ಆಧಾರ್ ಸಂಖ್ಯೆ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ರೈತರ ಸಾಲ ಮನ್ನಾ ವರದಿ ಚೆಕ್ ಮಾಡಿ!
<Loan waivers> < ರೈತರ ಸಾಲ ಮನ್ನ ವರದಿ> < ರೈತರ ಸಾಲ ಮನ್ನಾ> < ರೈತರ ಸಾಲ ಮನ್ನಾ ಸ್ಟೇಟಸ್> < ರಾಜ್ಯದ ರೈತರ ಸಾಲ ಮನ್ನಾ ಬಗ್ಗೆ ಮಾಹಿತಿ> < ಮತ್ತೆ ರೈತರ ಸಾಲ ಮನ್ನಾ ಆಗುತ್ತಾ??>
ಆತ್ಮೀಯ ರೈತ ಬಾಂಧವರೇ ಬಹಳಷ್ಟು ರೈತರು ಕೇಂದ್ರ ಸರ್ಕಾರವು ಚುನಾವಣೆ ಆದ ನಂತರ ರೈತರ ಸಾಲ ಮನ್ನಾ ಮಾಡುವ ವರದಿ ಬಗ್ಗೆ ಮಾಹಿತಿ ಏನಾದರೂ ಸರ್ಕಾರ ಘೋಷಣೆ ಮಾಡಬಹುದು ಎಂದು ಊಹೆ ಮಾಡಲಾಗಿತ್ತು. ಆದರೆ ಅದರ ವಿಚಾರ ಏನಾಯಿತು ಮತ್ತು ಈಗಾಗಲೇ ಒಂದೆರಡು ಬಾರಿ ರೈತರ ಸಾಲ ಮನ್ನಾದ ವಿಚಾರ ಮಾಡಿದಾಗ ಕಳೆದ ವರ್ಷ ಮಳೆ ಕೂಡ ಸರಿಯಾಗಿ ಆಗಿಲ್ಲ ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ ಆತನಿಗೆ ಸರ್ಕಾರದಿಂದ ಸಾಲ ಮನ್ನಾ ಮಾಡಲು ಬಹಳಷ್ಟು ರೈತ ಸಂಘಗಳು ಘೋಷಣೆ ಮಾಡಿದೆ.
ರೈತರ ಸಾಲ ಮನ್ನಾ ಆಯಿ ಬಹಳಷ್ಟು ವರ್ಷಗಳು ಕಳೆದವು 2019ರಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು ಅದಾದ ನಂತರ ಇನ್ನೂವರೆಗೆ ರೈತರ ಸಾಲ ಮನ್ನಾ ಮಾಡಿಲ್ಲ, ರೈತರ ಸಾಲ ಮನ್ನ ಮಾಡಬೇಕಾದರೆ ಪ್ರತ್ಯೇಕ ಕೇಂದ್ರದ ಬಜೆಟ್ ತುಂಬಾ ಅವಶ್ಯಕತೆ ಇರುತ್ತದೆ ಅದನ್ನು ಕೇಂದ್ರ ಸರ್ಕಾರವು ಸಹ ಇನ್ನೂ ಅದರ ಬಗ್ಗೆ ಹೆಚ್ಚಿಗೆ ಕಾಳಜಿ ವಹಿಸಿಲ್ಲ ಮತ್ತು ರಾಜ್ಯ ಸರ್ಕಾರ ತಮ್ಮ ಗ್ಯಾರಂಟಿಗಳ ನಡುವೆ ರೈತರನ್ನು ಕೊಂದು ಹಾಕುವ ಕೆಲಸಗಳು ಮಾಡುತ್ತಿವೆ.
ಒಂದು ವೇಳೆ ರೈತರ ಸಾಲ ಮನ್ನಾ ಮಾಡಿದರೆ ಯಾವುದೆಲ್ಲ ರೈತರ ಸಾಲ ಮನ್ನಾ ಆಗಬಹುದು?
ಈಗಾಗಲೇ 2019ರಲ್ಲಿ ಆಗಿರುವ ವಿಚಾರವನ್ನು ನಾವು ಗಮನಿಸಿದರೆ 50,000ಗಳವರೆಗೆ ಯಾರ ಹೆಸರಿನಲ್ಲಿ ಅಂದರೆ ರೈತರ ಹೆಸರಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಕಮರ್ಷಿಯಲ್ ಬ್ಯಾಂಕುಗಳಲ್ಲಿ ಇರುವ ಸಾಲದ ಮೊತ್ತದ ಆಧಾರದ ಮೇಲೆ ಗರಿಷ್ಠ 50 ಸಾವಿರ ರೂಪಾಯಿಗಳವರೆಗೆ ಸಾಲ ಮನ್ನಾ ಆಗಬಹುದು.
