Aadhar Not Maped to Bank account Parihar list| ಬ್ಯಾಂಕ್ ಖಾತೆಗೆ ಆಧಾರ್ ಮ್ಯಾಪಿಂಗ್ ಇಲ್ಲದೆ ಇರುವ ಪರಿಹಾರ ಲಿಸ್ಟ್!

<ಆಧಾರ್ ಮ್ಯಾಪಿಂಗ್ ಆಗದೆ ಇರುವ ಲಿಸ್ಟ್> < ಆಧಾರ್ ಮ್ಯಾಪಿಂಗ್> < Aadhar mapping status> < Aadhar not Maped to account>

May 3, 2024 - 06:51
 0
Aadhar Not Maped to Bank account Parihar list| ಬ್ಯಾಂಕ್ ಖಾತೆಗೆ ಆಧಾರ್ ಮ್ಯಾಪಿಂಗ್ ಇಲ್ಲದೆ ಇರುವ ಪರಿಹಾರ ಲಿಸ್ಟ್!

ಪರಿಹಾರ ಹಣ ಜಮಾ ಆಗಬೇಕಾದರೆ ಯಾವುದೇ ರೀತಿ ತೊಂದರೆ ಇರಬಾರದು, ತೊಂದರೆ ಅಂದರೆ ಇದು ನೇರ ವರ್ಗಾವಣೆ ಮೂಲಕ ಜಮಾ ಆಗೋದ್ರಿಂದಾಗಿ ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಖಂಡಿತವಾಗಿಯೂ ಲಿಂಕ್ ಆಗಿರಲೇಬೇಕು ಹಾಗೂ ಸರ್ಕಾರವು ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡೋದಿಲ್ಲ ಹೊರತಾಗಿ ನಿಮ್ಮ ಆಧಾರ್ ಸಂಖ್ಯೆ ಮೇಲೆ ನೇರ ನಗದು ವರ್ಗಾವಣೆ ಮೂಲಕ ಹಣವನ್ನು ಜಮಾ ಮಾಡಲಾಗುತ್ತದೆ ಹೀಗಾಗಿ ಪ್ರತಿಯೊಬ್ಬರು ಅಂದರೆ ಫಲಾನುಭವಿಗಳು ಅಥವಾ ಯಾರೂ ಪರಿಹಾರ ಹಣ ಪಡೆಯುತ್ತಿರೋ ಅವರ ಹೆಸರಿನ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು.

ಇದು ಒಂದೇ ಮಾತ್ರವಲ್ಲದೆ ಇನ್ನೂ ಹಲವಾರು ತೊಂದರೆಗಳು ಸಹ ಬರಬಹುದು ಆಧಾರ್ ಸಂಖ್ಯೆ ನಿಮ್ಮ ಖಾತೆಗೆ ಮ್ಯಾಪ್ ಆಗದೆ ಇರುವುದು ಹಾಗೂ ಇದಾದ ನಂತರ ನಿಮ್ಮ ಖಾತೆ ಸಂಪೂರ್ಣವಾಗಿ ಕ್ಲೋಸ್ ಆಗಿರುವುದು ಎಲ್ಲವೂ ತೊಂದರೆಗಳೇ ಆದರೆ ಯಾವುದಾದರೂ ಒಂದನ್ನು ಸಹ ನಿಮ್ಮ ಅರ್ಜಿಯ ಸ್ಥಿತಿ ಮೇಲೆ ಇರಬಾರದು ಒಂದು ವೇಳೆ ಇದ್ದರೆ ಈಗ ಬರುವ ಬಹುದೊಡ್ಡ ಮೊತ್ತ ಅಂದರೆ ಬರಗಾಲ ಪರಿಹಾರದ ಮುಂದಿನ ಕಂತಿನಲ್ಲಿ ನೀವು ಯಾವುದೇ ರೀತಿ ತೊಂದರೆ ಎಲ್ಲಾರದ ಹಾಗೆ ನೋಡಿಕೊಳ್ಳಬೇಕು ಅದಕ್ಕೆ ಏನೆಲ್ಲ ಮಾಡಬೇಕು?

ಮೊದಲು ನಿಮ್ಮ ಪರಿಹಾರ ಐಡಿಗೆ ಯಾವ ತೊಂದರೆ ಇದೆ ಚೆಕ್ ಮಾಡಿ?

