ಜಮೀನಿನ ಸರ್ವೆ ನಂಬರ್ ನೋಡಿ ಕಾಲುದಾರಿ ಬಂಡಿದಾರಿ ರೈಲ್ವೆ ದಾರಿ ಮತ್ತು ಕಳ್ಳಕೊಳ್ಳ ಗಿಡ ಮರಗಳು ಕರೆಕ್ಟಾಗಿ ನಕ್ಷೆಯಲ್ಲಿ ಎಲ್ಲಿವೆ ಚೆಕ್ ಮಾಡಿ!
<ಜಮೀನಿನ ದಾರಿ ಸಮಸ್ಯೆ> < ಜಮೀನಿನಲ್ಲಿ ದಾರಿ ಸಮಸ್ಯೆ> < ಗ್ರಾಮ ಪಂಚಾಯಿತಿ ನಕ್ಷೆ ಡೌನ್ಲೋಡ್ ಮಾಡಿ > < ಗ್ರಾಮ ಪಂಚಾಯಿತಿ ನಕ್ಷೆ ಡೌನ್ಲೋಡ್ ಮಾಡುವುದು ಹೇಗೆ >
ಆತ್ಮೀಯ ರೈತರೇ ದಿನ ನಿತ್ಯ ನೀವು ನಿಮ್ಮ ಜಮೀನಿನ ಅಕ್ಕಪಕ್ಕದವರಾಗಲಿ ಅಥವಾ ನಿಮ್ಮ ಊರಿನಲ್ಲಿ ಆಗಲಿ ಯಾವುದೇ ರೈತರು ದಿನಾ ದಿನಾ ಏನಾದರೂ ಒಂದು ಹೊಸದಾಗಿ ಕಿರಿಕಿರಿ ಅಥವಾ ಜಗಳಗಳನ್ನು ಮಾಡುತ್ತಾ ಇರುತ್ತಾರೆ ಆದರೆ ಅದಕ್ಕೆ ಕಾರಣ ಕೆಲವೊಂದರಲ್ಲಿ ಪ್ರಮುಖವಾದ ಕಾರಣ ಏನೆಂದರೆ ಜಮೀನಿಗಾಗಿ ಜಗಳ ಮಾಡುತ್ತಾರೆ ಮತ್ತು ಗಿಡಗಳಿಗಾಗಿ ಜಗಳ ಮಾಡುತ್ತಾರೆ ಮತ್ತು ಜಮೀನಿನ ಅಳತೆ ಹೆಚ್ಚು ಕಡಿಮೆಯಾಗಿದೆ ಎಂದು ಬಹಳಷ್ಟು ಗೊಂದಲಗಳು ಮತ್ತು ಜಗಳವನ್ನು ಆಡುತ್ತಾ ಇರುತ್ತಾರೆ ಆದರೆ ನಿಖರವಾಗಿ ನಿಮ್ಮ ನಕ್ಷೆಯಲ್ಲಿ ಏನಿದೆ ಅಂದರೆ ನೀವು ತಿಳಿದುಕೊಂಡಿರುವ ನಿಮ್ಮ ಜಮೀನಿನ ಭಾಗಗಳು ಏನಿದೆ ಮತ್ತು ನಕ್ಷೆಯಲ್ಲಿ ಯಾವ ರೀತಿ ಆಗಿವೆ ಅದನ್ನು ನೀವು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು.
ನಾವು ಗಮನಿಸಿದಾಗ ಕರ್ನಾಟಕದಲ್ಲಿ ಶೇಕಡ 20ರಷ್ಟು ರೈತ ಬಾಂಧವರು ಒಬ್ಬರೊಂದಿಗೆ ಇನ್ನೊಬ್ಬರು ಸರಿಯಾಗಿ ಹೊಂದಾಣಿಕೆಯಿಂದ ಇರುವುದಿಲ್ಲ ಅದಕ್ಕೆ ಕಾರಣಗಳು ಮುಖ್ಯವಾಗಿ ಜಮೀನಿನ ದಾರಿ ಜಮೀನಿನ ಹದ್ದುಬಸ್ತು ಹಾಗೂ ಇನ್ನಿತರ ಪ್ರತ್ಯೇಕ ಅವರದೇ ಆದ ಕಾರಣಗಳು ಇರುತ್ತವೆ ಹೀಗಾಗಿ ಇದನ್ನು ನೀವು ನಿಮ್ಮ ಸರ್ವೇ ನಂಬರ್ ಬಗ್ಗೆ ಮೊದಲಿಗೆ ನೀವು ಸರಿಯಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಅದಾದ ನಂತರ ನೀವು ಉಳಿದ ಮಾಹಿತಿಗಳನ್ನು ನೀವು ನಿಮ್ಮ ಕಂದಾಯ ಇಲಾಖೆ ಅಥವಾ ಪೋರ್ಟ್ ಇಸಾ ನೋಡುವ ಮೂಲಕ ತಿಳಿದುಕೊಳ್ಳಬಹುದು.
