ರೈತರ ಖಾತೆಗೆ ಬೆಳೆ ಇನ್ಸೂರೆನ್ಸ್ ಹಣ ಜಮಾ! ನಿಮಗೆಷ್ಟು ಬಂತು ಮೊಬೈಲಲ್ಲಿ ಚೆಕ್ ಮಾಡಿ
<Crop insurance> <how to apply Crop Insurance> <Crop insurance amount credited> < Crop Insurance status> <how to check crop insurance status in mobile>
ರೈತ ಬಾಂಧವರೇ ಬೆಳೆ ಇನ್ಸೂರೆನ್ಸ್ ಹಣ ಪಾವತಿ ಮಾಡಿದ್ದಾರೆ ರಾಜ್ಯದ್ಯಂತ ಯಾರೆಲ್ಲ ಬೆಳೆ ವಿಮೆ ತುಂಬಿದ್ದಾರೆ ಅವರ ಖಾತೆಗೆ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಈಗಾಗಲೇ ಬೆಳೆ ಪರಿಹಾರ ಬಿಡುಗಡೆ ಮಾಡಲಾಗಿದ್ದು ಕೆಲವೊಬ್ಬರಿಗೆ ಬಾಕಿ ಉಳಿದಿರುವ ಹಣ ಕೂಡ ಮತ್ತೆ ಜಮಾ ಮಾಡಲಾಗಿದೆ ಇದೀಗ ಜನವರಿ ಡಿಸೆಂಬರ್ ತಿಂಗಳ ನಂತರ ಕೆಲವೊಬ್ಬರಿಗೆ ಜಮಾ ಆಗಿದ್ದು ಅವರ ಸ್ಟೇಟಸ್ ಅನ್ನು ಸಹ ನೀವು ಆನ್ಲೈನ್ ನಲ್ಲಿ ನೋಡಬಹುದು.
ಇತ್ತೀಚಿಗೆ ಜಮಾ ಆಗಿರುವ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಮೊದಲು ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಂತರ ನಾವು ಕೆಲವೊಂದು ಹಂತಗಳ ಮೂಲಕ ಯಾವ ರೀತಿಯಾಗಿ ನೀವು ಮಾಡಬೇಕು ಅದನ್ನು ತಿಳಿಸಿಕೊಡುತ್ತೇವೆ ಅದೇ ರೀತಿಯಾಗಿ ನೀವು ಕೂಡ ಕ್ಲಿಕ್ ಮಾಡುತ್ತಾ ಹೋಗಬೇಕು ಮತ್ತು ನಿಮ್ಮ ಇತ್ತೀಚಿನ ಬೆಳೆ ವಿಮೆ ಜಮ್ ಆಗಿರುವುದನ್ನು ಖಚಿತಪಡಿಸಿಕೊಂಡು ಮತ್ತು ನಿಮ್ಮ ಅಕೌಂಟನ್ನು ಚೆಕ್ ಮಾಡಿಕೊಂಡು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಹಣವನ್ನು ಬಳಕೆ ಮಾಡಬಹುದು.
ಹಂತ 1: ಅಧಿಕೃತ ಜಾಲತಾಣ ಭೇಟಿ ನೀಡಬೇಕು ಅಥವಾ ಮೊಬೈಲ್ ತೆಗೆದುಕೊಂಡು ಕ್ರೋಮ್ ಅಥವಾ ಗೂಗಲನ್ನು ಓಪನ್ ಮಾಡಿ ಅದರಲ್ಲಿ ಬೆಳೆ ಸಂರಕ್ಷಣೆ ಕನ್ನಡ ಅಥವಾ ಇಂಗ್ಲಿಷ್ ಯಾವುದಾದರೂ ಒಂದನ್ನು ಟೈಪ್ ಮಾಡಿಕೊಳ್ಳಿ ಟೈಪ್ ಮಾಡಿಕೊಂಡ ನಂತರ ಸರ್ಚ್ ಮಾಡಬೇಕು ಮತ್ತು ಮೊದಲನೆಯ ಲಿಂಕ್ ಬೆಳೆ ಸಂರಕ್ಷಣೆ ಓಪನ್ ಮಾಡಿಕೊಳ್ಳಬೇಕು ಅಥವಾ ಇಷ್ಟೊಂದು ಗುದ್ದಾಡುವುದು ಬೇಡವೇ ಬೇಡ ಇಲ್ಲಿ ನೀಡಿರುವ ಕ್ಲಿಕ್ ಮಾಡಿ ಮತ್ತು ಡೈರೆಕ್ಟಾಗಿ ಪೇಜ್ ಓಪನ್ ಆಗುತ್ತದೆ.
