ಅಣ್ಣ ತಮ್ಮಂದಿರ ಜಗಳದ ನಂತರ ನಿಮ್ಮ ಜಮೀನಿಗೆ? ದಾರಿ ಸಮಸ್ಯೆ ಅಧಿಕೃತವಾಗಿ ಬಗೆಹರಿಸುವುದು ಹೇಗೆ?
<ಜಮೀನಿಗೆ ದಾರಿ> <ಜಮೀನಿಗೆ ಬಂಡಿ ದಾರಿ> <ಜಮೀನಿಗೆ ಎತ್ತಿನ ಬಂಡಿ> <ದಾರಿ ಸಮಸ್ಯೆ>
ಆತ್ಮೀಯ ರೈತ ಬಾಂಧವರೇ ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆ ಇದ್ದರೆ ನೀವು ಸರ್ಕಾರದಿಂದ ಅಧಿಕೃತವಾಗಿ ದಾರಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಮತ್ತು ಅವರು ನಿಮಗೆ ದಾರಿಯನ್ನು ನೀಡುತ್ತಿಲ್ಲ ಹಾಗೂ ಜಗಳ ಮಾಡುತ್ತಿದ್ದರೆ ಅವರಿಗೆ ಕಾನೂನಿನ ಮೂಲಕ ಪಾಠ ತಿಳಿಸಬಹುದು. ಹಾಗೂ ಅವರಿಗೆ ಜಗಳ ಮಾಡಲು ನೀವು ಯಾವುದೇ ರೀತಿ ಅನುಮತಿ ನೀಡಲಾರದೆ ಸರ್ಕಾರದಿಂದ ಅಧಿಕೃತವಾಗಿ ಅವರೇ ಮುಂದೆ ನಿಂತು ನಿಮಗೆ ಜಮೀನಿನ ದಾರಿ ಮಾಡಿಕೊಡುತ್ತಾರೆ ಅದನ್ನು ಹೇಗೆ ಮಾಡುವುದು? ನಿಮಗೆ ಇದರ ಬಗ್ಗೆ ಮಾಹಿತಿ ಗೊತ್ತಾ ಗೊತ್ತಿಲ್ಲದಿದ್ದರೆ ಇಲ್ಲಿ ಕೆಳಗಡೆ ನೀಡಿರುವ ಮಾಹಿತಿ ಸರಿಯಾಗಿ ತಿಳಿದುಕೊಳ್ಳಿ?
ಜಮೀನಿನ ದಾರಿ ಸಮಸ್ಯೆ ಬಗೆಹರಿಸುವುದು ಹೇಗೆ?
ರೈತರೇ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ದಾರಿ ಸಮಸ್ಯೆ ಯಾವಾಗ ಬರುತ್ತದೆ ಅಂದರೆ ನೀವು ಎಷ್ಟು ದಿನ ಸಂಬಂಧ ಗಟ್ಟಿಯಾಗಿರುತ್ತದೆಯೋ ಅಲ್ಲಿಯವರೆಗೆ ಯಾವುದೇ ರೀತಿ ಸಮಸ್ಯೆಗಳು ಬರುವುದಿಲ್ಲ ಹಾಗೂ ನಿಮ್ಮಿಬ್ಬರಲ್ಲಿ ಅಣ್ಣತಮ್ಮಂದಿರಲ್ಲಿ ಕಲಹ ಉಂಟಾದಾಗ ದಾರಿ ಸಮಸ್ಯೆ ಹಾಗೂ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಅದರಲ್ಲಿ ನೀವು ದಿನನಿತ್ಯ ಬೇರೆ ಬೇರೆ ಪ್ರದೇಶಗಳಿಗೆ ಹೋಗಬೇಕಾದರೆ ದಾರಿ ಕಂಪಲ್ಸಿರಿಯಾಗಿ ಬೇಕಾಗುತ್ತದೆ. ಇಂತಹ ಸಮಯದಲ್ಲಿ ನಿಮಗೆ ದಾರಿ ನೀಡದೆ ಇದ್ದಲ್ಲಿ ನೀವು ಕೋರ್ಟ್ ಮತ್ತು ಕೇಸ್ ಹಾಗೂ ಕಚೇರಿ ಮೆಟ್ಟಲನ್ನು ಹತ್ತಬೇಕಾಗುತ್ತದೆ ಹತ್ತುವ ಮುನ್ನ ಇದು ಯಾವ ರೀತಿಯಾಗಿದೆ ಹಾಗೂ ಈ ಸಮಸ್ಯೆಗೆ ನನಗೆ ಸೂಕ್ತ ಪರಿಹಾರ ದೊರೆಯುತ್ತದೆಯೋ, ಇಲ್ಲ ಇದರ ಬಗ್ಗೆ ನೀವು ಮೊದಲು ನಿಖರವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು.
