ಪಿಎಂ ಕಿಸಾನ್ 17ನೇ ಕಂತಿನಹಳ್ಳಿ ವಾರು ಅಂತಿಮ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ಹೆಸರು ಚೆಕ್ ಮಾಡಿ
>ಹಳ್ಳಿ ವಾರ್ರು ಪಿಎಂ ಕಿಸಾನ್ ಪಡ್ತಿ ಬಿಡುಗಡೆ>
ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ಹಾಗೂ ತಮ್ಮೆಲ್ಲರಿಗೂ ಸಿಹಿ ಸುದ್ದಿ ಏನೆಂದರೆ ಪಿಎಂ ಕಿಸಾನ್ ಕಂತಿನ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಬಿಟ್ಟಿದ್ದಾರೆ ಈಗಾಗಲೇ 16 ಕಂತುಗಳು ರೈತರ ಖಾತೆಗಳಿಗೆ ವರ್ಗಾವಣೆ ಆಗಿರುವುದು ಸಂತೋಷದ ಸುದ್ದಿಯಾಗಿದೆ, ಇದಲ್ಲದೇನೇ 17ನೇ ಕಂತು ಕೂಡ ಎಲೆಕ್ಷನ್ ಆದ ಮೇಲೆ ಹಾಕಲಾಗುತ್ತದೆ ಹಾಗೂ ಹಾಕುವ ಮುಂಚೆ ಅರ್ಹ ಫಲಾನುಭವಿಗಳ ಪಟ್ಟಿಯು ಪ್ರತಿ ಕಂತಿನಂತೆ ಈ ಕಂತಿನ ಪಟ್ಟಿ ಕೂಡ ಬಿಡುಗಡೆ ಮಾಡಲಾಗಿದೆ ಹಾಗೂ ಹಳ್ಳಿವಾರು ಪಟ್ಟಿ ಬಿಡುಗಡೆ ಆಗಿರುತ್ತದೆ ಹಾಗೂ ಕೆಲವೊಬ್ಬರ ಹೆಸರು ತಿದ್ದುಪಡಿ ಆಗಲಿ ಅಥವಾ ಕೆಲವೊಂದು ಅರ್ಜಿಗಳು ತಿರಸ್ಕೃತಗೊಂಡಿವೆ.
17ನೇ ಕಂತಿನ ಹಣ ಜಮಾ ಆಗುವುದು ಯಾವಾಗ?
ಚುನಾವಣೆ ಇರುವುದರಿಂದಾಗಿ ಅದರಲ್ಲಿಯೂ ಕೇಂದ್ರ ಸರ್ಕಾರದ ಚುನಾವಣೆ ಆಗಿರುವುದರಿಂದ ಕನಿಷ್ಠ ಪಕ್ಷ ಮೇ 7ರವರೆಗೆ ಕಂತಿನ ಹಣ ಬರುವುದಿಲ್ಲ ಹಾಗೂ ಅದಾದ ನಂತರ ಯಾವುದೇ ದಿನದಂದು ಒಟ್ಟಾರೆಯಾಗಿ ಮೇ ತಿಂಗಳ ಕೊನೆಯ ದಿನಾಂಕದ ಒಳಗಡೆನೆ 17ನೇ ಕಂತಿನ ಹಣವನ್ನು ಅರ್ಹ ಫಲಾನುಭವಿಗಳಿಗೆ ಅಂದರೆ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.
17ನೇ ಕಂತಿನ ಪಟ್ಟಿಯಲ್ಲಿ ನನ್ನ ಹೆಸರು ಇದೆಯೇ?
