ಈ ರೈತರಿಗೆಲ್ಲ 32 ಸಾವಿರ ಬರಗಾಲ ಪರಿಹಾರ ಜಮಾ ಆಗಿದೆ! ಯಾಕೆ ಗೊತ್ತ?

<ಈ ರೈತರಿಗೆ 32,000 ಬರಗಾಲ ಪರಿಹಾರ ಜಮಾ ಆಗಿದೆ> < ಈ ರೈತರಿಗೆ ಬರಗಾಲ ಪರಿಹಾರ 32 ಸಾವಿರ ರೂಪಾಯಿಗಳು ಜಮಾ ಆಗಿವೆ> < 32 ಸಾವಿರ ಹೆಚ್ಚು ಪರಿಹಾರ ಹಣ> < ಬರಗಾಲ ಪರಿಹಾರ ಸ್ಟೇಟಸ್ ಆನ್ಲೈನ್ > < ಪರಿಹಾರ ಸ್ಟೇಟಸ್ ಆನ್ಲೈನ್ >

May 11, 2024 - 07:55
 0
ಈ ರೈತರಿಗೆಲ್ಲ  32 ಸಾವಿರ ಬರಗಾಲ ಪರಿಹಾರ ಜಮಾ ಆಗಿದೆ! ಯಾಕೆ ಗೊತ್ತ?

ಯಾವ ರೈತರಿಗೆ ಹೆಚ್ಚು ಬೆಳೆ ಹಾನಿ ಪರಿಹಾರ ಜಮಾ ಆಗಿದೆ ನಿಮಗೆ ಗೊತ್ತೇ? ನಾವು ಸುಮಾರು ಕಳೆದ ಒಂದು ವಾರಗಳಿಂದ ಲೆಕ್ಕಾಚಾರ ಹಾಕಿ ನೋಡಿದಾಗ ಬಹಳಷ್ಟು ಜನರಿಗೆ ಪರಿಹಾರ ಬೇರೆ ಬೇರೆ ರೀತಿಯಲ್ಲಿ ಜಮಾ ಆಗಿದ್ದು ಕೆಲವೊಬ್ಬರಿಗೆ ಒಂದು ಎಕರೆಗೆ ರೂ. 3000 ಗಳು ಆದರೆ ಕೆಲವೊಬ್ಬರಿಗೆ 6000 ಗಳು ಎಕರೆಗೆ ಬಂದಿವೆ ಅದೇ ರೀತಿಯಾಗಿ ಇನ್ನೂ ಕೆಲವರಿಗೆ 11 ಸಾವಿರ ರೂಪಾಯಿಗಳು ಪ್ರತ್ಯೇಕರಿಗೆ ಪರಿಹಾರ ಹಣ ಜಮಾ ಆಗಿದೆ ಇದರ ಲೆಕ್ಕಾಚಾರವನ್ನು ನಾವು ಗಮನಿಸಿದಾಗ ಹೀಗೆ ನಾವು ಊಹೆ ಮಾಡಬಹುದು.

ಯಾರಿಗೆ ಎಷ್ಟು ಪರಿಹಾರ ಹಣ ಜಮಾ ಆಗಿದೆ?

ಮೊದಲು ಸರ್ಕಾರ ಘೋಷಣೆ ಮಾಡಿದ್ದು ಏಳೂವರೆ ಸಾವಿರ ರೂಪಾಯಿ ಮಳೆ ಆಶ್ರಿತ ಬೆಳೆಗಳಿಗೆ ಘೋಷಣೆ ಮಾಡಿತ್ತು ಹಾಗೂ ನೀರಾವರಿ ಹೊಂದಿದವರಿಗೆ 17000 ಮಾಡಿತ್ತು ಅದೇ ರೀತಿಯಾಗಿ ತೋಟಗಾರಿಕಾ ಬೆಳೆಗಳು ಪ್ರತಿ ಎರಡು ಹೆಕ್ಟರ್ ಪ್ರದೇಶಕ್ಕೆ 22 ಸಾವಿರ ರೂಪಾಯಿಗಳು ಘೋಷಣೆ ಮಾಡಿತ್ತು. ಆದರೆ ಹಣ ಜಮಾ ಆಗುವ ವೇಳೆ ಬೇರೆ ಬೇರೆನೇ ಆಗಿದೆ ಲೆಕ್ಕಾಚಾರ ಹೇಗೆ ಎಂದು ಕಂಡು ಹಿಡಿಯುವುದು ಕಷ್ಟಕರವಾಗಿದೆ.

