ಪಹಣಿ ಪತ್ರ ಮತ್ತು ಆಧಾರ್ ಲಿಂಕ್ ಪೆಂಡಿಂಗ್ ಲಿಸ್ಟ್ 2024! ಇನ್ನೂ ಲಿಂಕ್ ಆಗದೆ ಇರುವ ರೈತರ ಪಟ್ಟಿ

<Aadhar to RTC link> <RTC to Aadhar link> <RTC other link online> < RTC to Aadhar Link status,>

Jul 5, 2024 - 07:56
 0
ಪಹಣಿ ಪತ್ರ ಮತ್ತು ಆಧಾರ್ ಲಿಂಕ್ ಪೆಂಡಿಂಗ್ ಲಿಸ್ಟ್ 2024! ಇನ್ನೂ ಲಿಂಕ್ ಆಗದೆ ಇರುವ ರೈತರ ಪಟ್ಟಿ

ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ಮತ್ತು ಕಳೆದ ನಾಲ್ಕು ತಿಂಗಳಿಂದ ಸತತವಾಗಿ ಕಂದಾಯ ಇಲಾಖೆಯವರು ಕರ್ನಾಟಕ ಸರ್ಕಾರದವರು ರೈತರ ಮೇಲೆ ಒತ್ತಡ ಹೇಳುತ್ತಿದ್ದಾರೆ ಒತ್ತಡ ಅಂತಲ್ಲ ಸರ್ಕಾರದ ಸೌಲಭ್ಯಗಳು ಪಡೆಯಬೇಕಾದರೆ ನಿಮ್ಮ ಪಾಣಿಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯವಾಗಿ ಆಗಲೇಬೇಕು ಅದನ್ನು ಇವತ್ತಾದರೂ ಮಾಡಲೇಬೇಕು ಮತ್ತು ನಾಳೆಯಾದರೂ ಮಾಡಲೇಬೇಕು ಮಾಡದಿದ್ದರೆ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತೀರಿ ಎಂದು ಕಟ್ಟು ನಿರ್ಧಾರವನ್ನು ಸರ್ಕಾರ ತಿಳಿಸಿ ಬಿಟ್ಟಿದೆ.

ಹೌದು ಪಹಣಿ ಪತ್ರದೊಂದಿಗೆ ಆಧಾರ್ ಲಿಂಕ್ ಮಾಡುವುದು, ಕಡ್ಡಾಯವಾಗಿದೆ ಏಕೆಂದರೆ ರಾಜ್ಯಾದ್ಯಂತ ಒಂದು ದೊಡ್ಡ ಸಮಸ್ಯೆ ಏನೆಂದರೆ ಸರ್ವೇ ಪ್ರಕಾರ ಸಣ್ಣ ಹಾಗೂ ಅತಿ ಸಣ್ಣ ರೈತರು ಎಷ್ಟಿದ್ದಾರೆ? ಕೇಂದ್ರ ಸರ್ಕಾರಕ್ಕೆ ಲೆಕ್ಕ ನೀಡುವಲ್ಲಿ ನಮ್ಮ ಸರ್ಕಾರಕ್ಕೆ ತೊಂದರೆ ಆಗುತ್ತಿದೆ ಹೀಗಿರುವ ಕಾರಣ ನಾವು ಅದನ್ನು ನಿಖರವಾಗಿ ಹೇಳಬೇಕಾದರೆ ಖಂಡಿತವಾಗಿಯೂ ನಿಮ್ಮ ಪಹಣಿ ಪತ್ರಿಕೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆದರೆ ಮಾತ್ರ ಯಾರು ಎಷ್ಟು ಜಮೀನು ಹೊಂದಿದ್ದಾರೆ ಎಂದು ಕಂಡುಹಿಡಿಯಬಹುದು.

ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಅಥವಾ ನಿಮ್ಮ ಗ್ರಾಮ ಪಂಚಾಯಿತಿಗಳ ಗುಂಪಿನಲ್ಲಿ ಲಿಂಕ್ ಆಗದೇ ಇರುವವರ ಪಟ್ಟಿ ಬಿಡುತ್ತಿದ್ದಾರೆ?

