32 ಕೋಟಿ ಬೆಳೆ ವಿಮೆ ಜಮಾ ಆಗಿದೆ ! ಚೆಕ್ ಮಾಡಿ

<Bele vime> <bele hani Parihar> <Bele hani vime> < ಬೆಳೆ ವಿಮೆ ಪರಿಹಾರ> < ಬೆಳೆ ವಿಮೆ ಪರಿಹಾರ ಹಣ> < ಬೆಳೆ ವಿಮೆ ಪರಿಹಾರ ಹಣ ಜಮಾ>

May 17, 2024 - 06:36
 0
32 ಕೋಟಿ ಬೆಳೆ ವಿಮೆ ಜಮಾ ಆಗಿದೆ ! ಚೆಕ್ ಮಾಡಿ

ರೈತ ಬಾಂಧವರೇ ಕೇವಲ ಬರಗಾಲ ಹಣ ಜಮಾ ಆದರೆ ಸಾಲದು ಬೆಳೆ ವಿಮೆ ಕಟ್ಟಿದ್ದಾರೆ ಅವರಿಗೂ ಕೂಡ ಬೆಳೆ ವಿಮೆ ಜಮಾ ಆಗಬೇಕು, ಕರ್ನಾಟಕದಾದ್ಯಂತ ಈಗಾಗಲೇ ಬರಗಾಲ ಪರಿಹಾರ ತೆಗೆದುಕೊಂಡು ರೈತರು ಸಂತೋಷದಲ್ಲಿದ್ದರೆ ಬರಗಾಲಕ್ಕಾಗಿ ಬರಗಾಲ ಘೋಷಣೆ ಮಾಡುವ ಮುಂಚಿತವಾಗಿಯೇ ಕೆಲವೊಬ್ಬ ರೈತರು ತಾವು ತಮ್ಮ ಬೆಳೆ ಸುರಕ್ಷತೆಗಾಗಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆ ವಿಮೆಯನ್ನು ತುಂಬಿದ್ದಾರೆ ಅಂತಹ ರೈತರಿಗೂ ಕೂಡ ಹಣ ಜಮಾ ಆಗದಿದ್ದರೆ ಸ್ವಲ್ಪ ಸಂಕಟ ಆಗಬಹುದು ಆದರೆ ರಾಜ್ಯ ಸರ್ಕಾರ ಎಲ್ಲಾ ರೀತಿ ಯೋಚನೆ ಮಾಡುತ್ತದೆ ಮತ್ತು 32 ಕೋಟಿಗಳು ಬೆಳೆ ವಿಮೆ ಕೂಡ ಬಿಡುಗಡೆ ಮಾಡಲಾಗಿದೆ.

32 ಕೋಟಿ ಬೆಳೆ ವಿಮೆ ಸ್ಟೇಟಸ್ ನೋಡುವುದು ಹೇಗೆ?

ಕೇವಲ ಬೆಳೆ ಪರಿಹಾರ ಜಮಾ ಆಗಿದೆ ಆದರೆ ರಾಜ್ಯ ಸರ್ಕಾರ ಬೆಳಗಿನ ಬಿಡುಗಡೆ ಮಾಡಿಲ್ಲ ಎಂದು ಹಲವಾರು ರೈತರು ಮುನಿಸಿಕೊಂಡಿದ್ದಾರೆ ಆದರೆ ಸರ್ಕಾರವು ಎಲ್ಲವೂ ವಿಚಾರಣೆ ಮಾಡಿ 32 ಕೋಟಿ ಬೆಳೆ ವಿಮೆಯನ್ನು ಮತ್ತೆ ರೈತರ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಯಾರು ನೀವು ಮುಂಗಾರು ಹಂಗಾಮನಲ್ಲಿ ನಿಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಪಾವತಿ ಮಾಡಿದ್ದೀರಿ ಅಂತ ಅವರಿಗೆ ಬೆಳೆ ವಿಮೆಯನ್ನು ಬಿಡುಗಡೆ ಮಾಡಲಾಗಿದೆ ಇವಾಗಲೇ ಚೆಕ್ ಮಾಡಿಕೊಳ್ಳಲು ಕೆಳಗಡೆ ನೀಡಿರುವ ಹಂತವನ್ನು ಪಾಲಿಸಿ.

ಆನ್ಲೈನ್ ನಲ್ಲಿ ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ಇಲ್ಲಿ ತಿಳಿಸಿರುವ ವಿಧಾನವನ್ನು ಬಳಸಿಕೊಂಡು ನೀವು ಕೂಡ ನಿಮಗೆ ಬೆಳೆ ವಿಮೆ ಜಮಾ ಆಗಿದ್ದರೆ ಚೆಕ್ ಮಾಡಬಹುದು.

