50% ಸಬ್ಸಿಡಿ ದರದಲ್ಲಿ ರೈತರಿಗೆ ಪವರ್ ಟಿಲ್ಲರ್ ನೀಡಲು ಅರ್ಜಿ ಆಹ್ವಾನ!

<ಪವರ್ ಟಿಲ್ಲರ್ ಅರ್ಜಿ> <ಸಹಾಯದನದಲ್ಲಿ ಪವರ್ ಟಿಲ್ಲರ್> <ಶೇಕಡ 40% ಸಬ್ಸಿಡಿಯಲ್ಲಿ ಪವರ್ ಟಿಲ್ಲರ್> < ರೈತರಿಗೆ ಪವರ್ ಟಿಲ್ಲರ್ ವಿತರಣೆಗೆ ಅರ್ಜಿ> < ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಖರೀದಿಗೆ ಅರ್ಜಿ>

Jul 8, 2024 - 07:23
 0
50% ಸಬ್ಸಿಡಿ ದರದಲ್ಲಿ ರೈತರಿಗೆ ಪವರ್ ಟಿಲ್ಲರ್ ನೀಡಲು ಅರ್ಜಿ ಆಹ್ವಾನ!

ಆತ್ಮೀಯ ರೈತ ಬಾಂಧವರೇ ತೋಟಗಾರಿಕಾ ಇಲಾಖೆಯಿಂದ ಪವರ್ ಟಿಲ್ಲರ್ ನೀಡಲು ರೈತರಿಗೆ ಸಬ್ಸಿಡಿಯಲ್ಲಿ ಅರ್ಜಿ ಅವಾನಿಸಲಾಗಿದೆ ಯಾರಿಗೆಲ್ಲ ಪವರ್ ಟಿಲ್ಲರ್ ಅವಶ್ಯಕತೆ ಇದೆಯೋ ಕೂಡಲೇ ನಿಮ್ಮ ಹತ್ತಿರದ ತೋಟಗಾರಿಕಾ ಇಲಾಖೆಯನ್ನು ಭೇಟಿ ನೀಡಿ ಅರ್ಜಿಯನ್ನು ತಕ್ಷಣವೇ ಸಲ್ಲಿಸಬೇಕು ಅವರಿಗೆ ಮೊದಲಿಗೆ ಯಂತ್ರವನ್ನು ಸಹ ನೀಡಲಾಗುತ್ತದೆ.

ರಾಜ್ಯದ ರೈತರಿಗೆ ಪವರ್ ಟಿಲ್ಲರ್ ಸಬ್ಸಿಡಿ?

ಹೌದು ರೈತ ಬಾಂಧವರೇ ಏಕೆಂದರೆ ಯಂತ್ರ ಆಧಾರಿತ ಕೃಷಿ ಮಾಡಿದರೆ ರೈತರು ಸ್ವಲ್ಪ ಹಣವನ್ನು ಉಳಿಸಬಹುದು ಇಲ್ಲದಿದ್ದರೆ ಮಳೆ ದಿನ್ನೆ ದಿನ ಬಿಡದೆ ಆಗುತ್ತಿರುವ ಕಾರಣದಿಂದಾಗಿ ಯಂತ್ರೋಪಕರಣಗಳ ಅವಶ್ಯಕತೆ ಇದ್ದೇ ಇರುತ್ತದೆ ಮತ್ತು ಮನುಷ್ಯರಿಂದ ಕಳೆಗಳನ್ನು ತೆಗೆಯಲು ಕಷ್ಟವಾಗುತ್ತದೆ ಮತ್ತು ನೆಲವನ್ನ ಸಡಿಲು ಮಾಡಲು ಸಹ ಕಷ್ಟವಾಗುತ್ತದೆ.

