ರೈತರಿಗೆ ಸಬ್ಸಿಡಿಯಲ್ಲಿ ಮಿನಿ ಟ್ರ್ಯಾಕ್ಟರ್ ನೀಡಲು! ತೋಟಗಾರಿಕಾ ಇಲಾಖೆಯಿಂದ ಅರ್ಜಿ ಆಹ್ವಾನ
<ಸಬ್ಸಿಡಿಯಲ್ಲಿ ಮಿನಿ ಟ್ರ್ಯಾಕ್ಟರ್> <ರೈತರ ಟ್ರ್ಯಾಕ್ಟರ್ ಯೋಜನೆ> <ರೈತರಿಗೆ ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ನೀಡಲು ಅರ್ಜಿ> <2024 ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ವಿತರಣೆ ಅರ್ಜಿ>
ತೋಟಗಾರಿಕೆ ಇಲಾಖೆ ವತಿಯಿಂದ 2024-25ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಹಾಗೂ ಯಂತ್ರೀಕರಣ ಯೋಜನೆಗಳಡಿ ತೋಟಗಾರಿಕೆ ರೈತರು ಹಾಗೂ ಉದ್ದಿಮೆದಾರರಿಗೆ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಯಾವುದೆಲ್ಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನ?
ವಿವಿಧ ಯೋಜನೆಗಳಡಿ ತೋಟಗಾರಿಕೆ ಬೆಳೆಗಳ ಹೊಸ ಅಂಗಾಂಶ ಕೃಷಿ ಘಟಕಗಳ ಸ್ಥಾಪನೆ; ಸಮುದಾಯ ಹಾಗೂ ವೈಯಕ್ತಿಕ ನೀರು ಸಂಗ್ರಹಣಾ ಘಟಕಗಳ ನಿರ್ಮಾಣ; ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ಪಾಲಿ ಹೌಸ್, ನೆರಳು ಪರದೆ, ಪ್ಲಾಸ್ಟಿಕ್ ಹೊದಿಕೆ, ಪಕ್ಷಿ ನಿರೋಧಕ ಬಲೆ ಅಳವಡಿಕೆ; ಸಮಗ್ರ ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ; ತೋಟಗಾರಿಕೆಯಲ್ಲಿ ಯಾಂತ್ರೀಕರಣಕ್ಕಾಗಿ 20 ಪಿ.ಟಿ.ಒ.ಹೆಚ್.ಪಿ ಗಿಂತ ಕಡಿಮೆ ಸಾಮರ್ಥ್ಯದ ಟ್ರಾಕ್ಟರ್ ಹಾಗೂ 8 ಪಿ.ಟಿ.ಒ.ಹೆಚ್.ಪಿ ಗಿಂತ ಕಡಿಮೆ ಸಾಮರ್ಥ್ಯದ ಟಿಲ್ಲರ್ ಖರೀದಿಗೆ; ಕೋಲ್ಲೋತ್ತರ ನಿರ್ವಹಣೆಗಾಗಿ ಪ್ಯಾಕ್‌ಹೌಸ್, ಶೀತಲ ಘಟಕ, ಪ್ರೀಕೂಲಿಂಗ್ ಘಟಕ, ಪ್ರಾಥಮಿಕ ಸಂಸ್ಕರಣಾ ಘಟಕ, ಸೋಲಾರ್ ಟನಲ್ ಡ್ರೈಯರ್, ಈರುಳ್ಳಿ ಶೇಖರಣಾ ಘಟಕ, ಸ್ಟಾಟಿಕ್/ ಮೊಬೈಲ್ ವೆಂಡಿಂಗ್ ಕಾರ್ಟ್ ಖರೀದಿ; ಅಣಬೆ ಘಟಕಗಳಿಗಾಗಿ ಕಾರ್ಯಕ್ರಮಗಳನ್ನಾಧರಿಸಿ ಶೇ.25 ರಿಂದ 50 ರಷ್ಟು ಸಹಾಯಧನ ಸೌಲಭ್ಯ ನೀಡಲಾಗುವುದು.
ಅಲ್ಲದೆ ಆಯ್ದ ಹಣ್ಣಿನ ಬೆಳೆಗಳಾದ ಬಾಳೆ, ಮಾವು, ಸೀಬೆ ಹಾಗೂ ದಾಳಿಂಬೆ; ಹೂವಿನ ಬೆಳೆಗಳಾದ ಸುಗಂಧರಾಜ, ಚೆಂಡು ಹೂ, ಸೇವಂತಿಗೆ ಹಾಗೂ ಇತರೆ ಬಿಡಿ ಹೂವುಗಳು; ಕತ್ತರಿಸಿದ ಹೂಗಳು; ಹೈಬ್ರಿಡ್ ತರಕಾರಿ ಬೆಳೆ ಹಾಗೂ ಗೋಡಂಬಿ ಬೆಳೆಗಳ ಹೊಸ ಪ್ರದೇಶ ವಿಸ್ತರಣೆಗಾಗಿ ಆರ್ಥಿಕ ನೆರವು ನೀಡಲಾಗುವುದು.
