ಉಚಿತವಾಗಿ ನಾಟಿ ಕೋಳಿ ಮರಿ ನೀಡಲು ಅರ್ಜಿ ಆಹ್ವಾನ!
<ಕೋಳಿ ಮರಿ> <ಉತ್ತಮ ಕೋಳಿ ಮರಿ> <ಕೋಳಿ ಮರಿ ವಿತರಣೆ <ನಾಟಿ ಕೋಳಿ ಮರಿ ವಿತರಣೆಗೆ ಅರ್ಜಿ>
ಆತ್ಮೀಯ ಗ್ರಾಹಕರೇ ಹೆಣ್ಣು ಮಕ್ಕಳು ಕೂಡ ಕೃಷಿಯಲ್ಲಿ ಮುಂದೆ ಬರುತ್ತಿದ್ದಾರೆ ಅವರು ಯಾವುದೇ ಕಾರ್ಯವನ್ನು ತೆಗೆದುಕೊಂಡರೆ ಅದನ್ನು ಅಲ್ಲಿಗೆ ಬಿಡುವುದಿಲ್ಲ ಅದನ್ನು ಮುಗಿಸುವ ತನಕ ಆ ಕೆಲಸವನ್ನು ಅವರು ಮಾಡುತ್ತಾರೆ. ಹಾಗಿದ್ದ ಮೇಲೆ ನಮ್ಮ ಸರಕಾರವು ಹೆಣ್ಣು ಮಕ್ಕಳು ಸಹ ಕೃಷಿ ಚಟುವಟಿಕೆ ಅಥವಾ ಕೃಷಿಯ ತರ ಚಟುವಟಿಕೆಗಳಲ್ಲಿ ಮುಂದುವರೆಯಲಿ ಎಂದು ಸಹಾಯವನ್ನು ಮಾಡುತ್ತಿದೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 2024- 25ನೇ ಸಾಲಿನಲ್ಲಿ 5 ವಾರದ ಕೋಳಿಮರಿಗಳನ್ನು ಗ್ರಾಮೀಣ ರೈತ ಮಹಿಳೆಯರಿಗೆ ವಿತರಿಸಲು ಅರ್ಹ ಫಲಾನುಭವಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಆಯ್ಕೆಯಾದ ಯೋಜನೆಯಡಿ ಪ್ರತಿ 1 ಫಲಾನುಭವಿಗಳಿಗೆ 5 ವಾರದ 20 ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ಮಾಡಲಾಗುವುದು. ವಿತರಣೆ ಅರ್ಜಿ ಸಲ್ಲಿಸಲು ಗ್ರಾಮೀಣ ಭಾಗದ ರೈತ ಮಹಿಳೆಯರಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಫಲಾನುಭವಿಗಳು ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು (ಪ್ರಮಾಣ ಪತ್ರದಲ್ಲಿ පත යි ಸಂ- ಖ್ಯೆ ಇರಬೇಕು). ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರ ಹೊಂದಿರಬೇಕು. ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ರೈತ ಮಹಿಳೆಯರು, ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ, ಪ್ರಾಥಮಿಕ ಕೋಳಿ ಸಹಕಾರ ಸಂಘಗಳಲ್ಲಿರುವ ಮಹಿಳಾ ಸದಸ್ಯರಿಗೆ, ರೈತ ಉತ್ಪಾದಕ ಸಂಸ್ಥೆಯ ಮಹಿಳಾ ಸದಸ್ಯರಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ಡಿಸೆಂಬರ್ 16 ಕೊನೆಯ ದಿನವಾಗಿದ್ದು, ಅರ್ಜಿಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕುಗಳ ಮುಖ್ಯಪಶುವೈದ್ಯಾಧಿಕಾರಿ ಗಳು(ಆಡಳಿತ), ಮುಖ್ಯ ಪಶುವೈದ್ಯಾಧಿಕಾರಿಗಳು, ಪಶು ಆಸ್ಪತ್ರೆ, ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಕಾರಟಗಿ, ಕುಕನೂರು ಕಛೇರಿಗಳಿಗೆ ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ಪಶುಪಾಲನಾ ಪಶುವೈದ್ಯಕೀಯ ಮತ್ತು ಸೇವಾ ಇಲಾಖೆ ಉಪನಿರ್ದೇಶಕ ಡಾ ಪಿ.ಎಂ. ಮಲ್ಲಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಮಹಿಳೆಯರಿಗೆ ಉಚಿತ ಕೋಳಿ ಮರಿಗಳ ನೀಡುವ ಮೂಲಕ ಇದರೊಂದಿಗೆ ಅವರು ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಸಲುವಾಗಿ ಈ ಯೋಜನೆ ಅಡಿ ಅವರಿಗೆ ಉಚಿತವಾಗಿ ಕೋಳಿ ಮರಿಗಳನ್ನು ವಿತರಣೆ ಮಾಡಲಾಗುತ್ತದೆ ಹೀಗಾಗಿ ಮೇಲೆ ನೀಡಿರುವ ವಿಳಾಸವು ಕೊಪ್ಪಳ ಜಿಲ್ಲೆಗೆ ಸಂಬಂಧಪಟ್ಟದಾಗಿದ್ದು. ಇದರ ಸದುಪಯೋಗವನ್ನು ತಾವು ಪಡೆದುಕೊಳ್ಳಲು ಪತ್ರಿಕೆ ಪ್ರಕಟಣೆಯಲ್ಲಿ ಕೋರಿದೆ.
ಇದನ್ನು ಓದಿ:ಎಮ್ಮೆ ಅಥವಾ ಹಸು ಖರೀದಿ ಮಾಡಲು 65,000 ನೀಡಲು ಅರ್ಜಿ ಆಹ್ವಾನ
ಇದನ್ನು ಓದಿ:ಇಂದಿನಿಂದ ಡಿಸೆಂಬರ್ 8ನೇ ತಾರೀಖಿನವರೆಗೆ ಮಳೆ ಹವಮಾನ ಮುನ್ಸೂಚನೆ
https://krushisanta.com/Rainfall-alert-till-8th-December--in-Karnataka