ಕೃಷಿ ಬಿಜಿನೆಸ್ ಮಾಡಲು 25 ಲಕ್ಷ ರೂಪಾಯಿಗಳು ಸಹಾಯಧನ ನೀಡಲು ಅರ್ಜಿ ಆಹ್ವಾನ! ಇವತ್ತೇ ಅರ್ಜಿ ಹಾಕಿ
<PMFME schme> < ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಯೋಜನೆ> < ಕೃಷಿ ಬಿಜಿನೆಸ್ ಮಾಡಲು ಸಹಾಯಧನ> < ಕೃಷಿ ಬಿಜಿನೆಸ್ ಮಾಡಲು ಅರ್ಜಿ ಆಹ್ವಾನ>
ಆತ್ಮೀಯರೇ ನೀವು ಕೃಷಿ ಬಿಟ್ಟು ಬೇರೆ ಬೇರೆ ಬ್ಯುಸಿನೆಸ್ ಗಳು ಮಾಡುತ್ತಿದ್ದರೆ ಅಂದರೆ ಕೃಷಿಯೇತರ ಚಟುವಟಿಕೆಗಳು ಅಂದರೆ ಕೃಷಿಯಿಂದ ಬಂದಿರುವ ಮೂಲ ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಬೇರೆ ಒಂದು ವಸ್ತುವಾಗಿ ಬದಲಾವಣೆ ಮಾಡುವಂತಹ ಯಾವುದೇ ಬಿಸಿನೆಸ್ ಕೆಳಗಡೆ ನೀಡಿರುವ ಬಿಸಿನೆಸ್ ನೀವು ಮಾಡಬಹುದು ಹಾಗೂ ಇದಕ್ಕೆ ನಿಮಗೆ ಹತ್ತು ಲಕ್ಷದಷ್ಟು ಸಹಾಯಧನ ಸಿಗುತ್ತದೆ. ಅದಕ್ಕಾಗಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ ಈಗಾಗಲೇ ಆನ್ಲೈನ್ ನಲ್ಲಿ ಅರ್ಜಿಗಳು ಕೂಡಲೇ ನೀವು ಯಾವ ಬಿಸಿನೆಸ್ ಮಾಡುತ್ತೀರಿ ಈಗಲೇ ತಿಳಿದುಕೊಂಡು ತಕ್ಷಣ ಅರ್ಜಿಯನ್ನು ಭರ್ತಿ ಮಾಡಬೇಕು.
ಯಾವುದೆಲ್ಲ ಸೌಲಭ್ಯಗಳಿಗೆ ಅರ್ಜಿಯನ್ನು ಸಲ್ಲಿಸಬಹುದು?
*ಹಿಟ್ಟಿನ ಗಿರಣಿಗಳು ಮತ್ತು ಪ್ಯಾಕಿಂಗ ಮಷಿನ್.
* ಎಣ್ಣೆ ಗಾಣಗಳು.
* మిని దాల మిలో.
* ಬೇಕರಿ ಉತ್ಪನ್ನಗಳ ತಯಾರಿಕೆ.
* ಅರಿಶಿಣ ಸಂಸ್ಕರಣೆ, ತೆಂಗಿನಕಾಯಿ ಉತ್ಪನ್ನಗಳ ತಯಾರಿಕೆ.
* ಹಪ್ಪಳ,ಸಂಡಿಗೆ, ಉಪ್ಪಿನಕಾಯಿ ತಯಾರಿಕೆ.
* ಚಕ್ಲಿ, ನಿಪ್ಪಟ್ಟು, ಪಾನಿಪೂರಿ, ಕೋಡುಬಳೆ, ಮಿಕ್ಸಚರ್, ಚಿಪ್ಸ್ ತಯಾರಿಕೆ.
* ಕಡ್ಲೆಪುರಿ ಮತ್ತು ಮಂಡಳ ತಯಾರಿಕೆ.
* ಚಪಾತಿ/ಪರೋಟ/ಪೂರಿ/ಹೋಳಿಗೆ ಉತ್ಪನ್ನಗಳ ತಯಾರಿಕೆ.
* ಮಸಾಲ ಪದಾರ್ಥಗಳು/ಸಾಂಬಾರು ಉತ್ಪನ್ನಗಳ ತಯಾರಿಕೆ.