ಹೌದು, ಅದನ್ನು ನೀವು ಚೆಕ್ ಮಾಡಬೇಕಾದರೆ ಆನ್ಲೈನ್ ನಲ್ಲಿ ಮಾಡಬೇಕು, ಅಥವಾ ನೀವು ನಿಮ್ಮ ರೈತ ಸಂಪರ್ಕ ಕೇಂದ್ರಗಳಲ್ಲಿ ಹೋಗಿ ನಮಗೆ 17ನೇ ಕಂತಿನ ಹಣದಲ್ಲಿ ನಮ್ಮ ಹೆಸರು ಇದೆ ಎಂದು ಕೇಳಿದರೆ ಅವರು ಕೂಡ ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿ ಕೇಳಬಹುದು ಅಷ್ಟೊಂದು ರೈತರಿಗೆ ಸಮಯ ಇರುವುದಿಲ್ಲ ಹೀಗಾಗಿ ಆನ್ಲೈನಲ್ಲಿ ಕೆಲವೊಬ್ಬರು ಆಂಡ್ರಾಯ್ಡ್ ಮೊಬೈಲ್ ಗಳು ಉಪಯೋಗಿಸುತ್ತಾರೆ ಅವರಿಗೆ ಸುಲಭವಾಗಿ ನಾವು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳುವುದು ಎಂದು ತಿಳಿಸಿಕೊಡುತ್ತೇವೆ.
ಮೊದಲಿಗೆ ಇಲ್ಲಿ ನೀಡಿರುವ ಆನ್ಲೈನ್ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು ಇದು ಪಿಎಂ ಕಿಸಾನ್ ಲಿಂಕ್ ಆಗಿದ್ದು ಇದನ್ನು ನೀವು ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆಗಿದೆ ನಂತರ, https://pmkisan.gov.in/Rpt_BeneficiaryStatus_pub.aspx ಇದನ್ನು ನಾವು ಪಿಎಂ ಕಿಸಾನ್ ವಿಲೇಜ್ ಡ್ಯಾಶ್ ಬೋರ್ಡ್ ಎಂದು ಕರೆಯುತ್ತೇವೆ ಇದರಲ್ಲಿ ನೀವು ರಾಜ್ಯಾದ್ಯಂತ ಅಥವಾ ನೀವು ದೇಶದ ಯಾವುದೇ ಮೂಲೆಯ ರೈತರಾಗಿದ್ದರು ಕೂಡ ನೀವು ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಬಹುದು ಅದಕ್ಕಾಗಿ ತುಂಬಾ ಸುಲಭವಾಗಿ ವಿಧಾನ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಇಲ್ಲಿ ನಿಮಗೆ ಮೊದಲಿಗೆ ರಾಜ್ಯವನ್ನು ಆಯ್ಕೆ ಮಾಡಲು ಕೇಳುತ್ತದೆ ನಿಮಗೆ ಸಂಬಂಧಪಟ್ಟಂತೆ ನೀವು ಕರ್ನಾಟಕ ಎಂದು ಆಯ್ಕೆ ಮಾಡಿಕೊಳ್ಳಬೇಕು. ಹಾಗೂ ನಿಮ್ಮ ಜಿಲ್ಲೆ ಯಾವುದು ಆಗಿರುತ್ತದೆ ಅದೇ ಜಿಲ್ಲೆಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಅದೇ ರೀತಿ ನಂತರ ನಿಮಗೆ ಇಲ್ಲಿ ತಾಲೂಕು ಅಥವಾ ಬ್ಲಾಕ್ ಅನ್ನು ಆಯ್ಕೆ ಮಾಡಲು ಕೇಳುತ್ತದೆ ಅದನ್ನು ಸಹ ಸರಿಯಾಗಿ ನಿಮಗೆ ಸಂಬಂಧ ಯಾವುದು ಪಡುತ್ತದೆಯೋ ಅದನ್ನೇ ಆಯ್ಕೆ ಮಾಡಿ ಅದಾದ ನಂತರ ನಿಮ್ಮ ಊರನ್ನ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು ಈಗ ನಿಮಗೆ ಸಂಪೂರ್ಣವಾದ ವಿವರಗಳನ್ನು ಬರುತ್ತದೆ.