 ಹೌದು ಈಗಾಗಲೇ ಇದರ ಬಗ್ಗೆ ಬಹಳ ಎಚ್ಚರಿಕೆಯನ್ನು ನೀಡುತ್ತಾ ಈಗಾಗಲೇ ಒಂದು ತಿಂಗಳಿಂದ ಸತತವಾಗಿ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಅವರು ಸೇರಿ ಈ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಮತ್ತು ಈಗಾಗಲೇ ಸ್ವಲ್ಪ ಜನರ ಜಮೀನಿನ ಪಹಣಿ ಪತ್ರಿಕೆ ಸ್ವಲ್ಪ ಜನರ ಆಧಾರ್ ಕಾರ್ಡ್ ಲಿಂಕ್ ಆಗಿದೆ ಆದರೆ ಇನ್ನೂ ಸ್ವಲ್ಪ ಜನರ ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಪೆಂಡಿಂಗ್ ಉಳಿದಿದೆ ಆ ಪೆಂಡಿಂಗ್ ಉಳಿದವರು ಕಂಪಲ್ಸರಿ ಯಾಗಿ ನೀವು ಲಿಂಕ್ ಮಾಡಿಸಲೇಬೇಕು.

 ಇದನ್ನು ನಾವು ಆನ್ಲೈನ್ ನಲ್ಲಿ ನೋಡಲು ಸಾಧ್ಯವಿಲ್ಲ ಏಕೆಂದರೆ ಲಿಂಕ್ ಆಗಿರುವುದು ಆಗದೇ ಇರುವುದು ಪಟ್ಟಿ ಮೂಲಕ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಹತ್ತಿರುತ್ತಾರೆ ಅಥವಾ ಗ್ರಾಮ ಪಂಚಾಯಿತಿಗಳ ವಾಟ್ಸಾಪ್ ಗುಂಪುಗಳಲ್ಲಿ ನೀವು ಇದ್ದರೆ ಅಲ್ಲಿ ನಿಮಗೆ ಗ್ರಾಮ ಲೆಕ್ಕಾಧಿಕಾರಿಗಳು ಈ ಲಿಸ್ಟನ್ನು ಶೇರ್ ಮಾಡುತ್ತಾರೆ ಇಲ್ಲಿರುವ ಲಿಸ್ಟನ್ನು ಯಾರೇ ಅದರಲ್ಲಿ ಹೆಸರು ಇದ್ದರೆ ಮಾತ್ರ ನೀವು ಖಂಡಿತವಾಗಿಯೂ ಲಿಂಕ್ ಮಾಡಿಸಲೇಬೇಕು ಇನ್ನು ನಿಮ್ಮ ಪಹಣಿ ಪತ್ರಿಕೆ ಗೆ ಆಧಾರ್ ಲಿಂಕ್ ಆಗಿರುವುದಿಲ್ಲ.

ಲಿಂಕ್ ಮಾಡಿಸಲು ಕೊನೆಯ ದಿನಾಂಕ ಯಾವಾಗ?

ಲಿಂಕ್ ಮಾಡಿಸಲು ಕೊನೆಯ ದಿನಾಂಕ ಇನ್ನೂ ನಿಗದಿ ಮಾಡಿಲ್ಲ ಆದರೆ ಪತ್ರಿಕೆಗಳಲ್ಲಿ ಪ್ರಕಟಣೆ ಮಾಡಿರುವ ವಿಷಯವನ್ನು ಗಮನಿಸುವುದಾದರೆ ಜುಲೈ ತಿಂಗಳ 31 ನೇ ತಾರೀಖಿನಿಂದ ಈ ಸೌಲಭ್ಯವನ್ನು ಕಡಿತಗೊಳಿಸಲಾಗುತ್ತದೆ ಅಂದರೆ ಅಲ್ಲೇ ಕ್ಲೋಸ್ ಮಾಡಲಾಗುತ್ತದೆ ಅಂದರೆ ನೀವು ಲಿಂಕ್ ಮಾಡಲು ಇನ್ನು ನಿಮಗೆ ಸಾಕಷ್ಟು ಸಮಯವಿದ್ದು ಜುಲೈ 31ರ ತನಕ ಸಹ ಈ ಕಾರ್ಯವನ್ನು ನೀವು ಕೈಗೊಳ್ಳಬಹುದು.