ಎರಡು ವಿಧಾನದಲ್ಲಿ ದಾರಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು?
ಜಮೀನಿಗೆ ಹೋಗುವ ದಾರಿಗಳು ಅದರಲ್ಲಿಯೂ ಪ್ರಮುಖವಾಗಿ ರೈತರಿಗೆ ತಾವು ದಿನನಿತ್ಯ ಜಮೀನಿಗೆ ಹೋಗಿ ಬರಲು ಹಾಗೂ ಇನ್ನಿತರ ವಾಹನಗಳನ್ನು ಓಡಾಡಿಸಲು ಹಾಗೂ ಕೃಷಿ ಚಟುವಟಿಕೆಗಳಿಗೆ ಬೇಕಾದ ಯಂತ್ರಗಳನ್ನು ಬಳಸಲು ಹಾಗೂ ಬೆಳೆದ ಉತ್ಪನ್ನವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ವಾಹನಗಳ ಅವಶ್ಯಕತೆ ಇದ್ದೇ ಇರುತ್ತದೆ ಹಾಗೂ ಅದಕ್ಕೆ ಆದ ದಾರಿ ಕೂಡ ಬೇಕಾಗುತ್ತದೆ ಅದನ್ನು ಇಲ್ಲದಿದ್ದರೆ ನೀವು ಬೇರೆಯವರಿಗೆ ಜಮೀನು ಮಾರಾಟ ಮಾಡಲು ಸಾಧ್ಯವಿಲ್ಲ ಮತ್ತು ಅದನ್ನು ಯಾರು ತೆಗೆದುಕೊಳ್ಳಲು ಒಪ್ಪುವುದಿಲ್ಲ.
ಇಸ್ಮೆಂಟ್ ಆಕ್ಟ್? ಏನಿದು?
ಇದು ಒಂದು ಕೃಷಿ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಜಮೀನಿನ ದಾರಿ ಸಮಸ್ಯೆಗೆ ನಾವು ಇದರಲ್ಲಿ ಪರಿಹಾರವನ್ನು ಪಡೆದುಕೊಳ್ಳಬಹುದು ಇದರಲ್ಲಿ ಎರಡು ರೀತಿ ಬರುತ್ತವೆ. ಒಂದು ಮುಂಭಾಗದಲ್ಲಿರುವ ರೈತನು ಹಿಂಭಾಗದಲ್ಲಿರುವ ರೈತನಿಗೆ ಜಮೀನಿಗೆ ಹೋಗಲು ದಾರಿಯನ್ನು ನೀಡದೆ ಇದ್ದಲ್ಲಿ ನೀವು ಕೋರ್ಟಲ್ಲಿ ಅರ್ಜಿ ಹಾಕುವ ಮೂಲಕ ದಾರಿಯನ್ನು ಪಡೆದುಕೊಳ್ಳಬಹುದು ಇನ್ನೂ ಎರಡನೇ ರೀತಿ ನೀವು ಈಗಾಗಲೇ ಸುಮಾರು 20 ವರ್ಷಗಳಿಂದ ಅದೇ ದಾರಿಯನ್ನು ಬಳಸುತ್ತಿದ್ದು ಹಾಗೂ ನಿಮ್ಮ ದಿನನಿತ್ಯ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದೀರಿ, ಆದರೆ ಇದೀಗ ನಿಮಗೆ ಮುಂಬಾಗದ ರೈತನು ದಾರಿಯನ್ನೂ ಬಂದ್ ಮಾಡಿದ್ದರೂ ಸಹ ಅವನ ವಿರುದ್ಧ ಕೇಸ್ ಅನ್ನು ದಾಖಲೆ ಮಾಡಿ ಕೋರ್ಟ್ ಮೂಲಕ ನೀವು ದಾರಿಯನ್ನು ಪಡೆಯಬಹುದು.