ಇನ್ನೊಬ್ಬರು ಮೂರು ಎಕರೆಗೆ 32 ಸಾವಿರ ಪರಿಹಾರ ಪಡೆದಿದ್ದಾರೆ?

ಇವರ ಜಮೀನು ಕೇವಲ ಮೂರು ಎಕರೆ ಹೊಂದಿದ್ದು ಇವರು ಜಮೀನಿನಲ್ಲಿ ಬಾವಿಯನ್ನು ಹೊಂದಿರುತ್ತಾರೆ ಹಾಗೂ ಇವರಿಗೆ ಹೆಚ್ಚಿಗೆ ಪರಿಹಾರ ಹಣ ಜಮಾ ಆಗಿರುವುದು ತಿಳಿದು ಬಂದಿದೆ ಅಂದರೆ ಅವರಿಗೆ ನೀರಾವರಿ ಎಂದು ಆಯ್ಕೆ ಮಾಡಿಕೊಳ್ಳಲಾಗಿದೆ ಪ್ರತ್ಯೇಕರಿಗೆ 11000 ಎಂದು ತಿಳಿದುಕೊಂಡರೆ ಮೂರು ಎಕರೆಗೆ 32 ಸಾವಿರ ರೂಪಾಯಿಗಳು ಹೆಚ್ಚು ಕಡಿಮೆ ಸರಿಯಾಗಿ ಬಂದಿದೆ.

ಇನ್ನೊಬ್ಬರಿಗೆ ಮೂರು ಎಕರೆಗೆ 18400 ಜಮಾ ಆಗಿದೆ?

ಇವರು ಸಹ ಕೇವಲ ಮೂರು ಎಕರೆ ಜಮೀನು ಹೊಂದಿದ್ದು ಇವರ ಜಮೀನಿನಲ್ಲಿ ಬಾವಿ ಇಲ್ಲ ಆದರೆ ಮೇಲೆ ನೀಡಿರುವ ವ್ಯಕ್ತಿಯ ಬಾವಿಯಲ್ಲಿ ಸಮಪಾಲನ್ನು ಹೊಂದಿದ್ದಾರೆ ಆದರೆ ಇವರಿಗೆ ಪ್ರತಿ ಎಕರೆಗೆ 6,100 ಗಳು ಜಮಾ ಆಗಿರುತ್ತವೆ. ಇದು ನೀರಾವರಿ ಅಥವಾ ಮಳೆ ಆಶ್ರಿತ ಎಂದು ನಮಗೆ ಗೊಂದಲ ಉಂಟು ಮಾಡಿದೆ ಆದರೆ ಪಹಣಿ ಪತ್ರದಲ್ಲಿ ಮಳೆ ಆಶ್ರಿತ ಬರೆದಿರಲಾಗಿದೆ.

ಇನ್ನೊಬ್ಬರಿಗೆ 3 ಎಕರೆ ಜಮೀನು ಹೊಂದಿದವರಿಗೆ 9000 ಜಮಾ ಆಗಿದೆ?

ಇವರು ಕೇವಲ ಮೂರು ಎಕರೆ ಜಮೀನು ಹೊಂದಿದ್ದು ಕೇವಲ ಒಂಬತ್ತು ಸಾವಿರ ರೂಪಾಯಿಗಳು ಪರಿಹಾರ ಹಣ ಜಮಾ ಆಗಿದೆ ಕೇವಲ ರೂ.3000 ಗಳು ಪ್ರತ್ಯೇಕರಿಗೆ ಜಮಾ ಆಗಿದೆ ಇವರು ಸಹ ಮಳೆ ಆಶ್ರಿತ ಬೇಸಾಯ ಮಾಡುತ್ತಿರುವರು ಆಗಿದ್ದು ಇವರ ಪಹಣಿ ಪತ್ರದಲ್ಲಿ ಯಾವುದೇ ರೀತಿಯ ಬಾವಿ ಇಲ್ಲ. ಹಾಗೂ ಯಾವುದೇ ರೀತಿ ತೋಟಗಾರಿಕಾ ಬೆಳೆಗಳು ಸಹ ಹೊಂದಿಲ್ಲ.