* ಹಾಲಿನ ಉತ್ಪನ್ನಗಳ ತಯಾರಿಕೆ.
* ಸಿಹಿ ತಿಂಡಿಗಳು/ಖಾರಾ ತಿಂಡಿಗಳ ತಯಾರಿಕೆ.
* ಬೆಲ್ಲ ತಯಾರಿಕಾ ಘಟಕ, ಕಡ್ಲೆ ಮಿಠಾಯಿ ತಯಾರಿಕೆ.
* ಕಾಫಿಪುಡಿ, ಟೀ ಪುಡಿ ಸಂಸ್ಕರಣಾ ಘಟಕ.
* ಚಾಕೋಲೆಟ್ ತಯಾರಿಕೆ.
* ಜೇನು ಸಂಸ್ಕರಣಾ ಘಟಕ.
* ಸಿರಿಧಾನ್ಯಗಳಿಂದ ಉಪ ಉತ್ಪನ್ನಗಳ ತಯಾರಿಕೆ.
* ಫೂಟ್ ಪ್ರೋಸೆಸ್ಸಿಂಗ, ಐಸ್ಟಿಮ್ ತಯಾರಿಕೆ.
* ಹಸಿಮೇಣಸಿನಕಾಯಿ ಮತ್ತು ಬೊಮೆಟೊ ಪೇಸ್ಟ್ ಮತ್ತು ಸಾಸ್ ತಯಾರಿಕೆ.
* ಶೇವಿಗೆ, ರವಾ, ನೋಡಲ್ಸ್ ತಯಾರಿಕೆ.
* ಇನ್ನಿತರ ಯಾವುದೇ ಆಹಾರ ಉತ್ಪನ್ನಗಳ ತಯಾರಿಕೆ ಘಟಕಗಳ ಸ್ಥಾಪನೆಗೆ ಅವಕಾಶ ( ಹೋಟೇಲ್, ರೆಸ್ಟೋರೆಂಟ್ ನಂತಹ ಘಟಕಗಳನ್ನು ಹೊರತುಪಡಿಸಿ).
ಯೋಜನೆಯ ಗುಣಲಕ್ಷಣಗಳು
ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಹಾಗೂ ಚಾಲ್ತಿಯಲ್ಲಿರುವ ಉದಿಮೆಗಳನ್ನು ವಿಸ್ತರಿಸಲು ಅವಕಾಶ ವಯಸ್ಸಿನ ಮಿತಿ ಹಾಗೂ ವಿದ್ಯಾರ್ಹತೆ ೧೮ ವರ್ಷ ಮೇಲ್ಪಟ್ಟವರು ಮತ್ತು ಯಾವುದೇ ಕನಿಷ್ಠ ವಿದ್ಯಾರ್ಹತೆ ಇಲ್ಲ. ಇತರೇ ಸರ್ಕಾರಿ ಯೋಜನೆಗಳಲ್ಲಿ ಸಹಾಯಧನ ಸಂಪರ್ಕಿತ ಬ್ಯಾಂಕ ಸಾಲ ಪಡೆದಿದ್ದರೂ ಸಹ ಅರ್ಹರು.
ಹೊಸ ಉದ್ಯಮಗಳ ಜೊತೆಗೆ ಈಗಾಗಲೇ ಚಾಲ್ತಿಯಲ್ಲಿರುವ ಉದ್ಯಮಗಳಿಗೂ ಅವಕಾಶ. ಯೋಜನಾ ವರದಿ ತಯಾರಿಕೆಗೆ ಸಂಪನ್ಮೂಲ ವ್ಯಕ್ತಿಗಳಿಂದ ಸಹಾಯ ಹಸ್ತ. ವೈಯಕ್ತಿಕ ಉದ್ದಿಮೆಗಳಿಗೆ, ಮಾಲಿಕತ್ವದ ಸಂಸ್ಥೆಗಳಿಗೆ, ಖಾಸಗಿ ಸಂಸ್ಥೆಗಳಿಗೆ, ರೈತ ಉತ್ಪಾದಕ ಸಂಸ್ಥೆಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಸಾಲ ಸಂಪರ್ಕಿತ ಶೇ.೩.೫ರಷ್ಟು ಸಹಾಯಧನ ಜೊತೆಗೆ ರಾಜ್ಯ ಸರಕಾರದಿಂದ ಹೆಚ್ಚುವರಿ ೧೫% ಸಹಾಯ ಧನ, ಗರಿಷ್ಠ ರೂ. ೧೫ ಲಕ್ಷಗಳು ಅಥವಾ ಶೇ. ೫೦% ರಷ್ಟು ಪಡೆಯಲು ಅವಕಾಶ (ಯಾವುದು ಕಡಿಮೆಯೋ ಅದನ್ನು)
ಅರ್ಜಿ ಸಲ್ಲಿಸುವಾಗ ಬೇಕಾಗುವ ದಾಖಲೆಗಳು ಏನು?