ಮೊಬೈಲ್ ನಲ್ಲಿ ನಿಮ್ಮ ಸರ್ವೇ ನಂಬರ್ ಹಾಕಿ ಜಮೀನಿನ ನಕ್ಷೆ ಡೌನ್ಲೋಡ್ ಮಾಡುವುದು ಹೇಗೆ?
ಮೊದಲಿಗೆ ಇಲ್ಲಿ ಕೆಳಗಡೆ ನೀಡಿರುವ ಹಂತಗಳನ್ನು ವಿವರವಾಗಿ ತಿಳಿದುಕೊಂಡು ಅದೇ ರೀತಿಯಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಮಾಡುತ್ತಾ ಹೋಗಿ ನೀವು ನಿಮ್ಮ ಗ್ರಾಮ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಅಧಿಕೃತ ಜಾಲತಾಣ ಮತ್ತು ಸರ್ಕಾರದ ಅಧಿಕೃತವಾಗಿರುವ ವೆಬ್ ಸೈಟ್ ಗೆ ನೀವು ಭೇಟಿ ನೀಡಬೇಕು ಮಾಹಿತಿ ಕಣಜೆ ಎಂದು ನೀವು ಗೂಗಲ್ ನಲ್ಲಿ ಟೈಪ್ ಮಾಡಿಕೊಂಡು ಅಲ್ಲಿ ಕಂದಾಯ ಇಲಾಖೆ ಎಂದು ಆಯ್ಕೆ ಮಾಡಿಕೊಂಡು ಮುಂದೆ ನೋಡಬಹುದು ಅಥವಾ ಇಲ್ಲಿ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡುವ ಮೂಲಕ ಡೈರೆಕ್ಟ್ ಆಗಿ ಅದೇ ಪೇಜ್ ಓಪನ್ ಕೂಡ ಮಾಡಬಹುದು.
ಹಂತ 2: ಇದರಲ್ಲಿ ನೀವು ನಿಮಗೆ ಸಂಬಂಧಪಟ್ಟ ಜಿಲ್ಲೆಯ ಮಾಹಿತಿ ಮತ್ತು ನಿಮ್ಮ ಊರನ್ನು ಇಲ್ಲಿ ಹಾಕಬೇಕು ಏಕೆಂದರೆ ನೀವು ಯಾವ ಊರಿನ ಗ್ರಾಮ ನಕ್ಷೆಯನ್ನು ಹಾಕುತ್ತೀರಿ ಅದೇ ಊರಿನ ಗ್ರಾಮ ನಕ್ಷೆ ಇದರಲ್ಲಿ ತೋರಿಸುತ್ತದೆ.
ಡೌನ್‌ಲೋಡ್ ಗ್ರಾಮ ನಕ್ಷೆ
ಜಿಲ್ಲೆ *
ಬಾಗಲಕೋಟೆ
ತಾಲೂಕು
ಗುಳೇದಗುಡ್ಡ
ಹೋಬಳಿ
ಗುಳೇದಗುಡ್ಡ
ಗ್ರಾಮ*
ಹಳದೂರ (ಗುಳೇದಗುಡ್ಡ)
ಮೇಲೆ ನೀಡಿರುವ ಮಾಹಿತಿಯು ಕೇವಲ ಉದಾರಣೆ ಆಗಿರುತ್ತದೆ ನೀವು ನಿಮಗೆ ಸಂಬಂಧಪಟ್ಟ ಗ್ರಾಮ ಹೋಬಳಿ ಹಾಗೂ ತಾಲೂಕು ಮತ್ತು ಜಿಲ್ಲೆಯನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು.
