ನಿಮ್ಮ ಜಮೀನಿನ ಸರ್ವೆ ನಂಬರ ಹಾಕಿ ಕಂದಾಯ ಇಲಾಖೆಗೆ ನಿಮ್ಮ ಸರ್ವೆ ನಂಬರಿಗೆ ಸಂಬಂಧಪಟ್ಟ ದಾಖಲೆಗಳನ್ನು ಆನ್ಲೈನ್ ನಲ್ಲಿ ನೋಡಿ!

<ಜಮೀನಿನ ದಾಖಲೆಗಳು> <ಕಂದಾಯ ಇಲಾಖೆ ದಾಖಲೆಗಳು> <ಕಂದಾಯ ಇಲಾಖೆ> <ಕಂದಾಯ ಇಲಾಖೆ ದಾಖಲೆಗಳ ಪಟ್ಟಿ >

Jul 4, 2024 - 06:38
 0
ನಿಮ್ಮ ಜಮೀನಿನ ಸರ್ವೆ ನಂಬರ ಹಾಕಿ ಕಂದಾಯ ಇಲಾಖೆಗೆ ನಿಮ್ಮ ಸರ್ವೆ ನಂಬರಿಗೆ ಸಂಬಂಧಪಟ್ಟ ದಾಖಲೆಗಳನ್ನು ಆನ್ಲೈನ್ ನಲ್ಲಿ ನೋಡಿ!

ಅತ್ತೆ ರೈತ ಬಾಂಧವರೇ ನಿಮ್ಮ ಜಮೀನಿನ ಒರಿಜಿನಲ್ ಡಾಕ್ಯುಮೆಂಟ್ಸ್ ಗಳನ್ನು ಡೌನ್ಲೋಡ್ ಮಾಡುವುದು ಹೇಗೆ ಮತ್ತು ಆನ್ಲೈನ್ ನಲ್ಲಿ ಎಲ್ಲಾ ರೀತಿಯ ಡಾಕ್ಯುಮೆಂಟ್ ಗಳನ್ನು ನೀವು ಉಚಿತವಾಗಿ ನೋಡಬಹುದು ಮತ್ತು ಕೆಲವೊಂದು ದಾಖಲೆಗಳು ಆನ್ಲೈನ್ ನಲ್ಲಿ ಲಭ್ಯವಿಲ್ಲದೆ ಇದ್ದರೂ ಸಹ ಅಂತಹ ದಾಖಲೆಗಳನ್ನು ನೀವು ಇಲ್ಲಿ ರಿಕ್ವೆಸ್ಟ್ ಸಲ್ಲಿಸುವ ಮೂಲಕ ಅವುಗಳನ್ನು ಪಡೆದುಕೊಳ್ಳಬಹುದು.

ಆನ್ಲೈನಲ್ಲಿ ಲಭ್ಯವಿರುವ ನಿಮ್ಮ ಸರ್ವೇ ನಂಬರ್ ಮೇಲೆ ಇರುವ ದಾಖಲೆಗಳು?

ಕೆಲವೊಂದು ಕಂದಾಯ ಇಲಾಖೆ ನಿಮ್ಮ ಜಮೀನಿನ ಮೇಲೆ ಕೆಲವೊಂದು ದಾಖಲೆಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿರುತ್ತಾರೆ ಅಂತಹ ದಾಖಲೆಗಳನ್ನು ನೀವು ಮೊಬೈಲ್ ನಲ್ಲಿ ಉಚಿತವಾಗಿ ಅವುಗಳನ್ನು ನೋಡಬಹುದು ಮತ್ತು ಒರಿಜಿನಲ್ ಡಾಕ್ಯುಮೆಂಟ್ಸ್ ಗಳು ಆಗಿರುತ್ತವೆ ಒಂದು ವೇಳೆ ನಿಮಗೆ ಬೇಕಾದರೆ ನೀವು ಹಣವನ್ನು ಪಾವತಿಸುವ ಮೂಲಕ ಅವುಗಳನ್ನು ಪಡೆಯಬಹುದು ಅಥವಾ ಒಂದು ವೇಳೆ ನಿಮಗೆ ಬೇಕಾದ ದಾಖಲೆಯನ್ನು ನೀವು ನೋಡಬೇಕಾದರೆ ಅದನ್ನು ಪಡೆಯಲು ನೀವು ರಿಕ್ವೆಸ್ಟ್ ಕೂಡ ಸಲ್ಲಿಸಬಹುದು ಅದು ಯಾವ ರೀತಿ ಮಾಡಬೇಕು ಇಲ್ಲಿ ಕೆಳಗಡೆ ನೀಡಿರುವ ವಿಧಾನವನ್ನು ನೋಡಿಕೊಂಡು ಮಾಡಿರಿ.