https://samrakshane.karnataka.gov.in/
ಹಂತ 2: ಇದರಲ್ಲಿ ನೀವು ಬೆಳೆ ವಿಮೆ ಯಾವ ಸಮಯದಲ್ಲಿ ತುಂಬಿದ್ದೀರಿ ಮುಂಗಾರು ಅಂದರೆ ಮುಂಗಾರು ಮುಂಗಾರು ಅಂದರೆ ಹಿಂಗಾರು ವರ್ಷವನ್ನು ಸಹ ಆಯ್ಕೆ ಮಾಡಿಕೊಳ್ಳಬೇಕು ಉದಾಹರಣೆಗೆ ಈಗ ಪ್ರಸ್ತುತವಾಗಿ ಬಿಡುಗಡೆಯಾಗಿರುವ 2023 ಮುಂಗಾರು ಅಂಗಾಮಿನಲ್ಲಿ ನೀವು ಪಾವತಿಸಿರುವ ಬೆಳೆ ವಿಮೆಗೆ ಮತ್ತೆ ಬೆಳೆ ವಿಮಾ ಕಂಪನಿ ಇನ್ಶೂರೆನ್ಸ್ ಹಣವನ್ನು ಬಿಡುಗಡೆ ಮಾಡಲಾಗಿದೆ.ಹೀಗಾಗಿ ನೀವು 2023 ವರ್ಷವನ್ನು ಆಯ್ಕೆ ಮಾಡಿಕೊಂಡು ನಂತರ ಋತುಮಾನ ಇದ್ದಲ್ಲಿ ಮುಂಗಾರು ಆಯ್ಕೆ ಮಾಡಿಕೊಂಡು, ನಂತರ ಕೆಳಗಡೆ ಮುಂದೆ ಬಟನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
ಹಂತ 3: ಈಗ ಒಂದು ಪೇಜ್ ಓಪನ್ ಆಗುತ್ತದೆ ಇದರಲ್ಲಿ ಚಕ್ ಸ್ಟೇಟಸ್ ಆಯ್ಕೆಯನ್ನ ಹುಡುಕುತ್ತಾ ಹೋಗಿ, ಇದು ಎಲ್ಲಿರುತ್ತದೆ ಎಂದರೆ ನಿಮ್ಮ ಪೇಜ್ ಓಪನ್ ಆದ ಮೂರನೇ ಕಾಲಂ ನ ಸಾಲನ್ನು ಗಮನಿಸಿ ಅದರಲ್ಲಿ ಮೂರು ಅಥವಾ ನಾಲ್ಕನೇ ಆಯ್ಕೆ ಆಗಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ.
ಹಂತ 4: ಈಗ ಇದರಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ ಒಂದು ಮೊಬೈಲ್ ನಂಬರು ಒಂದು ರೆಫರೆನ್ಸ್ ಐಡಿ ಇನ್ನೊಂದು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು ಸಾಮಾನ್ಯ ಮತ್ತು ಸುಲಭದ ರೀತಿಯಲ್ಲಿ ಅಂದರೆ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ನಂತರ ಅಲ್ಲಿ ಕ್ಯಾಪ್ಚರ್ ಕೋಡ್ ಮುಂದೆ ನೀಡಲಾಗಿರುತ್ತದೆ ಅದನ್ನು ಸಹ ತಪ್ಪದೇ ಸರಿಯಾಗಿ ಟೈಪ್ ಮಾಡಿಕೊಂಡು ನಂತರ ಸರ್ಚ್ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಫುಲ್ ರಿಪೋರ್ಟ್ ಓಪನ್ ಆಗುತ್ತದೆ.
ಈಗ ಇತ್ತೀಚಿನ ದಿನಗಳಲ್ಲಿ ನಿಮಗೆ ಜಮಾ ಆಗಿರುವ ಪರಿಹಾರ ಹಣ ಎಷ್ಟು ಅಂದರೆ ಬೆಳೆ ವಿಮಾ ಕಂಪನಿಯಿಂದ ಜಮಾ ಆಗಿರುವ ಇನ್ಸೂರೆನ್ಸ್ ಹಣ ಎಷ್ಟು? ಅದು ಗೊತ್ತಾಗುತ್ತದೆ ಅದು ಗೊತ್ತಾದ ನಂತರ ನೀವು ನಿಮಗೂ ಕೂಡ ಈ ಯೋಜನೆ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುತ್ತದೆ ಈ ಸರ್ಕಾರದ ಯೋಜನೆಯು ಬಹುದೊಡ್ಡ ಯೋಜನೆಯಾಗಿದ್ದು ಸುಮಾರು ಜನ ರೈತರಿಗೆ ವರದಾನವಾಗಿದೆ.
ಇದನ್ನು ಓದಿ:ಮನೆಯಲ್ಲಿಯೇ ಖಾಲಿಯಾಗಿರುವ ರಸಗೊಬ್ಬರ ಚೀಲದಿಂದ ಉಡಿಚೀಲ ತಯಾರಿಸುವುದು ಹೇಗೆ?
https://krushisanta.com/How-to-make-fertilizer-applicator-bag--in-home
ಇದನ್ನು ಓದಿ:ರೈತರಿಗೆ ಕೃಷಿ ಹೊಂಡ ನಿರ್ಮಾಣ ಮಾಡಲು ಸಬ್ಸಿಡಿ ನೀಡಲು ಅರ್ಜಿ ಆಹ್ವಾನ
https://krushisanta.com/Application-invited-for-Krushi-honda-in-Karnataka
ಇದನ್ನು ಓದಿ:ಇಲ್ಲಿಯವರೆಗೆ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಪೆಂಡಿಂಗ್ ಉಳಿದಿರುವ ಲಿಸ್ಟ್ ಬಿಡುಗಡೆ
https://krushisanta.com/Aadhar-to-RTC-linking-pending-status-village-wise-list
ಇದನ್ನು ಓದಿ:ತೋಟಗಾರಿಕಾ ಇಲಾಖೆಯಿಂದ ರೈತರಿಗೆ ಸಬ್ಸಿಡಿಯಲ್ಲಿ ಮಿನಿ ಟ್ರ್ಯಾಕ್ಟರ್ ನೀಡಲು ಅರ್ಜಿ ಆಹ್ವಾನ
https://krushisanta.com/Application-invited-for-Mini-Tractor-from-Horticulture-department