ಗ್ರಾಮ ಪಂಚಾಯಿತಿಯಲ್ಲಿ ನಿಮ್ಮ ಆಧಾರ್ ಸಂಖ್ಯೆಗೆ ಪಹಣಿ ಪತ್ರಕ್ಕೆ ಲಿಂಕ್ ಆಗಿದವರ ಮತ್ತು ಆಗದವರ ಲಿಸ್ಟ್ ಬಿಡುಗಡೆ!
<ಪಹಣಿ ಆಧಾರ್ ಲಿಂಕ್ > < ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್ > < ಪಹಣಿ ಮತ್ತು ಆಧಾರ್ ಲಿಂಕ್ > < ಸರ್ವೆ ನಂಬರ್ ಗೆ ಆಧಾರ್ ಲಿಂಕ್ > < ಪಹಣಿ ಮತ್ತು ಆಧಾರ್ ಲಿಂಕ್ >
ಆತ್ಮೀಯ ರೈತ ಬಾಂಧವರು ಎಲ್ಲರಿಗೂ ನಮಸ್ಕಾರ ಈಗಾಗಲೇ ಕರ್ನಾಟಕ ಸರ್ಕಾರ ತಿಳಿಸಿರುವಂತೆ ಮೂರನೇ ಕಂತಿನ ಬೆಳೆ ಹಾನಿ ಪರಿಹಾರ ಜಮಾ ಆಗಬೇಕಾದರೆ ಪ್ರತ್ಯೇಕವಾಗಿ ನಿಮ್ಮ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ ಮತ್ತು ಅದನ್ನು ಮಾಡಲೇಬೇಕು ಅದನ್ನು ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ವ್ಯವಸ್ಥಾಪಕರಿಗೆ ಆ ಅವಕಾಶವನ್ನು ಕಲ್ಪಿಸಲಾಗಿದೆ ಅಥವಾ ನಿಮ್ಮ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟರುವ ಗ್ರಾಮ ಲೆಕ್ಕಾಧಿಕಾರಿಗಳು ಈ ಕಾರ್ಯವನ್ನು ಮಾಡಬೇಕಾಗಿರುತ್ತದೆ.
ಈ ಕಾರ್ಯವನ್ನು ಈಗಾಗಲೇ ಕರ್ನಾಟಕದಲ್ಲಿ 65 ರಷ್ಟು ಪೂರ್ಣಗೊಂಡಿದೆ ಹಾಗೂ ಇನ್ನೂ 35ರಷ್ಟು ಆಗಬೇಕಾಗಿದೆ ಈಗಾಗಲೇ ಲಿಂಕ್ ರೈತರ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯಿತಿಗಳ ಮುಂದೆ ಹಚ್ಚಲಾಗಿದೆ ಅಥವಾ ಆನ್ಲೈನ್ ನಲ್ಲಿಯೂ ಸಹ ನೀವು ನಿಮ್ಮ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಲಿಂಕ್ ಆಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.
ಈ ಲಿಂಕ್ ಮಾಡುವುದರಿಂದ ನಿಮಗೇನು ಲಾಭ?
ರೈತರೇ ಹೌದು ಈ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಏಕೆಂದರೆ ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರು ಮತ್ತು ದೊಡ್ಡ ರೈತರು ಯಾರು ಎಂದು ಸರ್ಕಾರವು ನಿಮ್ಮ ಆಧಾರ್ ಕಾರ್ಡ್ ಮೂಲಕ ಲಿಂಕ್ ಮಾಡಿಕೊಳ್ಳಲಿದೆ ಇದರಿಂದ ಅವರಿಗೆ ಸುಲಭವಾಗಿ ನೀವು ಯಾವ ರೈತರ ಪಟ್ಟಿಯಲ್ಲಿ ಬರುತ್ತೀರಿ ಮತ್ತು ಸರ್ಕಾರದ ಸೌಲಭ್ಯಗಳು ಯಾವುದೆಲ್ಲ ಬರುತ್ತವೆ ಎಂದು ನೇರವಾಗಿ ನಿಮ್ಮ ಮೊಬೈಲ್ ಸಂಖ್ಯೆಗಳಿಗೆ ಮುಂದೆ ಕಳುಹಿಸಲಿದ್ದಾರೆ.
ಲಿಂಕ್ ಆಗದೆ ಇರುವ ರೈತರ ಪಟ್ಟಿಯನ್ನು ಗಮನಿಸುವುದು ಹೇಗೆ?
ಹೌದು ರೈತ ಬಾಂಧವರೇ ಇದನ್ನು ಈಗಾಗಲೇ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ಇಲಾಖೆಯ ಮುಂದೆ ಪ್ರಕಟಣೆ ಮಾಡಲಾಗಿದೆ ಮತ್ತು ಪಟ್ಟಿಯನ್ನು ನಿಮ್ಮ ಗ್ರಾಮ ಪಂಚಾಯಿತಿಗಳ ಮುಂದೆ ಹಚ್ಚಲಾಗಿರುತ್ತದೆ, ಒಂದು ವೇಳೆ ಹಚ್ಚದಿದ್ದರೂ ಸಹ ಅಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕೇಳಿದಾಗ ತಕ್ಷಣವೇ ಇದರಿಂದ 10 ನಿಮಿಷಗಳಲ್ಲಿ ಈ ಮಾಹಿತಿ ನಿಮಗೆ ದೊರೆಯುತ್ತದೆ ಅಂದರೆ ನಿಮ್ಮ ಪಹಣಿ ಪತ್ರಿಕೆ ಆಧಾರ್ ಲಿಂಕ್ ಆಗಿದೆ ಅಥವಾ ಇಲ್ಲ ಎಂದು ಅವರೇ ಸ್ವತಹ ಹೇಳುತ್ತಾರೆ.
