ರೈತರ ಸಾಲ ಮನ್ನಾ ವಿಚಾರ ಕುರಿತು ನಿಕಟವಾದ ಮಾಹಿತಿ ಪ್ರಕಟ! ಯಾವ ರೈತರ ಸಾಲ ಮನ್ನಾ ಮಾಡಲಾಗುತ್ತದೆ?

<Raitar sala manna> < ಮತ್ತೆ ರೈತರ ಸಾಲ ಮನ್ನಾ ವಾಗುತ್ತ> < ಮತ್ತೆ ರೈತರ ಸಾಲ ಮನ್ನಾ ವಾಗಲಿದೆ> < ರೈತರ ಸಾಲ ಮನ್ನಾ ವಿಚಾರ>

Jul 25, 2024 - 09:23
 0
ರೈತರ ಸಾಲ ಮನ್ನಾ ವಿಚಾರ ಕುರಿತು ನಿಕಟವಾದ ಮಾಹಿತಿ ಪ್ರಕಟ! ಯಾವ ರೈತರ ಸಾಲ ಮನ್ನಾ ಮಾಡಲಾಗುತ್ತದೆ?

ರೈತರ ಸಾಲಮನ್ನಾ ಪ್ರಸ್ತಾವ ಸರಕಾರದ ಮುಂದಿಲ್ಲ : ಸಚಿವ ಕೆ.ಎನ್.ರಾಜಣ್ಣ ಬೆಂಗಳೂರು: ರೈತರ ಸಾಲಮನ್ನಾ ಮಾಡುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ. ಸಾಲದ ಬೇಡಿಕೆ ಸಲ್ಲಿಸುವ ಎಲ್ಲ ರೈತರಿಗೂ ಸಹಕಾರಿ ಸಂಘಗಳ ಹಣಕಾಸು ಲಭ್ಯತೆಯನುಸಾರ ಸಾಲ ನೀಡುವ ಪ್ರಯತ್ನ ನಡೆಸಲಾಗುತ್ತದೆ ಎಂದು ಸಹಕಾರಿ ಸಚಿವ ಕೆ.ಎನ್‌.ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಪರಿಷತ್ ಪ್ರಶೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಕೇಳಿದ ಪ್ರಶ್ನೆಗೆ ಉತ್ತ- ರಿಸಿದ ಸಚಿವರು, ಸಹಕಾರಿ ಸಂಘಗಳಲ್ಲಿ ಕೃಷಿ ಸಾಲ ಕೊಡುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ 63 ಲಕ್ಷ ರೈತರಿದ್ದಾರೆ. ಅವರಲ್ಲಿ 29 ಲಕ್ಷ ರೈತರಿಗೆ ಸಾಲ ಕೊಡಲಾಗಿದೆ. ಹೊಸದಾಗಿ, 12,600 ಜನರಿಗೆ ಮಾತ್ರ ಸಾಲ ಕೊಡಲಾಗಿದೆ. ಆದರೆ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದರು.

2024-25ನೆ ಸಾಲಿನಲ್ಲಿ ಜೂನ್ ಅಂತ್ಯದ ವರೆಗೆ ಸಹಕಾರ ಸಂಘಗಳು ಹೊಸದಾಗಿ ಅರ್ಜಿ ಸಲ್ಲಿಸಿದ 9,797 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 93.49 ಕೋಟಿ ರೂ.ಗಳ ಬೆಳೆ ಸಾಲ ಮತ್ತು 2,815 ರೈತರಿಗೆ 138.36ಕೋಟಿ ರೂ.ಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಿದ್ದು, ಸಾಲ ಪಡೆಯುವ ರೈತರ ಸಂಖ್ಯೆ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ಕೃಷಿ ಸಾಲ ಹೆಚ್ಚಳಕ್ಕಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿ.ಸಿ.ಸಿ ಬ್ಯಾಂಕುಗಳು ಹಾಗೂ ಪಿಕಾರ್ಡ್ ಬ್ಯಾಂಕುಗಳ ಮೂಲಕ 2024-25ನೇ ಸಾಲಿಗೆ 35.10 ಲಕ್ಷ ರೈತರಿಗೆ 25,000ಕೋಟಿ ರೂ. ಗಳ ಅಲ್ಪಾವಧಿ ಕೃಷಿ ಸಾಲ ಮತ್ತು 90 ಲಕ್ಷ ರೈತರಿಗೆ 2000 ಕೋಟಿ ರೂ.ಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಲು ಗುರಿ ನಿಗದಿಪಡಿಸಲಾಗಿದೆ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ.