ಮೇಲೆ ನೀಡಿರುವ ಎಲ್ಲಾ ವಿಷಯಗಳನ್ನು ನಾವು ಗಮನಿಸಿದ ಕೂಡಲೇ ನಿಮಗೂ ಕೂಡ ಗೊತ್ತಾಗಬಹುದು ಆಯ್ಕೆಯನ್ನು ಯಾವ ರೀತಿಯಾಗಿ ಮಾಡಿದ್ದಾರೆ ಹಾಗೂ ಅವುಗಳಿಗೆ ಬೇರೆಬೇರೆ ಹಣ ಕೂಡ ಜಮಾ ಮಾಡಿದ್ದಾರೆ ನಿಮಗೂ ಎಷ್ಟು ಹಣ ಬಂದು ಎಂದು ಕಮೆಂಟ್ ಮೂಲಕ ನೀವು ತಿಳಿಸಬಹುದು ಹಾಗೂ ನಿಮಗೆ ಹಣ ಬರದೆ ಇದ್ದರೂ ಸಹ ನೀವು ತಿಳಿಸಬಹುದು, ಹಣ ಬರದೇ ಇರೋದಕ್ಕೆ ಸುಮಾರು ಕಾರಣಗಳಿವೆ ಏಕೆಂದರೆ ಒಂದು ನಿಮ್ಮ ಎಫ್ ಐಡಿ ನಲ್ಲಿ ಯಾವ ರೀತಿಯಾಗಿ ಹೆಸರು ಇದೆ ಅದೇ ರೀತಿಯಾಗಿ ಪಹಣಿ ಪತ್ರದಲ್ಲಿ ಇಲ್ಲದಿದ್ದರೆ ನಿಮಗೂ ಕೂಡ ಹಣ ಜಮಾ ಆಗಿಲ್ಲ ಹಾಗೂ ಎನಪಿಸಿಐಸಿ ಆಗದವರಿಗೆ ಅವರಿಗೂ ಹಣ ಜಮೆಯಾಗಿಲ್ಲ.

ಇದನ್ನು ಓದಿ: ನಿಮ್ಮ ಆಧಾರ್ ನಂಬರ್ ಹಾಕಿ ಬರಗಾಲ ಪರಿಹಾರ ಪೇಮೆಂಟ್ ಡೈರೆಕ್ಟಾಗಿ ಚೆಕ್ ಮಾಡಿ.

https://krushisanta.com/How-to-check-drought-relief-status-using-Aadhaar-number--number

ಇದನ್ನು ಓದಿ:ಹೆಚ್ಚುವರಿ ಪರಿಹಾರ ಪಡೆದುಕೊಳ್ಳುವ ರೈತರ ಪಟ್ಟಿ ಬಿಡುಗಡೆ ನಿಮಗೂ 3000 ಬರುತ್ತಾ ಚೆಕ್ ಮಾಡಿ 

https://krushisanta.com/Extra-parihar-payment-farmers-list-2024

ಇದನ್ನು ಓದಿ:ರೈತರ ಮೊಬೈಲ್ ಸಂಖ್ಯೆ ಹಾಕಿ ಪರಿಹಾರ ಜಮಾ ಆಗಿರುವುದನ್ನು ಸುಲಭವಾಗಿ ಚೆಕ್ ಮಾಡುವ ಡೈರೆಕ್ಟ ಲಿಂಕ್ ಇಲ್ಲಿದೆ

https://krushisanta.com/How-to-check-parihara-payment-status-using-mobile-number

ಇದನ್ನು ಓದಿ:ಪರಿಹಾರ ಹಣ ಜಮಾ ಆಗಿರುವುದನ್ನು, ಒಂದೇ ನಿಮಿಷದಲ್ಲಿ ಚೆಕ್ ಮಾಡಿ?

https://krushisanta.com/DBT-App-Karnataka-Govt-of-Karnataka

admin B.Sc(hons) agriculture College of agriculture vijayapura And provide consultant service