ಹಂತ 3: ಸಲ್ಲಿಸಿ ಎಂದು ಒಂದು ಬಟನ್ ಕಾಣಿಸುತ್ತದೆ, ಅದರ ಮೇಲೆ ನೀವು ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಕೆಳಗಡೆ ಮಾಹಿತಿ ಓಪನ್ ಆಗಿರುತ್ತದೆ ಉದಾಹರಣೆಗೆ ಕೆಳಗಡೆ ನೀಡಿರುವಂತೆ ಮಾಹಿತಿ ಅದಾಗಿರುತ್ತದೆ.
ಜಿಲ್ಲೆ ತಾಲೂಕು ಹೋಬಳಿ ಗ್ರಾಮ ನಕ್ಷೆ
Bagalkote GULEDAGUDDA GULEDAGUDDA HALADURA ನಕ್ಷೆ
ಇದರಲ್ಲಿ ಕೊನೆಯ ಕಾಲಲ್ಲಿ ನಕ್ಷೆ ಎಂದು ಒಂದು ನೀಲಿ ಬಣ್ಣದಿಂದ ಬರೆದಿರುವ ಅಕ್ಷರವನ್ನು ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದಾಗ ಈಗ ನಿಮಗೆ ಒಂದು ಪಿಡಿಎಫ್ ಫೈಲ್ ಓಪನ್ ಆಗುತ್ತದೆ ಅದು ನಿಮ್ಮ ಗ್ರಾಮ ನಕ್ಷೆ ಆಗಿರುತ್ತದೆ ಅದನ್ನು ನೀವು ಸರಿಯಾಗಿ ಮೊಟ್ಟಮೊದಲಿಗೆ ನಕ್ಷೆಯ ಎಡಬಾಗದ ಕೆಳಗಡೆ ಅಥವಾ ಬಲಭಾಗದ ಮೇಲುಗಡೆ ಎರಡರಲ್ಲಿ ಒಂದು ನಿಮ್ಮ ಜಮೀನಿನ ಅಂದರೆ ಯಾವ ಯಾವ ಚಿಹ್ನೆಗಳು ಯಾವ ಯಾವ ಹಾದಿಗಳಾಗಿರಬಹುದು ಬಂಡಿದಾರಿಯಾಗಿರಬಹುದು 1/4 ದಾರಿಯಾಗಿರಬಹುದು ಕಾಲುವೆಗಳಾಗಿರಬಹುದು ಮತ್ತು ದೊಡ್ಡ ಮರಗಳಾಗಿರಬಹುದು ಮತ್ತು ರೈಲ್ವೆ ಲೈನ್ ಆಗಿರಬಹುದು ಯಾವುದಾದರೂ ಒಂದು ಚಿನ್ಹೆಯಿಂದ ಬೇರೆ ಬೇರೆ ರೀತಿಯಲ್ಲಿ ಸೂಚಿಸಿರುತ್ತದೆ ಅದನ್ನೇ ನೋಡಿ ನೀವು ಸರಿಯಾಗಿ ಗಮನಿಸಬೇಕು.
ಇದನ್ನು ಓದಿ:1700 ಕೋಟಿ ಮುಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ! ಕೃಷಿ ಸಚಿವರು
https://krushisanta.com/Crop-Insurance-amount-credited--for-KHARIF
ಇದನ್ನು ಓದಿ:ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಬಿಡುಗಡೆ ನಿಮಗೆಷ್ಟು ಬಂತು ಚೆಕ್ ಮಾಡಿ
https://krushisanta.com/State-government-has-released--crop-lose-parihara-payment
ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕಿಂಗ್ ಸ್ಟೇಟಸ್ ಹಾಕಿದವರ ಮತ್ತು ಆಗದವರ ಲಿಸ್ಟ್ ಬಿಡುಗಡೆ
ಇದನ್ನು ಓದಿ:ರೈತರ ಖಾತೆಗೆ ನಿನ್ನೆಯಿಂದ ಪರಿಹಾರ ಹಣ ಬಿಡುಗಡೆ ಮಾಡಿದೆ! ರೈತರ ಖಾತೆಗೆ 2600 ಜಮಾ
https://krushisanta.com/Extra-parihara-amount-farmers-list