ರೈತರ ಸಾಲಮನ್ನ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ವಿಧಾನಪರಿಷತ್‌ನಲ್ಲಿ ಸದಸ್ಯ ಸಿ.ಟಿ.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರೈತರಿಗೆ ಸಾಲ ಸೇರಿದಂತೆ ಅವರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ಆದರೆ ರೈತರ ಸಾಲಮನ್ನ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪುನರುಚ್ಚರಿಸಿದರು.

ಬಹಳಷ್ಟು ರೈತ ಬಾಂಧವರು ರೈತರ ಸಾಲ ಮನ್ನಾ ಆಗಬಹುದು ಮತ್ತು ಹಲವಾರು ರೈತ ಸಂಘಗಳಿಂದ ಒತ್ತಾಯವನ್ನ ಕರ್ನಾಟಕ ಸರ್ಕಾರದ ಮೇಲೆ ಹೇರಿದ್ದಾರೆ ಆದರೆ ಈಗಾಗಲೇ ಅವರು ಅಲ್ಪಾವಧಿ ಸಾಲಗಳು ಮತ್ತು ದೀರ್ಘಾವಧಿ ಸಾಲಗಳು ರೈತರಿಗೆ ನಾವು ನೀಡಿದ್ದೇವೆ ಮತ್ತು ನೀಡಲಿದ್ದೇವೆ ಮತ್ತು ಹೀಗಾಗಿ ಯಾವುದೇ ಕಾರಣಕ್ಕೂ ಸಾಲ ಮನ್ನಾ ವಿಚಾರ ಮಾಡುವುದಿಲ್ಲ ಹೊರತಾಗಿ ಬಡ್ಡಿ ಇಲ್ಲದೆ ಸಾಲ ಸೌಲಭ್ಯವನ್ನು ಒದಗಿಸುವ ಕೆಲಸವನ್ನು ನಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಕೃಷಿ ವಾಣಿಜ್ಯ ಬ್ಯಾಂಕುಗಳಿಂದ ಸಾಲ ನೀಡುವ ಘೋಷಣೆಯನ್ನು ಸರ್ಕಾರ ಕೈಗೊಂಡಿದೆ.

ಇದನ್ನು ಓದಿ: ಕೇಂದ್ರ ಸರ್ಕಾರ ಪ್ರಕಟಿಸಿರುವ ಬಜೆಟ್ ನಲ್ಲಿ ಕೃಷಿಗೆ ಸಿಕ್ಕಿದ್ದೇನು ಮತ್ತು ಯಾವುದಕ್ಕೆ ಎಷ್ಟು ಹಣವನ್ನು ಮೀಸಲಿಡಲಾಗಿದೆ ನೋಡಿ

https://krushisanta.com/Agri-sector-budget--in-2024-what-budget-for-which-sector

ಇದನ್ನು ಓದಿ:ರೈತರ ಈ ಖಾತೆಗಳಿಗೆ ಹೆಚ್ಚುವರಿ ಬರ ಪರಿಹಾರ ಹಣ ಬಿಡುಗಡೆ? ಮೊಬೈಲ್ ನಂಬರ್ ಇದ್ದರೆ ಸಾಕು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಬಹುದು

https://krushisanta.com/Extra-parihara-payment-amount-credit-Please-check-using-this-link

ಇದನ್ನು ಓದಿ:ಬೋರ್ವೆಲ್ ಕೊರಿಸಲು ಎರಡು ಲಕ್ಷ ರೂಪಾಯಿಗಳು ಸಹಾಯ ನೀಡಲು ಅರ್ಜಿ ಆಹ್ವಾನ

https://krushisanta.com/Application-invited-for-vasavi-jalashakti-scheme

ಇದನ್ನು ಓದಿ:ಪಿಎಂ ಕಿಸಾನ್ 18ನೇ ಕಂತಿನ ಹಣ ಪಡೆದುಕೊಳ್ಳುವ ಅರ್ಹ ರೈತರ ಪಟ್ಟಿ ಬಿಡುಗಡೆ

https://krushisanta.com/Pm-Kisan-18-installment-beneficiary-list

admin B.Sc(hons) agriculture College of agriculture vijayapura And provide consultant service