ಹಂತ 1: https://bhoomojini.karnataka.gov.in/Service35/Dashboard.aspx ಇಲ್ಲಿ ನೀಡಿರುವ ಲಿಂಕೆನ ಮೇಲೆ ಕ್ಲಿಕ್ ಮಾಡಿ ನಂತರ ಕೇಳಿರುವ ಮಾಹಿತಿಗಳನ್ನು ಸರಿಯಾಗಿ ಮಾಡಿಕೊಳ್ಳುತ್ತಾ ಹೋಗಬೇಕು.

ಹಂತ 2: SELECT LAND DETAILS TO VIEW AKARBAND AND OTHER AVAILABLE SURVEY DOCUMENTS

*

District

BIJAPUR

*

Taluk

INDI

*

Hobli

BALLOLLI

*

Village

AHIRASANGA

*

Survey No

289

*

Surnoc

*

*

Hissa

2

ಮೇಲೆ ತಿಳಿಸಿರುವಂತೆ ನೀವು ಕೂಡ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ಇಲ್ಲಿ ನಾವು ಉದಾಹರಣೆಗೆ ಒಂದನ್ನು ಆಯ್ಕೆ ಮಾಡಿ ತೋರಿಸಿದ್ದೇವೆ ಅದೇ ರೀತಿಯಾಗಿ ನಿಮಗೆ ಸಂಬಂಧಪಟ್ಟ ದಾಖಲೆಗಳೆಂದರೆ ನಿಮ್ಮ ಜಿಲ್ಲೆಯ ತಾಲೂಕು ಹೋಬಳಿ ಅದಾದ ನಂತರ ನಿಮ್ಮಗೆ ಸಂಬಂಧಪಟ್ಟಂತೆ ಸರ್ವೇ ನಂಬರ್ ಹಾಕಿ ಸರ್ಚ್ ಮಾಡಿ ನೋಡಬೇಕು.

ಹಂತ 3: ಆಕಾರ ಬಂದ ಅಥವಾ ಸರ್ಚ್ ಎರಡು ಬಟನ್ಗಳು ಕಾಣಿಸುತ್ತವೆ ಯಾವುದಾದರೂ ಒಂದನ್ನು ಕ್ಲಿಕ್ ಮಾಡಿ ಮೊದಲಿಗೆ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಈಗ ನಿಮಗೆ ನಿಮ್ಮ ಸರ್ವೆ ನಂಬರ್ ಮೇಲೆ ಇರುವ ಕಂದಾಯ ಇಲಾಖೆಗಳು ಇಟ್ಟುಕೊಂಡಿರುವ ದಾಖಲೆಗಳು ತೋರಿಸುತ್ತವೆ.

ಹಂತ 4: ಕೆಳಗಡೆ ಬಾಕ್ಸ್ ನಲ್ಲಿ ನಿಮ್ಮ ಜಮೀನಿನ ಸರ್ವೆ ನಂಬರ್ ಮೊದಲನೇ ಕಾಲಂನಲ್ಲಿ ಬರೆದಿರಲಾಗುತ್ತದೆ. ಇದಾದ ನಂತರ ಎರಡನೇ ಕಾಲಂ ನಲ್ಲಿ ನಿಮ್ಮ ಜಮೀನಿಗೆ ಸರ್ವೆ ನಂಬರಿಗೆ ಸಂಬಂಧಪಟ್ಟ ಯಾವುದೇ ದಾಖಲೆಗಳು ಇವೆ ಅದನ್ನು ಬರೆದಿರಲಾಗಿರುತ್ತದೆ ನಂತರ ನೀವು ಮುಂದೆ ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಆಪ್ಷನ್ ಸಹ ನಿಮಗೆ ನೀಡಲಾಗಿರುತ್ತದೆ.