ಅದಾಗಿಯೂ ಕೂಡ ನೀವು ಆನ್ಲೈನ್ ನಲ್ಲಿ ಚೆಕ್ ಮಾಡಬೇಕಾದರೆ ಈ ಕೆಳಗಡೆ ನೀಡಿರುವ ಹಂತವನ್ನು ಅನುಸರಿಸಿರಿ.
ಹಂತ 1: ಇಲ್ಲಿ ನೀಡಿರುವ ಲಿಂಕೆನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರನ್ನು ಹಾಕಿ ಕೆಳಗಡೆ ಕ್ಯಾಪ್ಚರ್ ಕೋಡ್ ನೀಡುತ್ತಾರೆ ಅದನ್ನು ಎಂಟರ್ ಮಾಡಿ ನಂತರ ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಬೇಕು.
https://landrecords.karnataka.gov.in/service4/Error.aspx?aspxerrorpath=/service4/
ಹಂತ 2: ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಆಧಾರ್ ಸಂಖ್ಯೆ ಕೇಳುತ್ತದೆ ಮತ್ತು ಆಧಾರ ಸಂಖ್ಯೆಯಲ್ಲಿರುವ ಹೆಸರನ್ನು ಸಹ ಕೇಳುತ್ತದೆ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಇಂಗ್ಲೀಷ್ ನಲ್ಲಿ ಯಾವ ರೀತಿ ಬರೆದಿರುತ್ತಾರೆ ಅದೇ ರೀತಿ ನೀವು ಕೂಡ ಬರೆಯಬೇಕು ಮತ್ತು 12 ಅಂಕಿಯ ಸಂಖ್ಯೆಯನ್ನು ಸರಿಯಾಗಿ ನಮೂದಿಸಬೇಕು.
ಹಂತ 3: ನಂತರ ಅದರ ಕೆಳಗಡೆ ಒಂದು ಹಸಿರು ಚಿತ್ರದ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಆಧಾರ್ ಸಂಖ್ಯೆಗೆ ಓಟಿಪಿ ಹೋಗುತ್ತದೆ ಒಟಿಪಿಯನ್ನು ನಮೂದಿಸಬೇಕು ಮತ್ತು ಆಧಾರ ಮೂಲಕ ವೆರಿಫೈ ಮಾಡಬೇಕು.
ಹಂತ 4: ಈಗ ನಿಮ್ಮ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸರ್ವೇ ನಂಬರ್ ಹಾಕಿ ಎರಡು ಕೂಡ ಲಿಂಕ್ ಮಾಡಿಸಬೇಕು ಲಿಂಕ್ ಆದ ನಂತರ ನಿಮ್ಮ ಆಧಾರ್ ಕಾರ್ಡ್ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂದು ತೋರಿಸುತ್ತದೆ ಸಾಮಾನ್ಯವಾಗಿ ಇದು ಆನ್ಲೈನ್ ನಲ್ಲಿ ಸ್ವಲ್ಪ ಕಷ್ಟಕರವಾಗುತ್ತಿದೆ ಸರ್ವರ್ ಬಿಜಿ ಇರುವ ಕಾರಣ ಬಹಳಷ್ಟು ಜನರದು ಇದು ಪೆಂಡಿಂಗ್ ಎಂದೇ ತೋರಿಸುತ್ತಿದೆ. ಅದಕ್ಕಾಗಿ ನೀವು ನೇರವಾಗಿ ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳಿಗೆ ಭೇಟಿ ನೀಡುವ ಮೂಲಕ ಇದನ್ನು ಮಾಡಿಕೊಳ್ಳಬಹುದು..
ಇದನ್ನು ಓದಿ:ರೈತರ ಖಾತೆಗೆ ನಿನ್ನೆಯಿಂದ ಪರಿಹಾರ ಹಣ ಬಿಡುಗಡೆ ಮಾಡಿದೆ! ರೈತರ ಖಾತೆಗೆ 2600 ಜಮಾ
https://krushisanta.com/Extra-parihara-amount-farmers-list
ಇದನ್ನು ಓದಿ:ಇಲ್ಲಿಯವರೆಗೆ ಬೆಳೆ ಪರಿಹಾರ ನಿಮ್ಮ ಖಾತೆಗೆ ಎಷ್ಟು ಜಮಾ ಆಗಿದೆ ಮೊಬೈಲ್ ನಂಬರ್ ಹಾಕಿ ಆನ್ಲೈನ್ ನಲ್ಲಿ ಚೆಕ್ ಮಾಡಿ
https://krushisanta.com/How-much-till-date-parihara-payment-has-been-credited-to-your-account
ಇದನ್ನು ಓದಿ:ಈ 18 ಲಕ್ಷ ರೈತರ ಖಾತೆಗೆ ಮುಂದಿನ ವಾರ ಪರಿಹಾರ! ನಿಮ್ಮ ಹೆಸರು ಚೆಕ್ ಮಾಡಿ:ಕೃಷಿ ಸಚಿವರು
https://krushisanta.com/18-lakh-Farmers-list-will-get-additional-benifits-of-Parihar
ಇದನ್ನು ಓದಿ:ಇಂದಿನಿಂದ ರಾಜ್ಯದಲ್ಲಿ ಮತ್ತೆ ನಾಲ್ಕು ದಿನಗಳ ಕಾಲ ಮಳೆ ಅಲರ್ಟ್ ಘೋಷಣೆ
https://krushisanta.com/Rainfall-status-and-alert-in-Karnataka