ಆಸಕ್ತ ರೈತರು ಹಾಗೂ ಉದ್ದಿಮೆದಾರರು ತಮ್ಮ ಅರ್ಜಿಯೊಂದಿಗೆ ಪಹಣಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಜಾತಿ ಪ್ರಮಾಣ ಪತ್ರ, ಮತ್ತಿತರ ದಾಖಲಾತಿಗಳನ್ನು ಜುಲೈ 31ರೊಳಗಾಗಿ ಪಾವಗಡ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ(ಜಿ.ಪಂ.)ರ ಕಚೇರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ವಾ..ಸಂ. 0816-244189ನ್ನು ಸಂಪರ್ಕಿಸಬಹುದೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವಿಶ್ವನಾಥಗೌಡ ತಿಳಿಸಿದ್ದಾರೆ.
ತೋಟಗಾರಿಕೆಯಲ್ಲಿಯಾಂತ್ರೀಕರಣ
a)ಟ್ರ್ಯಾಕ್ಟರ್:
(20ಹೆಚ್.ಪಿ.ವರೆಗೆ)
ಸಾಮಾನ್ಯ ರೈತರಿಗೆ ಶೇ. 25 ರಂತೆ ಗರಿಷ್ಠ ರೂ.0.75 ಲಕ್ಷಗಳು ಮತ್ತು ಪರಿಶಿಷ್ಠ ಜಾತಿ/ಪಂಗಡ/ಸಣ್ಣ/ಅತಿ ಸಣ್ಣ/ಮಹಿಳೆಯರಿಗೆ ಶೇ.35 ರಂತೆ ಗರಿಷ್ಠ ರೂ.1.00 ಲಕ್ಷಗಳ ಸಹಾಯಧನವನ್ನು ಪ್ರತಿ ಘಟಕಕ್ಕೆ ನೀಡಲಾಗುತ್ತದೆ.
b)ಪವರ್ ಟಿಲ್ಲರ್:
(8ಹೆಚ್.ಪಿ.ಗಿಂತ ಕಡಿಮೆ)
ಸಾಮಾನ್ಯ ರೈತರಿಗೆ ಶೇ. 40 ರಂತೆಗರಿಷ್ಠ ರೂ.0.40 ಲಕ್ಷಗಳು ಮತ್ತು ಪರಿಶಿಷ್ಠ ಜಾತಿ/ಪಂಗಡ/ಸಣ್ಣ/ಅತಿ ಸಣ್ಣ/ಮಹಿಳೆಯರಿಗೆ ಶೇ. 50 ಗರಿಷ್ಠ ರೂ.0.50 ಲಕ್ಷಗಳ ಸಹಾಯಧನವನ್ನು ಪ್ರತಿ ಘಟಕಕ್ಕೆ ನೀಡಲಾಗುತ್ತದೆ (ಘಟಕ ವೆಚ್ಚ ರೂ.1.00 ಲಕ್ಷ).
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು??
ಆಧಾರ್ ಕಾರ್ಡ್
ತಲಾಟಿ ಸೆಟ್
ಪಹಣಿ ಪತ್ರ
ಭಾವಚಿತ್ರ
ಅರ್ಜಿ ನಮೂನೆ
ಅರ್ಜಿ ನಮೂನೆಯನ್ನು ಅಲ್ಲೇ ಇಲಾಖೆಯಲ್ಲಿ ನೀಡಲಾಗುತ್ತದೆ.
ಇದನ್ನು ಓದಿ: 18 ಲಕ್ಷಕ್ಕೆ ಮಾರಾಟವಾದ ಬಿಜಾಪುರ್ ಎತ್ತಿನ ಬೆಲೆ ನಿಜಕ್ಕೂ ಆಶ್ಚರ್ https://krushisanta.com/farmer-has-saled-his-Bullock-at-the-price-of-18-lakh
ಇದನ್ನು ಓದಿ:ರೈತರು ಬೆಳೆ ಸರ್ವೆ ಮೊಬೈಲಿನಲ್ಲಿ ಮಾಡುವುದು ಹೇಗೆ ಹಂತ ಹಂತವಾಗಿ ಬೆಳೆ ಸರ್ವೆ ಮಾಡುವ ವಿಧಾನ
https://krushisanta.com/Bele-survey-application-and-A-to-Z-procedure-of-Survey
ಇದನ್ನು ಓದಿ:ನಿಮ್ಮ ಸರ್ವೇ ನಂಬರ್ ಮೇಲೆ ಇರುವ ಕಂದಾಯ ಇಲಾಖೆ ನೀಡಿರುವ ಸರ್ವೇ ಡಾಕುಮೆಂಟ್ಸ್ಗಳನ್ನು ಚೆಕ್ ಮಾಡುವುದು ಹೇಗೆ?
https://krushisanta.com/How-to-check-online-survey-documents-For-your-survey-number
ಇದನ್ನು ಓದಿ:ಕೈಗೆ ತಗಲುವ ಬೆಲೆಯಲ್ಲಿ ಬಿತ್ತನೆ ಮಾಡಲು ಬಂತು ಬಿತ್ತನೆಯ ಕೈ ಮತ್ತು ಸೈಕಲ್ ಆಧಾರಿತ ಬಿತ್ತನೆ ಯಂತ್ರ 20 ನಿಮಿಷದಲ್ಲಿ ಒಂದು ಎಕರೆ ಬಿತ್ತನೆ ಮಾಡಬಲ್ಲದು
https://krushisanta.com/Multipurpose-hand-and-Cycle-seed-drill