ಇಲ್ಲಿಯವರೆಗೂ ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಪರಿಹಾರ ಹಣ ಜಮ್ ಆಗಿದೆ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿ!

<Parihar> <Parihar Payment> <Parihar status> < ಬೆಳೆ ಹಾನಿ ಪರಿಹಾರ ಜಮಾ ಸ್ಟೇಟಸ್> < ಬರ ಪರಿಹಾರ ಸ್ಟೇಟಸ್ > < ಬರಗರ ಪರಿಹಾರ ಸ್ಟೇಟಸ್> < ರಾಜ್ಯದ ಬರಹನಿ ಪರಿಹಾರ ಸ್ಟೇಟಸ್>

Jun 26, 2024 - 07:06
 0
ಇಲ್ಲಿಯವರೆಗೂ ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಪರಿಹಾರ ಹಣ ಜಮ್ ಆಗಿದೆ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿ!

ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ಹಾಗೂ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಇಲ್ಲಿಯವರೆಗೆ ನಿಮ್ಮ ಖಾತೆಗೆ ಎಷ್ಟು ಪರಿಹಾರ ಹಣ ಜಮಾ ಆಗಿದೆ ಅಂದರೆ ಬರಗಾಲ ಪರಿಹಾರ 2023 24 ನೇ ಸಾಲಿನ ಮುಂಗಾರು ಹಂಗಾಮಿನ ವರ್ಷದಲ್ಲಿ ಕರ್ನಾಟಕ ಸರ್ಕಾರವು ಬರಗಾಲ ಘೋಷಣೆ ಮಾಡಿದ್ದು ಹಾಗೂ ಬರಗಾಲ ಘೋಷಣೆ ಮಾಡಿದ ರೈತರಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು.

 ಬರಗಾಲ ಪರಿಹಾರ ಘೋಷಣೆ ಮಾಡಿದ ನಂತರ ಕೆಲವು ದಿನಗಳ ಮೇಲೆ ರೈತರ ಖಾತೆಗೆ ಬರಗಾಲ ಪರಿಹಾರ ಹಣವು ಜಮಾ ಆಯ್ತು, ಸುಮಾರು ಕರ್ನಾಟಕದಲ್ಲಿ 32 ಲಕ್ಷ ರೈತರ ಖಾತೆಗಳಿಗೆ ಪರಿಹಾರ ಹಣ ವರ್ಗಾವಣೆ ಮಾಡಲಾಗಿದೆ ಮೊದಲನೇ ಕಂತಿನಲ್ಲಿ 2000 ಹಾಗೂ ಎರಡನೇ ಕಂತಿನ ಬೇರೆಬೇರೆ ಅನುಗುಣವಾಗಿ ಅಂದರೆ ಬೆಳೆಗಳಿಗೆ ಅನುಗುಣವಾಗಿ ಸಾಮಾನ್ಯ ಬೆಳೆಗಳು ತೋಟಗಾರಿಕಾ ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳಿಗೆ ಸಂಬಂಧಪಟ್ಟಂತೆ ಆಯಾ ಬೆಳೆಗಳಿಗೆ ನಿಗದಿ ಮಾಡಿರುವ ಹಣವನ್ನು ಅವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ.

ನಿಮ್ಮ ಮೊಬೈಲ್ ಸಂಖ್ಯೆ ಹಾಕಿ ಇಲ್ಲಿಯವರೆಗೆ ಪರಿಹಾರ ಎಷ್ಟು ಜಮಾ ಆಗಿದೆ ಚೆಕ್ ಮಾಡಿ?

 ಕೆಳಗಡೆ ನೀಡಿರುವ ವಿಧಾನವನ್ನು ಬಳಸಿಕೊಂಡು ನೀವು ಇಲ್ಲಿಯವರೆಗೆ ಜಮಾ ಆಗಿರುವ ಅದರಲ್ಲಿಯೂ ಬರಗಾಲ ಪರಿಹಾರ ಎಷ್ಟು ಹಣ ನಿಮ್ಮ ಜಮೀನಿನ ಸರ್ವೆ ನಂಬರ್ ಮೇಲೆ ಬಂದಿದೆ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಅದನ್ನ ತಿಳಿದುಕೊಳ್ಳಬೇಕು. ಅದನ್ನು ತಿಳಿದುಕೊಳ್ಳಬೇಕಾದರೆ ಮೊದಲಿಗೆ ನೀವು ನಾವು ನೀಡಿರುವ ಮಾಹಿತಿಯನ್ನು ನೋಡಿಕೊಳ್ಳಬೇಕು.

ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಅಧಿಕೃತ ಪರಿಹಾರ ಪೋರ್ಟಲ್ ಪರಿಹಾರ ಹಣ ಸಂದಾಯ ವರದಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಲಿಂಕ್ ಅನ್ನು ನಾವು ಇಲ್ಲಿ ಕೆಳಗಡೆ ನೀಡಿದ್ದೇವೆ, ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಈ ಪೇಜ್ ಓಪನ್ ಮಾಡಬಹುದು.

https://parihara.karnataka.gov.in/service92/

ಹಂತ 2: ಲಿಂಕ್ ಓಪನ್ ಆಗಿರುತ್ತದೆ ಅದರಲ್ಲಿ ನಿಮಗೆ ಪ್ರಸ್ತುತ ವರ್ಷ 2023 24ನ್ನು ಆಯ್ಕೆ ಮಾಡಿಕೊಂಡ ನಂತರ ನೀವು ನಿಮ್ಮ ಮುಂಗಾರು ಹಂಗಾಮು ಆಯ್ಕೆಮಾಡಿಕೊಂಡು ಅದಾದ ನಂತರ ಬರ ಎಂದು ಇವತ್ತಿನ ವಿಧ ಆಯ್ಕೆ ಮಾಡಿಕೊಂಡು ನಂತರ ಮೇಲೆ ಕ್ಲಿಕ್ ಮಾಡಬೇಕು.

ಹಂತ 3: ಈಗ ಕೆಳಗಡೆ ಮತ್ತೆ ನಾಲ್ಕು ಆಯ್ಕೆಗಳು ಕಾಣಿಸುತ್ತವೆ ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ ಅದರಲ್ಲಿ ನಿಮ್ಮ ಹತ್ತು ಸಂಖ್ಯೆಯ ಮೊಬೈಲ್ ನಂಬರನ್ನು ಸರಿಯಾಗಿ ಟೈಪ್ ಮಾಡಿ ಮುಂದೆ ವರದಿ ಪಡೆಯಿರಿ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.

ಹಂತ 4: ಈಗ ನೀವು ಮಾಹಿತಿ ಓಪನ್ ಮಾಡಿರುವ ಸರ್ವೆ ನಂಬರ್ ಅಥವಾ ಮೊಬೈಲ್ ನಂಬರ್ ಸಹಾಯದಿಂದ ನೀವು ಓಪನ್ ಮಾಡಿರುತ್ತೀರಿ ಅದರ ಮಾಹಿತಿ ಮಾತ್ರ ಇದರಲ್ಲಿ ಬರೆದಿರಲಾಗಿರುತ್ತದೆ ಈ ಮೊಬೈಲ್ ನಂಬರ್ ಯಾವ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆಯೋ, ಆಧಾರ್ ಕಾರ್ಡ್ ಸಂಖ್ಯೆಗೆ ಮೊಬೈಲ್ ನಂಬರ್ ಲಿಂಕ್ ಆಗಿರುತ್ತದೆ ಅದೇ ಮೊಬೈಲ್ ನಂಬರನ್ನು ನೀವು ಇಲ್ಲಿ ಟೈಪ್ ಮಾಡಿದ ನಂತರ ನಿಮಗೆ ಪರಿಹಾರ ಹಣ ಎಷ್ಟು ಕಂತುಗಳು ಜಮಾ ಆಗಿವೆ ಮತ್ತು ಯಾವ ದಿನಾಂಕದಂದು ಜಮಾ ಆಗಿವೆ ಮತ್ತು ಯಾವ ಬೆಳೆಗೆ ಜಮಾ ಆಗಿವೆ ಎಂದು ತೋರಿಸುತ್ತದೆ.

ಇದನ್ನು ಓದಿ:ಈ 18 ಲಕ್ಷ ರೈತರ ಖಾತೆಗೆ ಮುಂದಿನ ವಾರ ಪರಿಹಾರ! ನಿಮ್ಮ ಹೆಸರು ಚೆಕ್ ಮಾಡಿ:ಕೃಷಿ ಸಚಿವರು

https://krushisanta.com/18-lakh-Farmers-list-will-get-additional-benifits-of-Parihar

ಇದನ್ನು ಓದಿ:ಇಂದಿನಿಂದ ರಾಜ್ಯದಲ್ಲಿ ಮತ್ತೆ ನಾಲ್ಕು ದಿನಗಳ ಕಾಲ ಮಳೆ ಅಲರ್ಟ್ ಘೋಷಣೆ

https://krushisanta.com/Rainfall-status-and-alert-in-Karnataka

ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗದವರ ಲಿಸ್ಟ್ ಬಿಡುಗಡೆ!

https://krushisanta.com/RTC-to-Aadhar-not-linked-farmer-list

ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗದವರ ಲಿಸ್ಟ್ ಬಿಡುಗಡೆ!

https://krushisanta.com/RTC-to-Aadhar-not-linked-farmer-list

ಇದನ್ನು ಓದಿ:ಈ ಪಟ್ಟಿಯಲ್ಲಿರುವ ರೈತರ ಖಾತೆಗೆ ಇನ್ನೂ ಪಿಎಂ ಕಿಸಾನ್ ಕಂತಿನ ಹಣ ಜಮಾ ಆಗೇ ಇಲ್ಲ

https://krushisanta.com/This-farmers-PM-kisan-not-credited-with-pm-Kisan-17th-installment

admin B.Sc(hons) agriculture College of agriculture vijayapura And provide consultant service