ಹಂತ 1: ಇಲ್ಲಿ ನೀಡಿರುವ ಸರಕಾರದ ಅಧಿಕೃತ ಜಾಲತಾಣ ಬೆಳೆ ಸಂರಕ್ಷಣೆ ಪೋರ್ಟನ್ನು ಕ್ಲಿಕ್ ಮಾಡಿಕೊಳ್ಳಬೇಕು. ನೀವು ಗೂಗಲ್ನಲ್ಲಿ ಟೈಪ್ ಆದರು ಮಾಡಿಕೊಳ್ಳಬಹುದು ಅಥವಾ ಇಲ್ಲಿ ನೀಡಿರುವ ಲಿಂಕನ್ನು ನೇರವಾಗಿ ಕ್ಲಿಕ್ ಮಾಡುವ ಮೂಲಕ ಪೇಜ್ ಅನ್ನು ಓಪನ್ ಮಾಡಿಕೊಳ್ಳ ಬಹುದು.

https://samrakshane.karnataka.gov.in/

ಹಂತ 2: ಇದರಲ್ಲಿ ಮುಂಗಾರು 2023 ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ಆಯ್ಕೆ ಮಾಡಿಕೊಂಡ ನಂತರ ಮುಂದೆ ಎಂದು ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ.

ಹಂತ 3: ಓಪನ್ ಆಗಿರುವ ಪೇಜ್ ನಲ್ಲಿ ಮೊದಲನೇ ಕಾಲಂ ಎರಡನೇ ಕಾಲಂ ಎರಡು ಕಾಲಂಗಳದ ಮೇಲೆ ಮೂರನೇ ಕಾಲಂನಲ್ಲಿ ಚೆಕ್ ಸ್ಟೇಟಸ್ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ಕೂಡಲೇ ನಿಮಗೆ ಇಲ್ಲಿ ನಿಮ್ಮ ಮೊಬೈಲ್ ನಂಬರ್ ಅಥವಾ ಬೆಳೆ ವಿಮೆ ಮಾಡಿರುವ ರೆಫರೆನ್ಸ್ ಐಡಿ ಹಾಗೂ ಆಧಾರ್ ಸಂಖ್ಯೆ ನಮೂದಿಸಲು ಕೇಳುತ್ತದೆ.

ಹಂತ 4: ತಕ್ಷಣವೇ ನಿಮ್ಮ ರೆಫೆರನ್ಸ್ ಐಡಿ ಅಥವಾ ಆಧಾರ್ ಸಂಖ್ಯೆಯನ್ನು ಹಾಕಿ ಅಲ್ಲಿ ಒಂದು ಕ್ಯಾಪ್ಚರ್ ಕೋಡ್ ಇರುತ್ತದೆ ಅದನ್ನು ಎಂಟರ್ ಮಾಡಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು ಈಗ ನಿಮ್ಮ ಖಾತೆಗೆ ಹಣ ಜಮಾ ಆಗಿದ್ದರೆ ಅಲ್ಲಿ ಕೆಳಗಡೆ ತೋರಿಸುತ್ತದೆ ಹಾಗೂ ಯಾವ ಬೆಳೆಗೆ ಜಮಾ ಆಗಿದೆ ಅದಾದ ನಂತರ ಎಷ್ಟು ಜಮಾ ಆಗಿದೆ? ಎಷ್ಟು ಎಕರೆಗೆ ನೀವು ವಿಮೆ ಪಾವತಿ ಮಾಡಿದ್ದೀರಿ ಎಲ್ಲದರ ಮಾಹಿತಿಯು ಆನ್ಲೈನ್ ನಲ್ಲಿ ತಿಳಿಯುತ್ತದೆ.

ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಹೊಸ ಪಟ್ಟಿ ಬರ ಪರಿಹಾರ ಲಿಸ್ಟ್ ಪಂಚಾಯಿತಿಗಳಲ್ಲಿ ಹಚ್ಚಿದ್ದೇವೆ

https://krushisanta.com/Bara-Parihar-hani-Halli-patti-list

ಇದನ್ನು ಓದಿ:ಮತ್ತೆ ಕರ್ನಾಟಕದಲ್ಲಿ ನಾಲ್ಕು ದಿನ ಬಾರಿ ಮಳೆ?

https://krushisanta.com/Next-4-days-rainfall-alert-in-Karnataka

ಇದನ್ನು ಓದಿ:ರಾಜ್ಯ ಸರ್ಕಾರ ರೈತರ ಖಾತೆಗೆ ಪರಿಹಾರ ಜಮಾ ಆಗದೆ ಇರಲು ಕಾರಣ ಮತ್ತು ಅದನ್ನು ಸರಿಪಡಿಸುವುದು ಹೇಗೆ? ಸೂಚನೆ ಪ್ರಕಟಣೆ

https://krushisanta.com/Why-parihara-is-not-credited-because-of--this-issues

admin B.Sc(hons) agriculture College of agriculture vijayapura And provide consultant service