ಇದಕ್ಕಿಂತ ಹೆಚ್ಚಿನ ಹಣ ಯಾವುದೇ ರೀತಿಯಾಗಿ ಸರ್ಕಾರವು ಸಾಲ ಮನ್ನಾ ಮಾಡುವುದಿಲ್ಲ ಏಕೆಂದರೆ ಅದು ಬಹುದೊಡ್ಡ ಮತ್ತುವಾಗುತ್ತದೆ ಈಗಾಗಲೇ ಕೇಂದ್ರ ಸರ್ಕಾರದ ಸಾಲವು 170 ಕೋಟಿ ಏರಿಕೆಯಾಗಿದೆ ಹೀಗಾಗಿ ಪ್ರತಿಯೊಬ್ಬರು ಇದರ ಬಗ್ಗೆ ವಿಚಾರಣೆ ಮಾಡಿಕೊಳ್ಳಬೇಕು ಮತ್ತು ನೀವು ಸಾಲ ಮನ್ನಾ ಮಾಡಬಹುದಾಗಿತ್ತು ಆದರೆ ರಾಜ್ಯ ಸರ್ಕಾರದ ಬೆಂಬಲವು ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ.
ನೀವು ಮಾಡಿರುವ ಯಾವ ಸಾಲ ರೈತರ ಸಾಲವನ್ನಾಗಿ ಮಾಡಿಕೊಂಡು ಮನ್ನಾ ಮಾಡಲಾಗುತ್ತದೆ?
ಅಲ್ಪಾವಧಿ ಬೆಳೆ ಸಾಲ ಮಾತ್ರ 2009 ರಿಂದ ಪಡೆದುಕೊಂಡಿರುವ ಯಾವುದೇ ರೀತಿ ಬೆಳೆಗಳ ಮೇಲೆ ಅಲ್ಪಾವಧಿ ಸಾಲವಿದ್ದರೆ ಮಾತ್ರ ಅದನ್ನು ಮನ್ನಾ ಮಾಡಲು ಅರ್ಹರೆಂದು ಪರಿಗಣನೆ ಮಾಡಲಾಗುತ್ತದೆ.
ಜಾಯಿಂಟ್ ಆಗಿ ತೆಗೆದಿರುವ ಬೆಳೆ ಸಾಲಗಳ ಮನ್ನಾ ಆಗುತ್ತವೆ?
ಹೌದು ಒಂದು ವೇಳೆ ನೀವು ಜಾಯಿಂಟ್ ಆಗಿದ್ದು ಇಬ್ಬರ ಹೆಸರಿನಲ್ಲಿ ಬೆಳೆ ಸಾಲವನ್ನು ತೆಗೆದುಕೊಂಡಿದ್ದರೆ ಯಾರ ಹೆಸರಿನಲ್ಲಿ ಹೆಚ್ಚು ಸಾಲವಿರುತ್ತದೆಯೋ ಅವರೊಂದಿಗೆ ನೀವು ಅವರ ಹೆಸರಿನ ಮೇಲೆ ಸಾಲ ಮನ್ನಾ ಮಾಡಬಹುದು ಅಥವಾ ತಾತ್ಕಾಲಿಕವಾಗಿ ಅಥವಾ ಪರಿಸ್ಥಿತಿಗೆ ಅನುಗುಣವಾಗಿ ಆ ಹೆಚ್ಚಿಗೆ ಸಾಲ ಪಡೆದಿರುವ ವ್ಯಕ್ತಿಗಳು ತೀರಿಕೊಂಡ ನಂತರ ಎರಡನೇ ವ್ಯಕ್ತಿಗೂ ಕೂಡ ಸಾಲಮನ್ನಾ ಪಡೆದುಕೊಳ್ಳುವ ಅರ್ಹತೆ ಹೊಂದಿರುತ್ತಾರೆ.
ಈಗಾಗಲೇ ಎಷ್ಟು ಬಾರಿ ಸಾಲ ಮನ್ನಾವಾಗಿದೆ ಆನ್ಲೈನಲ್ಲಿ ಚೆಕ್ ಮಾಡುವುದು ಹೇಗೆ?