ಇಸ್ಮೆಂಟ್ ಕಸ್ಟಮ್ ಆಕ್ಟ್?
ಇದು ಕೂಡ ಕೋರ್ಟಿನಲ್ಲಿ ನೀವು ನಿಮ್ಮ ಜಮೀನಿಗೆ ದಾರಿ ಇಲ್ಲದಿದ್ದರೆ ಇದರ ಮೂಲಕ ಸಹ ನೀವು ದಾರಿಯನ್ನು ಪಡೆದುಕೊಳ್ಳಬಹುದು ಆದರೆ ಇದಕ್ಕೆ ಕಂಡಿಶನ್ ಹೇಗೆ ಇರುತ್ತದೆ ಎಂದರೆ ನೀವು ನಿಮ್ಮ ತಲೆಮಾರಿನಿಂದ ಅದೇ ದಾರಿಯನ್ನು ನೀವು ಬಳಸುತ್ತಿದ್ದು ಹಾಗೂ ಕೃಷಿ ಚಟುವಟಿಕೆಯನ್ನು ಸುಮಾರು ತಲೆಮಾರಿನಿಂದ ನೀವು ಮಾಡಿಕೊಂಡು ಬರುತ್ತಿದ್ದರೆ ಇದೀಗ ಅವರು ನಿಮಗೆ ಜಮೀನುಧಾರಿ ನೀಡದೆ ಇದ್ದಲ್ಲಿ ಅವರ ವಿರುದ್ಧ ನೀವು ಕೋರ್ಟಿನ ಮೂಲಕ ದಾರಿಯನ್ನು ಪಡೆದುಕೊಳ್ಳಬಹುದು ಈ ಮೂರು ವಿಧಾನಗಳಿಂದ ದಾರಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ನಿಮಗೂ ಕೂಡ ದಾರಿ ಸಮಸ್ಯೆ ಇದ್ದರೆ ಯಾವುದು ಸೂಕ್ತ ಹೊಂದುವ ವಿಧಾನವನ್ನು ತಿಳಿದುಕೊಂಡು ಕೂಡಲೇ ನಿಮ್ಮ ದಾರಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿರಿ.
ಇದನ್ನು ಓದಿ:ಒಂದೇ ವಾರದಲ್ಲಿ ಉಳಿದ ಪರಿಹಾರ ಜಮಾ! ಈ ರೈತರಿಗೆ ಮಾತ್ರ ದೊರೆಯಲಿದೆ ಉಳಿದ ಬರಗಾಲ ಪರಿಹಾರ ಪೇಮೆಂಟ್
https://krushisanta.com/Baragala-Parihar-payment
ಇದನ್ನು ಓದಿ:ಐದೇ ನಿಮಿಷದಲ್ಲಿ ಬೇಸಿಗೆ ಬೆಳೆ ಸರ್ವೆ ಮಾಡುವುದು ಹೇಗೆ? ಬೆಳೆ ಪರಿಹಾರ ಪಡೆಯಬೇಕಾದರೆ ಕಂಪಲ್ಸರಿ ಆಗಿ ಮಾಡಲೇಬೇಕು
https://krushisanta.com/How-to-do-summer-crop-survey-using-Summer-crop-survey-2023-24-Mobile-App