 ಗ್ರಾಮ ಪಂಚಾಯಿತಿಗಳಲ್ಲಿ ಈ ಸೌಲಭ್ಯವು ಉಚಿತವಾಗಿ ಮಾಡಿಕೊಡಲಾಗುತ್ತಿದ್ದು ರೈತ ಬಾಂಧವರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಏಕೆಂದರೆ ಸರ್ಕಾರದ ಯೋಜನೆಗಳು ಕಂಪಲ್ಸರಿಯಾಗಿ ಮುಂದೆ ಪಡೆಯಬೇಕಾದರೆ ಪರಿಹಾರ ಆಗಲಿ ಬೆಳೆ ವಿಮೆಯಾಗಲಿ ಹಾಗೂ ಇನ್ನಿತರ ಸರಕಾರದ ಯೋಜನೆಗಳಲ್ಲಿ ನೀವು ಭಾಗಿಯಾಗಬೇಕಾದರೆ ಖಂಡಿತವಾಗಿಯೂ ಆಧಾರ್ ಕಾರ್ಡ್ ಮನುಷ್ಯನಿಗೆ ಎಷ್ಟು ಮುಖ್ಯವೋ ಅದೇ ರೀತಿಯಾಗಿ ನಿಮ್ಮ ಜಮೀನಿಗೆ ನಿಮ್ಮ ಜಮೀನಿನ ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

ಇದನ್ನು ಓದಿ: 18 ಲಕ್ಷಕ್ಕೆ ಮಾರಾಟವಾದ ಬಿಜಾಪುರ್ ಎತ್ತಿನ ಬೆಲೆ ನಿಜಕ್ಕೂ ಆಶ್ಚರ್ https://krushisanta.com/farmer-has-saled-his-Bullock-at-the-price-of-18-lakh

ಇದನ್ನು ಓದಿ:ರೈತರು ಬೆಳೆ ಸರ್ವೆ ಮೊಬೈಲಿನಲ್ಲಿ ಮಾಡುವುದು ಹೇಗೆ ಹಂತ ಹಂತವಾಗಿ ಬೆಳೆ ಸರ್ವೆ ಮಾಡುವ ವಿಧಾನ

https://krushisanta.com/Bele-survey-application-and-A-to-Z-procedure-of-Survey

ಇದನ್ನು ಓದಿ:ನಿಮ್ಮ ಸರ್ವೇ ನಂಬರ್ ಮೇಲೆ ಇರುವ ಕಂದಾಯ ಇಲಾಖೆ ನೀಡಿರುವ ಸರ್ವೇ ಡಾಕುಮೆಂಟ್ಸ್ಗಳನ್ನು ಚೆಕ್ ಮಾಡುವುದು ಹೇಗೆ?

https://krushisanta.com/How-to-check-online-survey-documents-For-your-survey-number

ಇದನ್ನು ಓದಿ:ಕೈಗೆ ತಗಲುವ ಬೆಲೆಯಲ್ಲಿ ಬಿತ್ತನೆ ಮಾಡಲು ಬಂತು ಬಿತ್ತನೆಯ ಕೈ ಮತ್ತು ಸೈಕಲ್ ಆಧಾರಿತ ಬಿತ್ತನೆ ಯಂತ್ರ 20 ನಿಮಿಷದಲ್ಲಿ ಒಂದು ಎಕರೆ ಬಿತ್ತನೆ ಮಾಡಬಲ್ಲದು

https://krushisanta.com/Multipurpose-hand-and-Cycle-seed-drill

admin B.Sc(hons) agriculture College of agriculture vijayapura And provide consultant service