ಹೀಗಾಗಿ ಕೃಷಿ ಚಟುವಟಿಕೆಗಳಲ್ಲಿ ಪವರ್ ಟಿಲ್ಲರ್ ಕೂಡ ತುಂಬಾ ಅವಶ್ಯಕತೆ ಇದ್ದು ಇದಕ್ಕಾಗಿ ರೈತರು ತುಂಬಾ ಬರದಾಡುತ್ತಿದ್ದಾರೆ ಹೀಗಾಗಿ ಸರ್ಕಾರವು ಇದರ ಬೇಡಿಕೆಯನ್ನು ಹೆಚ್ಚಿಗೆ ಮಾಡಲು ಮತ್ತು ಇದರ ತೆಗೆದುಕೊಳ್ಳುವ ಅಥವಾ ತಗಲುವ ಖರ್ಚು ಕೂಡ ತುಂಬಾ ಇರುವುದರಿಂದ ರೈತರಿಗೆ ಭಾರವಾಗುತ್ತದೆ ಹೀಗಾಗಿ ಸಬ್ಸಿಡಿಯಲ್ಲಿ ಕೊಟ್ಟರೆ ರೈತರು ಇದನ್ನು ಖುಷಿಯಿಂದ ತೆಗೆದುಕೊಳ್ಳುತ್ತಾರೆ ಹೀಗಾಗಿ ಇದನ್ನು ಸಬ್ಸಿಡಿಯಲ್ಲಿ ನೀಡಲಾಗುತ್ತಿದೆ.

ತೋಟಗಾರಿಕಾ ಇಲಾಖೆ ಸಹಾಯಧನ ಎಷ್ಟಿರುತ್ತದೆ?

ಪವರ್ ಟಿಲ್ಲರ್-(8ಹೆಚ್.ಪಿ.ಗಿಂತ ಕಡಿಮೆ) ಸಾಮಾನ್ಯ ರೈತರಿಗೆ ಶೇ. 40 ರಂತೆಗರಿಷ್ಠ ರೂ.0.40 ಲಕ್ಷಗಳು ಮತ್ತು ಪರಿಶಿಷ್ಠ ಜಾತಿ/ಪಂಗಡ/ಸಣ್ಣ/ಅತಿ ಸಣ್ಣ/ಮಹಿಳೆಯರಿಗೆ ಶೇ. 50 ಗರಿಷ್ಠ ರೂ.0.50 ಲಕ್ಷಗಳ ಸಹಾಯಧನವನ್ನು ಪ್ರತಿ ಘಟಕಕ್ಕೆ ನೀಡಲಾಗುತ್ತದೆ (ಘಟಕ ವೆಚ್ಚ ರೂ.1.00 ಲಕ್ಷ).

ಪವರ್ ಟಿಲ್ಲರ್ ಖರೀದಿ ಮಾಡಬೇಕಾದರೆ ಒಟ್ಟಾರೆ ತಗಲುವ ವೆಚ್ಚದಲ್ಲಿ ಶೇಕಡ 40ರಂತೆ ಗರಿಷ್ಠ 40,000 ರೂಪಾಯಿಗಳು ಸಾಮಾನ್ಯ ರೈತ ಬಾಂಧವರಿಗೆ ಸಾಯದನ್ನ ನೀಡಲಾಗುತ್ತದೆ ಮತ್ತು ಪರಿಷ್ಠಿತ ಜಾತಿ ಪರಿಷ್ಠಿತ ಪಂಗಡದವರಿಗೆ 50,000 ಸಹಾಯಧನವನ್ನು ನೀಡಲಾಗುತ್ತದೆ.

ಪವರ್ ಟಿಲ್ಲರ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

ನಿಮ್ಮ ಆಧಾರ್ ಕಾರ್ಡ್ ಜಮೀನಿನ ಪಹಣಿ ಪತ್ರ ಅದರ ಜೊತೆಗೆ ನಿಮ್ಮ ಖಾತೆ ಉತಾರಿ ಅಥವಾ ತಲಾಟಿಸೆಟ್ ಇದಾದ ನಂತರ ಎರಡು ಭಾವಚಿತ್ರಗಳು ಹಾಗೂ ಬ್ಯಾಂಕ್ ಪಾಸ್ ಪುಸ್ತಕ ಎಲ್ಲದರ ಒಂದು ಸೆಟ್ ಜೆರಾಕ್ಸ್ ಅನ್ನು ತೆಗೆದುಕೊಂಡು ಹೋಗಿ ಇಲಾಖೆಯಲ್ಲಿ ಅರ್ಜಿಯನ್ನು ಪಡೆದು ಅರ್ಜಿಯನ್ನು ಸರಿಯಾಗಿ ತಪ್ಪದೇ ತುಂಬಿ ಅದನ್ನು ಇಲಾಖೆ ಅಧಿಕಾರಿಗಳಿಂದ ನೀವು ಸಿಗ್ನೇಚರ್ ಮಾಡಿಸಿ ಅದನ್ನು ಇಲಾಖೆಯಲ್ಲಿ ಕೊಟ್ಟು ಬರಬೇಕು.