ಅಗತ್ಯ ದಾಖಲೆಗಳು??
೧) ಆಧಾರ ಕಾರ್ಡ.
೨) ಪಾನ್ ಕಾರ್ಡ.
೩) ರೆಷನ್ ಕಾರ್ಡ/ವಿದ್ಯುತ ಬಿಲ್.
೪) ಹಿಂದಿನ ೬ ತಿಂಗಳ ಬ್ಯಾಂಕ್ ಸ್ಟೇಟಮೆಂಟ್.
೫) ಉದ್ಯಮ ನಡೆಸುವ ಸ್ಥಳದ ಬಾಡಿಗೆ ಒಪ್ಪಂದದ ಪತ್ರ.
೬) ಯಂತ್ರೋಪಕರಣಗಳ ಕೊಟೆಶನ.
೭) ಪಂಚಾಯತ ಪರವಾನಗಿ ಪತ್ರ.
೭) ಎಫ್.ಎಸ್.ಎಸ್.ಎ.ಐ. ಮತ್ತು ಉದ್ಯಮ ಆಧಾರ.
ಯೋಜನೆಗೆ ಸಂಬಂಧಪಟ್ಟ ಅಧಿಕೃತ ಲಿಂಕುಗಳು -https://pmfme.mofpi.gov.in/pmfme/#/Home-Page
ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಆತ್ಮ ಯೋಜನೆ ಸಹಾಯಕ ನಿರ್ದೇಶಕರನ್ನು ನೀವು ಭೇಟಿ ನೀಡಬೇಕು ಅಥವಾ ನೀವು ಕೃಷಿ ಇಲಾಖೆಯನ್ನು ಭೇಟಿ ನೀಡಬಹುದು.
ಇದನ್ನು ಓದಿ:ಪಹಣಿ ಮತ್ತು ಸರ್ವೆ ಸ್ಕೆಚ್ ಉಚಿತವಾಗಿ Cost ನಿಮಿಷದಲ್ಲಿ ಡೌನ್ಲೋಡ್ ಮಾಡುವುದು ಹೇಗೆ?
https://krushisanta.com/How-to-download-RTC-and-land-Ssurvey-sketch--in-1-minute
ಇದನ್ನು ಓದಿ:LNino ಪರಿಣಾಮ ಅಂತ್ಯಗೊಳ್ಳಲಿದೆ! ನಿಜವಾದ ಮುಂಗಾರು ಪ್ರಾರಂಭ ಯಾವಾಗ
https://krushisanta.com/Climate-weather-forecast-LNINO-effect-ends
ಇದನ್ನು ಓದಿ:ಜಪಾನ್ ಟೆಕ್ನಾಲಜಿ ನೆಲದಲ್ಲಿ ನೀರು ಎಷ್ಟು ಅಡಗಿದೆ ಮತ್ತು ಎಷ್ಟಿದೆ 90% ನೀರು ಸಿಗುತ್ತೆ. https://youtu.be/3l9XLgCzjAU
ಇದನ್ನು ಓದಿ:ಡೋಲ್ ಅಥವಾ ಪಿಂಚಣಿ ಹಣ ನಿಮಗೆ ಎಷ್ಟು ಬರುತ್ತದೆ? ಹಳ್ಳಿ ವಾರ್ರು ಲಿಸ್ಟ್ ಚೆಕ್ ಮಾಡಿ https://krushisanta.com/Pinchani-payment-status-list