ಮ ಹೆಸರನ್ನು ನೋಡುತ್ತಾ ಹೋಗಬೇಕು ಅದರಲ್ಲಿ ಒಂದೇ ಪೇಜ್ ಇರುವುದಿಲ್ಲ ಸುಮಾರು 5-10 ಪೇಜುಗಳು ಇರುತ್ತವೆ. ಒಂದನೇ ಪೇಜಿನಲ್ಲಿ ಹೆಸರು ಇಲ್ಲದಿದ್ದರೆ ಎರಡನೇ ಪೇಜಿಗೆ ನೆಕ್ಸ್ಟ್ ಎಂದು ಕ್ಲಿಕ್ ಮಾಡಬೇಕು ಅಥವಾ ಎರಡನೇ ಪೇಜಿಗೆ ಹೆಸರು ಇಲ್ಲದಿದ್ದರೆ ಮೂರನೇ ಪೇಜ್ ನಲ್ಲಿ ಹೆಸರು ನೋಡಬೇಕು ಇದೇ ರೀತಿಯಾಗಿ ಕೊನೆಯ ತನಕ ಎಲ್ಲ ಪೇಜುಗಳನ್ನು ನೀವು ನೋಡುತ್ತಾ ಹೋಗಬೇಕು ನಿಮ್ಮ ಹೆಸರು ಕಂಡು ಕೂಡಲೇ ಮೊದಲನೇ ಕಾಲಮ್ನಲ್ಲಿ ಒಂದು ರೌಂಡ್ ಚಿತ್ರ ಅಥವಾ ವೃತ್ತಾಕಾರದ ಚಿತ್ರ ಇದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಅದು ನೀಲಿ ಬಣ್ಣಕ್ಕೆ ತಿರುಗುತ್ತದೆ. ನೀಲಿ ಬಣ್ಣಕ್ಕೆ ತಿರುಗಿದ ನಂತರ ಕೆಳಗಡೆ ನಿಮಗೆ ಪರಿಹಾರ ಪೇಮೆಂಟ್ ಆಗಿರುವುದನ್ನು ತೋರಿಸುತ್ತದೆ.

ಇದನ್ನು ಓದಿ:ಹೆಚ್ಚುವರಿ ಪರಿಹಾರ ಪಡೆದುಕೊಳ್ಳುವ ರೈತರ ಪಟ್ಟಿ ಬಿಡುಗಡೆ ನಿಮಗೂ 3000 ಬರುತ್ತಾ ಚೆಕ್ ಮಾಡಿ 

https://krushisanta.com/Extra-parihar-payment-farmers-list-2024

ಇದನ್ನು ಓದಿ:ರೈತರ ಮೊಬೈಲ್ ಸಂಖ್ಯೆ ಹಾಕಿ ಪರಿಹಾರ ಜಮಾ ಆಗಿರುವುದನ್ನು ಸುಲಭವಾಗಿ ಚೆಕ್ ಮಾಡುವ ಡೈರೆಕ್ಟ ಲಿಂಕ್ ಇಲ್ಲಿದೆ

https://krushisanta.com/How-to-check-parihara-payment-status-using-mobile-number

ಇದನ್ನು ಓದಿ:ಪರಿಹಾರ ಹಣ ಜಮಾ ಆಗಿರುವುದನ್ನು, ಒಂದೇ ನಿಮಿಷದಲ್ಲಿ ಚೆಕ್ ಮಾಡಿ?

https://krushisanta.com/DBT-App-Karnataka-Govt-of-Karnataka

ಇದನ್ನು ಓದಿ:ರೈತರಿಗೆ ನಿನ್ನೆ ಪರಿಹಾರ ಜಮಾದಲ್ಲಿ ಗೊಂದಲ? ಮೂರು ಎಕರೆ ಜಮೀನಿದ್ದರೂ ಬೇರೆ ಬೇರೆ ಪರಿಹಾರ ಜಮಾ ಆಗಿದೆ? ಲೆಕ್ಕಾಚಾರ ಹೆಂಗೆ ಮಾಡಿದ್ದಾರೆ?

https://krushisanta.com/How-calculated-Drought-relief-in-Karnataka

ಇದನ್ನು ಓದಿ:ಇದೀಗ ನನ್ನ ಖಾತೆಗೆ ಬೆಳೆ ಪರಿಹಾರ 18400/- ಜಮಾ ಆಯ್ತು ನೋಡಿ

https://krushisanta.com/Baragala-PaParihar-payment-check-status-link

admin B.Sc(hons) agriculture College of agriculture vijayapura And provide consultant service