ಇಲ್ಲಿ ಕೆಳಗಡೆ ನೀಡಿರುವ ವಿಧಾನವನ್ನು ನೀವು ಬಳಸಿ ಸ್ಟೇಟಸ್ ಅನ್ನು ಚೆಕ್ ಮಾಡಿದರೆ ನಿಮ್ಮ ತೊಂದರೆ ಯಾವುದು ಹಾಗೂ ನಿಮಗೆ ಯಾವ ಕಾರಣದಿಂದಾಗಿ ಹಣ ಜಮಾ ಆಗುತ್ತಿಲ್ಲ ಅಥವಾ ಹಣ ಬರುತ್ತಿಲ್ಲ ಅದೆಲ್ಲವನ್ನು ನೀವು ಆನ್ಲೈನ್ ನಲ್ಲಿ ನೋಡಬಹುದು ಮತ್ತು ಅದಕ್ಕೆ ಯಾವುದೇ ರೀತಿ ಹಣ ಖರ್ಚು ಮಾಡುವುದು ಅವಶ್ಯಕತೆ ಇಲ್ಲ.

ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮಗೆ ಸರ್ಕಾರದ ಅಧಿಕೃತ ಜಾಲತಾಣ ಪರಿಹಾರ ಪೇಮೆಂಟ್ ಲಿಸ್ಟ್ ಓಪನ್ ಆಗುತ್ತದೆ ಅದು ಓಪನ್ ಆದ ನಂತರ ನಿಮಗೆ ಇಲ್ಲಿ.

https://parihara.karnataka.gov.in/service89/PaymentDetailsReport.aspx

ಹಂತ 2:Select year/ವರ್ಷ ಆಯ್ಕೆಮಾಡಿ 

2023-24

Select season/ಋತು ಆಯ್ಕೆಮಾಡಿ 

Kharif/ಮುಂಗಾರು

Calamity Type/ವಿಪತ್ತಿನ ವಿಧ 

DROUGHT/ಬರ

District/ಜಿಲ್ಲೆ 

Bidar

Taluk/ತಾಲ್ಲೂಕು 

Bidar

Hobli/ಹೋಬಳಿ 

Bagadala

Village/ಗ್ರಾಮ 

Sangolagi

ಹಂತ 3: ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ ಹಾಗೂ ಇಲ್ಲಿ ನಿಮಗೆ ಎರಡು ಲಿಸ್ಟ್ ಕಾಣಿಸುತ್ತವೆ ಒಂದು ಪೇಮೆಂಟ್ ಸಕ್ಸಸ್ ಆಗಿರುವುದು ಅಂದರೆ ಯಾರ ಖಾತೆಗೆಲ್ಲ ಯಾವುದೇ ತೊಂದರೆ ಇಲ್ಲದೇನೆ ಹಣ ವರ್ಗಾವಣೆಯಾಗಿದೆ ಅವರಲ್ಲಿ ಇನ್ನೊಂದು ಲಿಸ್ಟ್ ಯಾವ ತೊಂದರೆಗಳಿಂದಾಗಿ ಹಣ ಅವರ ಖಾತೆಗೆ ಜಮಾ ಆಗಿಲ್ಲ ಅದನ್ನು ಸಹ ನಿಮಗೆ ಇಲ್ಲಿ ಎರಡನೇ ಪರಿಹಾರ ಕಂತು ಹಣ ಜಮಾ ಆಗುವ ಮೊದಲೇ ನಿಮಗೆ ನೋಡಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ.

ಹಂತ 4: ಇದರಲ್ಲಿ ನಿಮಗೆ ಪಾವತಿ ವಿಫಲ ಪ್ರಕರಣಗಳನ್ನು ಕ್ಲಿಕ್ ಮಾಡಿಕೊಂಡು ನೀವು ನೋಡಿದಾಗ ಇದರಲ್ಲಿ ಒಂಬತ್ತನೇ ಕಾಲಲ್ಲಿ ಯಾವ ತೊಂದರೆಯಿಂದಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪರಿಹಾರ ಹಣ ಜಮಾ ಆಗಿಲ್ಲ ಎಂದು ನಿಖರವಾಗಿ ಮತ್ತು ನೇರವಾಗಿ ಬರೆದಿರಲಾಗಿರುತ್ತದೆ. 