ಪವರ್ ಟಿಲ್ಲರ್ ಅರ್ಜಿ ಆಧಾರದ ಮೇಲೆ ಅಂದರೆ ಪವರ್ ಟಿಲ್ಲರ್ ಖರೀದಿ ಮಾಡಲು ನಿಮ್ಮ ತಾಲೂಕಿನಲ್ಲಿ ಎಷ್ಟೆಲ್ಲಾ ರೈತರು ಅರ್ಜಿ ಸಲ್ಲಿಸಿದ್ದಾರೆ ಮತ್ತು ನಿಮ್ಮ ತೋಟಗಾರಿಕಾ ಇಲಾಖೆಗೆ ಎಷ್ಟು ಅರ್ಜಿಗಳು ಬಂದಿದೆ ಅದರ ಆಧಾರದ ಮೇಲೆ ನೀವು ಮೊದಲು ಅರ್ಜಿ ಸಲ್ಲಿಸಿದ್ದೀರಾ ಅಥವಾ ನಂತರ ನೀವು ಅರ್ಜಿ ಸಲ್ಲಿಸಿದ್ದೀರಾ ಅದರ ಮೇಲೆ ಹೊಂದಾಣಿಕೆಯಾಗಿ ನಂತರ ನಿಮ್ಮ ಅರ್ಜಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಅದಾದ ನಂತರ ನಿಮ್ಮ ಹೆಸರು ಅರ್ಜಿಯಲ್ಲಿ ತೆಗೆದುಕೊಂಡರೆ ಅವರು ನಿಮಗೆ ಫೋನ್ ಮೂಲಕ ತಿಳಿಸುತ್ತಾರೆ.

ಇದನ್ನು ಓದಿ:20+1 ಕುರಿ ಅಥವಾ ಮೇಕೆ ಘಟಕ ಸ್ಥಾಪನೆ ಮಾಡಲು ಅರ್ಜಿ ಆಹ್ವಾನ

https://krushisanta.com/Application-invited-for-Goat-shed-with-subsidiary-loan-amount

ಇದನ್ನು ಓದಿ:ರೈತರ ಖಾತೆಗೆ ಬೆಳೆ ಇನ್ಸೂರೆನ್ಸ್ ಹಣ ಜಮಾ! ನಿಮ್ಮ ಖಾತೆಗೆ ಅದೆಷ್ಟು ಬಂತು ಜಮಾ ಮೊಬೈಲ್ ನಲ್ಲೆ ಚೆಕ್ ಮಾಡಿ

https://krushisanta.com/Crop-insurance-amount-credited-to-farmers-account

ಇದನ್ನು ಓದಿ:ಮನೆಯಲ್ಲಿಯೇ ಖಾಲಿಯಾಗಿರುವ ರಸಗೊಬ್ಬರ ಚೀಲದಿಂದ ಉಡಿಚೀಲ ತಯಾರಿಸುವುದು ಹೇಗೆ?

https://krushisanta.com/How-to-make-fertilizer-applicator-bag--in-home

ಇದನ್ನು ಓದಿ:ರೈತರಿಗೆ ಕೃಷಿ ಹೊಂಡ ನಿರ್ಮಾಣ ಮಾಡಲು ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

https://krushisanta.com/Application-invited-for-Krushi-honda-in-Karnataka

admin B.Sc(hons) agriculture College of agriculture vijayapura And provide consultant service