ಹಂತ 5: ಅದೇ ರೀತಿಯಾಗಿ ನೀವು ನಿಮ್ಮ ಜಮೀನಿನ ಅಥವಾ ನಿಮ್ಮ ಸರ್ವೇ ನಂಬರಿನ ಆಕಾರ ಬಂದವನು ನೋಡಬೇಕಾದರೆ ಮುಂದೆ ಅಲ್ಲೇ ಮೇಲುಗಡೆ ಆಕಾರ ಬಂದೆ ಎಂದು ಒಂದು ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನೀವು ಜಮೀನಿನ ಆಕಾರ ಬಂದ ಸಹ ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಹೊಸದಾಗಿ ಬೇಕಾಗುವ ಸರ್ವೇ ದಾಖಲೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಹಾಕುವುದು ಹೇಗೆ?

https://bhoomojini.karnataka.gov.in/oscitizen/

You can apply online request for below type of survey documents

(ಕೆಳಕಂಡ ಸರ್ವೆ ದಾಖಲೆಗಳಿಗೆ ನೀವು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು).

1. Atlas (ಅಟ್ಲಾಸ್)

2. Survey Pakka Book (ಸರ್ವೆ ಪಕ್ಕಾ ಪುಸ್ತಕ)

3. Tippan (ಟಿಪ್ಪಣಿ)

4. Akarband (ಆಕಾರಬಂದು)

5. FMB (ಎಫ್.ಎಮ್.ಬಿ)

6. Survey Prati Book (ಸರ್ವೆ ಪ್ರತಿ ಪುಸ್ತಕ)

ಮೇಲೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮಗೆ ನಿಮ್ಮ ಮೊಬೈಲ್ ನಂಬರ್ ಕೇಳುತ್ತದೆ ನಂತರ ಆನ್ಲೈನ್ ಪಾವತಿ ಶುಲ್ಕವನ್ನು ಪಾವತಿ ಮಾಡುವ ಮೂಲಕ ಪಡೆದುಕೊಳ್ಳಬಹುದು.

ಇದನ್ನು ಓದಿ:ಕೈಗೆ ತಗಲುವ ಬೆಲೆಯಲ್ಲಿ ಬಿತ್ತನೆ ಮಾಡಲು ಬಂತು ಬಿತ್ತನೆಯ ಕೈ ಮತ್ತು ಸೈಕಲ್ ಆಧಾರಿತ ಬಿತ್ತನೆ ಯಂತ್ರ 60 ನಿಮಿಷದಲ್ಲಿ ಒಂದು ಎಕರೆ ಬಿತ್ತನೆ ಮಾಡಬಲ್ಲದು

https://krushisanta.com/Multipurpose-hand-and-Cycle-seed-drill

ಇದನ್ನು ಓದಿ:ಪಹಣಿ ಆಧಾರ್ ಲಿಂಕ್ ಸ್ಟೇಟಸ್? ಇಲ್ಲದಿದ್ದರೆ ಹೆಚ್ಚುವರಿ ಪರಿಹಾರ ಯಾವ ರೈತರಿಗೂ ಸಹ ಬರುವುದಿಲ್ಲ? ಇಲ್ಲಿಯವರೆಗೆ ಲಿಂಕ್ ಆಗಿರುವ ಸ್ಟೇಟಸ್ ಚೆಕ್ ಮಾಡಿ

https://krushisanta.com/Pahani-and-Aadhar-link-status-check

ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ಸ್ವಂತ ದಾರಿ ಇಲ್ಲವೇ? ಅಕ್ಕಪಕ್ಕದವರು ದಾರಿ ಕೊಡುತ್ತಿಲ್ಲವೇ? ಹಾಗಿದ್ದರೆ ಅಧಿಕೃತವಾಗಿ ನಿಮ್ಮ ಜಮೀನಿಗೆ ದಾರಿ ಪಡೆದುಕೊಳ್ಳುವುದು ಹೇಗೆ?

https://krushisanta.com/How-to-solve-Road-problems-to-Farmers-Field-through-rules

ಇದನ್ನು ಓದಿ:ನಿಮ್ಮ ರೇಷನ್ ಕಾರ್ಡ್ ನಂಬರ್ ಅಥವಾ ಆಧಾರ್ ಸಂಖ್ಯೆ ಹಾಕಿ ರೈತರ ಸಾಲ ಮನ್ನಾ ವರದಿ ಸ್ಟೇಟಸ್ ಚೆಕ್ ಮಾಡಿ?

https://krushisanta.com/By-using-Aadhaar-number-or-ration-card-number-check-loan-Waiver-status

admin B.Sc(hons) agriculture College of agriculture vijayapura And provide consultant service