 ಒಂದು ವೇಳೆ ಈ ತೊಂದರೆಗಳು ನಿಮ್ಮ ಖಾತೆಗೆ ಅಂದರೆ ನಿಮ್ಮ ಊರಿನ ಹೆಸರಿನಲ್ಲಿ ನಿಮ್ಮ ಸರ್ವೆ ನಂಬರಿಗೂ ಸಹ ಈ ರೀತಿ ತೊಂದರೆಗಳಾದರೆ, ನಿಮ್ಮ ಖಾತೆಗೆ ಹಣ ಜಮಾ ಆಗುತ್ತಾ ಅನ್ನುವ ಪ್ರಶ್ನೆ ಬಹಳಷ್ಟು ರೈತರರಲ್ಲಿ ಇದೆ ಆದರೆ ಆಗುತ್ತದೆ ಇನ್ನು ಚುನಾವಣೆ ಆಗಲು 7 ಮೇ ಅಲ್ಲಿಯವರೆಗೂ ಸಮಯವಿದೆ ಅದಾದ ನಂತರ ಕೆಲವೊಂದು ತಾಂತ್ರಿಕ ದೋಷಗಳನ್ನು ಸರಿಪಡಿಸುವ ತನಕ ಇನ್ನು ಹತ್ತು ದಿನಗಳಿಗಿಂತ ಹೆಚ್ಚು ದಿನಗಳು ತೆಗೆದುಕೊಳ್ಳಬಹುದು ಆದರೆ ನಿಮ್ಮ ಈ ತೊಂದರೆಗಳು ನೀವು ಗಮನಿಸಿದ ಮೇಲೆ ನಾಳೆನೇ ಹೋಗಿ ನಿಮ್ಮ ಬ್ಯಾಂಕ್ ನಲ್ಲಿ ನೀವು ಇದನ್ನು ಸರಿಪಡಿಸಿಕೊಳ್ಳಬಹುದು.

ರಿಜೆಕ್ಟ್ ಆಗಿರುವ ಅರ್ಜಿಗಳಲ್ಲಿ ಶೇಕಡ 80ರಷ್ಟು ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿಲ್ಲ ಇದಾದ ನಂತರ ಶೇಕಡ 5 ರಷ್ಟು ಬ್ಯಾಂಕ್ ಖಾತೆಗಳು ಈಗಾಗಲೇ ಕ್ಲೋಸ್ ಆಗಿವೆ. ಉಳಿದ ಕೆಲವೊಂದು ತಾಂತ್ರಿಕ ದೋಷಗಳಿಂದ ಹಣವನ್ನು ವರ್ಗಾವಣೆ ಮಾಡಲು ಆಗುತ್ತಿಲ್ಲ.

ಇದನ್ನು ಓದಿ:ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಬೆಂಕಿ ಬಿಸಿಲಿನ ಅಲರ್ಟ್ ಘೋಷಣೆ

https://krushisanta.com/Heat-wave-alerts-in-Karnataka-for-five-days

ಇದನ್ನು ಓದಿ:ಮೊಬೈಲ್ ನಂಬರ್ ಹಾಕಿ ಬೆಳೆ ಹಾನಿ ನಿಮ್ಮ ಜಮೀನಿನ ಯಾವ ಬೆಳೆಗೆ ಜಮಾ ಆಗುತ್ತಿದೆ ಚೆಕ್ ಮಾಡಿ

https://krushisanta.com/For-Which-crop-drought-relief-is-credited-for-farmers-Check-using-Mobile-number

ಇದನ್ನು ಓದಿ:ಕೊಳವೆಬಾವಿ ತೆಗಿಸಲು ಅಥವಾ ಈಗಾಗಲೇ ಹೊಂದಿರುವ ಕೊಳವೆ ಬಾವಿಗೆ ಪರ್ಮಿಷನ್ ತೆಗಿಸುವುದು ಹೇಗೆ?

https://krushisanta.com/How-to-get-Borewell-permission-in-online

ಇದನ್ನು ಓದಿ: ಈ ಲಿಸ್ಟ್ ನಲ್ಲಿ ಇದ್ದವರಿಗೆ ಎಲ್ಲರಿಗೂ ಸಿಗಲಿದೆ ಎರಡನೇ ಕಂತಿನ ಬರಗಾಲ ಪರಿಹಾರ ಹಣ! https://krushisanta.com/2-installment-drought-relief-eligible-list

ಇದನ್ನು ಓದಿ:Gruhalakhmi 9ನೇ ಕಂತು ಮಹಿಳೆಯರ ಖಾತೆಗೆ ಜಮಾ https://krushisanta.com/Gruhalakhmi-9th-installment-credited--check-using-this-link

admin B.Sc(hons) agriculture College of agriculture vijayapura And provide consultant service