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಮತ್ತೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನೀವು ಬೇರೆ ಹಂತ ಎರಡರಲ್ಲಿ ನೀಡಿರುವಂತೆ ಆಯ್ಕೆ ಮಾಡಿಕೊಳ್ಳಬೇಕು.
https://clws.karnataka.gov.in/ or
https://clws.karnataka.gov.in/clws/pacs/citizenreport/
( ಸರ್ವರ್ ಬಿಜಿ ಆಗಿರುವ ಸಾಧ್ಯತೆಗಳು ತುಂಬಾ ಇರುತ್ತದೆ ಏಕೆಂದರೆ ಇದನ್ನು ಬಹಳಷ್ಟು ಜನರು ವೀಕ್ಷಣೆ ಮಾಡುತ್ತಿರುವ ಕಾರಣ ಸರ್ವರ್ ಬಿಜಿ ಆಗಿರುತ್ತದೆ)
ಹಂತ 2: ಮೇಲಿನ ನೀಡಿರುವ ಯಾವುದಾದರೂ ಒಂದು ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಎರಡನೇ ಲಿಂಕನ್ನು ನೀವು ಕ್ಲಿಕ್ ಮಾಡಿದ Individual loan report ಮೇಲೆ ನಿಮಗೆ ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ಅಥವಾ ರೇಷನ್ ಕಾರ್ಡ್ ಎರಡರಲ್ಲಿ ಯಾವುದಾದರೂ ಒಂದು ದಾಖಲೆ ಸಂಖ್ಯೆಯನ್ನು ಬಳಸುವ ಮೂಲಕ ನೀವು ನಿಮ್ಮ ಇಲ್ಲಿಯವರೆಗೆ ಸಾಲಮನ್ನಾ ಎಷ್ಟು ಬಾರಿ ಆಗಿದೆ ಮತ್ತು ಎಷ್ಟು ಆಗಿದೆ ಯಾವ ಸರ್ವೇ ನಂಬರ್ ಮೇಲೆ ಆಗಿದೆ ನೋಡಬಹುದು.
ಈ ಬಾರಿಯೂ ಕೂಡ ಒಂದು ವೇಳೆ ಸಾಲ ಮನ್ನಾ ಆಗಿರುವ ಮಾಹಿತಿಯು ಇನ್ನೂ ಯಾರು ಬಿಟ್ಟು ಕೊಟ್ಟಿಲ್ಲ ಇದರ ಬಗ್ಗೆ ವಿಚಾರ ನಡೆಸುತ್ತಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಸಾಲ ಮನ್ನಾ ಮಾಡುವ ನಿರ್ಧಾರವೂ ಸಹ ಕೈಗೊಳ್ಳಬಹುದು ಆದರೆ ಎಷ್ಟು ಸಾಲ ಮನ್ನಾ ಆಗುತ್ತದೆ ಈಗಾಗಲೇ ಚೆಕ್ ಮಾಡಿಕೊಂಡರೆ ನಿಮಗೂ ಗೊತ್ತಾಗುತ್ತದೆ.
ಇದನ್ನು ಓದಿ:50% ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಆಧಾರಿತ ಸಿಂಪರಣೆ ಯಂತ್ರ ಮತ್ತು ಎಡೆ ಕುಂಟೆ ಯಂತ್ರ
https://krushisanta.com/Tractor-drawn-spraying-machine-and--inter-cultivator-in-subsidy
ಇದನ್ನು ಓದಿ:ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ನೋಡಿ ಕಾಲುದಾರಿ ಬಂಡಿದಾರಿ ರೈಲ್ವೆ ದಾರಿ ಮತ್ತು ಕಳ್ಳ ಕೊಳ್ಳಗಳು ಎಲ್ಲಿವೆ ಸರ್ವೆ ನಂಬರ್ ನೋಡಿ ಚೆಕ್ ಮಾಡಿ
https://krushisanta.com/Download-Gram-Panchayat-wise--map-to-view-roads-and-lines
ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕಿಂಗ್ ಸ್ಟೇಟಸ್ ಹಾಕಿದವರ ಮತ್ತು ಆಗದವರ ಲಿಸ್ಟ್ ಬಿಡುಗಡೆ
ಇದನ್ನು ಓದಿ:ರೈತರ ಖಾತೆಗೆ ನಿನ್ನೆಯಿಂದ ಪರಿಹಾರ ಹಣ ಬಿಡುಗಡೆ ಮಾಡಿದೆ! ರೈತರ ಖಾತೆಗೆ 2600 ಜಮಾ
https://krushisanta.com/Extra-parihara-amount-farmers-list